ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್ ಹಾರೋ ಆಸೆಯೇ; ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಭಾರತೀಯರ ಆಯ್ಕೆಯ ಟಾಪ್‌ 5 ಕೋರ್ಸ್‌ಗಳಿವು-education news 5 most popular courses in uk for indian students study in united kingdom england career jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್ ಹಾರೋ ಆಸೆಯೇ; ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಭಾರತೀಯರ ಆಯ್ಕೆಯ ಟಾಪ್‌ 5 ಕೋರ್ಸ್‌ಗಳಿವು

ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್ ಹಾರೋ ಆಸೆಯೇ; ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಭಾರತೀಯರ ಆಯ್ಕೆಯ ಟಾಪ್‌ 5 ಕೋರ್ಸ್‌ಗಳಿವು

ಇಂಗ್ಲೆಂಡ್‌ ಸೇರಿದಂತೆ ಯುನೈಟೆಡ್‌ ಕಿಂಗ್‌ಡಮ್‌ನಾದ್ಯಂತ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಉನ್ನತ ಶಿಕ್ಷಣಕ್ಕೆ ಯುಕೆ ಭಾರತೀಯರ ನೆಚ್ಚಿನ ಆಯ್ಕೆ. ಅದರಲ್ಲೂ ಕೆಲವೊಂದು ಕೋರ್ಸ್‌ಗಳು ತುಂಬಾ ಜನಪ್ರಿಯ. ಭಾರತೀಯ ವಿದ್ಯಾರ್ಥಿಗಳ ಆಯ್ಕೆಯ ಪ್ರಮುಖ ಕೋರ್ಸ್‌ಗಳ ವಿವರ ಇಲ್ಲಿದೆ.

ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಭಾರತೀಯರ ಆಯ್ಕೆಯ ಟಾಪ್‌ 5 ಕೋರ್ಸ್‌ಗಳಿವು
ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಭಾರತೀಯರ ಆಯ್ಕೆಯ ಟಾಪ್‌ 5 ಕೋರ್ಸ್‌ಗಳಿವು (Pixabay)

ವಿದೇಶದಲ್ಲಿ ಅಧ್ಯಯನ ಎಂಬ ವಿಷಯ ಬಂದಾಗ ಭಾರತೀಯರ ಮೊದಲ ಆಯ್ಕೆ ಸಾಮಾನ್ಯವಾಗಿ ಯುಎಸ್‌ಎ ಮತ್ತು ಯುಕೆ. ಅಮೆರಿಕಗೆ ವಿದ್ಯಾಭ್ಯಾಸಕ್ಕಾಗಿ ಹೋಗುವಂತೆಯೇ ಇಂಗ್ಲೆಂಡ್‌ಗೆ ಹೋಗುವ ಭಾರತೀಯರ ಸಂಖ್ಯೆಯೂ ಹೆಚ್ಚು. ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ವಿಶ್ವವಿದ್ಯಾನಿಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳು ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಇವೆ. ಹೀಗಾಗಿ ಭಾರತೀಯ ವಿದ್ಯಾರ್ಥಿಗಳ ಪ್ರಮುಖ ಆಯ್ಕೆಯ ದೇಶ ಇದು. ಅತ್ಯಾಧುನಿಕ ಸಂಶೋಧನಾ ಸೌಲಭ್ಯಗಳು, ಉನ್ನತ ಜೀವನ ಮಟ್ಟ, ವಿಪುಲ ಉದ್ಯೋಗಾವಕಾಶ ಸೇರಿದಂತೆ ಹಲವು ಕಾರಣಗಳಿಂದ ಬ್ರಿಟನ್‌ ಶಿಕ್ಷಣ ಕ್ಷೇತ್ರದಲ್ಲಿ ಮನ್ನಣೆ ಪಡೆದಿದೆ. ಇಲ್ಲಿ ಹಲವು ಕೋರ್ಸ್‌ಗಳು ಜನಪ್ರಿಯ.

ಭಾರತೀಯ ವಿದ್ಯಾರ್ಥಿಗಳ ನಿಟ್ಟಿನಲ್ಲಿ ಜನಪ್ರಿಯವಾಗಿರುವ ಕೆಲವು ಕೋರ್ಸ್‌ಗಳು ಕೂಡಾ ಯುಕೆಯಲ್ಲಿವೆ. ಈ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ವೃತ್ತಿಜೀವನದ ಅವಕಾಶಗಳನ್ನು ಹೆಚ್ಚಿಸುತ್ತವೆ. ಭಾರತೀಯ ವಿದ್ಯಾರ್ಥಿಗಳು ಯುಕೆಯಲ್ಲಿ ಹೆಚ್ಚಾಗಿ ಸೇರಬಯಸುವ ಜನಪ್ರಿಯ ಕೋರ್ಸ್‌ಗಳು ಯಾವುವು ಎಂಬುದನ್ನು ನೋಡೋಣ.

ವ್ಯವಹಾರ ಮತ್ತು ನಿರ್ವಹಣೆ

ಬ್ಯುಸಿನೆಸ್ ಮತ್ತು ನಿರ್ವಹಣೆ ಕೋರ್ಸ್‌ಗಳು ಅನೇಕ ಭಾರತೀಯ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. ಪ್ರಾಯೋಗಿಕ ಕೌಶಲ್ಯಗಳಿಗೆ ಇಲ್ಲಿ ಒತ್ತು ನೀಡಲಾಗುತ್ತದೆ. ಪದವಿಪೂರ್ವ ಶಿಕ್ಷಣದಿಂದ ಎಂಬಿಎ ಪದವಿಯವರೆಗೆ, ಹಣಕಾಸು, ಮಾರುಕಟ್ಟೆ, ಉದ್ಯಮಶೀಲತೆ ಮತ್ತು ನಾಯಕತ್ವದಂತಹ ಕ್ಷೇತ್ರಗಳಲ್ಲಿ ಸಮಗ್ರ ತರಬೇತಿಯನ್ನು ನೀಡಲಾಗುತ್ತವೆ.

