NPS: ರಿಟೈರ್‌ಮೆಂಟ್ ಬಳಿಕ 1 ಲಕ್ಷ ರೂ ಮಾಸಿಕ ಪಿಂಚಣಿ ಜೊತೆಗೆ 5 ಕೋಟಿ ನಿವೃತ್ತಿ ಮೊತ್ತ ಪಡೆಯಬಹುದು; ಹೂಡಿಕೆ ಹೀಗಿರಲಿ-business news tips to earn 1 lakh monthly pension and 5 crore retirement corpus after retirement with nps investment jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Nps: ರಿಟೈರ್‌ಮೆಂಟ್ ಬಳಿಕ 1 ಲಕ್ಷ ರೂ ಮಾಸಿಕ ಪಿಂಚಣಿ ಜೊತೆಗೆ 5 ಕೋಟಿ ನಿವೃತ್ತಿ ಮೊತ್ತ ಪಡೆಯಬಹುದು; ಹೂಡಿಕೆ ಹೀಗಿರಲಿ

NPS: ರಿಟೈರ್‌ಮೆಂಟ್ ಬಳಿಕ 1 ಲಕ್ಷ ರೂ ಮಾಸಿಕ ಪಿಂಚಣಿ ಜೊತೆಗೆ 5 ಕೋಟಿ ನಿವೃತ್ತಿ ಮೊತ್ತ ಪಡೆಯಬಹುದು; ಹೂಡಿಕೆ ಹೀಗಿರಲಿ

ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಸ್ಥಿರ ಹೂಡಿಕೆ ಮಾಡುತ್ತಾ ಬರುವ ಮೂಲಕ ನಿವೃತ್ತಿ ವೇಳೆ 5 ಕೋಟಿ ರೂ ನಿವೃತ್ತಿ ಕಾರ್ಪಸ್ ಪಡೆಯಬಹುದು. ಜೊತೆಗೆ ಪ್ರತಿ ತಿಂಗಳು 1 ಲಕ್ಷ ರೂಪಾಯಿ ಪಿಂಚಣಿ ಪಡೆಯಬಹುದು. ಈ ಲೆಕ್ಕಾಚಾರವನ್ನು ನೋಡಿ.

NPS: ರಿಟೈರ್‌ಮೆಂಟ್ ಬಳಿಕ 1 ಲಕ್ಷ ರೂ ಮಾಸಿಕ ಪಿಂಚಣಿ ಜೊತೆಗೆ 5 ಕೋಟಿ ನಿವೃತ್ತಿ ಮೊತ್ತ ಪಡೆಯಬಹುದು
NPS: ರಿಟೈರ್‌ಮೆಂಟ್ ಬಳಿಕ 1 ಲಕ್ಷ ರೂ ಮಾಸಿಕ ಪಿಂಚಣಿ ಜೊತೆಗೆ 5 ಕೋಟಿ ನಿವೃತ್ತಿ ಮೊತ್ತ ಪಡೆಯಬಹುದು

ರಾಷ್ಟ್ರೀಯ ಪಿಂಚಣಿ ಯೋಜನೆ ಅಥವಾ ಎನ್‌ಪಿಎಸ್‌ (National Pension Scheme -NPS) ಮಧ್ಯಮ ವರ್ಗದ ಹೂಡಿಕೆದಾರರ ನೆಚ್ಚಿನ ಹೂಡಿಕೆ ಆಯ್ಕೆಯಾಗಿದೆ. ನಿವೃತ್ತಿ ನಂತರವೂ ಆದಾಯ ಗಳಿಸಲು ಇದೊಂದು ಉತ್ತಮ ಆಯ್ಕೆ. ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡುವ ಮೂಲಕ ತೆರಿಗೆ ಪ್ರಯೋಜನಗಳ ಜೊತೆಗೆ ನಿವೃತ್ತಿ ಬದುಕಿಗಾಗಿ ಒಂದಷ್ಟು ಹಣಕಾಸಿನ ಭರವಸೆ ಉಳಿಸುವ ಅವಕಾಶವಿದೆ. ನಿವೃತ್ತಿ ನಂತರವೂ ಪ್ರತಿ ತಿಂಗಳು 1 ಲಕ್ಷ ರೂಪಾಯಿ ಮಾಸಾಶನ ಬರುವಂತೆ ಮಾಡಬಹುದು. ಆನ್ಯುಟಿ ಸ್ಕೀಮ್‌ ಅಥವಾ ವಾರ್ಷಿಕ ಯೋಜನೆ ಖರೀದಿಸುವ ಮೂಲಕ ಸುಮಾರು 5 ಕೋಟಿ ರೂಪಾಯಿಗಳ ನಿವೃತ್ತಿ ಕಾರ್ಪಸ್ ಸಂಗ್ರಹಿಸಬಹುದು. ಅಲ್ಲದೆ 1 ಲಕ್ಷ ರೂಪಾಯಿಗಳ ಮಾಸಿಕ ಪಿಂಚಣಿ ಪಡೆದುಕೊಳ್ಳಬಹುದು. ಇದು ಹೇಗೆ ಎಂಬುದನ್ನು ತಿಳಿಯೋಣ.

