Car Care Tips: ಕಾರು ಎಂಜಿನ್‌ ಅತಿಯಾಗಿ ಬಿಸಿಯಾಗುವುದೇ? ತಲೆಬಿಸಿ ಮಾಡಿಕೊಳ್ಳಬೇಡಿ, ಈ ಸಲಹೆ ಅನುಸರಿಸಿ-automobile news how to ensure your car beats the heat the do and donts overheated engine pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Car Care Tips: ಕಾರು ಎಂಜಿನ್‌ ಅತಿಯಾಗಿ ಬಿಸಿಯಾಗುವುದೇ? ತಲೆಬಿಸಿ ಮಾಡಿಕೊಳ್ಳಬೇಡಿ, ಈ ಸಲಹೆ ಅನುಸರಿಸಿ

Car Care Tips: ಕಾರು ಎಂಜಿನ್‌ ಅತಿಯಾಗಿ ಬಿಸಿಯಾಗುವುದೇ? ತಲೆಬಿಸಿ ಮಾಡಿಕೊಳ್ಳಬೇಡಿ, ಈ ಸಲಹೆ ಅನುಸರಿಸಿ

Car Maintaince Tips: ಬಿಸಿಲು ಹೆಚ್ಚಾಗಿರುವಾಗ ಕಾರಿನ ಎಂಜಿನ್‌ ಅತಿಯಾಗಿ ಬಿಸಿಯಾದ ಫೀಲ್‌ ಆಗಬಹುದು. ಕಾರು ಹೆಚ್ಚು ಬಿಸಿಯಾಗುವ ಸಂದರ್ಭದಲ್ಲಿ ಗಮನಿಸಬೇಕಾದ ಅಂಶಗಳೇನು. ಕಾರು ಬಿಸಿಯಾಗುವುದನ್ನು ತಪ್ಪಿಸಲು ವಹಿಸಬೇಕಾದ ಎಚ್ಚರಿಕೆಗಳೇನು? ಇಲ್ಲಿದೆ ವಿವರ.

ಕಾರಿನ ಎಂಜಿನ್‌ ಅತಿಯಾಗಿ ಬಿಸಿಯಾದಗ ಭಯಪಡಬೇಡಿ, ಕಾರನ್ನು ತಕ್ಷಣ ಪಾರ್ಕ್‌ ಮಾಡಿ.
ಕಾರಿನ ಎಂಜಿನ್‌ ಅತಿಯಾಗಿ ಬಿಸಿಯಾದಗ ಭಯಪಡಬೇಡಿ, ಕಾರನ್ನು ತಕ್ಷಣ ಪಾರ್ಕ್‌ ಮಾಡಿ.

ಕರ್ನಾಟಕದ ವಿವಿಧ ಕಡೆಗಳಲ್ಲಿ ಮಳೆ, ಇನ್ನು ಕೆಲವು ಕಡೆಗಳಲ್ಲಿ ಹೆವಿ ಬಿಸಿಲು ಮಾಮೂಲು. ಈ ಸಮಯದಲ್ಲಿ ಕಾರಿನಲ್ಲಿ ದೂರ ಪ್ರಯಾಣ ಕೈಗೊಳ್ಳುವಾಗ ಕಾರು ಸಖತ್‌ ಹೀಟ್‌ ಆಗುತ್ತಿದೆ ಎಂಬ ಫೀಲ್‌ ಆಗಬಹುದು. ಬಿಸಿಲಿನ ಝಳ ಹೆಚ್ಚಿರುವಾಗ ಕಾರು ಅಥವಾ ಇತರೆ ಯಾವುದೇ ವಾಹನಗಳ ಕುರಿತು ತುಸು ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ನೀವು ಕಾರು ಸರ್ವೀಸ್‌ ಮಾಡದೆ ಸಾಕಷ್ಟು ಸಮಯ ಆಗಿದ್ದರೆ ಸರ್ವೀಸ್‌ ಮಾಡಿಸಿಕೊಳ್ಳುವುದು ಉತ್ತಮ. ಇದರೊಂದಿಗೆ ಕೆಲವೊಂದು ವಿಶೇಷ ಕಾಳಜಿ ವಹಿಸುವ ಮೂಲಕ ಬಿಸಿಲಿಗೆ ನಿಮ್ಮ ಕಾರಿನ ಸುರಕ್ಷತೆ ಹೆಚ್ಚಿಸಬಹುದು. ಕೆಲವೊಂದು ಕಾರು ಮೇಂಟೆನ್ಸ್‌ ಅನ್ನು ಮನೆಯಲ್ಲೇ ಮಾಡಬಹುದು. ಕಾರು ಬಿಸಿಯಾಗುವುದನ್ನು ಕಡೆಗಣಿಸಿದರೆ ಇಂಧನ ದಕ್ಷತೆ ಕಡಿಮೆಯಾಗಬಹುದು. ಕಾರಿನ ಬಕಾಸುರ ಹೊಟ್ಟೆಗೆ ಎಷ್ಟು ಇಂಧನ ಸುರಿದರೂ ಸಾಕಾಗದು. ಈ ಮುಂದಿನ ಸಲಹೆಗಳನ್ನು ಗಮನದಲ್ಲಿಟ್ಟುಕೊಳ್ಳಿ.

