ಕನ್ನಡ ಸುದ್ದಿ  /  Lifestyle  /  Automobile News Maruti Swift Facelift To Tata Nexon Dark These Are The New Cars Likely To Launch In March Rmy

ಮಾರುತಿ ಸ್ವಿಫ್ಟ್‌ನಿಂದ ಟಾಟಾ ನೆಕ್ಸಾನ್‌ವರೆಗೆ; ಮಾರ್ಚ್‌ನಲ್ಲಿ ಬಿಡುಗಡೆಯಾಗಬಹುದಾದ ಹೊಸ ಕಾರುಗಳಿವು -New Cars Launch In March

ಮಾರ್ಚ್‌ನಲ್ಲಿ ಮಾರುತಿ ಸ್ವಿಫ್ಟ್ ಫೇಸ್‌ಲಿಫ್ಟ್, ಟಾಟಾ ನೆಕ್ಸಾನ್‌ ಡಾರ್ಕ್‌ ಜೊತೆಗೆ ಇನ್ನೂ ಕೆಲವು ಹೊಸ ಕಾರುಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಪಟ್ಟಿಯಲ್ಲಿ ಯಾವೆಲ್ಲಾ ಕಾರುಗಳಿವೆ ನೋಡಿ.

ಮಾರುತಿ ಸ್ವಿಫ್ಟ್‌ ಫೇಸ್‌ಲಿಫ್ಟ್‌ನಿಂದ ಟಾಟಾ ನೆಕ್ಸಾನ್ ಡಾರ್ಕ್ ಎಡಿಷನ್‌ವರೆಗೆ ಮಾರ್ಚ್‌ ತಿಂಗಳಲ್ಲಿ ಬಿಡುಗಡೆಯಾಗಬಹುದಾದ ಕಾರುಗಳ ಪಟ್ಟಿ ಇಲ್ಲಿದೆ
ಮಾರುತಿ ಸ್ವಿಫ್ಟ್‌ ಫೇಸ್‌ಲಿಫ್ಟ್‌ನಿಂದ ಟಾಟಾ ನೆಕ್ಸಾನ್ ಡಾರ್ಕ್ ಎಡಿಷನ್‌ವರೆಗೆ ಮಾರ್ಚ್‌ ತಿಂಗಳಲ್ಲಿ ಬಿಡುಗಡೆಯಾಗಬಹುದಾದ ಕಾರುಗಳ ಪಟ್ಟಿ ಇಲ್ಲಿದೆ

ಒಂದು ಸಣ್ಣ ಬ್ರೇಕ್ ನಂತರ ಭಾರತದಲ್ಲಿನ ಪ್ರಮುಖ ಕಾರು ತಯಾರಿಕಾ ಕಂಪನಿಗಳು ಮಾರ್ಚ್‌ನಲ್ಲಿ ಒಂದಷ್ಟು ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗುತ್ತಿವೆ. ಕಿಯಾ ಸೋನೆಟ್ ಫೇಸ್‌ಲಿಫ್ಟ್ ಮತ್ತು ಹುಂಡೈ ಕ್ರೆಟಾ ಫೇಸ್‌ಲಿಫ್ಟ್‌ನಂತಹ ಪ್ರಮುಖ ಕಾರುಗಳನ್ನು ಬಿಡುಗಡೆ ಮಾಡಿದ್ದವು. ಫೆಬ್ರವರಿಯಲ್ಲಿ ಕೊಂಚ ಬಿಡುವು ಪಡೆದಿದ್ದವು. ಆದರೆ ಮಾರ್ಚ್‌ ತಿಂಗಳು ಹಲವು ಆಟೊಮೊಬೈಲ್ ಸಂಸ್ಥೆಗಳು ತಮ್ಮ ಕಾರುಗಳನ್ನು ರಸ್ತೆಗಳಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿವೆ. ನೀವೇನಾದರೂ ಮುಂದಿನ ತಿಂಗಳು ಕಾರು ಖರೀದಿಸುವ ಪ್ಲಾನ್ ಮಾಡಿದ್ದರೆ ನಿಮಗಾಗಿ ಈ ಮಾಹಿತಿ. 2024ರ ಮಾರ್ಚ್‌ನಲ್ಲಿ ಬಿಡುಗಡೆಯಾಗಬಹುದಾದ ಕಾರುಗಳು ಪಟ್ಟಿ ಇಲ್ಲಿದೆ.