ಪ್ರತಿ ತಿಂಗಳು 1 ಲಕ್ಷ ರೂಪಾಯಿ ಪಿಂಚಣಿ ಪಡೆಯುವಂತಾಗಲು ಎನ್‌ಪಿಎಸ್‌ನಲ್ಲಿ ಸ್ಥಿರವಾದ ಹೂಡಿಕೆ ಮಾಡುತ್ತಾ ಬರಬೇಕು. 27ನೇ ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿ 60 ವರ್ಷದವರೆಗೂ ಮುಂದುವರೆಸಿಕೊಂಡು ಹೋಗಬೇಕು. ಆರ್ಥಿಕ ಶಿಸ್ತನ್ನು ಪಾಲಿಸುವ ಮೂಲಕ ನಿವೃತ್ತಿ ಬದುಕಿನಲ್ಲಿ ನಿರಂತರ ಆದಾಯ ಗಳಿಕೆ ಮಾಡಬಹುದು.

ಎನ್‌ಪಿಎಸ್‌ ವಆನ್ಯುಟಿ ಸ್ಕೀಮ್‌ ಲೆಕ್ಕ ಹಾಕುವುದು ಹೇಗೆ ?

ನಿವೃತ್ತಿಯ ವಯಸ್ಸು ಅಥವಾ 60 ವರ್ಷಗಳಾದ ನಂತರ, ಎನ್‌ಪಿಎಸ್‌ನಲ್ಲಿ ಸಂಗ್ರಹವಾದ ಕಾರ್ಪಸ್‌ನ ಕನಿಷ್ಠ 40 ಶೇಕಡವನ್ನು ವರ್ಷಾಶನವಾಗಿ (annuity) ಪರಿವರ್ತಿಸಬೇಕು. ಈ ವರ್ಷಾಶನವನ್ನು ಚಂದಾದಾರರು ತಮ್ಮ ಜೀವನದ ಉಳಿದ ಅವಧಿಗೆ ಪಿಂಚಣಿ ರೂಪದಲಲ್ಲಿ ನಿಯಮಿತವಾಗಿ ಪಡೆಯಬಹುದು. ಉಳಿದ 60 ಶೇ ಕಾರ್ಪಸ್ ಅನ್ನು ಚಂದಾದಾರರು ಒಂದು ದೊಡ್ಡ ಮೊತ್ತವಾಗಿ ಹಿಂಪಡೆಯಬಹುದು.

5 ಕೋಟಿ ರೂಪಾಯಿ ಕಾರ್ಪಸ್ ಮತ್ತು 1 ಲಕ್ಷ ಮಾಸಿಕ ಪಿಂಚಣಿ ಲೆಕ್ಕಾಚಾರ ನೋಡೋಣ

  • ಹೂಡಿಕೆ ಆರಂಭಿಸುವ ವಯಸ್ಸು: 27 ವರ್ಷಗಳು
  • ಹೂಡಿಕೆ ಮಾಡಬೇಕಾದ ಒಟ್ಟು ವರ್ಷಗಳು (Years of contribution): 33 ವರ್ಷಗಳು (60 ವರ್ಷ ವಯಸ್ಸಿನವರೆಗೆ)
  • ವಾರ್ಷಿಕ ಹೂಡಿಕೆ: 2,00,000 ರೂ
  • ನಿರೀಕ್ಷಿತ ಆದಾಯದ ಪ್ರಮಾಣ (rate of return): ವರ್ಷಕ್ಕೆ 10 ಶೇ
  • ಆನ್ಯುಟಿ ಖರೀದಿ (ಪಿಂಚಣಿಗೆ): ಸಂಗ್ರಹವಾದ ಕಾರ್ಪಸ್‌ನ 40 ಶೇ
  • ನಿರೀಕ್ಷಿತ ವರ್ಷಾಶನ ದರ: ವರ್ಷಕ್ಕೆ 6 ಶೇ
  • ಒಟ್ಟು ಹೂಡಿಕೆ(ವರ್ಷಕ್ಕೆ 2 ಲಕ್ಷದಂತೆ 33 ವರ್ಷಗಳಿಗೆ -65,99,736 ರೂ.