ಏಸಿ ಪರಿಶೀಲಿಸಿ ಮತ್ತು ಸರ್ವೀಸ್‌ ಮಾಡಿಸಿ

ಬಿಸಿಲು ಹೆಚ್ಚಾಗಿರುವಾಗ ಏಸಿ ಬಳಕೆ ಹೆಚ್ಚಿರುತ್ತದೆ. ನಿಮ್ಮ ಕಾರಿನ ಏರ್‌ ಕಂಡಿಷನ್‌ ವ್ಯವಸ್ಥೆಯನ್ನು ಪರಿಶೀಲಿಸಿ. ಬಿಸಿಲು ಹೆಚ್ಚಾಗಿರುವಾಗ ನೇರವಾಗಿ ಸೂರ್ಯನ ಬೆಳಕು ತಾಗುವಂತೆ ಕಾರು ಪಾರ್ಕಿಂಗ್‌ ಮಾಡುವುದನ್ನು ತಪ್ಪಿಸಿ. ಕಾರಿನ ಏಸಿಯನ್ನು ಟೆಕ್ನಿಷಿಯನ್‌ ಬಳಿ ಪರಿಶೀಲನೆ ಡೆಸಿಇ. ಅಗತ್ಯವಿದ್ದರೆ ರಿಪೇರಿ ಮಾಡಿಸಿ. ಕಾರಿನ ಕ್ಯಾಬಿನ್‌ ಏರ್‌ ಫಿಲ್ಟರ್‌ ಕ್ಲೀನ್‌ ಮಾಡಿಸಿ.

ಫ್ಲೂಯೆಡ್‌ ಚೆಕ್‌ ಮಾಡಿ

ಹೆಚ್ಚು ಉಷ್ಣಾಂಶ ಇದ್ದಾಗ ಎಂಜಿನ್‌ ಆಯಿಲ್‌ ಬೇಗನೇ ಬರ್ನ್‌ ಆಗುತ್ತದೆ. ನಿಯಮಿತವಾಗಿ ಎಂಜಿನ್‌ ಆಯಿಲ್‌ ಲೆವೆಲ್‌ ಪರಿಶೀಲನೆ ಮಾಡುತ್ತ ಇರಿ. ಆಯಿಲ್‌ ಮಟ್ಟ ಸಮರ್ಪಕವಾಗಿದ್ದರೆ ಎಂಜಿನ್‌ಗೆ ಆಗುವ ಹಾನಿ ಕಡಿಮೆ ಇರುತ್ತದೆ.

ಕಾರಿನ ಬ್ಯಾಟರಿ ಪರಿಶೀಲನೆ ನಡೆಸಿ

ಕಾರಿನ ಬ್ಯಾಟರಿ ಉತ್ತಮ ಸ್ಥಿತಿಯಲ್ಲಿ ಇರಲಿ. ನಿಯಮಿತವಾಗಿ ಬ್ಯಾಟರಿ ಕೇಬಲ್‌ಗಳನ್ನು ಪರಿಶೀಲನೆ ನಡೆಸಿ. ಇದೇ ಸಮಯದಲ್ಲಿ ಕಾರಿನ ವೈರ್‌ ಎಲ್ಲವೂ ಸರಿಯಾಗಿ ಇದೆಯೇ, ಸುರಕ್ಷಿತವಾಗಿದೆಯೇ ತಿಳಿಯಿರಿ. ಕೆಲವೊಮ್ಮೆ ವೈರಿಂಗ್‌ ತೊಂದರೆಯಿಂದ ಕಾರು ಬೆಂಕಿಗೆ ಆಹುತಿಯಾಗುತ್ತದೆ. ಈ ಕುರಿತು ಎಚ್ಚರವಿರಲಿ.

