Viral Video: ಪ್ರೀ ವೆಡ್ಡಿಂಗ್​ ಫೋಟೊಶೂಟ್​ ವೇಳೆ ಅನೀರಿಕ್ಷಿತ ಅತಿಥಿಯಂತೆ ಬಂತು ಹಾವು; ಮುಂದೇನಾಯ್ತು ನೀವೇ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Viral Video: ಪ್ರೀ ವೆಡ್ಡಿಂಗ್​ ಫೋಟೊಶೂಟ್​ ವೇಳೆ ಅನೀರಿಕ್ಷಿತ ಅತಿಥಿಯಂತೆ ಬಂತು ಹಾವು; ಮುಂದೇನಾಯ್ತು ನೀವೇ ನೋಡಿ

Viral Video: ಪ್ರೀ ವೆಡ್ಡಿಂಗ್​ ಫೋಟೊಶೂಟ್​ ವೇಳೆ ಅನೀರಿಕ್ಷಿತ ಅತಿಥಿಯಂತೆ ಬಂತು ಹಾವು; ಮುಂದೇನಾಯ್ತು ನೀವೇ ನೋಡಿ

ಕನಸಿನಲ್ಲಿ ಹಾವು ಕಂಡರೂ ಬೆಚ್ಚಿ ಬೀಳುವವರು ಅನೇಕರಿದ್ದಾರೆ. ಅಂತದ್ರಲ್ಲಿ ಇಲ್ಲೊಂದು ಹೊಸ ಜೋಡಿ ಫೋಟೋಶೂಟ್​ ಮಾಡಿಕೊಳ್ತಿರುವಾಗಲೇ ಹಾವಿನ ಆಗಮನವಾಗಿದೆ. ಹಾವನ್ನು ನೋಡಿದ ದಂಪತಿ ಏನು ಮಾಡಿದ್ರು..? ಈ ವೈರಲ್​ ವಿಡಿಯೋ ನೋಡಿ

ದಂಪತಿಗಳ ಫೋಟೊಶೂಟ್‌ ಮಧ್ಯೆ ಕಾಣಿಸಿದ ಹಾವು
ದಂಪತಿಗಳ ಫೋಟೊಶೂಟ್‌ ಮಧ್ಯೆ ಕಾಣಿಸಿದ ಹಾವು

ಪ್ರೀ ವೆಡ್ಡಿಂಗ್​ ಫೋಟೊಶೂಟ್ ಈಗ ಟ್ರೆಂಡ್​ ಆಗಿದೆ. ಮದುವೆ ದಿನದಂದು ಹೇಗೆ ಫೋಟೋಗ್ರಫಿಯನ್ನಿಟ್ಟು ಸಂಭ್ರಮಿಸಲಾಗುತ್ತದೆಯೋ ಅದಕ್ಕಿಂತ ಮುಂಚೆ ಪ್ರಿ ವೆಡ್ಡಿಂಗ್​ ಶೂಟ್​ ಮಾಡಿಸುವುದು ಒಂದು ರೀತಿಯಲ್ಲಿ ಕಡ್ಡಾಯ ಎಂಬಂತೆ ಆಗಿ ಹೋಗಿದೆ. ಇದಕ್ಕಾಗಿ ನಿಮಗೆ ಅನೇಕ ವೃತ್ತಿಪರ ಫೊಟೋಗ್ರಾಫರ್ಸ್ ಸಹ ಸಿಗುತ್ತಾರೆ. ಪ್ರಕೃತಿಯ ಮಡಿಲಲ್ಲಿ ಸಾಮಾನ್ಯವಾಗಿ ಈ ಫೋಟೋಶೂಟ್​ಗಳು ನಡೆಯುತ್ತವೆ. ತಮ್ಮ ಪ್ರೀತಿಯ ಕ್ಷಣಗಳನ್ನು ಪ್ರಿ ವೆಡ್ಡಿಂಗ್​ ಶೂಟ್​ ನೆಪದಲ್ಲಿ ಸೆರೆ ಹಿಡಿಯುವ ಕಾರ್ಯವನ್ನು ಹೊಸ ಜೋಡಿ ಮಾಡುತ್ತವೆ. ಸೋಶಿಯಲ್​ ಮೀಡಿಯಾದಲ್ಲಿ ಇದೀಗ ಪ್ರೀ ವೆಡ್ಡಿಂಗ್​ ಫೋಟೋ ಶೂಟ್​ ವೇಳೆ ನಡೆದ ಘಟನೆಯೊಂದರ ವಿಡಿಯೊ ಸಖತ್​ ವೈರಲ್​ ಆಗುತ್ತಿದೆ.

