Tata Curvv vs Kia Seltos: ಯಾವ ಎಸ್‌ಯುವಿ ಖರೀದಿಸುವಿರಿ? ಟಾಟಾ ಕರ್ವ್‌- ಕಿಯಾ ಸೆಲ್ಟೋಸ್‌ ನಡುವೆ ಆರು ಹಿತವರು ನಿಮಗೆ-automobile news suvs comparison tata curvv vs kia seltos which suv to choose here is price specification compare pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Tata Curvv Vs Kia Seltos: ಯಾವ ಎಸ್‌ಯುವಿ ಖರೀದಿಸುವಿರಿ? ಟಾಟಾ ಕರ್ವ್‌- ಕಿಯಾ ಸೆಲ್ಟೋಸ್‌ ನಡುವೆ ಆರು ಹಿತವರು ನಿಮಗೆ

Tata Curvv vs Kia Seltos: ಯಾವ ಎಸ್‌ಯುವಿ ಖರೀದಿಸುವಿರಿ? ಟಾಟಾ ಕರ್ವ್‌- ಕಿಯಾ ಸೆಲ್ಟೋಸ್‌ ನಡುವೆ ಆರು ಹಿತವರು ನಿಮಗೆ

Tata Curvv vs Kia Seltos: ಟಾಟಾ ಮೋಟಾರ್ಸ್‌ನ ಕರ್ವ್‌ ಕಾರು ಸಿಟ್ರೋನ್‌ ಬಸಲ್ಟ್‌ನಂತಹ ಮಧ್ಯಮ ಗಾತ್ರದ ಎಸ್‌ಯುವಿಗಳ ಜತೆ ನೇರವಾಗಿ ಸ್ಪರ್ಧಿಸುತ್ತಿದೆ. ಇದೇ ಸಮಯದಲ್ಲಿ ಕಿಯಾ ಸೆಲ್ಟೋಸ್‌, ಹ್ಯುಂಡೈ ಕ್ರೇಟಾ, ಮಾರುತಿ ಸುಜುಕಿ ಗ್ರ್ಯಾಂಡ್‌ ವಿಟಾರಾದಂತಹ ಮಾಡೆಲ್‌ಗಳ ಜತೆಗೂ ಮಾರುಕಟ್ಟೆಯಲ್ಲಿ ಸ್ಪರ್ಧಿಸುತ್ತಿದೆ.

ಟಾಟಾ ಕರ್ವ್‌- ಕಿಯಾ ಸೆಲ್ಟೋಸ್‌- ಯಾವ ಎಸ್‌ಯುವಿ ಖರೀದಿಸುವಿರಿ
ಟಾಟಾ ಕರ್ವ್‌- ಕಿಯಾ ಸೆಲ್ಟೋಸ್‌- ಯಾವ ಎಸ್‌ಯುವಿ ಖರೀದಿಸುವಿರಿ

Tata Curvv vs Kia Seltos: ಟಾಟಾ ಕರ್ವ್‌ ಇತ್ತೀಚೆಗೆ ಭಾರತದ ವಾಹನ ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, ಮಧ್ಯಮ ಗಾತ್ರದ ಎಸ್‌ಯುವಿಗಳ ನಡುವೆ ತನ್ನ ತಾಜಾ ವಿನ್ಯಾಸದಿಂದ ಗಮನ ಸೆಳೆಯುತ್ತಿದೆ. ಟಾಟಾ ಮೋಟಾರ್ಸ್‌ನ ಕರ್ವ್‌ ಕಾರು ಸಿಟ್ರೋನ್‌ ಬಸಲ್ಟ್‌ನಂತಹ ಮಧ್ಯಮ ಗಾತ್ರದ ಎಸ್‌ಯುವಿಗಳ ಜತೆ ನೇರವಾಗಿ ಸ್ಪರ್ಧಿಸುತ್ತಿದೆ. ಇದೇ ಸಮಯದಲ್ಲಿ ಕಿಯಾ ಸೆಲ್ಟೋಸ್‌, ಹ್ಯುಂಡೈ ಕ್ರೇಟಾ, ಮಾರುತಿ ಸುಜುಕಿ ಗ್ರ್ಯಾಂಡ್‌ ವಿಟಾರಾದಂತಹ ಮಾಡೆಲ್‌ಗಳ ಜತೆಗೂ ಮಾರುಕಟ್ಟೆಯಲ್ಲಿ ಸ್ಪರ್ಧಿಸುತ್ತಿದೆ. ನಿಮಗೀಗ ಟಾಟಾ ಕರ್ವ್‌ ಮತ್ತು ಕಿಯಾ ಸೆಲ್ಟೊಸ್‌ ನಡುವೆ ಯಾವುದನ್ನು ಖರೀದಿಸಬೇಕು ಎಂಬ ಗೊಂದಲ ಉಂಟಾಗಿದ್ದರೆ? ಇವರೆಡರ ನಡುವೆ ಆರು ಹಿತವರು ಎಂಬ ಸಂದಿಗ್ಧತೆ ಮೂಡಿರಬಹುದು.