ಇಂಜಿನಿಯರಿಂಗ್

ಇಂಜಿನಿಯರಿಂಗ್ ಶಿಕ್ಷಣದಲ್ಲಿ ಯುಕೆ ಜನಪ್ರಿಯ. ಇಲ್ಲಿ ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಿಕಲ್ ಅಥವಾ ಏರೋಸ್ಪೇಸ್ ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್‌ಗಳಿವೆ. ಹಲವು ವಿಶ್ವವಿದ್ಯಾಲಯಗಳು ಗುಣಮಟ್ಟದ ಶಿಕ್ಷಣ ನೀಡುತ್ತವೆ. ಅತ್ಯಾಧುನಿಕ ಸೌಲಭ್ಯಗಳು ಮತ್ತು ಸಂಶೋಧನಾ ಅವಕಾಶಗಳು ಬ್ರಿಟನ್‌ನಾದ್ಯಂತ ಇವೆ. ಅದರಲ್ಲೂ ಇಂಗ್ಲೆಂಡ್‌ ರಾಜಧಾನಿ ಲಂಡನ್‌ನಲ್ಲಿ ಹಲವು ಅವಕಾಶಗಳಿವೆ.

ಹಣಕಾಸು ಮತ್ತು ಅಕೌಂಟಿಂಗ್

ಬ್ರಿಟನ್‌ನ ರಾಜಧಾನಿ ಲಂಡನ್ ಜಾಗತಿಕ ಹಣಕಾಸು ಕೇಂದ್ರವಾಗಿ ಜನಪ್ರಿಯ. ಇಲ್ಲಿ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಫಿನಾನ್ಸ್‌ ಮತ್ತು ಅಕೌಂಟಿಂಗ್‌ ಶಿಕ್ಷಣ ನೀಡುತ್ತವೆ. ಕಾರ್ಪೊರೇಟ್ ಫಿನಾನ್ಸ್, ಬ್ಯಾಂಕಿಂಗ್, ಹಣಕಾಸು ಮಾರುಕಟ್ಟೆಗಳು ಮತ್ತು ಲೆಕ್ಕಪತ್ರ ನಿರ್ವಹಣೆ ಸೇರಿದಂತೆ ಹಣಕಾಸು ಉದ್ಯಮದಲ್ಲಿ ಲಾಭದಾಯಕ ವೃತ್ತಿಜೀವನ ರೂಪಿಸಿಕೊಳ್ಳಲು ವಿದ್ಯಾರ್ಥಿಗಳನ್ನು ರೂಪಿಸುತ್ತದೆ.

ಕಂಪ್ಯೂಟರ್ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ

ತಂತ್ರಜ್ಞಾನ ವಿಕಸನಗೊಳ್ಳುತ್ತಲೇ ಇರುವುದರಿಂದ, ಕಂಪ್ಯೂಟರ್ ಸೈನ್ಸ್ ಮತ್ತು ಐಟಿಯಲ್ಲಿ ನುರಿತ ವೃತ್ತಿಪರರ ಬೇಡಿಕೆ ಹೆಚ್ಚುತ್ತಿದೆ. ಯುಕೆಯ ಹಲವು ವಿಶ್ವವಿದ್ಯಾನಿಲಯಗಳು ವಿಜ್ಞಾನ ಕ್ಷೇತ್ರದ ಹಲವು ಕೋರ್ಸ್‌ಗಳನ್ನು ನೀಡುತ್ತವೆ. ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್, ಸೈಬರ್ ಸೆಕ್ಯುರಿಟಿ ಮತ್ತು ಸಾಫ್ಟ್‌ವೇರ್ ಎಂಜಿನಿಯರಿಂಗ್‌ ಕ್ಷೇತ್ರಗಳಲ್ಲಿ ಅತ್ಯಾಧುನಿಕ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಯುಕೆ ಪ್ರಯಾಣ ಮಾಡುತ್ತಾರೆ.

ಔಷಧ ಮತ್ತು ಆರೋಗ್ಯ

ವಿಶ್ವದ ಹಲವು ಉನ್ನತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಮತ್ತು ಆರೋಗ್ಯ ಸಂಸ್ಥೆ ಇಲ್ಲಿವೆ. ವೈದ್ಯಕೀಯ, ಔಷಧಾಲಯ ಹಾಗೂ ಮೆಡಿಕಲ್‌ ಕ್ಷೇತ್ರಕ್ಕೆ ಸಂಬಂಧಿತ ಕ್ಷೇತ್ರಗಳಲ್ಲಿ ವೃತ್ತಿಜೀವನ ಮುಂದುವರೆಸಲು ಬಯಸುತ್ತಿರುವ ಭಾರತೀಯ ವಿದ್ಯಾರ್ಥಿಗಳು ಯುನೈಟೆಡ್ ಕಿಂಗ್‌ಡಮ್‌ಗೆ ಹೋಗಬಹುದು.

mysore-dasara_Entry_Point