Ayudha pooja 2024: ವಾಹನ ಪೂಜೆ ಮಾಡುವ ಮುನ್ನ ಕಾರು, ಬೈಕ್‌, ಸ್ಕೂಟರ್‌ ತೊಳೆಯೋದ್ಯಾಕೆ? ಕಾರ್‌ ವಾಷಿಂಗ್‌ ಟಿಪ್ಸ್‌-automobile news when ayudha pooja 2024 date why should we wash our car on ayudha pooja how to wash car bike pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Ayudha Pooja 2024: ವಾಹನ ಪೂಜೆ ಮಾಡುವ ಮುನ್ನ ಕಾರು, ಬೈಕ್‌, ಸ್ಕೂಟರ್‌ ತೊಳೆಯೋದ್ಯಾಕೆ? ಕಾರ್‌ ವಾಷಿಂಗ್‌ ಟಿಪ್ಸ್‌

Ayudha pooja 2024: ವಾಹನ ಪೂಜೆ ಮಾಡುವ ಮುನ್ನ ಕಾರು, ಬೈಕ್‌, ಸ್ಕೂಟರ್‌ ತೊಳೆಯೋದ್ಯಾಕೆ? ಕಾರ್‌ ವಾಷಿಂಗ್‌ ಟಿಪ್ಸ್‌

Ayudha pooja 2024: ಈ ವರ್ಷ ಅಕ್ಟೋಬರ್‌ 11ರಂದು ಎಲ್ಲೆಡೆ ವಾಹನಗಳು ಶೃಂಗಾರಗೊಂಡು ಪೂಜೆ ಸ್ವೀಕರಿಸಲಿವೆ. ಆಯುಧ ಪೂಜೆಯಂದು ವಾಹನ ಪೂಜೆ ಮಾಡಲು ಎಲ್ಲರೂ ಆದ್ಯತೆ ನೀಡುತ್ತಾರೆ. ವಾಹನ ಪೂಜೆಗೆ ಮುನ್ನ ವಾಹನ ಶುಚಿಗೊಳಿಸುವ ಅಗತ್ಯವೇನು ಎಂದು ತಿಳಿಯೋಣ.

Ayudha pooja 2024: ವಾಹನ ಪೂಜೆ ಮಾಡುವ ಮುನ್ನ ಕಾರು, ಬೈಕ್‌, ಸ್ಕೂಟರ್‌ ತೊಳೆಯುವ ಉದ್ದೇಶ
Ayudha pooja 2024: ವಾಹನ ಪೂಜೆ ಮಾಡುವ ಮುನ್ನ ಕಾರು, ಬೈಕ್‌, ಸ್ಕೂಟರ್‌ ತೊಳೆಯುವ ಉದ್ದೇಶ

Ayudha pooja 2024: ಈ ವರ್ಷ ವಾಹನ ಪೂಜೆ ಯಾವಾಗ? ಎಂಬ ಪ್ರಶ್ನೆ ಎಲ್ಲರಲ್ಲಿಯೂ ಇರಬಹುದು. ನವರಾತ್ರಿಯ 9ನೇ ದಿನ ಮನೆಯಲ್ಲಿ ಅಥವಾ ದೇವಾಲಯಗಳಲ್ಲಿ ನಿಮ್ಮ ಪ್ರೀತಿಯ ವಾಹನಕ್ಕೆ ಪೂಜೆ ಮಾಡಬಹುದು. ಈ ಬಾರಿ ಅಕ್ಟೋಬರ್‌ 11ರಂದು (ayudha pooja date 2024) ಈ ಬಾರಿ ವಾಹನ ಪೂಜೆ ನಡೆಯಲಿದೆ. ವಾಹನ ಪೂಜೆಗೆ ಮೊದಲು ವಾಹನವನ್ನು ತೊಳೆಯುವುದು ಅಗತ್ಯ. ಈ ಸಂದರ್ಭದಲ್ಲಿ ವಾಹನ ತೊಳೆಯುವ ಸರ್ವೀಸ್‌ ಸೆಂಟರ್‌ಗಳಲ್ಲಿ ವಾಹನಗಳು ತುಂಬಿ ತುಳುಕುತ್ತವೆ. ಕೆಲವರಿಗೆ ವಾಹನ ಪೂಜೆಯ ಹಿಂದಿನ ದಿನ ವಾಹನ ತೊಳೆಯಬೇಕೆಂದು ನೆನಪಾಗುತ್ತದೆ. ಸರ್ವೀಸ್‌ ಸೆಂಟರ್‌ನವರು ಗಡಿಬಿಡಿಯಲ್ಲಿ ವಾಹನ ತೊಳೆದು ಬಿಡಬಹುದು. ಬೆಂಗಳೂರಿನಂತಹ ನಗರಗಳಲ್ಲಿ ಆಯುಧ ಪೂಜೆಯಂದು ಅಥವಾ ಅದಕ್ಕೂ ಹಿಂದಿನ ದಿನ ಮನೆಯಲ್ಲಿ ಮಕ್ಕಳೂ ಸೇರಿದಂತೆ ಎಲ್ಲರೂ ವಾಹನ ತೊಳೆಯುವ ಕೆಲಸದಲ್ಲಿ ಬಿಝಿಯಾಗಿರುತ್ತಾರೆ. ಬಳಿಕ ಹೂವು ಇತ್ಯಾದಿಗಳನ್ನು ಬಳಸಿ ವಾಹನವನ್ನು ಶೃಂಗಾರ ಮಾಡುತ್ತಾರೆ.

