ಕನ್ನಡ ಸುದ್ದಿ / ಜೀವನಶೈಲಿ /
ಸಿದ್ದೇಶ್ವರ ಸ್ವಾಮೀಜಿ ಪ್ರವಚನ: ಗಟ್ಟಿಯಾದ ಮನಸ್ಸು ಸೋಲಲು ಸಾಧ್ಯವಿಲ್ಲ, ಯಶಸ್ಸಿನ ಶಬ್ಧ ಜಗತ್ತಿಗೆ ಕೇಳಿಸುವಷ್ಟು ಜೋರಾಗಿರಬೇಕು
ವಿಜಯಪುರ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಗಳು ಅನ್ನ, ಜ್ಞಾನ ಹಾಗೂ ಅಧ್ಯಾತ್ಮಿಕ ಚಿಂತನೆಗಳ ಮೂಲಕ ಹೆಚ್ಚು ಜನಪ್ರಿಯರಾದವರು. ಮನುಷ್ಯನ ಜೀವನ ಹೇಗಿರಬೇಕೆಂದು ತಮ್ಮ ಪ್ರವಚನಗಳ ಮೂಲಕ ತಿಳಿಸಿಕೊಡುತ್ತಿದ್ದರು. ಪ್ರತಿಯೊಬ್ಬರಿಗೂ ಪ್ರೇರಣೆಯಾಗುವ ಸ್ವಾಮೀಜಿಯವರ ಪ್ರವಚನದ ಆಯ್ದ ನುಡಿಮುತ್ತುಗಳನ್ನು ಇಲ್ಲಿ ನೀಡಲಾಗಿದೆ.
ವಿಜಯಪುರ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಗಳು
ಅನ್ನದಾತ, ಜ್ಞಾನದಾತ, ಸರಳ ಸಂತೆ ಎಂದೇ ಖ್ಯಾತರಾಗಿದ್ದ ಸಿದ್ದೇಶ್ವರ ಸ್ವಾಮೀಜಿ ಸಮಾಜವನ್ನು ತಿದ್ದುವ ಸ್ವಾಮೀಜಿಗಳು ಹೇಗಿರಬೇಕು ಎನ್ನುವುದಕ್ಕೆ ಉದಾಹರಣೆಯಾಗಿದ್ದವರು. ಯೋಗ ಮತ್ತು ಅಧ್ಯಾತ್ಮಿಕ ಬೋಧನೆಗಳಿಂದ ಹೆಸರುವಾಸಿಯಾಗಿದ್ದ ಸಿದ್ದೇಶ್ವರ ಸ್ವಾಮೀಜಿ ಭಾರತೀಯ ಪ್ರಮುಖ ಅಧ್ಯಾತ್ಮಿಕ ಬೋಧಕರಲ್ಲಿ ಪ್ರಮುಖರು. ವಿಜಯಪುರ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಅಧ್ಯಾತ್ಮದ ಬಗ್ಗೆ ಆಳವಾದ ಅಧ್ಯಯನ ನಡೆಸಿ ಸಾಕಷ್ಟು ಅನುಭವವನ್ನು ಪಡೆದವರು. ಇವರ ಪ್ರವಚನಗಳನ್ನು ಕೇಳಲು ಲಕ್ಷಾಂತರ ಮಂದಿ ಸೇರುತ್ತಿದ್ದರು. ಮನುಷ್ಯ ಜೀವನ ಹೇಗಿರಬೇಕು, ವ್ಯಕ್ತಿತ್ವವನ್ನು ಹೇಗೆ ರೂಪಿಸಿಕೊಳ್ಳಬೇಕು, ನಮ್ಮ ನಡೆ-ನುಡಿಗಳು ಹೇಗಿರಬೇಕು, ಕರ್ಮದ ಫಲಗಳು ಹೀಗೆ ಸ್ಪೂರ್ತಿದಾಯಕ ಮಾತುಗಳು ಮೂಲಕ ಶಾಂತ ಸ್ವಭಾವದ ಸ್ವಾಮೀಜಿ ಲಕ್ಷಾಂತರ ಮಂದಿ ಬೆಂಬಲಿಗರನ್ನು ಹೊಂದಿದವರು. ಸಿದ್ದೇಶ್ವರ ಸ್ವಾಮೀಜಿಯವರ ಪ್ರಚನದ ಆಯ್ದ ಭಾಗದ ನುಡಿಮುತ್ತುಗಳನ್ನು ಇಲ್ಲಿ ನೀಡಲಾಗಿದೆ.
