LIC: ಪ್ರತಿದಿನ ಕೇವಲ 45 ರೂ ಉಳಿತಾಯ ಮಾಡಿದರೆ ಸಾಕು; ಎಲ್‌ಐಸಿಯ ಈ ಯೋಜನೆ ಮೂಲಕ ನೀವು 25 ಲಕ್ಷ ಪಡೆಯಬಹುದು-business news investment you can get 25 lacks by saving 45 rupees daily through lic jeevan anand policy jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Lic: ಪ್ರತಿದಿನ ಕೇವಲ 45 ರೂ ಉಳಿತಾಯ ಮಾಡಿದರೆ ಸಾಕು; ಎಲ್‌ಐಸಿಯ ಈ ಯೋಜನೆ ಮೂಲಕ ನೀವು 25 ಲಕ್ಷ ಪಡೆಯಬಹುದು

LIC: ಪ್ರತಿದಿನ ಕೇವಲ 45 ರೂ ಉಳಿತಾಯ ಮಾಡಿದರೆ ಸಾಕು; ಎಲ್‌ಐಸಿಯ ಈ ಯೋಜನೆ ಮೂಲಕ ನೀವು 25 ಲಕ್ಷ ಪಡೆಯಬಹುದು

ನಿತ್ಯವೂ ಸ್ವಲ್ಪ ಪ್ರಮಾಣದ ಹಣ ಉಳಿತಾಯ ಮಾಡುವ ಮೂಲಕ ಭವಿಷ್ಯದಲ್ಲಿ ದೊಡ್ಡ ಮೊತ್ತದ ಹಣ ಪಡೆಯಬಹುದು. ಹೂಡಿಕೆ ಮಾಡುವುದು ತುಂಬಾ ಮುಖ್ಯ. ಸೂಕ್ತ ವೇದಿಕೆಯನ್ನು ಆಯ್ಕೆ ಮಾಡುವುದು ಇನ್ನೂ ಮುಖ್ಯ.

ಪ್ರತಿದಿನ ಕೇವಲ 45 ರೂ ಉಳಿಸಿದರೆ ಸಾಕು; ಎಲ್‌ಐಸಿಯ ಈ ಯೋಜನೆ ಮೂಲಕ ನೀವು 25 ಲಕ್ಷ ಪಡೆಯಬಹುದು
ಪ್ರತಿದಿನ ಕೇವಲ 45 ರೂ ಉಳಿಸಿದರೆ ಸಾಕು; ಎಲ್‌ಐಸಿಯ ಈ ಯೋಜನೆ ಮೂಲಕ ನೀವು 25 ಲಕ್ಷ ಪಡೆಯಬಹುದು

ಹಣಕಾಸು ವಿಚಾರದಲ್ಲಿ ಉಳಿತಾಯ ಮಾಡುವವನೇ ಜಾಣ. ವೈಯಕ್ತಿಕ ಹಣಕಾಸು ಮುಖ್ಯವಾಗುವುದು ಇದೇ ಕಾರಣಕ್ಕೆ. ಹಣ ಸಂಪಾದನೆ ಮಾಡಲು ಸಾಧ್ಯವಿರುವಾಗ ದುಡಿದು ಸಂಪಾದನೆ ಮಾಡಬೇಕು. ಆ ಸಮಯದಲ್ಲಿ ಮಾಡುವ ಉಳಿತಾಯದ ಮೂಲಕ ನಿವೃತ್ತಿ ಬದುಕು ಅಥವಾ ಕೆಲಸ ಮಾಡಲು ಸಾಧ್ಯವಾಗದಂ ಸಮಯದಲ್ಲಿ ಬಳಸಿಕೊಳ್ಳಬಹುದು. ಇನ್ನೂ ಕೆಲವೊಂದು ಸನ್ನಿವೇಶಗಳು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಇಂಥಾ ಆಘಾತಗಳಾದ ಸಂದರ್ಭಕ್ಕೆ ಹಣದ ಭರವಸೆ ಇದ್ದರೆ ಒಳಿತು. ಲೈಫ್‌ ಇನ್ಶೂರೆನ್ಸ್‌ ಹೆಚ್ಚಿನವರ ಆಯ್ಕೆ. ಲೈಫ್‌ ಇನ್ಶೂರೆನ್ಸ್‌ನಲ್ಲಿ ಹೂಡಿಕೆ ಮಾಡಿದರೆ ದೊಡ್ಡ ಮೊತ್ತವನ್ನು ನೀವು ಪಡೆಯಬಹುದು. ಅದು ಹೇಗೆ ಎಂಬ ಲೆಕ್ಕಾಚಾರ ಇಲ್ಲಿದೆ.

