Beauty tips: ತಮನ್ನಾರಂತೆ ಮಿಲ್ಕಿ ಬ್ಯೂಟಿ ನಿಮ್ಮದಾಗಬೇಕಾ: ನಟಿಯಂತೆ ಕಾಂತಿಯುತ ತ್ವಚೆ ಪಡೆಯಲು ಈ ಟಿಪ್ಸ್ ಅನುಸರಿಸಿ-beauty tips how to get skin like tamannaah bhatia milky beauty inspired skin care tips prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Beauty Tips: ತಮನ್ನಾರಂತೆ ಮಿಲ್ಕಿ ಬ್ಯೂಟಿ ನಿಮ್ಮದಾಗಬೇಕಾ: ನಟಿಯಂತೆ ಕಾಂತಿಯುತ ತ್ವಚೆ ಪಡೆಯಲು ಈ ಟಿಪ್ಸ್ ಅನುಸರಿಸಿ

Beauty tips: ತಮನ್ನಾರಂತೆ ಮಿಲ್ಕಿ ಬ್ಯೂಟಿ ನಿಮ್ಮದಾಗಬೇಕಾ: ನಟಿಯಂತೆ ಕಾಂತಿಯುತ ತ್ವಚೆ ಪಡೆಯಲು ಈ ಟಿಪ್ಸ್ ಅನುಸರಿಸಿ

ಮಿಲ್ಕಿ ಬ್ಯೂಟಿ ತಮನ್ನಾ ಅಂದ್ರೆ ಪಡ್ಡೆ ಹೈಕಳ ಹಾಟ್ ಫೇವರಿಟ್ ಅಂದ್ರೆ ತಪ್ಪಿಲ್ಲ. ಇತ್ತೀಚೆಗೆ ಹಂಚಿಕೊಂಡ ಅವರ ಫೋಟೋ ನೋಡಿ ಅನೇಕರು ಕ್ಲೀನ್ ಬೌಲ್ಡ್ ಆಗಿದ್ದಾರೆ. ಮೇಕ್ಅಪ್ ಇಲ್ಲದೆಯೂ ತಮನ್ನಾ ನೋಡಲು ಬಹಳ ಸುಂದರವಾಗಿ ಕಾಣುತ್ತಾರೆ. ಇಷ್ಟು ಸುಂದರವಾಗಿ ಕಾಣುವ ತಮನ್ನಾ ಅವರ ತ್ವಚೆಯ ಸೀಕ್ರೆಟ್ ಏನಿರಬಹುದು ಎಂದು ನೀವು ಯೋಚಿಸುತ್ತಿರಬಹುದು. ಈ ಟಿಪ್ಸ್ ಫಾಲೋ ಮಾಡಿ.

ನಟಿ ತಮನ್ನಾರಂತೆ ಕಾಂತಿಯುತ ತ್ವಚೆ ಪಡೆಯಲು ಇಲ್ಲಿದೆ ಟಿಪ್ಸ್.
ನಟಿ ತಮನ್ನಾರಂತೆ ಕಾಂತಿಯುತ ತ್ವಚೆ ಪಡೆಯಲು ಇಲ್ಲಿದೆ ಟಿಪ್ಸ್. (Instagram)

