ಭಾರತಕ್ಕೂ ಓಕೆ, ವಿದೇಶಕ್ಕೂ ಓಕೆ, ಹೊಸ ಸ್ಟೀಲ್‌ಬರ್ಡ್ ಹೆಲ್ಮೆಟ್ ಬಿಡುಗಡೆ, ದರ 1,799 ರೂಪಾಯಿ, ಈ ಶಿರಸ್ತ್ರಾಣದಲ್ಲೇನಿದೆ ವಿಶೇಷ?
ಸ್ಟೀಲ್‌ಬರ್ಡ್ ಕಂಪನಿಯು ಭಾರತದಲ್ಲಿ ಎಸ್‌ಬಿಎಚ್ 35 ರೋಬೊ 2.0 ( SBH-35 Robot 2.0 helmet) ಹೆಲ್ಮೆಟ್ ಅನ್ನು ಬಿಡುಗಡೆ ಮಾಡಿದೆ. ಇದರ ದರ 1,799 ರೂಪಾಯಿ. ಇದು ಡಿಒಟಿ ಮತ್ತು ಬಿಐಎಸ್ ಸರ್ಟಿಫೈಡ್ ಹೆಲ್ಮೆಟ್. ಅಂತಾರಾಷ್ಟ್ರೀಯ ಬಳಕೆಗೂ ಸುರಕ್ಷಿತ ಹೆಲ್ಮೆಟ್ ಇದಾಗಿದೆ.
ಬೆಂಗಳೂರು: ಸ್ಟೀಲ್‌ಬರ್ಡ್ ಕಂಪನಿಯು ಭಾರತದಲ್ಲಿ ಎಸ್‌ಬಿಎಚ್-35 ಎಂಬ ಹೊಸ ಹೆಲ್ಮೆಟ್ ಅನ್ನು ಬಿಡುಗಡೆ ಮಾಡಿದೆ. ರೋಬೋಟ್ 2.0 ಹೆಲ್ಮೆಟ್ ಅನ್ನು ಸ್ಟೀಲ್ ಬರ್ಡ್ ಕಂಪನಿ ತನ್ನ ವೆಬ್‌ಸೈಟ್‌ನಲ್ಲಿ ಲಿಸ್ಟ್ ಮಾಡಿದೆ. ದರ ಬೆಲೆ 1,799 ರೂಪಾಯಿ. ಇದು ಡಿಒಟಿ (FMVSS No. 218) ಮತ್ತು ಬಿಐಎಸ್ (IS 4151:2015) ಸ್ಟಾಂಡರ್ಡ್ ಹೆಲ್ಮೆಟ್. ಹೀಗಾಗಿ ಇದನ್ನು ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಬಳಸಬಹುದಾಗಿದೆ.
"ವಿಶ್ವ ಆರೋಗ್ಯ ಸಂಸ್ಥೆಯ ರಸ್ತೆ ಸುರಕ್ಷತೆ 2023 ರ ಜಾಗತಿಕ ಸ್ಥಿತಿಯ ವರದಿಯ ಪ್ರಕಾರ ಉತ್ತಮ ಗುಣಮಟ್ಟದ ಹೆಲ್ಮೆಟ್‌ಗಳು ಸಾವಿನ ಅಪಾಯವನ್ನು ಆರು ಪಟ್ಟು ಕಡಿಮೆ ಮಾಡುತ್ತದೆ. ಇವು ಗಾಯದ ಪ್ರಮಾಣವನ್ನು ಶೇಕಡ 74ರಷ್ಟು ಕಡಿಮೆ ಮಾಡಬಲ್ಲದು" ಎಂದು ಸ್ಟೀಲ್‌ಬರ್ಡ್ ಹೆಲ್ಮೆಟ್‌ನ ವ್ಯವಸ್ಥಾಪಕ ನಿರ್ದೇಶಕರಾದ ರಾಜೀವ್ ಕಪೂರ್ ಹೇಳಿದ್ದಾರೆ.
