ಕನ್ನಡ ಸುದ್ದಿ  /  Lifestyle  /  Diabetes Patients Aloe Vera Juice To Methi Seeds Juice Control Blood Sugar Level Home Remedies Health Tips In Kannada Rs

Diabetes: ಮಧುಮೇಹ ಬಾಧಿಸುತ್ತಿದೆಯೇ? ಲೋಳೆಸರದ ತಿರುಳಿನಿಂದ ಮಂತ್ಯೆಕಾಳಿನವರೆಗೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಪಾನೀಯಗಳಿವು

Home Remedies: ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆಯ ಮಟ್ಟದ ಏರಿಳಿತದ ಕಾರಣ ತೊಂದರೆ ಅನುಭವಿಸುತ್ತಾರೆ. ಆದರೆ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಕೆಲವು ಪಾನೀಯಗಳು ರಕ್ತದಲ್ಲಿನ ಸಕ್ಕರೆಯ ಮಟ್ಟದ ಏರಿಕೆಯ ನಿಯಂತ್ರಣಕ್ಕೆ ಸಹಾಯ ಮಾಡುತ್ತವೆ. ಜೊತೆಗೆ ಇವು ಇತರ ದೈಹಿಕ ತೊಂದರೆಗಳ ನಿವಾರಣೆಗೂ ಸಹಕಾರಿ. ಇಂತಹ ಕೆಲವು ಪಾನೀಯಗಳು ಹೀಗಿವೆ.

ಮಧುಮೇಹಿ ನಿಯಂತ್ರಣ ಪಾನೀಯಗಳು
ಮಧುಮೇಹಿ ನಿಯಂತ್ರಣ ಪಾನೀಯಗಳು

ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ದೊಡ್ಡ ಕಷ್ಟವೇನಲ್ಲ. ಆದರೆ ಆಹಾರಕ್ರಮ, ಶಿಸ್ತು ಹಾಗೂ ಸಕ್ರಿಯ ಜೀವನಶೈಲಿಯ ವಿಷಯದಲ್ಲಿ ಸಮರ್ಪಿತ ಪ್ರಯತ್ನಗಳ ಅಗತ್ಯವಿರುತ್ತದೆ. ಜೀವನಶೈಲಿಯ ಬದಲಾವಣೆಯೂ ಮಧುಮೇಹಕ್ಕೆ ಕಾರಣವಾಗಬಹುದು. ಕೆಲವೊಮ್ಮೆ ಅಸರ್ಮಪಕ ಆಹಾರ ಪದ್ಧತಿಯೂ, ಜಡ ಜೀವನಶೈಲಿ ಕೂಡ ಮಧುಮೇಹಕ್ಕೆ ಕಾರಣವಾಗಬಹುದು.

ಬೆಳಿಗ್ಗೆ ನಾವು ಯಾವ ರೀತಿಯ ಆಹಾರ ಸೇವಿಸುತ್ತೇವೆ ಎನ್ನುವುದರ ಮೇಲೆ ನಮ್ಮ ಇಡೀ ದಿನದ ಆರೋಗ್ಯ ಅವಲಂಬಿತವಾಗಿರುತ್ತದೆ. ಆ ಕಾರಣಕ್ಕೆ ಬೆಳಿಗ್ಗೆ ಮಧುಮೇಹಿ ಸ್ನೇಹಿ ಪಾನೀಯಗಳನ್ನು ಸೇವಿಸುವ ಮೂಲಕ ದಿನವಿಡೀ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇರಿಸುವಂತೆ ನೋಡಿಕೊಳ್ಳಬಹುದು. ಒಮ್ಮೆ ನಿಮ್ಮ ದಿನಚರಿಯಲ್ಲಿ ದೊಡ್ಡ ಬದಲಾವಣೆ ಮಾಡಲು ಸಾಧ್ಯವಾದರೆ, ನಿಮ್ಮ ಕಡುಬಯಕೆಗಳು, ಶಕ್ತಿಯ ಮಟ್ಟಗಳು ಮತ್ತು ಮನಸ್ಥಿತಿಗಳು ಸುಧಾರಿಸಿದರೆ ನಿಮ್ಮ ದೈನಂದಿನ ಜೀವನಶೈಲಿ ಚೆನ್ನಾಗಿರುತ್ತದೆ.

ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯವಾಗುವ ಕೆಲವು ಪಾನೀಯಗಳ ಬಗ್ಗೆ ಪೌಷ್ಟಿಕ ತಜ್ಞ ಮನ್‌ಪ್ರೀತ್‌ ಕಲ್ರಾ ಇಲ್ಲಿ ವಿವರಿಸಿದ್ದಾರೆ.

ಮೆಂತ್ಯೆಕಾಳಿನ ಪಾನೀಯ

ಮಂತ್ಯೆಕಾಳು ನೈಸರ್ಗಿಕವಾಗಿ ಇನ್ಸುಲಿನ್‌ ಸೂಕ್ಷತೆಯನ್ನು ಸುಧಾರಿಸುವ ಪ್ರಯೋಜನಗಳನ್ನು ಹೊಂದಿವೆ. ಕರಗುವ ನಾರಿನಂಶ ಮತ್ತು ಸಪೋನಿನ್‌ ಅಂಶ ಹೊಂದಿರುವ ಮೆಂತ್ಯೆ ಕಾಳುಗಳು ಜೀರ್ಣಕ್ರಿಯೆ ಮತ್ತು ಕಾರ್ಬೋಹೈಡ್ರೇಟ್‌ಗಳ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುವ ಮೂಲಕ ರಕ್ತದಲ್ಲಿನ ಗ್ಲೂಕೋಸ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮೆಂತ್ಯದಲ್ಲಿನ ಕರಗುವ ನಾರಿನಾಂಶ ಮತ್ತು ಸಪೋನಿನ್‌ಗಳು ಜೀರ್ಣಕ್ರಿಯೆ ಮತ್ತು ಕಾರ್ಬೋಹೈಡ್ರೇಟ್‌ಗಳ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್‌ ಪ್ರಮಾಣ ಕಡಿಮೆ ಮಾಡಲು ಹಾಗೂ ರಕ್ತದೊತ್ತಡವನ್ನು ನಿಯಂತ್ರಿಸಲು ಮೆಂತ್ಯೆಕಾಳು ಸೂಪರ್‌ ಫುಡ್‌ನಂತೆ ಕೆಲಸ ಮಾಡುತ್ತದೆ. ಮೆಂತ್ಯೆಕಾಳಿನ ನೀರು ಚರ್ಮದ ಕಾಂತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ಬೆಳಗಿನ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದಿನವಿಡೀ ಸಕ್ಕರೆಯಲ್ಲಿನ ರಕ್ತದ ಮಟ್ಟದ ಮಟ್ಟವನ್ನು ನಿಯಂತ್ರಣದಲ್ಲಿ ಇಡಬಹುದು. ರಾತ್ರಿ ಮಲಗುವ ಮುನ್ನ ಒಂದೆರಡು ಚಮಚ ಮೆಂತ್ಯಕಾಳನ್ನು ನೀರಿನಲ್ಲಿ ನೆನೆಸಿ ಚಹಾದಂತೆ ಕುಡಿಯಬೇಕು.

ನೆಲ್ಲಿಕಾಯಿ ಲೋಳೆಸರದ ಜ್ಯೂಸ್‌

ನೆಲ್ಲಿಕಾಯಿ ಮತ್ತು ಲೋಳೆಸರದ ಪ್ರಬಲ ಸಂಯೋಜನೆಯು ಇನ್ಸುಲಿನ್‌ ಸ್ರವಿಕೆಯನ್ನು ಹೆಚ್ಚಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನೆಲ್ಲಿಕಾಯಿ ಮಧುಮೇಹಿ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಲೋಳೆಸರ ಕೂಡ ಮಧುಮೇಹಿಗಳಿಗೆ ಬಹಳ ಉತ್ತಮ. ಲೋಳೆಸರದ ತಿರುಳನ್ನು ಸೇವಿಸುವುದರಿಂದ ದೇಹ ತೂಕ ಕಡಿಮೆಯಾಗುವ ಜೊತೆಗೆ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಈ ಎರಡರ ಸಂಯೋಜನೆಯ ಜ್ಯೂಸ್‌ ವಿವಿಧ ಚರ್ಮದ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುತ್ತದೆ. ನೆಲ್ಲಿಕಾಯಿ ಮತ್ತು ಲೋಳೆಸರದ ಜ್ಯೂಸ್‌ಗೆ ಸಕ್ಕರೆ, ಜೇನುತುಪ್ಪ, ನಿಂಬೆರಸ, ಕಲ್ಲುಪ್ಪು ಸೇರಿಸಿ ಸೇವಿಸಬಹುದು. ಕೆಲವರು ಈ ಜ್ಯೂಸ್‌ನೊಂದಿಗೆ ಹಾಗಲಕಾಯಿ ರಸವನ್ನೂ ಸೇರಿಸಿ ಕುಡಿಯುತ್ತಾರೆ ಇದು ಕೂಡ ಉತ್ತಮ.

