ಹುಷಾರಾಗಿರಿ! ಹೀಗೆಲ್ಲ ಕಾಡಬಹುದು ಸೋಷಿಯಲ್ ಮೀಡಿಯಾ, ಏನು ನೋಡ್ತೀರೋ ಅದೇ ನೀವಾಗಬಹುದು; ಸ್ಕ್ರೀನ್ ಟೈಮ್ ಬಗ್ಗೆ ಇರಲಿ ಎಚ್ಚರ -ಮನದ ಮಾತು-column manada mathu problems of social media impact of social media on minds human psychology and media consumption dmg ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಹುಷಾರಾಗಿರಿ! ಹೀಗೆಲ್ಲ ಕಾಡಬಹುದು ಸೋಷಿಯಲ್ ಮೀಡಿಯಾ, ಏನು ನೋಡ್ತೀರೋ ಅದೇ ನೀವಾಗಬಹುದು; ಸ್ಕ್ರೀನ್ ಟೈಮ್ ಬಗ್ಗೆ ಇರಲಿ ಎಚ್ಚರ -ಮನದ ಮಾತು

ಹುಷಾರಾಗಿರಿ! ಹೀಗೆಲ್ಲ ಕಾಡಬಹುದು ಸೋಷಿಯಲ್ ಮೀಡಿಯಾ, ಏನು ನೋಡ್ತೀರೋ ಅದೇ ನೀವಾಗಬಹುದು; ಸ್ಕ್ರೀನ್ ಟೈಮ್ ಬಗ್ಗೆ ಇರಲಿ ಎಚ್ಚರ -ಮನದ ಮಾತು

ಭವ್ಯಾ ವಿಶ್ವನಾಥ್: ಪ್ರತಿದಿನ ಆಕಸ್ಮಿಕವಾಗಿಯೋ, ಉದ್ದೇಶಪೂರ್ವಕವಾಗಿಯೋ ನೀವು ಓದುವ, ನೋಡುವ, ಕೇಳಿಸಿಕೊಳ್ಳುವ ವಿಷಯಗಳ ಬಗ್ಗೆ ಎಚ್ಚರದಿಂದಿರಿ. ನೆಗೆಟಿವ್ ಸುದ್ಧಿ, ಪ್ರಚೋದಿಸುವ ವಿಷಯಗಳು, ನಿಮ್ಮ ಬೆಳವಣಿಗೆಯನ್ನು ಕುಂಠಿತ ಮಾಡುವಂತಹ ಮಾಹಿತಿಗಳಿಂದ ಅಂತರಕಾಯ್ದುಕೊಳ್ಳಿ.

ಸೋಷಿಯಲ್ ಮೀಡಿಯಾ ಅಪಾಯಗಳ ಬಗ್ಗೆ ಇರಲಿ ಎಚ್ಚರ
ಸೋಷಿಯಲ್ ಮೀಡಿಯಾ ಅಪಾಯಗಳ ಬಗ್ಗೆ ಇರಲಿ ಎಚ್ಚರ

ನೀವು ಪ್ರತಿದಿನ ಸಾಮಾಜಿಕ ಮಾಧ್ಯಮಗಳಲ್ಲಿ ಪದೇಪದೆ ವೀಕ್ಷಿಸುವ ಮತ್ತು ತೊಡಗಿಸಿಕೊಳ್ಳುವಂತ ಮೊದಲ 5 ವಿಷಯಗಳು ನೀವು ಏನಾಗುತ್ತೀರಿ ಎಂದು ನಿರ್ಧರಿಸುತ್ತವೆ. ಮಾಹಿತಿಯನ್ನು ಪಡೆಯುವುದಕ್ಕೆ, ಮನೋರಂಜನೆಗೆಂದು ನೋಡುವ ವಿಷಯಗಳು ನಿಮ್ಮ ವ್ಯಕ್ತಿತ್ವದಲ್ಲಿ ಬೆರೆತು ಹೋಗುತ್ತವೆ. ಇದು ನಿಜವೇ ಎಂದು ನೀವು ಯೋಚಿಸಬಹುದು. ಹೀಗೆ ನೀವು ಯೋಚಿಸಿದಲ್ಲಿ ಅದಕ್ಕೆ ಕಾರಣಗಳನ್ನು ಸಹ ತಿಳಿದುಕೆೊಳ್ಳಿ.

1) ಮೊದಲಿಗೆ ನೀವು ಪದೇ ಪದೇ ನೋಡುವ ವಿಷಯಗಳನ್ನು (content) ಪಟ್ಚಿ ಮಾಡಿ.

2) ಪ್ರತಿ ವಿಷಯಗಳಿಗೂ ಎಷ್ಟು ಸಮಯವನ್ನು ನೀಡುತ್ತಿದ್ದೀರವೆಂದು ಪರಿಶೀಲಿಸಿ.

3) ನಂತರ ಹೆಚ್ಚು ಸಮಯ ನೀಡುತ್ತಿರುವ ವಿಷಯವನ್ನು ಗಮನಿಸಿ.

