IIRF Rankings 2024: ಮುಂಬೈನಿಂದ ಘಾಜಿಯಾಬಾದ್‌ವರೆಗೆ; ಭಾರತದ ಅಗ್ರ 10 ಖಾಸಗಿ ಎಂಬಿಎ ಕಾಲೇಜುಗಳ ಪಟ್ಟಿ ಪ್ರಕಟ
ಕನ್ನಡ ಸುದ್ದಿ  /  ಜೀವನಶೈಲಿ  /  Iirf Rankings 2024: ಮುಂಬೈನಿಂದ ಘಾಜಿಯಾಬಾದ್‌ವರೆಗೆ; ಭಾರತದ ಅಗ್ರ 10 ಖಾಸಗಿ ಎಂಬಿಎ ಕಾಲೇಜುಗಳ ಪಟ್ಟಿ ಪ್ರಕಟ

IIRF Rankings 2024: ಮುಂಬೈನಿಂದ ಘಾಜಿಯಾಬಾದ್‌ವರೆಗೆ; ಭಾರತದ ಅಗ್ರ 10 ಖಾಸಗಿ ಎಂಬಿಎ ಕಾಲೇಜುಗಳ ಪಟ್ಟಿ ಪ್ರಕಟ

IIRF Rankings 2024: ಉತ್ತಮ ಶಿಕ್ಷಣ ಪಡೆದರೆ ವೃತ್ತಿಜೀವನವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ಸಾಧ್ಯವಾಗುತ್ತದೆ. ದೇಶದ ಅಗ್ರ 10 ಖಾಸಗಿ ಎಂಬಿಎ ಕಾಲೇಜುಗಳ ವಿವರ ಇಲ್ಲಿದೆ.

ಮುಂಬೈನಿಂದ ಘಾಜಿಯಾಬಾದ್‌ವರೆಗೆ, ಭಾರತದ ಅಗ್ರ 10 ಖಾಸಗಿ ಎಂಬಿಎ ಕಾಲೇಜುಗಳ ಪಟ್ಟಿಯ ವಿವರ ಇಲ್ಲಿದೆ.
ಮುಂಬೈನಿಂದ ಘಾಜಿಯಾಬಾದ್‌ವರೆಗೆ, ಭಾರತದ ಅಗ್ರ 10 ಖಾಸಗಿ ಎಂಬಿಎ ಕಾಲೇಜುಗಳ ಪಟ್ಟಿಯ ವಿವರ ಇಲ್ಲಿದೆ. (HT)

Top 10 Private MBA Colleges in India: ಎಂಬಿಎ ದೇಶದ ಅತ್ಯಂತ ಬೇಡಿಕೆಯ ವೃತ್ತಿಪರ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಉನ್ನತ ಎಂಎನ್‌ಸಿಗಳಲ್ಲಿ ವ್ಯವಸ್ಥಾಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಅಥವಾ ಉದ್ಯಮಿಗಳಾಗಲು ಬಯಸುವ ಅಭ್ಯರ್ಥಿಗಳು ದೇಶದ ಅತ್ಯುತ್ತಮ ಬಿ-ಶಾಲೆಗಳಲ್ಲಿ ತಮ್ಮ ಮ್ಯಾನೇಜ್‌ಮೆಂಟ್ ಅಧ್ಯಯನವನ್ನು ಪ್ರಾರಂಭಿಸಲು ಎದುರು ನೋಡುತ್ತಾರೆ.

ತಮ್ಮ ವೃತ್ತಿಜೀವನವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು, ಆಕಾಂಕ್ಷಿಗಳು ದೇಶದ ಅತ್ಯುತ್ತಮ ಕಾಲೇಜುಗಳನ್ನು ಹುಡುಕುತ್ತಾರೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ರ‍್ಯಾಂಕಿಂಗ್ ಫ್ರೇಮ್‌ವರ್ಕ್ (ಐಐಆರ್‌ಎಫ್) 2024 ರಲ್ಲಿ ಬಿಸಿನೆಸ್ ಶೈಕ್ಷಣಿಕ ಸಂಸ್ಥೆಗಳ ಶ್ರೇಯಾಂಕವನ್ನು ಬಿಡುಗಡೆ ಮಾಡಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ರ‍್ಯಾಂಕಿಂಗ್ ಫ್ರೇಮ್‌ವರ್ಕ್ 7 ಮಾನದಂಡಗಳ ಆಧಾರದ ಮೇಲೆ ದೇಶದ ಎಂಬಿಎ ಕಾಲೇಜುಗಳಿಗೆ ರ‍್ಯಾಂಕಿಂಗ್ ನೀಡಿದೆ.