ಸಂಚಿತ ಕಾರ್ಪಸ್:

ಪ್ರತಿ ವರ್ಷಕ್ಕೆ 10 ಶೇಕಡದಷ್ಟು ಲಾಭದ ದರವನ್ನು ಬಳಸಿದರೆ, 33 ವರ್ಷಗಳ ನಂತರ ಸಂಗ್ರಹವಾಗುವ ಕಾರ್ಪಸ್ ಸರಿಸುಮಾರು 5,19,15,841 ರೂಪಾಯಿ.

ಒಟ್ಟು ಲಾಭ

ಒಟ್ಟು ಲಾಭ (ಸಂಚಿತ ಕಾರ್ಪಸ್‌ನಿಂದ ಒಟ್ಟು ಹೂಡಿಕೆಯನ್ನು ಕಳೆಯುವುದು)- 5,19,15,841 – 65,99,736 ರೂ = 4,53,16,105 ರೂಪಾಯಿ

ಒಟ್ಟು 33 ವರ್ಷಗಳಲ್ಲಿ ಎನ್‌ಪಿಎಸ್‌ ಕೊಡುಗೆಗಳನ್ನು ಎಚ್ಚರಿಕೆಯಿಂದ ಯೋಜಿಸುವ ಮೂಲಕ, 5 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ನಿವೃತ್ತಿ ಕಾರ್ಪಸ್‌ ಪಡೆಯಬಹುದು. ಅಂದಾಜು 1 ಲಕ್ಷ ರೂಪಾಯಿ ಮಾಸಿಕ ಪಿಂಚಣಿ ಕೂಡಾ ಪಡೆಯಲು ಸಾಧ್ಯ.

ವರ್ಷಾಶನ ಖರೀದಿ: 60ನೇ ವಯಸ್ಸಿನಲ್ಲಿ, ಸಂಗ್ರಹವಾದ ಒಟ್ಟು ಕಾರ್ಪಸ್‌ನ 40 ಪ್ರತಿಶತವನ್ನು ವರ್ಷಾಶನವಾಗಿ ಪರಿವರ್ತಿಸಬೇಕು. ಇದನ್ನು ಪಿಂಚಣಿ ರೂಪದಲ್ಲಿ ಪ್ರತಿ ತಿಂಗಳು ಪಡೆಯಬಹುದು.

ವರ್ಷಾಶನ ಕಾರ್ಪಸ್ = 5,19,15,841 ರೂಪಾಯಿಯಲ್ಲಿ 40 ಶೇ ಎಂದರೆ 2,07,66,336 ರೂಪಾಯಿ ಆಗುತ್ತದೆ. ಉಳಿದ ಶೇ.60ರಷ್ಟು ಮೊತ್ತವನ್ನು ದೊಡ್ಡ ಮೊತ್ತವಾಗಿ (lump sum) ಹಿಂಪಡೆಯಬಹುದು.

ಮಾಸಿಕ ಪಿಂಚಣಿ

6 ಶೇ ವರ್ಷಾಶನ ದರವನ್ನು ಊಹಿಸಿದರೆ, ಮಾಸಿಕ ಪಿಂಚಣಿಯನ್ನು ಈ ಕೆಳಗಿನಂತೆ ಲೆಕ್ಕಹಾಕಬಹುದು.

ವಾರ್ಷಿಕ ಪಿಂಚಣಿ = ರೂ 2,07,66,336 ಗುಣಿಸು 6ಶೇ = ರೂ 12,45,980.

ಮಾಸಿಕ ಪಿಂಚಣಿ = ರೂ 12,45,980 ಭಾಗಿಸು 12 = ರೂ 1,03,832.

ಉಳಿತಾಯ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