ಭಾರತದಲ್ಲಿ ಮುಂದುವರೆದ ಟಾಟಾ ಅಬ್ಬರ: ಈ ಕಾರಿನ ಮಾರಾಟದಲ್ಲಿ ಬರೋಬ್ಬರಿ ಶೇ. 53 ರಷ್ಟು ಹೆಚ್ಚಳ
ಕನ್ನಡ ಸುದ್ದಿ  /  ಜೀವನಶೈಲಿ  /  ಭಾರತದಲ್ಲಿ ಮುಂದುವರೆದ ಟಾಟಾ ಅಬ್ಬರ: ಈ ಕಾರಿನ ಮಾರಾಟದಲ್ಲಿ ಬರೋಬ್ಬರಿ ಶೇ. 53 ರಷ್ಟು ಹೆಚ್ಚಳ

ಭಾರತದಲ್ಲಿ ಮುಂದುವರೆದ ಟಾಟಾ ಅಬ್ಬರ: ಈ ಕಾರಿನ ಮಾರಾಟದಲ್ಲಿ ಬರೋಬ್ಬರಿ ಶೇ. 53 ರಷ್ಟು ಹೆಚ್ಚಳ

ಕಳೆದ ಆಗಸ್ಟ್‌ನಲ್ಲಿ ಮಾರಾಟವಾದ ನೆಕ್ಸಾನ್​ನ ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಮಾದರಿಗಳ ಅಂಕಿ ಅಂಶಗಳು ಇತರೆ ಕಂಪನಿಗಳಿಗೆ ನಡುಕ ಹುಟ್ಟಿಸಿವೆ. ವರ್ಷದಿಂದ ವರ್ಷಕ್ಕೆ ನೆಕ್ಸಾನ್ ಮಾರಾಟದಲ್ಲಿ ಗಮನಾರ್ಹ ಹೆಚ್ಚಳವಾಗಿದೆ. (ಬರಹ: ವಿನಯ್ ಭಟ್)

ವರ್ಷದಿಂದ ವರ್ಷಕ್ಕೆ ನೆಕ್ಸಾನ್ ಮಾರಾಟದಲ್ಲಿ ಗಮನಾರ್ಹ ಹೆಚ್ಚಳವಾಗಿದೆ.
ವರ್ಷದಿಂದ ವರ್ಷಕ್ಕೆ ನೆಕ್ಸಾನ್ ಮಾರಾಟದಲ್ಲಿ ಗಮನಾರ್ಹ ಹೆಚ್ಚಳವಾಗಿದೆ.

ಭಾರತದಲ್ಲಿ ಟಾಟಾ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಮೈಲೇಜ್ ಕಡೆ ಗಮನ ಕೊಡದೆ ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತಿರುವ ಜನರು ಟಾಟಾ ಕಾರುಗಳನ್ನು ಖರೀದಿ ಮಾಡುತ್ತಿದ್ದಾರೆ. ಇದೀಗ ಕಾರು ಪ್ರೇಮಿಗಳು ಟಾಟಾ ಮೋಟಾರ್ಸ್‌ನ ಹೊಸ ನೆಕ್ಸಾನ್ ಸಿಎನ್‌ಜಿ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಅಕ್ಟೋಬರ್ ಮೊದಲ ವಾರದಲ್ಲಿ ಸಿಎನ್​ಜಿ ಮಾದರಿ ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಆದರೆ, ಕಂಪನಿಯು ಅಧಿಕೃತ ಬಿಡುಗಡೆ ದಿನಾಂಕದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

ನೆಕ್ಸಾನ್ ಸಿಎನ್‌ಜಿ ಬಂತು ಎಂದರೆ ಅದು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸುವುದು ಖಚಿತ. ಇದರ ನಡುವೆ, ಕಳೆದ ಆಗಸ್ಟ್‌ನಲ್ಲಿ ಮಾರಾಟವಾದ ನೆಕ್ಸಾನ್​ನ ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಮಾದರಿಗಳ ಅಂಕಿಅಂಶಗಳು ಇತರೆ ಕಂಪನಿಗಳಿಗೆ ನಡುಕ ಹುಟ್ಟಿಸಿವೆ. ವರ್ಷದಿಂದ ವರ್ಷಕ್ಕೆ ನೆಕ್ಸಾನ್ ಮಾರಾಟದಲ್ಲಿ ಗಮನಾರ್ಹ ಹೆಚ್ಚಳವಾಗಿದೆ.