4) ನೀವು ಹೆಚ್ಚು ಸಮಯ ಕೊಡುವ ವಿಷಯ ನಿಮ್ಮ ಬಹುತೇಕ ಮನಸ್ಸು ಮತ್ತು ಬುದ್ಧಿಯನ್ನು ಆವರಿಸುತ್ತದೆ.

5) ಪ್ರಮುಖವಾಗಿ ಆವರಿಸಿಕೊಂಡ ವಿಷಯಗಳು ನಿಮ್ಮ ಮೇಲೆ ಪ್ರಭಾವ ಬೀರಲು ಪ್ರಾರಂಭಿಸುತ್ತದೆ.

6) ನಿಮ್ಮ ಆಲೋಚನೆಗಳು, ಭಾವನೆಗಳು ಈ ರೀತಿಯ ಪ್ರಭಾವಕ್ಕೆ ಒಳಗಾಗುತ್ತವೆ

7) ಪರಿಣಾಮವಾಗಿ ನಿಮ್ಮ ಗಮನ, ಏಕಾಗ್ರತೆ, ಬಯಕೆ, ಗುರಿ, ಕನಸು, ಆಸಕ್ತಿ, ಆಯ್ಕೆ, ನಂಬಿಕೆಗಳೆಲ್ಲವೂ ಅದೇ ವಿಷಯಗಳತ್ತ ಹರಿಯುತ್ತವೆ.

8) ಅರಿವಿದ್ದೋ ಅಥವಾ ಅರಿವು ಇಲ್ಲದೆಯೋ ನಿಮ್ಮ ಬದುಕಿನ, ನಿಮ್ಮ ವ್ಯಕ್ತಿತ್ವದ ಪ್ರಮುಖ ಭಾಗವಾಗಿ ರೂಪುಗೊಳ್ಳುತ್ತವೆ.

ಆದ್ದರಿಂದ ಓದುಗರೆೇ, ಪ್ರತಿದಿನ ಆಕಸ್ಮಿಕವಾಗಿಯೋ, ಉದ್ದೇಶಪೂರ್ವಕವಾಗಿಯೋ ನೀವು ಓದುವ, ನೋಡುವ, ಕೇಳಿಸಿಕೊಳ್ಳುವ ವಿಷಯಗಳ ಬಗ್ಗೆ ಎಚ್ಚರದಿಂದಿರಿ. ನೆಗೆಟಿವ್ ಸುದ್ಧಿ, ಪ್ರಚೋದಿಸುವ ವಿಷಯಗಳು, ನಿಮ್ಮ ಬೆಳವಣಿಗೆಯನ್ನು ಕುಂಠಿತ ಮಾಡುವಂತಹ ಮಾಹಿತಿಗಳಿಂದ ಅಂತರಕಾಯ್ದುಕೊಳ್ಳಿ. ಉದಾ: ಅತಿರಂಜಕವಾಗಿ ಬರೆದ ಅಪರಾಧ ಸುದ್ದಿ (ಅತ್ಯಾಚಾರ, ಕೊಲೆ, ಹತ್ಯೆ ಪ್ರಕರಣಗಳು), ಕಾಮ ಉದ್ದೀಪಿಸುವ ವಿಷಯಗಳು, ಸೆಲೆಬ್ರಿಟಿ ಸ್ಟೋರಿ, ಗಾಸಿಪ್ ಇತ್ಯಾದಿ.

ನಿಮ್ಮ ನಿತ್ಯದ ಬದುಕಿನಲ್ಲಿ ನೀವು ತೊಡಗಿಸಿಕೊಳ್ಳುವ ವಿಷಯಗಳು ನಿಮ್ಮ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತಿದೆಯೆಂದು ಗಮನವಹಿಸಿ. ನಿಮಗಿದು ತೃಪ್ತಿಕರವಾಗಿದ್ದು, ಸ್ಪೂತಿ೯ದಾಯಕವಾಗಿದ್ದು, ಸಂತೋಷವನ್ನು ನೀಡುವಂತಿದೆಯೇ ಅಥವಾ ಮನಸ್ಸಿಗೆ ಕಿರಿಕಿರಿ, ಕೆಟ್ಟಚಟ, ತಪ್ಪುದಾರಿಗೆ ಕರೆದೊಯ್ಯುತ್ತಿದೆಯೇ ಎನ್ನುವುದನ್ನು ಪರಿಶೀಲಿಸಿ. ಮಾಹಿತಿ ಸಂಗ್ರಹ, ಮನರಂಜನೆ ಅತಿಯಾಗದಂತೆ ಮುನ್ನೆಚ್ಚರಿಕೆ ವಹಿಸಿ.

ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು
ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು

ಭವ್ಯಾ ವಿಶ್ವನಾಥ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542. ಬೆಳಿಗ್ಗೆ 10 ರಿಂದ ಸಂಜೆ 5 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.