ಅಂಬಾನಿ ಅಲ್ಲ, ಅದಾನಿಯೂ ಅಲ್ಲ: ಕಾರಿಗೆ ಅತ್ಯಂತ ದುಬಾರಿ ನಂಬರ್ ಪ್ಲೇಟ್ ಹಾಕಿಸಿಕೊಂಡಿರುವವರು ಯಾರು ಗೊತ್ತೇ, ಇವರೇ ನೋಡಿ-automobile news top 5 world most expensive car number plates do you know who has the most expensive car number plate vbt ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಅಂಬಾನಿ ಅಲ್ಲ, ಅದಾನಿಯೂ ಅಲ್ಲ: ಕಾರಿಗೆ ಅತ್ಯಂತ ದುಬಾರಿ ನಂಬರ್ ಪ್ಲೇಟ್ ಹಾಕಿಸಿಕೊಂಡಿರುವವರು ಯಾರು ಗೊತ್ತೇ, ಇವರೇ ನೋಡಿ

ಅಂಬಾನಿ ಅಲ್ಲ, ಅದಾನಿಯೂ ಅಲ್ಲ: ಕಾರಿಗೆ ಅತ್ಯಂತ ದುಬಾರಿ ನಂಬರ್ ಪ್ಲೇಟ್ ಹಾಕಿಸಿಕೊಂಡಿರುವವರು ಯಾರು ಗೊತ್ತೇ, ಇವರೇ ನೋಡಿ

ಭಾರತದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಅಂಬಾನಿ-ಅದಾನಿ ಅವರ ಬಳಿಯೂ ಅತ್ಯಂತ ದುಬಾರಿ ಕಾರು ನಂಬರ್ ಪ್ಲೇಟ್ ಇಲ್ಲ. ಅಷ್ಟಕ್ಕೂ ಭಾರತದಲ್ಲಿ ಲಕ್ಷಗಟ್ಟಲೆ ಬೆಲೆಬಾಳುವ ನಂಬರ್ ಪ್ಲೇಟ್‌ಗಳು ಯಾವುವು ಮತ್ತು ಅವುಗಳ ಮಾಲೀಕರು ಯಾರು ಎಂಬುದನ್ನು ನಾವು ಹೇಳುತ್ತೇವೆ. (ಬರಹ: ವಿನಯ್ ಭಟ್)

ಭಾರತದಲ್ಲಿ ಲಕ್ಷಗಟ್ಟಲೆ ಬೆಲೆಬಾಳುವ ನಂಬರ್ ಪ್ಲೇಟ್‌ಗಳು ಯಾವುವು ಮತ್ತು ಅವುಗಳ ಮಾಲೀಕರು ಯಾರು, ಇಲ್ಲಿದೆ ಮಾಹಿತಿ.
ಭಾರತದಲ್ಲಿ ಲಕ್ಷಗಟ್ಟಲೆ ಬೆಲೆಬಾಳುವ ನಂಬರ್ ಪ್ಲೇಟ್‌ಗಳು ಯಾವುವು ಮತ್ತು ಅವುಗಳ ಮಾಲೀಕರು ಯಾರು, ಇಲ್ಲಿದೆ ಮಾಹಿತಿ.

ಅತ್ಯಂತ ದುಬಾರಿ ಕಾರು ನಂಬರ್ ಪ್ಲೇಟ್ ಬೆಲೆ ಎಷ್ಟು ಎಂದು ಯಾರಾದರೂ ನಿಮ್ಮನ್ನು ಕೇಳಿದರೆ, ನೀವು 1-2 ಲಕ್ಷ ಎಂದು ಹೇಳುತ್ತೀರಿ. ಆದರೆ ನಿಜ ಸಂಗತಿ ಇದಲ್ಲ, ಭಾರತದಲ್ಲಿನ ಅತ್ಯಂತ ದುಬಾರಿ ಕಾರುನಂಬರ್ ಪ್ಲೇಟ್ ಇದಕ್ಕಿಂತ ಹೆಚ್ಚು ದುಬಾರಿಯಾಗಿದೆ. ಭಾರತದ ಮೊದಲ ಮತ್ತು ಎರಡನೇ ಶ್ರೀಮಂತರಲ್ಲಿ ಅಂಬಾನಿ ಮತ್ತು ಅದಾನಿ ಹೆಸರುಗಳಿವೆ. ಆದರೆ ಕಾರಿನ ನಂಬರ್ ಪ್ಲೇಟ್‌ ವಿಚಾರದಲ್ಲಿ ಇವರ ಹೆಸರು ಅಗ್ರಸ್ಥಾನದಲ್ಲಿಲ್ಲ. ವಾಸ್ತವವಾಗಿ, ಈ 5 ಜನರು ತಮ್ಮ ಕಾರಿನಲ್ಲಿ ಅತ್ಯಂತ ದುಬಾರಿ ನಂಬರ್ ಪ್ಲೇಟ್ ಅನ್ನು ಅಳವಡಿಸಿದ್ದಾರೆ.

ಈ 5 ಜನರ ಕಾರಿನ ನಂಬರ್ ಪ್ಲೇಟ್ ಏನು? ಕಾರಿನ ಮಾಲೀಕರ ಹೆಸರು ಮತ್ತು ಅವುಗಳ ಬೆಲೆ ಎಷ್ಟು ಎಂಬ ಸಂಪೂರ್ಣ ವಿವರಗಳನ್ನು ನೀವು ಇಲ್ಲಿ ತಿಳಿಯಬಹುದು.

