2025ರ ಶುಭಾಶಯಗಳು: ನಿನ್ನ ತುಟಿಯ ಮೇಲಿನ ನಗು ಸದಾ ಹೀಗೇ ಇರಲಿ; ಹೊಸ ವರ್ಷಕ್ಕೆ ಗೆಳತಿಗೆ ಈ ರೀತಿ ಶುಭ ಕೋರಿ
ಕನ್ನಡ ಸುದ್ದಿ  /  ಜೀವನಶೈಲಿ  /  2025ರ ಶುಭಾಶಯಗಳು: ನಿನ್ನ ತುಟಿಯ ಮೇಲಿನ ನಗು ಸದಾ ಹೀಗೇ ಇರಲಿ; ಹೊಸ ವರ್ಷಕ್ಕೆ ಗೆಳತಿಗೆ ಈ ರೀತಿ ಶುಭ ಕೋರಿ

2025ರ ಶುಭಾಶಯಗಳು: ನಿನ್ನ ತುಟಿಯ ಮೇಲಿನ ನಗು ಸದಾ ಹೀಗೇ ಇರಲಿ; ಹೊಸ ವರ್ಷಕ್ಕೆ ಗೆಳತಿಗೆ ಈ ರೀತಿ ಶುಭ ಕೋರಿ

New Year 2025 Wishes: ಯಾವುದೇ ಶುಭ ಸಮಾರಂಭ ಇರಲಿ, ಖುಷಿಯ ವಿಚಾರವಾಗಲಿ ಆತ್ಮೀಯರಿಗೆ ಅಭಿನಂದನೆ ಸಲ್ಲಿಸುವುದು, ಶುಭಾಶಯ ಕೋರುವುದು ಸಾಮಾನ್ಯ. ಹೊಸ ವರ್ಷ ಬರುತ್ತಿದೆ. ನೀವು ನಿಮ್ಮ ಗೆಳತಿಗೆ ವಿಭಿನ್ನವಾಗಿ ಶುಭ ಕೋರಬೇಕು ಎಂದುಕೊಂಡಲ್ಲಿ ಇಲ್ಲಿ ಕೆಲವು ಸುಂದರ ಸಾಲುಗಳಿವೆ.

ನಿಮ್ಮ ಆತ್ಮೀಯ ಗೆಳತಿಗೆ ಹೀಗೆ ಹೊಸ ವರ್ಷದ ಶುಭ ಕೋರಿ
ನಿಮ್ಮ ಆತ್ಮೀಯ ಗೆಳತಿಗೆ ಹೀಗೆ ಹೊಸ ವರ್ಷದ ಶುಭ ಕೋರಿ (PC: Canva)

2025ರ ಶುಭಾಶಯಗಳು: ದಿನಗಳು ಕಳೆಯುತ್ತಿವೆ, ವರ್ಷಗಳು ಉರುಳುತ್ತಿವೆ. ಮೊನ್ನೆ ಮೊನ್ನೆಯಷ್ಟೇ 2024ನ್ನು ಸ್ವಾಗತಿಸಿದ್ದೇವೆ ಎನಿಸುತ್ತಿದೆ. ಅಷ್ಟರಲ್ಲಿ ಒಂದು ವರ್ಷ ಮುಗಿದು ಹೊಸ ವರ್ಷ ಬರುತ್ತಿದೆ. 2025 ನ್ನು ಸ್ವಾಗತಿಸಲು ಇನ್ನು 15 ದಿನಗಳಷ್ಟೇ ಬಾಕಿ ಉಳಿದಿದೆ. ಹಿಂದೂಗಳಿಗೆ ಹೊಸ ವರ್ಷ ಎಂದರೆ ಅದು ಯುಗಾದಿ, ಆದರೂ ಇಂಗ್ಲೀಷ್‌ ಕ್ಯಾಲೆಂಡರ್‌ ಪ್ರಕಾರ ಜನವರಿ 1ನ್ನು ಕೂಡಾ ಹೊಸ ವರ್ಷವನ್ನಾಗಿ ಆಚರಿಸುತ್ತಾ ಬರಲಾಗಿದೆ.

