ಏನಾದರೂ ಹೊಸತನ್ನು ಕಲಿಯುವ ಆಸೆ ನಿಮ್ಮದಾ? ಹಾಗಾದ್ರೆ ಮನೆಯಲ್ಲೇ ಕೂತು ಕಲಿಯಬಹುದಾದ ಸಂಗತಿಗಳಿವು-do you want to learn something new so these are the things that can be learned sitting at home smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಏನಾದರೂ ಹೊಸತನ್ನು ಕಲಿಯುವ ಆಸೆ ನಿಮ್ಮದಾ? ಹಾಗಾದ್ರೆ ಮನೆಯಲ್ಲೇ ಕೂತು ಕಲಿಯಬಹುದಾದ ಸಂಗತಿಗಳಿವು

ಏನಾದರೂ ಹೊಸತನ್ನು ಕಲಿಯುವ ಆಸೆ ನಿಮ್ಮದಾ? ಹಾಗಾದ್ರೆ ಮನೆಯಲ್ಲೇ ಕೂತು ಕಲಿಯಬಹುದಾದ ಸಂಗತಿಗಳಿವು

ಕೆಲವರಿಗೆ ತಾವು ಎಷ್ಟು ಕಲಿತರೂ ಇನ್ನೂ ಕಲಿಯಬೇಕು ಎಂಬ ಹಂಬಲ ಇರುತ್ತದೆ. ಇನ್ನು ಕೆಲವರಿಗೆ ತಾವು ಕಲಿಯುವ ವಯಸ್ಸಿನಲ್ಲಿ ಸರಿಯಾಗಿ ಕಲಿಯಲು ಸಾಧ್ಯವಾಗಲಿಲ್ಲ ಎಂದು ಬೇಸರ ಇರುತ್ತದೆ. ಅಂತವರೆಲ್ಲರೂ ಈಗ ಏನಾದರೂ ಒಂದನ್ನು ಹೊಸದಾಗಿ ಕಲಿಯಲು ಬಯಸುತ್ತಾರೆ. ನೀವೂ ಇದೇ ರೀತಿ ಆಲೋಚನೆ ಮಾಡುತ್ತಾ ಇದ್ದರೆ ಮನೆಯಲ್ಲೇ ಕಲಿಯಬಹುದಾದ ಕೆಲವು ಕೋರ್ಸ್‌ಗಳ ಪಟ್ಟಿ ನೀಡಿದ್ದೇವೆ.

ಪ್ರತಿದಿನವೂ ಹೊಸ ಕಲಿಕೆ
ಪ್ರತಿದಿನವೂ ಹೊಸ ಕಲಿಕೆ

ನೀವು ಕಲಿಯಬೇಕಾಗಿರುವ ಸಂಗತಿ ನಿಮ್ಮಿಷ್ಟದ್ದಾಗಿರಬೇಕು. ಆಗ ನಿಮಗೆ ಕಲಿಕೆ ಸುಲಭ ಎನಿಸುತ್ತದೆ. ನೀವು ಹೊರಗೆಲ್ಲೂ ಹೋಗಿ ಕಲಿಯಲು ಈ ಸಂದರ್ಭದಲ್ಲಿ ಸಾಧ್ಯವಾಗುತ್ತಾ ಇಲ್ಲ ಎಂದಾದರೆ ಮನೆಯಲ್ಲೇ ಕೆಲವು ಕೋರ್ಸ್ ಮಾಡಬಹುದು. ಅಥವಾ ನೀವೇ ಯಾರ ಸಹಾಯವೂ ಇಲ್ಲದೇ ಯುಟ್ಯೂಬ್ ನೋಡಿ ಕಲಿಯಬಹುದು. ಅಂತಹ ಕೆಲವೊಂದು ಸಂಗತಿಗಳನ್ನು ನಾವು ನಿಮಗಿಲ್ಲಿ ನೀಡಿದ್ದೇವೆ ಗಮನಿಸಿ. ಇದರಲ್ಲಿ ನಿಮ್ಮ ಆಸಕ್ತಿಯ ಕ್ಷೇತ್ರ ಯಾವುದು ಎಂಬುದನ್ನು ಗಮನಿಸಿಕೊಳ್ಳಿ. ಆ ನಂತರ ನಿಮಗೆ ಬೇಕಾಗಿರುವುದನ್ನು ಆಯ್ಕೆ ಮಾಡಿಕೊಳ್ಳಿ.

ಭಾಷೆಗಳು: ನೀವು ಹೊಸ ಹೊಸ ಭಾಷೆಗಳನ್ನು ಕಲಿಯಬಹುದು. ಈಗ ಇಂಗ್ಲೀಷ್‌ ಭಾಷೆಯಲ್ಲಿ ನಿಮಗೆ ಇನ್ನಷ್ಟು ಗ್ರಿಪ್ ಬೇಕು ಎಂದು ನಿಮಗೆ ಅನಿಸಿದರೆ ನೀವು ಇಂಗ್ಲೀಷ್ ಭಾಷೆಯನ್ನು ಮನೆಯಿಂದಲೇ ಕಲಿಯಬಹುದು. ಇನ್ನು ನಿಮಗೆ ಬೇರೆ ಯಾವುದಾದರೂ ಭಾಷೆ ಕಲಿಯುವ ಆಸಕ್ತಿ ಇದ್ದರೆ ಅದನ್ನೂ ಕಲಿಯಬಹುದು. ಇನ್ನು ನೀವು ಚಿಕ್ಕ ಮಕ್ಕಳಿಗೆ ಮುಂದಿನ ದಿನ ಅದನ್ನು ಹೇಳಿಕೊಡಬಹುದು. ಬೇಕಿದ್ದರೆ ಟ್ಯೂಷನ್ ಕೂಡ ತೆಗೆದುಕೊಳ್ಳಬಹುದು. (Duolingo, Coursera, edX) ಇವುಗಳಲ್ಲಿ ನೀವು ಕಲಿಯಬಹುದು.

