ವಿಜ್ಞಾನ, ಕೃಷಿ ವಿಜ್ಞಾನ ಪದವೀಧರರಿಗೆ ಗುಡ್ನ್ಯೂಸ್; ಕೇಂದ್ರ ರೇಷ್ಮೆ ಮಂಡಳಿಯಲ್ಲಿ 122 ಹುದ್ದೆಗೆ ಅರ್ಜಿ, ಭರ್ಜರಿ ವೇತನ
CSB Recruitment 2024: ಕೇಂದ್ರ ರೇಷ್ಮೆ ಮಂಡಳಿಯು 122 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಆದರೆ ವಿದ್ಯಾರ್ಹತೆ ಏನು? ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಯಾವಾಗ? ವೇತನ ಎಷ್ಟಿದೆ? ಇಲ್ಲಿದೆ ಮಾಹಿತಿ.
Central Silk Board Recruitment 2024 Notification: ಜವಳಿ ಸಚಿವಾಲಯದ ಅಡಿಯಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ (CSB) 122 ಸೈಂಟಿಸ್ಟ್-ಬಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಕೃಷಿ/ವಿಜ್ಞಾನ ಸ್ನಾತಕೋತ್ತರ ಪದವಿಯ ಮತ್ತು ಐಸಿಎಆರ್ ಎಐಸಿಇ-ಜೆಆರ್ಎಫ್/ಎಸ್ಆರ್ಎಫ್ (Ph.D.) ಈ ಪರೀಕ್ಷೆಗಳಿಗೆ ಹಾಜರಾದವರು ಸಹ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ನಲ್ಲಿ ಸೆಪ್ಟೆಂಬರ್ 5 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಸೈಂಟಿಸ್ಟ್-ಬಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ವೇತನ ಮಟ್ಟ -10ರಲ್ಲಿ (ತಿಂಗಳಿಗೆ ವೇತನ 56,100 ರಿಂದ 1,77,500 ರೂಪಾಯಿ) ಇರಿಸಲಾಗುತ್ತದೆ. ಅಧಿಕೃತ ವೆಬ್ಸೈಟ್ https://csb.gov.in/ ನಲ್ಲಿ ಅರ್ಜಿ ಸಲ್ಲಿಸಲು ಸೈಂಟಿಸ್ಟ್-ಬಿ ಹುದ್ದೆಯ ನೇಮಕಾತಿಯ ವಿವರದ ಅಧಿಸೂಚನೆಯನ್ನು ಪರಿಶೀಲಿಸಲು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ. ಈ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಸೆಂಟ್ರಲ್ ಸಿಲ್ಕ್ ಬೋರ್ಡ್ ನೇಮಕಾತಿ-2024 ಪಿಡಿಎಫ್ ಡೌನ್ಲೋಡ್ ಮಾಡಬಹುದು.
ಹುದ್ದೆಯ ವಿವರ
ಕೇಂದ್ರ ರೇಷ್ಮೆ ಮಂಡಳಿಯು ದೇಶಾದ್ಯಂತ ಒಟ್ಟು 122 ಸೈಂಟಿಸ್ಟ್-ಬಿ ಹುದ್ದೆಗಳನ್ನು ಭರ್ತಿ ಮಾಡಿದೆ. ಬೆಳೆ ವಿಜ್ಞಾನ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಕೃಷಿ ವಿಸ್ತರಣೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಈ ಖಾಲಿ ಹುದ್ದೆಗಳು ಲಭ್ಯವಿವೆ.
ವೇತನ ವಿವರ
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಭರ್ಜರಿ ವೇತನ ಸಿಗಲಿದೆ. ಹುದ್ದೆಗಳಿಗೆ ಅನುಸಾರವಾಗಿ ಅವರ ವೇತನ ನಿರ್ಧಾರವಾಗುತ್ತದೆ. ಆದರೆ ಆರಂಭಿಕ ವೇತನವೇ 56,100 ರಿಂದ 1,77,500 ರೂಪಾಯಿವರೆಗೂ ಇರಲಿದೆ.
ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿಜ್ಞಾನ ಅಥವಾ ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ICAR AICE-JRF/SRF (Ph.D.) 2024 ಈ ಪರೀಕ್ಷೆಗಳಿಗೆ ಹಾಜರಾದವರೂ ಅರ್ಜಿ ಸಲ್ಲಿಸಲು ಅರ್ಹರು. ಗರಿಷ್ಠ ವಯಸ್ಸಿನ ಮಿತಿಯು ಆನ್‌ಲೈನ್ ಅಪ್ಲಿಕೇಶನ್‌ನ ಕೊನೆಯ ದಿನಾಂಕದಂದು ಅಂದರೆ ಸೆಪ್ಟೆಂಬರ್ 5ಕ್ಕೆ 35 ವರ್ಷಗಳು ತುಂಬಿರಬೇಕು.
ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಈ ಪೋಸ್ಟ್‌ಗಳಿಗೆ ಆನ್‌ಲೈನ್ ಮೋಡ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ - http://csb.gov.in/
ಹಂತ 2: ಅಧಿಕೃತ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದಂತೆ ನೀವು ಲಿಂಕ್ ಅನ್ನು ಅನುಸರಿಸಬೇಕು.
ಹಂತ 3: ನೇಮಕಾತಿ ಪ್ರಕ್ರಿಯೆಯಲ್ಲಿ ನಿರ್ದಿಷ್ಟ ಹುದ್ದೆಗೆ ಅಭ್ಯರ್ಥಿಗೆ ಒಂದು ಅರ್ಜಿಯನ್ನು ಮಾತ್ರ ಅನುಮತಿಸಲಾಗುತ್ತದೆ.
ಹಂತ 4: ಅಧಿಕೃತ ವೆಬ್‌ಸೈಟ್‌ನಲ್ಲಿನ ನೇಮಕಾತಿ ಪೋರ್ಟಲ್‌ಗೆ ಲಾಗಿನ್ ಮಾಡಿ.
ಹಂತ 5: ಛಾಯಾಚಿತ್ರ, ಸಹಿ ಮತ್ತು ಅಗತ್ಯ ದಾಖಲೆಗಳು/ಪ್ರಮಾಣಪತ್ರಗಳನ್ನು ಲಿಂಕ್‌ಗೆ ಅಪ್‌ಲೋಡ್ ಮಾಡಿ.
ಹಂತ 6: ಅಗತ್ಯ ಮಾಹಿತಿ ಭರ್ತಿ ಮಾಡುವ ಮೂಲಕ ಹಂತ ಹಂತವಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಿ. ಅಂತಿಮವಾಗಿ ಅದರ ಪ್ರಿಂಟ್ ತೆಗೆದುಕೊಳ್ಳಿ.