ಹೊಸ ವರ್ಷ ಬರುತ್ತಿದ್ದಂತೆ ಪಾರ್ಟಿ, ಪ್ರವಾಸ, ರೆಸ್ಯುಲೂಷನ್‌ ಸೇರಿದಂತೆ ನಾನಾ ವಿಚಾರಗಳ ಬಗ್ಗೆ ಪ್ಲ್ಯಾನ್‌ ಮಾಡಲಾಗುತ್ತದೆ. ಹೋಟೆಲ್‌, ರೆಸಾರ್ಟ್‌ಗಳಲ್ಲಿ ಹೊಸ ವರ್ಷ ಆಚರಿಸಲು ಈಗಲೇ ತಯಾರಿ ನಡೆದಿದೆ. ಡಿಸೆಂಬರ್‌ 31 ಮಧ್ಯರಾತ್ರಿ 12 ದಾಟುತ್ತಿದ್ದಂತೆ ಜನರು ಪಟಾಕಿ ಸಿಡಿಸಿ ಹರ್ಷೋದ್ಗಾರದಿಂದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಹೊಸ ಹೊಸ ಕನಸುಗಳು, ಗುರಿಗಳನ್ನು ಇಟ್ಟುಕೊಂಡು ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ನಿಮ್ಮ ಬದುಕಲ್ಲಿ ಸಂತೋಷವೇ ತುಂಬಿರಲಿ ಎಂದು ಆತ್ಮೀಯರಿಗೆ ಹಾರೈಸುತ್ತಾರೆ. ಹಾಗಾದರೆ ಈ ಹೊಸ ವರ್ಷಕ್ಕೆ ಮೊದಲು ಯಾರಿಗೆ ಶುಭ ಕೋರಬೇಕು ಎಂದುಕೊಂಡಿದ್ದೀರ?

ಹೊಸ ವರ್ಷಕ್ಕೆ ನಿಮ್ಮ ಆತ್ಮೀಯ ಗೆಳತಿಗೆ ಈ ರೀತಿ ಶುಭ ಕೋರಿ

  • ಹೊಸ ವರ್ಷದ ಶುಭಾಶಯಗಳು ಗೆಳತಿ, ನಾವು ಹಂಚಿಕೊಂಡ ಪ್ರತಿ ನೋವು-ನಲಿವಿನ ವಿಚಾರಗಳಿಗೆ ನಾನು ಕೃತಜ್ಞನಾಗಿದ್ದೇನೆ, ನಿನ್ನೊಂದಿಗೆ ಇನ್ನಷ್ಟು ಸಿಹಿ ನೆನಪುಗಳಿಗಾಗಿ ಎದುರು ನೋಡುತ್ತಿರುವೆ.
  • ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ, ನಿನ್ನಂಥ ಗೆಳತಿಯನ್ನು ಪಡೆದ ನಾನೇ ಧನ್ಯ. ಹೊಸ ವರ್ಷ ನಿನ್ನ ಬಾಳಲ್ಲಿ ಹೊಸ ಕನಸುಗಳನ್ನು ತರಲಿ, ಆ ಕನಸುಗಳೆಲ್ಲಾ ಈಡೇರಲಿ ಎಂದು ಹಾರೈಸುವೆ.
  • ನನ್ನ ಕಷ್ಟ , ಸುಖಗಳಲ್ಲಿ ಜೊತೆಯಾಗಿ ನಿಂತ, ನನ್ನ ನೋವಿನ ಕ್ಷಣಗಳಲ್ಲಿ ನನಗೆ ಬೆನ್ನುಲುಬಾಗಿ ನಿಂತ ಗೆಳತಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
  • ಹೊಸ ವರ್ಷದಲ್ಲಿ ಅಂತ್ಯವಿಲ್ಲದ ಸಂತೋಷ, ನಗು ನಿನ್ನದಾಗಲಿ ಗೆಳತಿ, ಹೊಸ ವರ್ಷದ ಶುಭಾಶಯಗಳು.
  • ಹೊಸ ಆರಂಭ, ಹೊಸ ಭರವಸೆ, ಹೊಸ ಅವಕಾಶ ನಿನ್ನ ಬಾಳಲ್ಲಿ ಬರಲಿ, ಈ ವರ್ಷ ಇನ್ನಷ್ಟು ಉತ್ತಮವಾಗಿರಲಿ, ನನ್ನ ಪ್ರೀತಿಯ ಗೆಳತಿಗೆ ಹೊಸ ವರ್ಷದ ಶುಭ ಹಾರೈಕೆಗಳು.