- ಗಟ್ಟಿಯಾದ ಮನಸು ಸೋಲಲು ಸಾಧ್ಯವಿಲ್ಲ
ಅಕ್ಷರ ಕಲಿತ ವ್ಯಕ್ತಿ ಭ್ರಷ್ಟನಾದರು ಆಗಬಹುದು
ಆದರೆ ಸಂಸ್ಕಾರ ಕಲಿತ ವ್ಯಕ್ತಿ ಎಂದೆಂದಿಗೂ ಭ್ರಷ್ಟನಾಗಲಾರ - ಈ ಪ್ರಪಂಚದಲ್ಲಿ ಒಳ್ಳೆಯದನ್ನೆಲ್ಲ ಹೇಳಿ ಆಗಿದೆ. ಉಳಿದಿರುವುದು ಆಚರಣೆ ಮಾತ್ರ
- ದೇಹ ಸುಂದರವಾಗಿದ್ದ ಮಾತ್ರಕ್ಕೆ ಬದುಕು ಸುಂದರವಾಗಿ ಇರುತ್ತೆಂದು ಹೇಳಲಾಗದು. ದೇಹ ಕುರುಪವಾಗಿದ್ದರೂ ಬದುಕು ಸುಂದರವಾಗಿರಿಸಿಕೊಂಡವರು ಸಾಕಷ್ಟು ಜನರಿದ್ದಾರೆ
- ಸೂರ್ಯನ ಕಿರಣಗಳು ಕೊಳಕು ಇರುವ ಜಾಗಕ್ಕೂ ಹೋಗುತ್ತೆ. ಆದರೆ ಅದು ಕೊಳಕಾಗುವುದಿಲ್ಲ. ನಾವು ಬದುಕಿನಲ್ಲಿ ಸೂರ್ಯನ ಕಿರಣದಂತೆ ಆಗಬೇಕು. ಯಾವ ಜಾಗಕ್ಕೆ ಹೋದರು ಯಾರ ಜತೆ ಇದ್ದರೂ ನಾವು ನಾವಾಗಿರಬೇಕು ಕೊಳಕಾಗಬಾರದು.
- ಒಂದು ಕಾಲು ಮುಂದೆ ಇನ್ನೊಂದು ಕಾಲು ಹಿಂದೆ ಮುಂದಿನ ಕಾಲಿಗೆ ಗರ್ವವಿಲ್ಲ ಹಿಂದಿನ ಕಾಲಿಗೆ ಬೇಸರವಿಲ್ಲ. ಜೀವನವೂ ಹೀಗೆ ಯಾವಾಗಲೂ ಸ್ಥಿರವಾಗಿರುವುದಿಲ್ಲ
- ಮನಸ್ಸಿದ್ದರೆ ದಾರಿ ಖಂಡಿತ ದೊರಕುತ್ತದೆ. ಇಲ್ಲವಾದರೆ ಅದೇ ಮನಸ್ಸು ಕಾರಣ ಹುಡುಕುತ್ತದೆ.
- ಕಷ್ಟಗಳನ್ನು ಮೌನವಾಗಿ ಪರಿಶ್ರಮ ಸದ್ದಿಲ್ಲದೆ ಸಾಗಬೇಕು
ಸಿಗುವ ಯಶಸ್ಸಿನ ಶಬ್ದ ಜಗತ್ತಿಗೆ ಕೇಳಿಸುವಷ್ಟು ಜೋರಾಗಿರಬೇಕು - ಮಡದಿ ಬಂದ ಮೇಲೆ ಒಡಹುಟ್ಟಿದವರು ಭಾರ, ಆಸ್ತಿ ಭಾಗವಾದ ಮೇಲೆ ಹೆತ್ತವರು ಭಾರ, ಗಂಡ ತೊರೆದ ಹೆಣ್ಣು ತವರಿಗೆ ಬಾರ, ಮೋಹ ಕಳೆದ ಮೇಲೆ ಸಂಸಾರ ಭಾರ, ಅವಶ್ಯಕತೆ ಮುಗಿದ ಮೇಲೆ ಎಲ್ಲವು ಭಾರ
- ಎಲ್ಲವನ್ನು ಸಹಿಸುವ ಗುಣವಿದ್ದನಲ್ಲಿಯೇ ಎಲ್ಲವನ್ನೂ ಎದುರಿಸುವ ಶಕ್ತಿ ಇರುವುದು.