ಡಾನ್ಸ್: ನೀವು ಭರತನಾಟ್ಯ, ಯಕ್ಷಗಾನ, ವೆಸ್ಟರ್ನ್‌ ಡಾನ್ಸ್‌ ಹೀಗೆ ನಿಮಗೆ ಯಾವ ಪ್ರಕಾರ ಇಷ್ಟವೋ ಆ ಪ್ರಕಾರದ ಡಾನ್ಸ್‌ ಕಲಿಯಬಹುದು. ಯುಟ್ಯೂಬ್‌ನಲ್ಲಿ ಸಾಕಷ್ಟು ರೀತಿಯ ಕ್ಲಾಸ್‌ಗಳು ನಿಮಗೆ ಸಿಗುತ್ತದೆ. ಅದನ್ನೇ ನೋಡಿ ನೀವು ಮನೆಯಲ್ಲೇ ಒಂದಿಷ್ಟು ಸಮಯವನ್ನು ಮೀಸಲಿಟ್ಟು ಆ ಸಮಯದಲ್ಲಿ ಕಲಿಯಬಹುದು. ಹೀಗೆ ಮಾಡಿದರೆ ನಿಮಗೆ ಒಂದು ಆತ್ಮತೃಪ್ತಿ ಇರುತ್ತದೆ. ನಾನು ಸುಮ್ಮನೆ ಕೂತಿಲ್ಲ ಏನೋ ಒಂದು ಕಲಿಯುತ್ತಾ ಇದ್ದೇನೆ ಎನ್ನುವುದಾಗಿ. (YouTube tutorials, DanceWithMe) ಇವುಗಳು ನಿಮ್ಮ ಸಹಾಯಕ್ಕೆ ಬರುತ್ತದೆ.

ಗ್ರಾಫಿಕ್ ಡಿಸೈನಿಂಗ್: ನೀವು ಹೊಸ ಪೋಸ್ಟರ್‌ಗಳನ್ನು ಅಥವಾ ಪುಸ್ತಕದ ಮುಖಪುಟವನ್ನು ವಿನ್ಯಾಸಗೊಳಿಸಲು ಕಲಿಯಬೇಕು ಎಂದಿದ್ದರೆ ಅದನ್ನು ಸಹ ಮನೆಯಲ್ಲೇ ನೀವು ಕಲಿಯಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀವು ಯೂಟ್ಯೂನ್‌ಲ್ಲಿ ತಿಳಿದುಕೊಳ್ಳಬಹುದು. (Canva, Adobe Creative Cloud) ಇವುಗಳನ್ನು ಬಳಸಿ ನೀವು ಡಿಸೈನಿಂಗ್ ಮಾಡಬಹುದು.

ಸಂಗೀತ: ನೀವು ಸಂಗೀತ ಕಲಿಯಲು ಆಸಕ್ತಿ ಹೊಂದಿದವರಾಗಿದ್ದರೆ ಸಂಗೀತವನ್ನೂ ಸಹ ಉಚಿತವಾಗಿ ಮನೆಯಲ್ಲೇ ಕಲಿಯಬಹುದು. ನಿಮಗೆ ಯಾವ ರೀತಿ ಮತ್ತು ಯಾವ ಭಾಷೆಯಲ್ಲಿ ಬೇಕೋ ಆ ಭಾಷೆಯಲ್ಲಿ ಕಲಿಯುವ ಅವಕಾಶ ಇದೆ. ಇಂದಿನ ಡಿಜಿಟಲ್ ಜಗತ್ತಿನಲ್ಲಿ ಯಾವುದೂ ಇಲ್ಲ ಎಂಬುದು ಇಲ್ಲ. (YouTube lessons, Fender Play)

ಕಲಿಕೆಗೆ ವಯಸ್ಸಿನ ಮಿತಿ ಇಲ್ಲ. ಯಾರು ಬೇಕಾದರೂ ಏನು ಬೇಕಾದರೂ ಕಲಿಯಬಹುದು. ಯಾವ ವಯಸ್ಸಿನಲ್ಲಿ ಬೇಕಾದರೂ ಕಲಿಯಬಹುದು. ಉತ್ತಮ ಮಾರ್ಗದಲ್ಲಿ ನಡೆಯುವುದಕ್ಕೆ, ಹೊಸತನ್ನು ಕಲಿಯುವುದಕ್ಕೆ ಯಾವಾಗಲೂ ತೆರೆದುಕೊಂಡಿರಬೇಕು. ಹೊಸತನ್ನು ಕಲಿಯಲು ನಿರಾಕರಿಸಿದರೆ ಅದು ಬದುಕಲು ನಿರಾಕರಿಸಿದಂತೆ ಎಂದು ರಾಮಕೃಷ್ಣ ಪರಮಹಂಸರು ಹೇಳಿದ್ದಾರೆ.

mysore-dasara_Entry_Point