ಹುಂಡೈ ಕ್ರೆಟಾ ಎನ್‌ ಲೈನ್

ಈ ವರ್ಷದ ಆರಂಭದಲ್ಲಿ ಕ್ರೆಟಾ ಫೇಸ್‌ಲಿಫ್ಟ್‌ ಎಸ್‌ಯುವಿಯನ್ನು ಬಿಡುಗಡೆ ಮಾಡಿದ ನಂತರ ಹುಂಡೈ ಈ ವರ್ಷ ತನ್ನ ಎರಡನೇ ದೊಡ್ಡ ಕಾರು ಬಿಡುಗಡೆಗೆ ಸಜ್ಜಾಗಿದೆ. ಹುಂಡೈ ಹೊಸ ಕ್ರೆಟಾ ಎನ್ ಲೈನ್ ಎಡಿಷನ್ ಅನ್ನು ಮಾರ್ಚ್ 11 ರಂದು ಬಿಡುಗಡೆ ಮಾಡಲಿದೆ. ಇದು ಐ20 ಎನ್ ಲೈನ್ ಮತ್ತು ಎನ್‌ ಲೈನ್ ಎಡಿಷನ್‌ಗಳ ನಂತರ ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ ಮೂರನೇ ಎನ್‌ ಮಾದರಿಯ ಕಾರು. ಹುಂಡೈ ಅಸ್ತಿತ್ವದಲ್ಲಿರುವ ಮಾದರಿಗಳ ಸ್ಪೋರ್ಟಿಯರ್ ಎಡಿಷನ್‌ಗಳಂತೆ ಕೆಲವು ಸುಧಾರಿತ ಬದಲಾವಣೆಗಳೊಂದಿಗೆ ಹೊಸ ಮಾದರಿಗಳನ್ನು ತರುತ್ತಿದೆ ಕ್ರೆಟಾ ಎನ್‌ ಲೈನ್ ಹೆಚ್ಚಾಗಿ ಫೇಸ್‌ಲಿಫ್ಟ್ ಕ್ರೆಟಾ ಎಸ್‌ಯುವಿಯನ್ನ ಹೋಲುತ್ತದೆ.

ಬದಲಾವಣೆಗಳನ್ನು ನೋಡುವುದಾದರೆ ಎನ್‌ ಲೈನ್ ಬ್ಯಾಡ್ಜಿಂಗ್, ಡ್ಯುಯಲ್ ಎಕ್ಸಾಸ್ಟ್, ಮಿಶ್ರಲೋಹದ ಚಕ್ರಗಳು ಹಾಗೂ ಬಂಪರ್‌ಗಳನ್ನು ರಿಡಿಸೈನ್ ಮಾಡಲಾಗಿದೆ. ಸಂಪೂರ್ಣ ಕಪ್ಪು ಥೀಪ್‌ನೊಂದಿದೆ ಬರುತ್ತಿದ್ದು, ಒಳಾಂಗಣವು ಸ್ಪೋರ್ಟಿ ಪಾತ್ರವನ್ನು ಹೆಚ್ಚಿಸಲು ಕೆಂಪು ಆಕ್ಸೆಂಟ್ ಹೊಂದಿದೆ. 1.5 ಲೀಟರ್ ಟರ್ಬೊ ಪೆಟ್ರೋಲ್ ಇಂಜಿನ್, 158bhp ಪವರ್ ಹಾಗೂ 253Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಇಂಜಿನ್ ಅನ್ನು 7-ಸ್ಪೀಡ್ ಡಿಸಿಟಿ ಗೇರ್ ಬಾಕ್ಸ್‌ಗೆ ಜೋಡಿಸಲಾಗಿದೆ.