- ಕುದಿಯುವವರು ಕುದಿಯಲಿ ಉರಿಯುವವರು ಉರಿಯಲಿ ನಿನ್ನ ಪಾಡಿಗೆ ನೀನಿರು. ಕುದಿಯುವವರು ಬಲಿಯಾಗುತ್ತಾರೆ, ಉರಿಯುವವರು ಬೂದಿಯಾಗುತ್ತಾರೆ.
- ಯಾರ ನೋವಿಗೆ ಯಾರೂ ಹೊಣೆಗಾರರು? ನಿನ್ನ ಕಣ್ಣೀರಿಗೆ ಯಾರು ಮರುಗುವರು ನಿನಗೆ ನೀನೇ ಮಿತ್ರ ನಿನಗೆ ನೀನೇ ಶತ್ರು ನಿನ್ನಿಂದಲೇ ಶಾಂತಿ, ನಿನ್ನಿಂದಲೇ ಕ್ರಾಂತಿ
- ನಿಮ್ಮಲ್ಲಿ ಒತ್ತಡಗಳಿಗೂ ನೀವು ಪ್ರತಿಕ್ರಿಯಿಸುವ ಬಗೆಯೇ ಕಾರಣ ಆದ್ದರಿಂದ ಸ್ಪಂದಿಸಲು ಪ್ರತಿಕ್ರಿಯಿಸಬೇಡಿ
- ಜೀವನದಲ್ಲಿ ಕೆಲವರು ನಿಮ್ಮ ದಾರಿಯಲ್ಲಿ ಕಲ್ಲೆಸೆಯುತ್ತಾ ಇರುತ್ತಾರೆ. ಆ ಕಲ್ಲುಗಳಿಂದ ಗೋಡೆ ಕಟ್ಟುತ್ತೀರೋ ಸೇತುವೆ ನಿರ್ಮಿಸುತ್ತಿರೋ ನಿಮಗೆ ಬಿಟ್ಟಿದ್ದು. ನೆನಪಿರಲಿ ನೀವೇ ನಿಮ್ಮ ಬದುಕಿನ ಶಿಲ್ಪಿಗಳು
- ಕೈ ಶುದ್ಧಿ, ವಾಕ್ ಶುದ್ಧಿ, ಮನಸುದ್ಧಿ ಉಳ್ಳವನು ಯಾವುದರ ಬಗೆಗೂ ಚಿಂತಿಸಬೇಕಿಲ್ಲ. ಕಡಿಮೆ ಮಾತನಾಡಿ ಮೆಲ್ಲಗೆ ಮಧುರವಾಗಿ ಮಾತನಾಡಿ, ಗೌರವದಿಂದ ಮಾತನಾಡಿ ಇರೋದು ಇರುತ್ತದೆ. ಹೋಗೋದು ಹೋಗುತ್ತದೆ. ಯಾವುದನ್ನು ಹೆಚ್ಚಿಗೆ ಹಚ್ಚಿಕೊಳ್ಳದೆ ಸಮಾಧಾನಿಯಾಗಿರಬೇಕು. ಇದೇ ಸುಖಿ ಜೀವನದ ಸೂತ್ರ.
- ಬದುಕಿಗಾಗಿ ಗಳಿಕೆಯೇ ಹೊರತು ಗಳಿಕೆಯೇ ಬದುಕು ಅಲ್ಲ ಎಂಬುದನ್ನು ವಿಜಯಪುರ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ತಮ್ಮ ಪ್ರಚನಗಳಲ್ಲಿ ಹೇಳಿದ್ದಾರೆ.
ಆಹಾರ, ಆರೋಗ್ಯ, ಬ್ಯೂಟಿ ಟಿಪ್ಸ್, ರೆಸಿಪಿ, ಪ್ರವಾಸ, ಫಿಟ್ನೆಸ್, ಆಯುರ್ವೇದ, ಪೇರೆಂಟಿಂಗ್ ಟಿಪ್ಸ್ ಸೇರಿದಂತೆ ನಿಮ್ಮ ದೈನಂದಿನ ಜೀವನ ಸುಗಮಗೊಳಿಸುವ ಉಪಯುಕ್ತ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ದ ಲೈಫ್ಸ್ಟೈಲ್ ವಿಭಾಗ ನೋಡಿ.