ಟೈರ್‌ ಒತ್ತಡ

ಟೈರ್‌ನ ಗಾಳಿಯ ಒತ್ತಡ ಪ್ರತಿನಿತ್ಯ ಗಮನಿಸುತ್ತ ಇರಿ. ಬಿಸಿಲು ವಾತಾವರಣವು ಟೈರ್‌ನ ಏರ್‌ ಪ್ರೆಸರ್‌ ಮೇಲೆ ಪರಿಣಾಂ ಬೀರುತ್ತದೆ. ಫ್ಲಾಟ್‌ ಆಗಿರುವ ಟೈರ್‌ಗಳಿದ್ದರೆ ಬದಲಾಯಿಸಿ.

ವೈಪರ್‌ಗಳನ್ನು ಗಮನಿಸಿ

ಮಳೆಗಾಲದಲ್ಲಿ ವೈಪರ್‌ಗಳಿಗೆ ಹೆಚ್ಚು ಕೆಲಸ ಇರುತ್ತದೆ. ಬಿಸಿಲು ಜಾಸ್ತಿ ಇರುವಾಗ ಅದರ ರಬ್ಬರ್‌ ಒಣಗುತ್ತದೆ. ವೈಪರ್‌ ಬ್ಲೇಡ್‌ಗಳನ್ನು ನಿಯಮಿತವಾಗಿ ಪರಿಶೀಲನೆ ನಡೆಸುತ್ತ ಇರಿ.

ಇವೆಲ್ಲವು ಬಿಸಿಲಿನ ಕಾಲದಲ್ಲಿ ಕಾರನ್ನು ನಿರ್ವಹಿಸಲು ಇರುವ ಸಲಹೆಗಳಾಗಿವೆ. ಇದಲ್ಲದೆ ಕಾರಿನ ಎಂಜಿನ್‌ ಅತಿಯಾಗಿ ಬಿಸಿಯಾಗುತ್ತಿದ್ದರೆ ಅದಕ್ಕೆ ಏನಾದರೂ ತಾಂತ್ರಿಕ ಕಾರಣಗಳು ಇರಬಹುದು. ಇದಕ್ಕಾಗಿ ರೇಡಿಯೇಟರ್‌ ಮತ್ತು ಕೂಲಿಂಗ್‌ ವ್ಯವಸ್ಥೆಯನ್ನು ಪರಿಶೀಲಿಸಬೇಕು. ಹೆಚ್ಚು ಬಿಸಿಯಾದ ಸಂದರ್ಭದಲ್ಲಿ ರೇಡಿಯೇಟರ್‌ ಅನ್ನು ಫ್ಲಷ್‌ ಮಾಡಬಹುದು. ಕೂಲಿಂಗ್‌ ಸಿಸ್ಟಮ್‌ ಲೀಕ್‌ ಇದ್ದರೆ ಪರಿಶೀಲಿಸಿ. ಕೂಲೆಂಟ್‌ ಸಮರ್ಪಕವಾಗಿದೆಯೇ ಗಮನಿಸಿ. ಎಂಜಿನ್‌ ಆಯಿಲ್‌ ಲೆವೆಲ್‌ ಸರಿಯಾಗಿರುವಂತೆ ನೋಡಿಕೊಳ್ಳಿ.

ಕಾರು ತುಂಬಾ ಬಿಸಿಯಾಗುತ್ತಿದೆ ಎನ್ನುವ ಸಂದರ್ಭದಲ್ಲಿ ಏಸಿ ಆಫ್‌ ಮಾಡಿ. ಕಾರು ತುಂಬಾ ಬಿಸಿಯಾಗಿದೆ ಎಂದೆನಿಸಿದರೆ ಎಲ್ಲಾದರೂ ಪಾರ್ಕ್‌ ಮಾಡಿ ಒಂದಿಷ್ಟು ಸಮಯ ಎಂಜಿನ್‌ ತಣ್ಣಗೆ ಆಗಲು ಬಿಡಿ. ಕಾರಿನ ಎಂಜಿನ್‌ ಅತಿಯಾಗಿ ಬಿಸಿಯಾಗುವ ಸಂದರ್ಭದಲ್ಲಿ ಭಯ ಪಡಬೇಡಿ. ಕಾರು ಚಾಲನೆ ಮುಂದುವರೆಸಬೇಡಿ. ಕಾರು ತುಂಬಾ ಬಿಸಿಯಾಗಿದೆ ಎಂದಾಕ್ಷಣ ಬಾನೆಟ್‌ ತೆರೆಯಬೇಡಿ. ಕೊನೆಯದಾಗಿ ಕಾರು ಎಂಜಿನ್‌ ಅತಿಯಾಗಿ ಬಿಸಿಯಾಗುವುದನ್ನು ಕಡೆಗಣಿಸಬೇಡಿ.