ಡಿವೈಡಿ ಸೀಲ್

ಚೀನಾದ ಇವಿ ದೈತ್ಯ ಕಾರು ಸಂಸ್ಥೆ ಬಿವೈಡಿ ಭಾರತದಲ್ಲಿ ತನ್ನ ಮೂರನೇ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲಿದೆ. ಕಳೆದ ವರ್ಷ ಜನವರಿಯಲ್ಲಿ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಬಿವೈಡಿ ಸೀಲ್ ಇವಿ ಕಾರನ್ನು ಪ್ರದರ್ಶಿಸಿತ್ತು. ಇದೀಗ ಈ ಎಕ್ಟ್ರಿಕ್ ಕಾರನ್ನು ಮಾರ್ಚ್ 5 ರಂದು ಬಿಡುಗಡೆ ಮಾಡಲು ಸಿದ್ದತೆಗಳನ್ನು ಮಾಡಿಕೊಂಡಿದೆ. ಬಿವೈಡಿ ಸೀಲ್ ಸಂಪೂರ್ಣವಾಗಿ ಬಿಲ್ಟ್ ಯೂನಿಟ್ ವಿಧಾನದಲ್ಲಿ ಭಾರತಕ್ಕೆ ಬರಲಿದೆ. ಬಿವೈಡಿ ಸೀಲ್ ಇವಿ ಸಿಂಗಲ್ ಪಿಎಂಎಸ್ ಮತ್ತು ಡ್ಯುಯಲ್ ವೋಟಾರ್ ಆಯ್ಕೆಗಳಲ್ಲಿ ಬರುತ್ತಿದೆ. ಇದು ಗರಿಷ್ಠ 227bhp ಪವರ್ ಮತ್ತು 360Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕೇವಲ 5.9 ಸೆಕೆಂಡ್‌ಗಳಲ್ಲಿ 0-100 ಕಿಲೋ ಮೀಟರ್ ವೇಗವನ್ನು ಹೆಚ್ಚಿಸುತ್ತದೆ ಎಂದು ಚೀನಾದ ಬಿವೈಡಿ ಹೇಳಿಕೊಂಡಿದೆ.

ಇವಿ 82.5 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 570 ಕಿಲೋಮೀಟರ್ ವರೆಗೆ ಪ್ರಯಾಣಿಸಬಹುದು. ಬಿವೈಡಿ ಸೀಲ್ 150 kW ವೇಗದಲ್ಲಿ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಇದು 37 ನಿಮಿಷಗಳಲ್ಲಿ ಇವಿಯನ್ನು ಶೇಕಡಾ 10 ರಿಂದ 80ರವರೆಗೆ ರೀಜಾರ್ಜ್ ಮಾಡಬಹುದು.