ಎಲ್‌ಐಸಿಯ ಜೀವನ್ ಆನಂದ್ ಪಾಲಿಸಿ ಮಾಡಿಸಿಕೊಂಡರೆ ಕನಿಷ್ಠ 1 ಲಕ್ಷ ರೂ ವಿಮಾ ಮೊತ್ತವನ್ನು ಪಡೆಯಬಹುದು. ಇಲ್ಲಿ ಗರಿಷ್ಠ ವಿಮಾ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ. ನೀವು ಪಾವತಿಸುವ ಪ್ರೀಮಿಯಂಗೆ ಅನುಗುಣವಾಗಿ ವಿಮಾ ಮೊತ್ತವನ್ನು ಹೆಚ್ಚಿಸಿಕೊಳ್ಳಬಹುದು. ಇದರ ಜೊತೆಗೆ ಬೋನಸ್, ಡೆತ್‌ ಬೆನಿಫಿಟ್‌ ಸೇರಿದಂತೆ ಇತರ ಪ್ರಯೋಜನಗಳನ್ನು ಕೂಡಾ ಪಡೆಯಬಹುದು.

ಹಣದ ಹೂಡಿಕೆಗೆ ಹಲವು ವಿಧಾನಗಳಿವೆ. ದೀರ್ಘಕಾಲದ ಹೂಡಿಕೆ ಮಾಡಬೇಕಾದರೆ ವಿಶ್ವಾಸಾರ್ಹತೆ ತುಂಬಾ ಮುಖ್ಯ. ಎಲ್ಐಸಿ ಯೋಜನೆಗಳಲ್ಲಿ ಹೂಡಿಕೆ ಮಾಡುವ ಜನರು ಹಲವರು. ಎಲ್ಐಸಿಯಲ್ಲಿ ಲಭ್ಯವಿರುವ ಒಂದು ಸ್ಕೀಮ್‌ ಕುರಿತು ತಿಳಿಯೋಣ. ಈ ಯೋಜನೆಯ ಮೂಲಕ ನೀವು ಪ್ರತಿದಿನ ಕೇವಲ 45 ರೂಪಾಯಿ ಉಳಿಸುವ ಮೂಲಕ ಬರೋಬ್ಬರಿ 25 ಲಕ್ಷ ನಿಧಿಯನ್ನು ಪಡೆಯಬಹುದು.

ಜೀವನ್ ಆನಂದ್ ಪಾಲಿಸಿ

ಇದು ಎಲ್‌ಐಸಿಯ ಜೀವನ್ ಆನಂದ್ ಪಾಲಿಸಿ. ಇದರಲ್ಲಿ ಒಂದು ಲಕ್ಷ ರೂಪಾಯಿಗಳ ವಿಮಾ ಮೊತ್ತವನ್ನು ನೀಡಲಾಗುತ್ತದೆ. ಹೆಚ್ಚಿನ ಎಷ್ಟೇ ಮೊತ್ತವನ್ನು ಪಡೆಯುವ ಅವಕಾಶವೂ ಇದೆ.

ಜೀವನ್ ಆನಂದ್ ಪಾಲಿಸಿ ಪ್ರಯೋಜನಗಳು

ಎಲ್ಐಸಿಯ ಜೀವನ್ ಆನಂದ್ ಪಾಲಿಸಿಯು ಟರ್ಮ್ ಪಾಲಿಸಿಯಾಗಿದೆ. ಈ ಪಾಲಿಸಿಯಲ್ಲಿ ನಾಲ್ಕು ವಿಧದ ರೈಡರ್‌ಗಳು ಲಭ್ಯವಿದೆ. ಅವುಗಳೇ ಅಪಘಾತದ ಸಾವು ಮತ್ತು ಅಂಗವೈಕಲ್ಯ, ಅಪಘಾತ ಪ್ರಯೋಜನ, ಹೊಸ ಟರ್ಮ್ ಇನ್ಶುರೆನ್ಸ್ ಮತ್ತು ಹೊಸ ಕ್ರಿಟಿಕಲ್ ಬೆನಿಫಿಟ್ ರೈಡರ್. ಒಂದು ವೇಳೆ ವಿಮಾದಾರನು ಯಾವುದೇ ಕಾರಣದಿಂದ ಮರಣಹೊಂದಿದರೆ, ಅವರ ನಾಮಿನಿಯು 125 ಪ್ರತಿಶತ ಮರಣ ಪ್ರಯೋಜನವನ್ನು ಪಡೆಯುತ್ತಾರೆ. ಆದರೆ, ಈ ಪಾಲಿಸಿಯಲ್ಲಿ ಯಾವುದೇ ತೆರಿಗೆ ಪ್ರಯೋಜಗಳು ಇಲ್ಲ.