ಅತ್ಯಂತ ದುಬಾರಿ ಕಾರು ನಂಬರ್ ಪ್ಲೇಟ್‌ಗಳು ಮತ್ತು ಅವುಗಳ ಮಾಲೀಕರು

- ಪಾರ್ಕ್ ಪ್ಲಸ್ ವರದಿಗಳ ಪ್ರಕಾರ, ಅತ್ಯಂತ ದುಬಾರಿ ಕಾರಿನನಂಬರ್ ಪ್ಲೇಟ್ ಟೊಯೊಟಾ ಫಾರ್ಚುನರ್‌ನಲ್ಲಿದೆ. ಅದರ ಮಾಲೀಕರ ಹೆಸರು ಆಶಿಕ್ ಪಟೇಲ್. ಇವರ ಕಾರಿನ ಸಂಖ್ಯೆ '007'. ಈ ನಂಬರ್ ಪ್ಲೇಟ್ ಬೆಲೆ 34 ಲಕ್ಷ ರೂ. ಆಗಿದೆ.

- ಎರಡನೇ ಸ್ಥಾನದಲ್ಲಿ ಎಸ್. ಬಾಲಗೋಪಾಲ್ ಅವರಿದ್ದಾರೆ. ಇವರು ಪೋರ್ಚೆ 718 ಬಾಕ್ಸ್‌ಸ್ಟರ್ ಹೊಂದಿದ್ದಾರೆ. ಈ ಕಾರು 31 ಲಕ್ಷ ಮೌಲ್ಯದ ನಂಬರ್ ಪ್ಲೇಟ್ ಹೊಂದಿದ್ದು, ಕಾರ್ ನಂಬರ್ ‘ಕೆಎಲ್-01-ಸಿಕೆ-1’ ಆಗಿದೆ.

- ಮೂರನೇ ಸ್ಥಾನದಲ್ಲಿ ಕೂಡ ಎಸ್. ಬಾಲಗೋಪಾಲ್ ಅವರ ಟೊಯೊಟಾ ಲ್ಯಾಂಡ್ ಕ್ರೂಸರ್ LC200 ಕಾರಿದೆ. ಈ ಕಾರಿನ ನಂಬರ್ ಪ್ಲೇಟ್ ಬೆಲೆ 18 ಲಕ್ಷ ರೂಪಾಯಿ ಮತ್ತು ಅದರ ಸಂಖ್ಯೆ 'KL01CB0001'.

- ನಾಲ್ಕನೇ ಸ್ಥಾನದಲ್ಲಿ ಜಗಜಿತ್ ಸಿಂಗ್ ಅವರ ಟೊಯೊಟಾ ಲ್ಯಾಂಡ್ ಕ್ರೂಸರ್ LC200 ಇದ್ದು, 17 ಲಕ್ಷ ರೂಪಾಯಿ ಮೌಲ್ಯದ ಕಾರ್ ನಂಬರ್ ಪ್ಲೇಟ್ 'CH01AN0001' ಅನ್ನು ಹೊಂದಿದೆ.

- ಜಾಗ್ವಾರ್ ಎಕ್ಸ್‌ಜೆಎಲ್ ಕಾರು 16 ಲಕ್ಷ ರೂಪಾಯಿ ಮೌಲ್ಯದ 'RJ45CG0001' ನಂಬರ್ ಪ್ಲೇಟ್ ಹೊಂದಿದೆ. ಇದರ ಮಾಲೀಕನ ಹೆಸರು ರಾಹುಲ್ ತನೇಜಾ.

ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಯವರ ಕಾರಿನ ನಂಬರ್ ಪ್ಲೇಟ್ ಸಂಖ್ಯೆ ಮತ್ತು ಅದರ ಮೌಲ್ಯದ ವಿವರಗಳು ಇಲ್ಲಿವೆ

ಮುಖೇಶ್ ಅಂಬಾನಿಯವರ ಕಾರಿನ ನಂಬರ್ ಪ್ಲೇಟ್: ಏಷ್ಯಾದ ಪ್ರಮುಖ ಉದ್ಯಮಿ ಮತ್ತು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯವರ BMW 7-ಸರಣಿಯ ಕಾರಿನನಂಬರ್ ಪ್ಲೇಟ್ 9 ಲಕ್ಷ ರೂಪಾಯಿಗಳಾಗಿದ್ದು, ಅದರ ಸಂಖ್ಯೆ "MH 01 AK 0001" ಆಗಿದೆ. ಎಕನಾಮಿಕ್ಸ್ ಟೈಮ್ಸ್ ವರದಿಯ ಪ್ರಕಾರ, ಅಂಬಾನಿ ಅವರು 2022 ರಲ್ಲಿ ರೋಲ್ಸ್ ರಾಯ್ಸ್ ಅನ್ನು ಖರೀದಿಸಿದ್ದರು, ಇದು 12 ಲಕ್ಷ ರೂಪಾಯಿ ಮೌಲ್ಯದ ನಂಬರ್ ಪ್ಲೇಟ್ ಅನ್ನು ಹೊಂದಿದೆ, ಅದರ ಸಂಖ್ಯೆ '0001'.

mysore-dasara_Entry_Point