ಚಿಯಾ ಬೀಜದ ಪಾನೀಯ

ನಾರಿನಾಂಶ, ಪ್ರೊಟೀನ್‌ ಹಾಗೂ ಒಮೆಗಾ 3 ಕೊಬ್ಬಿನಾಮ್ಲ ಹೊಂದಿರುವ ಚಿಯಾ ಬೀಜಗಳು ಗ್ಲೈಸೆಮಿಕ್‌ ಸೂಚಿ ಅಂಶವನ್ನು ಕಡಿಮೆ ಹೊಂದಿರುತ್ತವೆ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟದ ಹೆಚ್ಚಳವನ್ನು ತಡೆಯುತ್ತದೆ. ಒಂದು ಬಾಟಲಿ ನೀರಿನಲ್ಲಿ ಒಂದು ಚಮಚ ಚಿಯಾ ಬೀಜಗಳನ್ನು ಹಾಕಬೇಕು, ಅದಕ್ಕೆ ನಿಂಬೆಹಣ್ಣಿನ ತುಂಡುಗಳನ್ನು ಹಾಕಿ ಇರಿಸಬೇಕು. ಇದು ಒಣ ಚರ್ಮ ಸಮಸ್ಯೆಗೂ ಪರಿಹಾರ ಒದಗಿಸುವ ಜೊತೆಗೆ, ಕೊಲೆಸ್ಟ್ರಾಲ್‌ ಮಟ್ಟವನ್ನೂ ನಿಯಂತ್ರಿಸುತ್ತದೆ.

ತುಳಸಿ ಚಹಾ

ತುಳಸಿ ಹೈಪೊಗ್ಲಿಸಿಮಿಕ್‌ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ಇದು ಮಧುಮೇಹ ಹಾಗೂ ಅದರಿಂದಾಗುವ ತೊಂದರೆಗಳ ನಿವಾರಣೆಗೆ ಸಹಾಯ ಮಾಡುತ್ತದೆ. ತುಳಸಿ ಇನ್ಸುಲಿನ್‌ ಸೂಕ್ಷ್ಮತೆ ಮತ್ತು ಗ್ಲೂಕೋಸ್‌ ಚಯಾಪಚಯವನ್ನು ಸುಧಾರಿಸುತ್ತದೆ, ಇದು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನೀರಿಗೆ ತುಳಸಿ ಎಲೆ, ಶುಂಠಿ ಮತ್ತು ನಿಂಬೆರಸ ಸೇರಿಸಿ ಚೆನ್ನಾಗಿ ಕುದಿಸಿ ಚಹಾ ತಯಾರಿಸಿ ಕುಡಿಯಬಹುದು.

ಕೊತ್ತಂಬರಿ ಬೀಜದ ನೀರು

ಕೊತ್ತಂಬರಿ ಬೀಜಗಳು ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಫ್ಲೇವನಾಯ್ಡ್‌ಗಳನ್ನು ಹೊಂದಿರುತ್ತವೆ. ಇವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಇನ್ಸುಲಿನ್‌ ಚಟುವಟಿಕೆಯನ್ನು ಸಹ ನಿರ್ವಹಿಸುತ್ತದೆ. ಕೊತ್ತಂಬರಿ ಬೀಜದ ನೀರು ಥೈರಾಯ್ಡ್‌ ನಿಯಂತ್ರಣಕ್ಕೂ ಸಹಾಯ ಮಾಡುತ್ತದೆ, ಇದು ನಿರ್ಜಲೀಕರಣ ಸಮಸ್ಯೆಗೂ ಪರಿಹಾರ ನೀಡುತ್ತದೆ.

ವಿಭಾಗ