ಎಸ್‌ಬಿಎಚ್ 35 ರೋಬೊ 2.0 ಹೆಲ್ಮೆಟ್ ಸವಾರರಿಗೆ ಅತ್ಯುತ್ತಮ ಮಟ್ಟದ ರಕ್ಷಣೆ ಮತ್ತು ಕಂಫರ್ಟ್ ನೀಡುತ್ತದೆ. ಇದರಲ್ಲಿ ಸ್ಟೈಲಿಶ್ ಇಟಲಿಯನ್ ಡಿಸೈನ್ ಇದೆ. ಸುರಕ್ಷತೆಯ ಫೀಚರ್ ಕೂಡ ಅನನ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಯಾವ ಗಾತ್ರಗಳಲ್ಲಿ ಲಭ್ಯ
ಸ್ಟೀಲ್‌ಬರ್ಡ್ ಎಸ್‌ಬಿಎಚ್ 35 ರೋಬೊ 2.0 ಹೆಲ್ಮೆಟ್ ಮೂರು ಭಿನ್ನ ಗಾತ್ರಗಳಲ್ಲಿ ದೊರಕುತ್ತದೆ. ಅಂದರೆ 580 ಮಿ.ಮೀ., 600 ಮಿ.ಮೀ. and 620 ಮಿ.ಮೀ. ಗಾತ್ರಗಳಲ್ಲಿ ಲಭ್ಯವಿದೆ. ಈ ಮೂಲಕ ಎಲ್ಲರಿಗೂ ಸೂಕ್ತವಾಗುವಂತೆ ಇದೆ. ಐರೋಪ್ಯ ಸ್ಟ್ರಾಂಡರ್ಡ್‌ಗೆ ತಕ್ಕಂತೆ ಮೈಕ್ರೊ ಮೆಟ್ರಿಕ್ ಬಕಲ್ ಅನ್ನು ಇದು ಹೊಂದಿದೆ. ಇದರಿಂದ ಇದು ತಲೆಗೆ ಸಮರ್ಪಕವಾಗಿ ಹೊಂದಿಕೆಯಾಗುತ್ತದೆ.
ಈ ಹೆಲ್ಮೆಟ್‌ನ ಪ್ರಮುಖ ಫೀಚರ್‌ಗಳು
ಇದು ಹೈ ಇಂಪ್ಯಾಕ್ಟ್ ಎಬಿಎಸ್ ಮೆಟಿರಿಯಲ್ ಶೆಲ್ ಕನ್‌ಸ್ಟ್ರಕ್ಷನ್ ಹೊಂದಿದೆ. ಇದರಿಂದ ಹೆಲ್ಮೆಟ್ ಹೆಚ್ಚು ಸುರಕ್ಷತೆ ನೀಡುತ್ತದೆ. ಸುರಕ್ಷತೆಯ ಜತೆಗೆ ಕಂಫರ್ಟ್ ಕೂಡ ನೀಡುತ್ತದೆ. ಇದರಲ್ಲಿ ಮಲ್ಟಿ ಲೇಯರ್ ಇಪಿಎಸ್ ಥರ್ಮೊಕೋಲ್ ಇದೆ. ತಲೆಗೆ ಸಮರ್ಪಕಾಗಿ ಗಾಳಿಯ ಪೂರೈಕೆಯಾಗುವಂತೆ ವಿನ್ಯಾಸ ಮಾಡಲಾಗಿದೆ. ವಿಶೇಷವಾಗಿ ಬಿಸಿ ಹೆಚ್ಚಿರುವ ಸಮಯದಲ್ಲಿ ಇದು ಸವಾರರಿಗೆ ಆರಾಮದಾಯಕ ಎಣಿಸಲಿದೆ. ಈ ಹೆಲ್ಮೆಟ್‌ನಲ್ಲಿರುವ ವೆಂಟಿಲೇಜೇಷನ್ ಸಿಸ್ಟಮ್ ದೂರ ಪ್ರಯಾಣಕ್ಕೆ ಸೂಕ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಹೆಲ್ಮೆಟ್ ಅನ್ನು ವಾಷ್ ಮಾಡಬಹುದು. ಇದು