ವಾಹನ ತೊಳೆಯುವ ಅಗತ್ಯವೇನು?

ವಾಹನ ಪೂಜೆ ಎನ್ನುವುದು ಧಾರ್ಮಿಕ ಕಾರ್ಯ. ನಾವು ಪೂಜೆ ಮಾಡುವ ಮುನ್ನ ಜಳಕ ಮಾಡುವಂತೆ ವಾಹನವನ್ನು ಶುಚಿಗೊಳಿಸುವುದು ಅಗತ್ಯ. ಪ್ರತಿಯೊಬ್ಬರ ದೈನಂದಿನ ಜೀವನದಲ್ಲಿ ಮಹತ್ವದ ಸ್ಥಾನ ಪಡೆದಿರುವ ವಾಹನವನ್ನು ಗೌರವದಿಂದ ನೋಡಿಕೊಳ್ಳುವುದು ವಾಹನ ಮಾಲೀಕರ ಕರ್ತವ್ಯ. ಕಡಿಮೆಯೆಂದರೂ ಮೂರು ತಿಂಗಳಿಗೊಮ್ಮೆ ವಾಹನವನ್ನು ನೀಟಾಗಿ ತೊಳೆಯುವ ಅಭ್ಯಾಸ ಒಳ್ಳೆಯದು. ಇದರಿಂದ ವಾಹನದ ಬಾಳ್ವಿಕೆಯೂ ಉತ್ತಮಗೊಳ್ಳುತ್ತದೆ. ವರ್ಷಕ್ಕೊಮ್ಮೆಯಂತೂ ತೊಳೆಯಲೇ ಬೇಕು. ಆಯುಧ ಪೂಜೆಯ ಸಮಯದಂದು ತಪ್ಪದೇ ತೊಳೆಯುವುದು ಉತ್ತಮ. ವಾಹನವನ್ನು ತೊಳೆದು ಪೂಜೆ ಮಾಡುವ ಮೂಲಕ ನಮಗೆ ವರ್ಷದ ಉದ್ದಕ್ಕೂ ಪ್ರಯಾಣ ಸುರಕ್ಷಿತವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸಬಹುದು. ಈ ರೀತಿ ಕಾರ್‌ ವಾಷ್‌ ಮಾಡುವ ಮೂಲಕ ವಾಹನದ ಕೆಲವು ಬಿಡಿಭಾಗಗಳ ಜೀವಿತಾವಧಿ ಉತ್ತಮವಾಗುತ್ತದೆ. ಕೆಲವೊಮ್ಮೆ ಈ ರೀತಿ ಗಮನವಿಟ್ಟು ವಾಹನ ತೊಳೆಯುವುದರಿಂದ ವಾಹನಕ್ಕೆ ಏನಾದರೂ ಹಾನಿಯಾಗಿದ್ದರೆ, ಸಂಭಾವ್ಯ ಹಾನಿಯಾಗುವ ಸೂಚನೆಗಳಿದ್ದರೆ ತಿಳಿಯುತ್ತದೆ.

ವಾಹನ ತೊಳೆಯುವುದು ಹೇಗೆ?