  1. ಪ್ಲೇಸ್ಮೆಂಟ್ ಕಾರ್ಯಕ್ಷಮತೆ
  2. ಬೋಧನಾ ಕಲಿಕಾ ಸಂಪನ್ಮೂಲಗಳು ಮತ್ತು ಶಿಕ್ಷಣಶಾಸ್ತ್ರ
  3. ಸಂಶೋಧನೆ
  4. ಉದ್ಯಮ ಆದಾಯ ಮತ್ತು ಏಕೀಕರಣ
  5. ಪ್ಲೇಸ್ಮೆಂಟ್ ಸ್ಟ್ರಾಟಜಿ ಮತ್ತು ಬೆಂಬಲ
  6. ಭವಿಷ್ಯದ ದೃಷ್ಟಿಕೋನ
  7. ಬಾಹ್ಯ ಗ್ರಹಿಕೆ ಮತ್ತು ಅಂತರರಾಷ್ಟ್ರೀಯ ದೃಷ್ಟಿಕೋನ

ರ‍್ಯಾಂಕಿಂಗ್, ಬ್ಯುಸಿನೆಸ್ ಸ್ಕೂಲ್ ಹಾಗೂ ರಾಜ್ಯದ ವಿವರ

  1. ಕ್ಸೇವಿಯರ್ ಲೇಬರ್ ರಿಲೇಷನ್ಸ್ ಇನ್‌ಸ್ಟಿಟ್ಯೂಟ್(ಎಕ್ಸ್‌ಎಲ್‌ಆರ್‌ಆಐ), ಜೇಮ್‌ಶೆಡ್‌ಪುರ್(ಜಾರ್ಖಂಡ್)
  2. ಮ್ಯಾನೇಜ್ಮೆಂಟ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್ (ಎಂಡಿಐ), ಗುರುಗ್ರಾಮ್ (ಹರಿಯಾಣ)
  3. ಎಸ್‌ ಪಿ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ರಿಸರ್ಚ್(ಎಸ್‌ಪಿಜೆಐಎಂಆರ್‌), ಮುಂಬೈ (ಮಹಾರಾಷ್ಟ್ರ)
  4. ಸಿಂಬೋಸೀಸ್ ಇನ್‌ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್ (ಎಸ್‌ಐಬಿಎಂ), ಪುಣೆ (ಮಹಾರಾಷ್ಟ್ರ)
  5. ಸಿಂಬೋಸೀಸ್ ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಅಂಡ್ ಹ್ಯುಮನ್ ರಿಸೋರ್ಸ್ ಡೆವಲಪ್‌ಮೆಂಟ್ (ಎಸ್‌ಸಿಎಂಎಚ್‌ಆರ್‌ಡಿ), ಪುಣೆ (ಮಹಾರಾಷ್ಟ್ರ)
  6. ಕ್ಸೇವಿಯರ್ ಇನ್‌ಸ್ಟಿಟ್ಯೂಟ್ ಆಪ್ ಮ್ಯಾನೇಜ್ಮೆಂಟ್ (ಎಕ್ಸ್‌ಐಎಂಬಿ), ಎಕ್ಸ್‌ಐಎಂ, ವಿಶ್ವವಿದ್ಯಾಲಯ, ಭುವನೇಶ್ವರ್ (ಒಡಿಶಾ)
  7. ಎನ್‌ಎಂಐಎಂಎಸ್ ಸ್ಕೋಲ್ ಆಫ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್, ಮುಂಬೈ (ಮಹಾರಾಷ್ಟ್ರ)
  8. ಇಂಟರ್‌ನ್ಯಾಷನಲ್ ಮ್ಯಾನೇಜ್ಮೆಂಟ್ ಇನ್‌ಸ್ಟಿಟ್ಯೂಟ್ (ಐಎಂಐ), ದೆಹಲಿ
  9. ಎಂಐಸಿಎಂ, ಅಹಮದಾಬಾದ್ (ಗುಜರಾತ್)
  10. ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಟೆಕ್ನಾಲಜಿ, ಘಾಜಿಯಾಬಾದ್ (ಉತ್ತರ್ ಪ್ರದೇಶ)

ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಐಎಎಸ್ ಆಫೀಸರ್‌ಗಳನ್ನು ಹೊಂದಿರುವ ರಾಜ್ಯಗಳಿವು

ಯೂನಿಯನ್ ಬ್ಯಾಂಕ್‌ನಲ್ಲಿ ಸ್ಪೆಷಲಿಸ್ಟ್ ಆಫೀಸ್‌ರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 606 ಸ್ಪೆಷಲಿಸ್ಟ್ ಆಫೀಸರ್ (SO) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 2023ರ ಫೆಬ್ರವರಿ 3 (ಶನಿವಾರ) ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಫೆಬ್ರವರಿ 23 (ಶುಕ್ರವಾರ) ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು www.unionbankofindia.co.in ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಪರೀಕ್ಷೆಯ ತಾತ್ಕಾಲಿಕ ದಿನಾಂಕ 2024 ರ ಮಾರ್ಚ್ ಅಥವಾ ಏಪ್ರಿಲ್ ಆಗಿರುವ ಸಾಧ್ಯತೆ ಇದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2024: ಅರ್ಜಿ ಶುಲ್ಕ: ಸಾಮಾನ್ಯ / ಇಡಬ್ಲ್ಯೂಎಸ್ / ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 850 ರೂಪಾಯಿ ಮತ್ತು ಎಸ್ಸಿ / ಎಸ್ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 175 ರೂಪಾಯಿ ಇರಲಿದೆ.

(This copy first appeared in Hindustan Times Kannada website. To read more like this please logon to kannada.hindustantime.com).

Whats_app_banner