ಟಾಟಾ ನೆಕ್ಸಾನ್ ಕಳೆದ ವರ್ಷ ದೇಶದಲ್ಲಿ ನಂಬರ್ 1 ಕಾರು ಆಗಿತ್ತು. ಆದರೆ ಈ ವರ್ಷ ಟಾಟಾ ಮೋಟಾರ್ಸ್‌ನ ಮತ್ತೊಂದು ಕಾರು ಪಂಚ್ ಈ ವರ್ಷ ನೆಕ್ಸಾನ್‌ಗೆ ದೊಡ್ಡ ಸವಾಲಾಯಿತು. ಇವುಗಳ ಜೊತೆಗೆ ಮಾರುತಿ ಸುಜುಕಿ ಬ್ರೆಝಾ ಮತ್ತು ಹುಂಡೈ ಕ್ರೆಟಾ ಎಸ್‌ಯುವಿಗಳು ಕೂಡ ಯಶಸ್ಸು ಸಾಧಿಸಿವೆ. ಇವುಗಳ ನಡುವೆ ಕಳೆದ ಆಗಸ್ಟ್‌ನಲ್ಲಿ ಟಾಟಾ ನೆಕ್ಸಾನ್ ಟಾಪ್ 10 ರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಕಾರನ್ನು 12,289 ಗ್ರಾಹಕರು ಖರೀದಿಸಿದ್ದಾರೆ.

ಕಳೆದ ವರ್ಷದ ಆಗಸ್ಟ್ 2023 ರಲ್ಲಿ 8049 ಗ್ರಾಹಕರು ಖರೀದಿಸಿದ್ದರು. ಹೀಗಾಗಿ ನೆಕ್ಸಾನ್ ಮಾರಾಟವು ವರ್ಷದಿಂದ ವರ್ಷಕ್ಕೆ 53 ಪ್ರತಿಶತದಷ್ಟು ಹೆಚ್ಚಾಗಿದೆ. ಆದರೆ, ನೆಕ್ಸಾನ್‌ನ ಮಾಸಿಕ ಮಾರಾಟವು ಆಗಸ್ಟ್‌ನಲ್ಲಿ ಕುಸಿದಿದೆ. ಈ ವರ್ಷದ ಜುಲೈನಲ್ಲಿ, ನೆಕ್ಸಾನ್ ಅನ್ನು 13,902 ಗ್ರಾಹಕರು ಖರೀದಿಸಿದ್ದರು. ಆಗಸ್ಟ್​ನಲ್ಲಿ 12,289 ಕಾರು ಸೇಲ್ ಆಗಿತ್ತಷ್ಟೆ.

ಟಾಟಾ ನೆಕ್ಸಾನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಪೆಟ್ರೋಲ್ ರೂಪಾಂತರಗಳ ಎಕ್ಸ್ ಶೋ ರೂಂ ಬೆಲೆ 8 ಲಕ್ಷ ರೂ. ಗಳಿಂದ ಆರಂಭವಾಗಿ 14.70 ಲಕ್ಷ ರೂ. ವರೆಗೆ ಇದೆ. ನೆಕ್ಸಾನ್‌ನ ಡೀಸೆಲ್ ರೂಪಾಂತರಗಳ ಎಕ್ಸ್-ಶೋರೂಂ ಬೆಲೆ 10 ಲಕ್ಷದಿಂದ ಪ್ರಾರಂಭವಾಗಿ 15.50 ಲಕ್ಷದವರೆಗೆ ಹೋಗುತ್ತದೆ. ಹಾಗೆಯೆ ಎಲೆಕ್ಟ್ರಿಕ್ ಮಾದರಿಯಾದ ಟಾಟಾ ನೆಕ್ಸಾನ್ EV ಯ ಎಕ್ಸ್ ಶೋ ರೂಂ ಬೆಲೆಯು 12.49 ಲಕ್ಷದಿಂದ 16.49 ಲಕ್ಷದವರೆಗೆ ಇದೆ.

ಟಾಟಾ ನೆಕ್ಸಾನ್ ಕಿಲ್ಲರ್ ಲುಕ್ ಹೊಂದಿರುವ, ಅದ್ಭುತ ಫೀಚರ್ ಲೋಡ್ ಮಾಡಿರುವ ಕಾಂಪ್ಯಾಕ್ಟ್ ಎಸ್‌ಯುವಿ ಆಗಿದೆ. ಅಲ್ಲದೆ, 5 ಸ್ಟಾರ್ ಸುರಕ್ಷತಾ ರೇಟಿಂಗ್ ಹೊಂದಿದೆ ಎಂಬುದು ಗಮನಾರ್ಹ ಸಂಗತಿ. ಶಕ್ತಿಯುತ ಮತ್ತು ಸುರಕ್ಷಿತ ಎಸ್‌ಯುವಿಯನ್ನು ಹುಡುಕುತ್ತಿರುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಇದರ ಬೆಲೆ, ಮೈಲೇಜ್ ಮತ್ತು ಶಕ್ತಿಯುತ ಎಂಜಿನ್ ಮಾರುಕಟ್ಟೆಯಲ್ಲಿನ ಇತರ ವಾಹನಗಳಿಗಿಂತ ವಿಭಿನ್ನ ಮತ್ತು ಉತ್ತಮವಾಗಿದೆ. ಹೆಚ್ಚುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆಗಳ ಹೊರತಾಗಿಯೂ, ನೆಕ್ಸಾನ್ ದೂರದ ಪ್ರಯಾಣ ಮಾಡುವವರಿಗೆ ಹೇಳಿ ಮಾಡಿಸಿದ ಕಾರಾಗಿದೆ.

Whats_app_banner