ಆಯುಧ ಪೂಜೆಯಂದು ಕಾಟಾಚಾರವೆಂಬಂತೆ ಒಂದೆರಡು ಬಕೆಟ್‌ ನೀರು ಎರಚಿ ವಾಹನ ತೊಳೆಯುವ ಶಾಸ್ತ್ರ ಮಾಡಬೇಡಿ. ನೀಟಾಗಿ ತೊಳೆಯಿರಿ. ಟೈರ್‌ಗಳು, ವಾಹನದ ಕೆಲವು ಭಾಗಗಳಲ್ಲಿ ಕೊಳೆ ತುಂಬಿರಬಹುದು. ಎಲ್ಲವನ್ನೂ ನೀಟಾಗಿ ತೊಳೆಯಿರಿ. ಇಂಟೀರಿಯರ್‌ ಹೈಜೀನ್‌ ಕೂಡ ಉತ್ತಮವಾಗಿಸಿ. ವಾಹನ ತೊಳೆಯಲು ಈಗ ಹಲವು ಆಯ್ಕೆಗಳಿವೆ. ನೀರು ಇಲ್ಲದೆಯೂ ವಾಹನಗಳನ್ನು ಶುಚಿಗೊಳಿಸಲು ಸಾಧ್ಯವಿದೆ. ವಾಹನ ವಾಷ್‌ ಮಾಡಲು ವಾಟರ್‌ಲೆಸ್‌ ಕಾರ್‌ ವಾಷ್‌ ಕಿಟ್‌ಗಳು ದೊರಕುತ್ತವೆ.

  1. ಎಂಜಿನ್‌ ಬಿಸಿಯಾಗಿರುವಾಗ ಕಾರು, ಬೈಕ್‌ ವಾಷ್‌ ಮಾಡಬೇಡಿ.
  2. ವಾಹನ ವಾಷ್‌ ಮಾಡಲು ತಣ್ಣಗಿನ ನೀರು ಬಳಸಿ. ಕಾರು ಅಥವಾ ಬೈಕ್‌ಗಳಿಗೆ ಬಳಸುವ ನಿರ್ದಿಷ್ಟ ಡಿಟರ್ಜೆಂಟ್‌ ಬಳಸಿ.
  3. ಕಡಿಮೆ ನೀರು ಇರುವವರು 2 ಬಕೆಟ್‌ ಕಾರ್‌ ವಾಷ್‌ ತತ್ತ್ವ ಅಳವಡಿಸಿಕೊಳ್ಳಬಹುದು. ಒಂದು ಬಕೆಟ್‌ನಲ್ಲಿ ಸೋಪು ವಾಟರ್‌, ಇನ್ನೊಂದು ಬಕೆಟ್‌ನಲ್ಲಿ ಕ್ಲೀನ್‌ ವಾಟರ್‌ ಇರಲಿ.
  4. ಕಾರು ವಾಷ್‌ ಆದ ಬಳಿಕ ತಕ್ಷಣ ಕಾರನ್ನು ಒರೆಸಿ.
  5. ಕಾರು ವಾಷ್‌ ಮಾಡಲು ಮತ್ತು ನೀರು ಒರೆಸಲು ಪೂರಕವಾದ ಸ್ಪಾಂಜ್‌ಗಳನ್ನು ಬಳಸಿ.
  6. ಗ್ಲಾಸ್‌ ಕ್ಲೀನರ್‌ ಬಳಸಿ ಕನ್ನಡಿಗಳನ್ನು ಒರೆಸಿ.
  7. ಕಾರು ಕ್ಲೀನ್‌ ಮಾಡಿದ ಬಳಿಕ ವ್ಯಾಕ್ಸಿಂಗ್‌/ಶೈನಿಂಗ್‌ ಮಾಡುವುದು ಉತ್ತಮ. ಆನ್‌ಲೈನ್‌ ಅಥವಾ ಆಫ್‌ಲೈನ್‌ನಲ್ಲಿ ಕಾರು ವ್ಯಾಕ್ಸಿಂಗ್‌ ಪ್ರಾಡಕ್ಟ್‌ಗಳು ದೊರಕುತ್ತವೆ. ವ್ಯಾಕ್ಸ್‌ ಬಳಸಿದ ಬಳಿಕ ವಾಹನ ಹೊಸದರಂತೆ ಕಾಣಿಸುತ್ತದೆ.

mysore-dasara_Entry_Point