ಯಾರೆಲ್ಲಾ ಮಾಡಿಸಬಹುದು? ಏನೆಲ್ಲಾ ಸೌಲಭ್ಯಗಳಿವೆ?

18 ವರ್ಷದಿಂದ ಆರಂಭವಾಗಿ 50 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಕೂಡಾ ಈ ಪಾಲಿಸಿ ಖರೀದಿಸಬಹುದು. ಗರಿಷ್ಠ ಮೆಚುರಿಟಿ ವಯಸ್ಸು ಸುಮಾರು 75 ವರ್ಷಗಳು. ಪಾಲಿಸಿಯ ಕನಿಷ್ಠ ಅವಧಿ 15 ವರ್ಷಗಳು. ಗರಿಷ್ಠ ಪಾಲಿಸಿ ಅವಧಿ 35 ವರ್ಷಗಳು. ಪಾಲಿಸಿಯ ಪ್ರೀಮಿಯಂ ಅನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಪಾವತಿಸುವ ಆಯ್ಕೆ ಇದೆ. ಎರಡು ಪೂರ್ಣ ವರ್ಷಗಳ ಪ್ರೀಮಿಯಂ ಅನ್ನು ಪಾವತಿಸಿದರೆ, ಯಾವುದೇ ಸಮಯದಲ್ಲಿ ಪಾಲಿಸಿಯನ್ನು ಸರೆಂಡರ್ ಮಾಡಬಹುದು.

25 ಲಕ್ಷ ಪಡೆಯುವುದು ಹೇಗೆ?

ಪ್ರತಿದಿನ ನೀವು 50 ರೂಪಾಯಿಗಿಂತ ಕಡಿಮೆ ಉಳಿತಾಯ ಮಾಡುವ ಮೂಲಕ 25 ಲಕ್ಷ ವಿಮೆ ಮೊತ್ತವನ್ನು ಪಡೆಯಬಹುದು. ಇದಕ್ಕಾಗಿ ನೀವು ನೀವು 5 ಲಕ್ಷ ರೂಪಾಯಿ ವಿಮಾ ಮೊತ್ತದ ಪಾಲಿಸಿಯನ್ನು ತೆಗೆದುಕೊಳ್ಳಬೇಕು. ಇದಕ್ಕೆ ನೀವು ನೀವು ಪ್ರತಿ ತಿಂಗಳು 1358 ರೂಪಾಯಿಯನ್ನು ಪ್ರೀಮಿಯಂ ರೂಪದಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಅಂದರೆ ಒಂದು ವರ್ಷದಲ್ಲಿ 16,300 ರೂಪಾಯಿ ಪ್ರೀಮಿಯಂ ಕಟ್ಟಬೇಕು. ನಿಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಪ್ರೀಮಿಯಂ ಆಗಿಯೂ ಪಾವತಿಸಬಹುದು. ಆದರೆ, ವರ್ಷಕ್ಕೆ 16,300 ರೂಪಾಯಿ ಹೊಂದಿಸಲು ನೀವು ಪ್ರತಿದಿನ 45 ರೂಪಾಯಿಗಳನ್ನು ಉಳಿಕೆ ಮಾಡಬೇಕಾಗುತ್ತದೆ.

ಈ ರೀತಿ ಪ್ರತಿ ವರ್ಷ ಒಟ್ಟಾಗುವ 16,300 ರೂ.ಗಳನ್ನು ಪಾವತಿಸುವ ಮೂಲಕ 35 ವರ್ಷಗಳಲ್ಲಿ ಒಟ್ಟು 5,70,500 ರೂಪಾಯಿ ಪಾವತಿಸಿದಂತಾಗುತ್ತದೆ. 35 ವರ್ಷಗಳ ನಂತರ, ವಿಮಾ ಮೊತ್ತವಾಗಿ ನಿಮಗೆ 5 ಲಕ್ಷ, ಬೋನಸ್ ಆಗಿ 8.50 ಲಕ್ಷ ಮತ್ತು ಅಂತಿಮ ಹೆಚ್ಚುವರಿ ಬೋನಸ್ ಆಗಿ 11.50 ಲಕ್ಷ ರೂಪಾಯಿ ಪಡೆಯಬಹುದು. ನಿತ್ಯವೂ ಉಳಿತಾಯ ಮಾಡುತ್ತಾ ಹೋದರೆ, ಈ ಪ್ರೀಮಿಯಂ ಖರೀದಿಸುವುದು ಕಷ್ಟವಿಲ್ಲ.