ಮಾರುತಿ ಸುಜುಕಿ ಸ್ವಿಫ್ಟ್

ಭಾರತದ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಸ್ವಿಫ್ಟ್‌ನ ನಾಲ್ಕನೇ ತಲೆಮಾರಿನ ಸ್ವಿಫ್ಟ್ ಅನ್ನು ಪರಿಚಯಿಸುತ್ತಿದೆ. ಇದು ತನ್ನ ಅತ್ಯುತ್ತಮ ಮಾರಾಟದ ಮಾದರಿಗಳಲ್ಲಿ ಒಂದಾಗಿದೆ. ಈ ವರ್ಷದ ಮೊದಲ ಹಾಗೂ ಪ್ರಮುಖ ಕಾರು ಇದಾಗಿದೆ. ಈ ಮಾದರಿಯ ಸ್ವಿಫ್ಟ್‌ ಅನ್ನು ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಪರಿಚಯಿಸಲಾಗಿದೆ. ಆದರೆ ಇದನ್ನು ಭಾರತದಲ್ಲಿ ಪರಿಚಯಿಸುವ ಬಗ್ಗೆ ಸ್ಪಷ್ಟತೆ ಇಲ್ಲ. ಹೊಸ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು ಇಂಧನ ದಕ್ಷತೆ, ಬಾಹ್ಯ ವಿನ್ಯಾಸ, ಸುಧಾರಿತ ಒಳಾಂಗಣವನ್ನು ಹೊಂದಿದೆ. ಜಪಾನ್‌ನಲ್ಲಿ ಬಿಡುಗಡೆಯಾದ ಹೊಸ ತಲೆಮಾರಿನ ಸ್ವಿಫ್ಟ್ ಎರಡು ವಿಶಾಲವಾದ ಟ್ರಿಮ್‌ಗಳಲ್ಲಿ ಲಭ್ಯವಿದೆ. ಅವುಗಳಲ್ಲಿ ಒಂದು ನೈಸರ್ಗಿಕವಾಗಿ ಆಕಾಂಕ್ಷೆಯ 3 ಸಿಲಿಂಡರ್ ಇಂಜಿನ್‌ನೊಂದಿಗೆ ಬರುತ್ತದೆ. ಇನ್ನೊಂದು 12ವಿ ಲಘು ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಬರುತ್ತದೆ. ಸ್ವಿಫ್ಟ್ ಹೊಸ ಕಾರು 1.2 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ 3 ಸಿಲಿಂಡರ್‌ ಇಂಜಿನ್‌ ಹೊಂದಿದೆ. 5-ಸ್ಪೀಡ್ ಮ್ಯಾನುವಲ್ ಇಲ್ಲವೇ 5-ಸ್ಪೀಡ್ ಸಿವಿಟಿ ಟ್ರಾನ್ಸ್‌ಮಿಷನ್ ಯೂನಿಟ್‌ಗೆ ಇರುತ್ತದೆ.

ಟಾಟಾ ನೆಕ್ಸಾನ್ ಡಾರ್ಕ್ ಎಡಿಷನ್

ಟಾಟಾ ಮೋಟಾರ್ಸ್ ನೆಕ್ಸಾನ್ ಎಸ್‌ಯುವಿ ಡಾರ್ಕ್ ಎಡಿಷನ್ ಮೂಲಕ ತನ್ನ ಹೆಸರನ್ನು ಮತ್ತೊಂದು ಆವೃತ್ತಿಯೊಂದಿಗೆ ವಿಸ್ತರಿಸಲು ಪ್ಲಾನ್ ಮಾಡುತ್ತಿದೆ. ಹೆಸರೇ ಹೇಳುವಂತೆ ನಕ್ಸಾನ್ ಡಾರ್ಕ್ ಆಲ್ ಬ್ಲಾಕ್ ಎಕ್ಸ್‌ಟೀರಿಯರ್ ಥೀಮ್‌ನೊಂದಿಗೆ ಬರುತ್ತಿದೆ. ಇದು ಟಾಟಾ ಗ್ಲೋಸಿ ಮಿಡ್‌ನೈಟ್ ಬ್ಲ್ಯಾಕ್ ಎಕ್ಸ್‌ಟೀರಿಯರ್ ಕಲರ್ ಸ್ಕೀಮ್‌ನಲ್ಲಿ ಬರುತ್ತಿದ್ದು, ಕಪ್ಪು ಮಿಶ್ರಲೋಹದ ಚಕ್ರಗಳನ್ನು ಹೊಂದಿದೆ. ಥೀಮ್‌ಗೆ ಹೊಂದಿಕೆಯಾಗುವಂತೆ ಒಳಾಂಗಣಕ್ಕೆ ಸಂಪೂರ್ಣವಾಗಿ ಕಪ್ಪು ಬಣ್ಣದ ಟಚ್ ನೀಡಲಾಗಿದೆ.