ದಕ್ಷಿಣ ಭಾರತೀಯ ಸಿನಿಮಾದ ಪ್ರಸಿದ್ಧ ನಟಿ ತಮನ್ನಾ ಭಾಟಿಯಾ ತಮ್ಮ ಸೌಂದರ್ಯದಿಂದಲೇ ಅಭಿಮಾನಿಗಳನ್ನು ಆಕರ್ಷಿಸಿದ್ದಾರೆ. ಸಿನಿಮಾದಲ್ಲಿ ಎಷ್ಟು ಅದ್ಭುತವಾಗಿ ಅಭಿನಯಿಸುತ್ತಾರೋ, ನೋಡಲು ಕೂಡ ಬಹಳ ಅಂದವಾಗಿದ್ದಾರೆ. ಇದಕ್ಕಾಗಿ ಅಭಿಮಾನಿಗಳು ತಮನ್ನಾ ಅವರನ್ನು ಪ್ರೀತಿಯಿಂದ ಮಿಲ್ಕಿ ಬ್ಯೂಟಿ ಅಂತಾನೇ ಕರೆಯುತ್ತಾರೆ. ಅದರಲ್ಲೂ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾದ ಫೋಟೋದಲ್ಲಿ ತಮನ್ನಾರ ಸೌಂದರ್ಯಕ್ಕೆ ಹಲವರು ಮನಸೋತಿದ್ದಾರೆ. ಮೇಕ್ಅಪ್ ಇಲ್ಲದೆಯೂ ತಮನ್ನಾ ಹಾಲಿನಂತೆ ಬಿಳಿ ಬಣ್ಣದಿಂದ ಕಂಗೊಳಿಸುತ್ತಾರೆ. ತಮನ್ನಾರ ಈ ಸುಂದರ ತ್ವಚೆಯ ಸೀಕ್ರೆಟ್ ಏನಿರಬಹುದು ಎಂದು ನೀವು ಯೋಚಿಸುತ್ತಿರಬಹುದು. ಆರೋಗ್ಯಕರ ಜೀವನಶೈಲಿ ಹಾಗೂ ತ್ವಚೆಯ ದಿನಚರಿಯೇ ತಮನ್ನಾರ ಸೌಂದರ್ಯದ ಸೀಕ್ರೆಟ್ ಆಗಿದೆ. ಇಲ್ಲಿ ನೀಡಲಾಗಿರುವ ಸಲಹೆಗಳನ್ನು ಅನುಸರಿಸಿದರೆ ನೀವು ಕೂಡ ತಮನ್ನಾರಂತೆ ಕಾಂತಿಯುತ ತ್ವಚೆ ಪಡೆಯಬಹುದು.

ನಟಿ ತಮನ್ನಾರಂತೆ ಕಾಂತಿಯುತ ತ್ವಚೆ ಪಡೆಯಲು ಇಲ್ಲಿದೆ 5 ಟಿಪ್ಸ್

ಪ್ರತಿದಿನ ತ್ವಚೆಯ ಕಾಳಜಿ ವಹಿಸಿ: ಚರ್ಮದಲ್ಲಿನ ಕಲ್ಮಶಗಳನ್ನು ಮತ್ತು ಮೇಕ್ಅಪ್ ಅನ್ನು ತೆಗೆದುಹಾಕಲು ತ್ವಚೆಯನ್ನು ಪ್ರತಿದಿನ ಸ್ವಚ್ಛಗೊಳಿಸಿ. ಚರ್ಮದ ಪ್ರಕಾರಕ್ಕೆ ಸೂಕ್ತವಾದ ಮಾಯಿಶ್ಚರೈಸರ್ ಅನ್ನು ಬಳಸಿ. ಹೈಲುರಾನಿಕ್ ಆಮ್ಲ, ವಿಟಮಿನ್ ಸಿ, ಅಥವಾ ರೆಟಿನಾಲ್‌ನಂತಹ ಪದಾರ್ಥಗಳೊಂದಿಗೆ ಸೀರಮ್‌ಗಳನ್ನು ಬಳಸಬಹುದು.

ಹೈಡ್ರೇಟೆಡ್ ಆಗಿರಿ: ಚರ್ಮವನ್ನು ಒಳಗಿನಿಂದ ಹೈಡ್ರೀಕರಿಸಲು ದಿನವಿಡೀ ಸಾಕಷ್ಟು ನೀರು ಕುಡಿಯಬೇಕು. ಇದು ಮೈ ಬಣ್ಣಕ್ಕೆ ನೈಸರ್ಗಿಕ, ವಿಕಿರಣ ಹೊಳಪನ್ನು ನೀಡುತ್ತದೆ. ದೇಹದ ಆರೋಗ್ಯಕ್ಕೆ ಮಾತ್ರವಲ್ಲ, ಚರ್ಮದ ಕಾಳಜಿಗೂ ಸಾಕಷ್ಟು ನೀರು ಕುಡಿಯುವುದು ಸೂಕ್ತ.