ಕೆಲವು ವರ್ಷಗಳ ಹಿಂದೆ ರಸ್ತೆಗೆ ಇಳಿದಿರುವ ಕಿಯಾ ಸೆಲ್ಟೋಸ್‌ ಭಾರತದಲ್ಲಿ ಅತ್ಯಧಿಕ ಮಾರಾಟದ ಎಸ್‌ಯುವಿಯಾಗಿದೆ. ಕಿಯಾ ಕಂಪನಿಯು ಭಾರತಕ್ಕೆ ಪರಿಚಯಿಸಿದ ಮೊದಲ ಕಾರು ಇದಾಗಿದೆ. ಟಾಟಾ ಕರ್ವ್‌ನಂತಹ ಭಾರತೀಯ ಎಸ್‌ಯುವಿಗಳು ಇದೀಗ ಕಿಯಾ ಸೆಲ್ಟೋಸ್‌ಗೆ ಪ್ರಮುಖ ಪ್ರತಿಸ್ಪರ್ಧೆ ಒಡ್ಡುತ್ತಿವೆ.

ಟಾಟಾ ಕರ್ವ್‌- ಕಿಯಾ ಸೆಲ್ಟೋಸ್‌ ಹೋಲಿಕೆ: ದರ

ಮೊದಲಿಗೆ ಇವೆರಡು ಎಸ್‌ಯುವಿಗಳ ನಡುವಿನ ದರ ವ್ಯತ್ಯಾಸ ತಿಳಿದುಕೊಳ್ಳೋಣ. ಟಾಟಾ ಕರ್ವ್‌ನ ಎಕ್ಸ್‌ಶೋರೂಂ ದರ 9.99 ಲಕ್ಷ ರೂನಿಂದ 17.69 ಲಕ್ಷ ರೂವರೆಗೆ ಇದೆ. ಆದರೆ, ಈ ದರ ಅಕ್ಟೋಬರ್‌ 31ರವರೆಗೆ ಈ ದರ ಇರಲಿದೆ. ಬಳಿಕ ತುಸು ಹೆಚ್ಚಲಿದೆ. ಇದೇ ಸಮಯದಲ್ಲಿ ಕಿಯಾ ಸೆಲ್ಟೋಸ್‌ ದರ 10.90 ಲಕ್ಷ ರೂಪಾಯಿಯಿಂದ 20.45 ಲಕ್ಷ ರೂವರೆಗಿದೆ. ಇವು ಎಕ್ಸ್‌ ಶೋರೂಂ ದರಗಳು. ಕಿಯಾ ಸೆಲ್ಟೋಸ್‌ನ ಬೇಸ್‌ ಆವೃತ್ತಿಯ ದರಕ್ಕಿಂತ ಟಾಟಾ ಕರ್ವ್‌ನ ದರ ಕಡಿಮೆ ಇದೆ.