ಫೋಟೊಶೂಟ್​ನಲ್ಲಿ ತಲ್ಲೀನರಾಗಿದ್ದ ನವ ಜೋಡಿಗೆ ತಮ್ಮ ಕಾಲಬುಡದಲ್ಲಿ ಹಾವು ಬಂದು ಹೋದರೂ ಅದರ ಅನುಭವ ಅವರಿಗೆ ಆಗೇ ಇಲ್ಲ. ತಮ್ಮ ಜೀವನದ ಅತ್ಯಂತ ಭಯಾನಕ ಕ್ಷಣದ ನಡುವೆಯೂ ಫೋಟೊಶೂಟ್​ನಲ್ಲಿಯೇ ಬ್ಯುಸಿಯಾಗಿದ್ದ ಹೊಸ ಜೋಡಿಯ ವಿಡಿಯೊವನ್ನು ಸ್ವತಃ ಫೋಟೋಗ್ರಾಫರ್ಸ್ ಶೇರ್​ ಮಾಡಿದ್ದಾರೆ.

ಹೆಚ್ಚೇನು ಆಳವಿಲ್ಲದ ನದಿಯೊಂದರಲ್ಲಿ ಕುಳಿತ ಜೋಡಿಗಳು ಫೋಟೊಗೆ ಪೋಸ್​ ನೀಡುವುದರಲ್ಲಿ ತಲ್ಲೀನರಾಗಿದ್ದರು. ಅಲ್ಲಿನ ವಾತಾವರಣ ನೋಡುತ್ತಿದ್ದರೆ ಕತ್ತಲಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ. ಇನ್ನೇನು ಫೋಟೊ ತೆಗೆಯಬೇಕೆಂದು ಕ್ಯಾಮರಾಮೆನ್​ ಹಾಗೂ ಲೈಟ್​ಬಾಯ್​ ತಯಾರಾಗುತ್ತಿದ್ದಂತೆಯೇ ಆ ಫೋಟೋಶೂಟ್​ಗೆ ಒಬ್ಬ ಅನಿರೀಕ್ಷಿತ ಅತಿಥಿಯ ಆಗಮನವಾಗಿತ್ತು. ನದಿಯಲ್ಲಿ ತೇಲಿಕೊಂಡು ಬಂದ ಹಾವೊಂದು ಫೋಟೋಗ್ರಾಫರ್​ ಹತ್ತಿರ ಮೊದಲು ಬಂದಿದೆ. ಬಳಿಕ ಅದು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದ ದಂಪತಿಯ ಬಳಿಯೂ ಹೋಗಿದೆ. ಈ ಸಂಪೂರ್ಣ ದೃಶ್ಯವನ್ನು ಕ್ಯಾಮರಾಮ್ಯಾನ್​ ತಮ್ಮ ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಆದರೆ ಹಾವಿಗೆ ಯಾವುದೇ ರೀತಿಯಲ್ಲಿ ತೊಂದರೆ ಮಾಡದ ದಂಪತಿ ತಮ್ಮಷ್ಟಕ್ಕೆ ತಾವೇ ಫೋಟೊ ಕ್ಲಿಕ್ಕಿಸಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದರು.

ಯುವತಿಯ ಇನ್ನೇನು ಕಿರಿಚಬಹುದು ಎನ್ನುವಷ್ಟರಲ್ಲಿ ಆಕೆಯ ಸಂಗಾತಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಹಾವು ಕೂಡ ಅಲ್ಲಿರುವ ದಂಪತಿಗಾಗಲಿ ಅಥವಾ ಫೋಟಿಗ್ರಾಫರ್ಸ್​ಗಾಗಲಿ ಯಾವುದೇ ತೊಂದರೆ ನೀಡದೇ ತನ್ನಷ್ಟಕ್ಕೆ ತಾನು ಹೊರಟು ಹೋಗಿದೆ. ಪ್ರೀ ವೆಡ್ಡಿಂಗ್​ ಫೋಟೊಶೂಟ್​ ವೇಳೆ ನಡೆದ ಭಯಾನಕ ಹಾಗೂ ತಮಾಷೆಯ ಕ್ಷಣಗಳು ಇಲ್ಲಿವೆ ನೋಡಿ ಎಂದು ಈ ವಿಡಿಯೊಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೊ ನೋಡಿದ ಅನೇಕರು ಮ್ಯಾನ್​ ವರ್ಸಸ್​ ವೈಲ್ಡ್​ ಅಂತಾ ಕಮೆಂಟ್​ ಮಾಡಿದ್ದಾರೆ. ಇನ್ನೂ ಕೆಲವರು ಹಾವು ಬಂದಿದ್ದರೂ ಸಂಗಾತಿಯಿದ್ದಾನೆ ಎಂಬ ನಂಬಿಕೆಯ ಮೇಲೆ ಆಕೆ ಧೈರ್ಯದಿಂದ ಇದ್ದಿದ್ದನ್ನು ನೋಡುತ್ತಿದ್ದರೆ ಮುಂದಿನ ದಿನಗಳಲ್ಲಿಯೂ ಇವರು ಎಂಥಾದ್ದೇ ಸವಾಲುಗಳನ್ನು ಹೀಗೆ ಕೈ ಕೈ ಹಿಡಿದು ನಿಭಾಯಿಸಬಲ್ಲರು ಎಂದೆನಿಸುತ್ತಿದೆ ಎಂದು ಬರೆದಿದ್ದಾರೆ.

Whats_app_banner