ಪೌಷ್ಟಿಕಾಂಶ-ಭರಿತ ಆಹಾರವನ್ನು ಸೇವಿಸಿ: ಹಣ್ಣುಗಳು, ತರಕಾರಿಗಳು, ಒಣಹಣ್ಣುಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸಬೇಕು. ಮುಖ್ಯವಾಗಿ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಎ, ಸಿ ಮತ್ತು ಇ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಿರುವ ಆಹಾರಗಳು ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ. ಇದು ನೈಸರ್ಗಿಕ ಹೊಳಪನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ಸೂರ್ಯನಿಂದ ತ್ವಚೆಯನ್ನು ರಕ್ಷಿಸಿ: ಮನೆಯಿಂದ ಹೊರಗೆ ಹೋದಾಗ ಉತ್ತಮ ಬ್ರ್ಯಾಂಡ್‍ನ ಸನ್ ಸ್ಕ್ರೀನ್ ಕ್ರೀಮ್ ಹಚ್ಚಬೇಕು. ಬಿಸಿಲು ಇದ್ದಾಗ ಮಾತ್ರವಲ್ಲ ಮೋಡ ಕವಿದ ವಾತಾವರಣ ಇದ್ದಾಗಲೂ ಸಹ ಪ್ರತಿದಿನ ಸನ್‌ಸ್ಕ್ರೀನ್ ಅನ್ನು ಹಚ್ಚುವುದರಿಂದ ಚರ್ಮವನ್ನು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಅಲ್ಲದೆ ಚರ್ಮವು ಕಾಂತಿ ಕಳೆದುಕೊಳ್ಳದಂತೆ, ಸುಕ್ಕಾಗದಂತೆ ತಡೆಯುವಲ್ಲಿ ಸಹಕಾರಿಯಾಗಿದೆ.

ಸಾಕಷ್ಟು ನಿದ್ದೆ ಮಾಡುವುದು: ತ್ವಚೆಯನ್ನು ಪುನರ್ಯೌವನಗೊಳಿಸಲು ಪ್ರತಿ ರಾತ್ರಿ 7 ರಿಂದ 9 ಗಂಟೆಗಳ ನಿದ್ದೆ ಅತ್ಯಗತ್ಯ. ಹಾಗೆಯೇ ಒತ್ತಡವನ್ನು ಸರಿಯಾಗಿ ನಿರ್ವಹಣೆ ಮಾಡುವುದು ಕೂಡ ಅಗತ್ಯವಾಗಿದೆ. ಒತ್ತಡ ತಡೆಗಟ್ಟಲು ಯೋಗ, ಧ್ಯಾನ ಇತ್ಯಾದಿ ಚಟುವಟಿಕೆಗಳತ್ತ ಗಮನವನ್ನು ಕೇಂದ್ರೀಕರಿಸಬಹುದು.

ಒಟ್ಟಿನಲ್ಲಿ ವರ್ಷ 40 ಆದ್ರೂ 20ರ ಯುವತಿಯಂತೆ ಕಾಣಬೇಕು, ತಾನು ನಟಿ ತಮನ್ನಾರಂತೆ ಕಾಂತಿಯುತ ತ್ವಚೆ ಪಡೆಯಬೇಕು ಎಂಬ ಆಸೆ ಇದ್ದಲ್ಲಿ ಮೇಲೆ ತಿಳಿಸಲಾಗಿರುವ ಟಿಪ್ಸ್ ಅನ್ನು ಫಾಲೋ ಮಾಡಬಹುದು. ಈ ಸಲಹೆಗಳನ್ನು ಪಾಲಿಸುವುದರಿಂದ ಕಾಂತಿಯುತ ತ್ವಚೆ ಪಡೆಯಬಹುದು. ಹಾಗೂ ಚಿರ ಯುವಕ ಅಥವಾ ಯುವತಿಯಂತೆ ಕಾಣಲು ಸಹಾಯಕವಾಗಬಹುದು.