ಕಿಯಾ ಸೆಲ್ಟೋಸ್‌ ಫಸ್ಟ್‌ ಡ್ರೈವ್‌ ವಿಮರ್ಶೆ

ಟಾಟಾ ಕರ್ವ್‌- ಕಿಯಾ ಸೆಲ್ಟೋಸ್‌: ಸ್ಪೆಸಿಫಿಕೇಷನ್‌ ಹೋಲಿಕೆ

ಟಾಟಾ ಕರ್ವ್‌ ಎರಡು ಪೆಟ್ರೋಲ್‌ ಮತ್ತು ಒಂದು ಡೀಸೆಲ್‌ ಎಂಜಿನ್‌ ಆಯ್ಕೆಯಲ್ಲಿ ಲಭ್ಯ. ಅಂದ್ರೆ, 1.2 ಲೀಟರ್‌ನ ರೆವೊಟ್ರೊನ್‌ ಪೆಟ್ರೋಲ್‌ ಹೊಂದಿರುವ ಕರ್ವ್‌ 118 ಬಿಎಚ್‌ಪಿ ಪವರ್‌ ಮತ್ತು 170 ಎನ್‌ಎಂ ಟಾರ್ಕ್‌ ಪವರ್‌ ಒದಗಿಸುತ್ತದೆ. ಈ ಎಂಜಿನ್‌ನ ಕರ್ವ್‌ ಕಾರುಗಳು 6 ಹಂತದ ಮ್ಯಾನುಯಲ್‌ ಗಿಯರ್‌ಬಾಕ್ಸ್‌ ಮತ್ತು 7 ಹಂತದ ಡಿಸಿಟಿ ಆಟೋಮ್ಯಾಟಿಕ್‌ ಗಿಯರ್‌ಬಾಕ್ಸ್‌ ಹೊಂದಿದೆ. 1.2 ಲೀಟರ್‌ನ ಹೈಪರಿಯೊನ್‌ ಎಂಜಿನ್‌ನ ಕರ್ವ್‌ನ ಕಾರಿನಲ್ಲೂ ಇದೇ ರೀತಿಯ ಗಿಯರ್‌ಬಾಕ್ಸ್‌ಗಳು ಇವೆ. ಈ ಎಂಜಿನ್‌ 23 ಬಿಎಚ್‌ಪಿ ಪವರ್‌ ಮತ್ತು 225 ಎನ್‌ಎಂ ಟಾರ್ಕ್‌ ಪವರ್‌ ನೀಡುತ್ತದೆ. ಟಾಟಾ ಕರ್ವ್‌ ಡೀಸೆಲ್‌ ಎಂಜಿನ್‌ ಆಯ್ಕೆಯಲ್ಲೂ ದೊರಕುತ್ತದೆ. ಗಿಯರ್‌ಬಾಕ್ಸ್‌ ಎಲ್ಲದರಲ್ಲೂ ಒಂದೇ ರೀತಿಯವು ಇವೆ.

ಕಿಯಾ ಸೆಲ್ಟೋಸ್‌ ಎಸ್‌ಯುವಿಯು ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ಆಯ್ಕೆಯಲ್ಲಿ ಲಭ್ಯ. ಆದರೆ, ಗಿಯರ್‌ ಬಾಕ್ಸ್‌ ವೈವಿಧ್ಯಮಯ ಆಯ್ಕೆಗಳಲ್ಲಿ ಲಭ್ಯ. ಲೋವರ್‌ ಟ್ರಿಮ್‌ನಲ್ಲಿ 1.5 ಲೀಟರ್‌ನ ಪೆಟ್ರೋಲ್‌ ಎಂಜಿನ್‌ ಮತ್ತು ಹೈಯರ್‌ ವೇರಿಯೆಂಟ್‌ನಲ್ಲಿ 1.5 ಲೀಟರ್‌ ಟರ್ಬೊಚಾರ್ಜ್‌ ಪೆಟ್ರೋಲ್‌ ಇದೆ. ಇದು 1.5 ಲೀಟರ್‌ ಡೀಸೆಲ್‌ ಮೋಟರ್‌ ಆಯ್ಕೆಯಲ್ಲೂ ಲಭ್ಯ. ಟರ್ಬೊಚಾರ್ಜ್‌ ಪೆಟ್ರೊಲ್‌ ಎಂಜಿನ್‌ 158 ಬಿಎಚ್‌ಪಿ ಪವರ್‌ ಮತ್ತು 253 ಎನ್‌ಎಂ ಟಾರ್ಕ್‌ ಒದಗಿಸುತ್ತದೆ. 6 ಸ್ಪೀಡ್‌ನ ಮ್ಯಾನುಯಲ್‌, ಐಎಂಟಿ ಮತ್ತು 7 ಸ್ಪೀಡ್‌ನ ಡಿಸಿಟಿ ಗಿಯರ್‌ಬಾಕ್ಸ್‌ ಆಯ್ಕೆಗಳಲ್ಲಿ ದೊರಕುತ್ತಿದೆ. ಹ್ಯುಂಡೈ ಕ್ರೇಟಾದಲ್ಲೂ ಇದೇ ರೀತಿಯ ಎಂಜಿನ್‌ ಇದೆ.

mysore-dasara_Entry_Point