ಆಂಟಿ ಬ್ಯಾಕ್ಟಿರಿಯಲ್, ಇಟಲಿಯನ್ ಡಿಸೈನ್ಡ್ ಹೆಲ್ಮೆಟ್ ಆಗಿದೆ. ಬ್ರೀಥೆಬಲ್ (ಉಸಿಡಾಬಹುದಾದ) ಮೆಟಿರಿಯಲ್‌ಗಳಿಂದ ಹೆಲ್ಮೆಟ್‌ನ ಇಂಟೀರಿಯರ್ ರಚಿಸಲಾಗಿದೆ. ಇದರಿಂದ ಹಲವು ಬಾರಿ ಬಳಸಿದರೂ ಫ್ರೆಶ್‌ನೆಸ್ ದೊರಕುತ್ತದೆ. ಇದು ಪಾಲಿಕಾರ್ಬೊನೇಟ್ ಬಳಕೆ ಮಾಡಿದ ಹೆಲ್ಮೆಟ್ ಆಗಿದೆ. ಆಂಟಿ ಸ್ಕ್ರ್ಯಾಚ್ ಕೋಟ್ ಹೊಂದಿದೆ. ಹೀಗಾಗಿ, ಈ ಹೆಲ್ಮೆಟ್‌ಗಳಿಗೆ ಗೆರೆ ಬೀಳಬಹುದು ಎಂಬ ಚಿಂತೆಯೂ ಇರದು. ಇದರಲ್ಲಿ ನೋಸ್ ಪ್ರೊಟೆಕ್ಟರ್ ಮತ್ತು ವೈಂಡ್ ಡಿಫ್ಲೆಕ್ಟರ್ ಫೀಚರ್‌ಗಳೂ ಇವೆ.
ಹೆಲ್ಮೆಟ್ ಕಡೆಗಣಿಸಬೇಡಿ
ಮೊದಲನೆಯದಾಗಿ ಹೆಲ್ಮೆಟ್ ಧರಿಸಿಯೇ ದ್ವಿಚಕ್ರವಾಹನ ಸವಾರಿ ಮಾಡಿ. ರಸ್ತೆಯಲ್ಲಿ ಬೈಕ್‌ನಲ್ಲಿ ಸಾಗುವಾಗ ಎಲ್ಲರಿಗೂ ಮುಖ ಕಾಣಬೇಕೆಂದು ಹೆಲ್ಮೆಟ್ ಹಾಕದೇ ಹೋಗಬೇಡಿ. ಹೆಣ್ಣು ಮಕ್ಕಳು ಸ್ಕೂಟರ್‌ನಲ್ಲಿ ಹೋಗುವಾಗ ತಪ್ಪದೇ ಹೆಲ್ಮೆಟ್ ಧರಿಸಬೇಕು. ಮುಖದ ಸೌಂದರ್ಯ ಎಲ್ಲರಿಗೂ ಕಾಣಲಿ ಎಂದು ಅರ್ಧ ಹೆಲ್ಮೆಟ್‌ಗಳನ್ನು ಬಳಸಬೇಡಿ. ಕೆಲವೊಮ್ಮೆ ಅಪಘಾತಗಳು ಹೇಗೆ ಬೇಕಾದರೂ ಸಂಭವಿಸಬಹುದು. ಕೆಲವೊಂದು ಪುಟ್ಟ ಅಪಘಾತದಿಂದಲೂ ತಲೆಗೆ ದೊಡ್ಡ ಏಟು ಬೀಳಬಹುದು. ಇದೇ ಕಾರಣಕ್ಕೆ ಹೆಲ್ಮೆಟ್ ಧರಿಸಿಯೇ ಬೈಕ್ ಸವಾರಿ ಮಾಡಿ.
ಟ್ರಾಫಿಕ್ ಪೊಲೀಸರಿಗಾಗಿ ಹೆಲ್ಮೆಟ್ ಧರಿಸಬೇಡಿ. ನಿಮ್ಮ ತಲೆಯ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಿ. ರಸ್ತೆ ಬದಿಯಲ್ಲಿ ದೊರಕುವ ಗುಣಮಟ್ಟವಿಲ್ಲದ ಹೆಲ್ಮೆಟ್ ಬಳಸಬೇಡಿ. ಗುಣಮಟ್ಟದ, ತಲೆಗೆ ಸುರಕ್ಷಿತವೆನಿಸುವ ಹೆಲ್ಮೆಟ್ ಖರಿದಿಸಿ ಬಳಸಿ.