ಇದನ್ನೂ ಓದಿ: ಹೊಸ ವರ್ಷಕ್ಕೆ ಗಾರ್ಡನಿಂಗ್‌ ಮಾಡುವ ರೆಸಲ್ಯೂಷನ್ ನಿಮ್ಮದಾಗಿದ್ದರೆ ಈ ಟಿಪ್ಸ್‌ ನಿಮಗಾಗಿ

  • ನನ್ನ ಸುಂದರ ಗೆಳತಿಗೆ ಈ ಹೊಸ ವರ್ಷ ಖುಷಿ, ಸಂತೋಷ, ಯಶಸ್ಸನ್ನು ತರಲಿ, ಹೊಸ ವರ್ಷ ನಿನ್ನ ಜೀವನದಲ್ಲಿ ಎಲ್ಲಾ ಕನಸುಗಳು ಈಡೇರಲಿ ಎಂದು ಹಾರೈಸುವೆ.
  • ಎಷ್ಟು ವರ್ಷಗಳು ಕಳೆದರೂ, ಎಷ್ಟು ಹೊಸ ವರ್ಷಗಳು ಬಂದರೂ ನಿನ್ನಂಥ ಗೆಳತಿ ಸದಾ ನನ್ನ ಜೊತೆಯಾಗಿರಲಿ ಎಂದು ಆಶಿಸುವೆ, ಹೊಸ ವರ್ಷದ ಪ್ರೀತಿಯ ಶುಭಾಶಯಗಳು.
  • ಹೊಸ ವರ್ಷದಲ್ಲಿ ಪ್ರತಿಯೊಂದು ದಿನವೂ ನಿಮ್ಮ ಕಣ್ಣುಗಳಲ್ಲಿನ ಹೊಳಪಿನಂತೆ ಪ್ರಕಾಶಮಾನವಾಗಿರಲಿ, ನಿಮ್ಮ ತುಟಿಗಳ ಮೇಲಿನ ನಗು ಸದಾ ಹೀಗೇ ಇರಲಿ, ಹೊಸ ವರ್ಷದ ಶುಭಾಶಯಗಳು.
  • ಹೊಸ ವರ್ಷದಲ್ಲಿ ನಿನ್ನ ಬದುಕು ಪ್ರೀತಿ , ದಯೆಯಿಂದ ತುಂಬಿರಲಿ, ದೇವರು ನಿನಗೆ ಜೀವನದ ಉದ್ದಕ್ಕೂ ಸಂತೋಷ, ನೆಮ್ಮದಿ, ಐಶ್ವರ್ಯ, ಉತ್ತಮ ಆರೋಗ್ಯ ನೀಡಿ ಹಾರೈಸಲಿ, 2025ರ ಶುಭಾಶಯಗಳು
  • 2024 ರಲ್ಲಿ ನಿನ್ನೊಂದಿಗೆ ಇದ್ದ , ನಿನ್ನಂಥ ಗೆಳತಿಯನ್ನು ಪಡೆದ ನಾನೇ ಪುಣ್ಯ. 2025 ಮಾತ್ರವಲ್ಲ ಅಂಥಹ ನೂರಾರು ವರ್ಷಗಳು ನೀನೇ ನನ್ನ ಗೆಳತಿಯಾಗಿರು, ಹೊಸ ವರ್ಷದ ಪ್ರೀತಿಯ ಶುಭ ಹಾರೈಕೆಗಳು.

ಇದನ್ನೂ ಓದಿ: 2025ರ ಶುಭಾಶಯಗಳು: ದಿನಗಳು ಉರುಳಲಿ, ಪ್ರೀತಿ ಹೆಚ್ಚಾಗುತ್ತಲೇ ಇರಲಿ: ಹೊಸ ವರ್ಷಕ್ಕೆ ನಿಮ್ಮ ಪ್ರೇಯಸಿಗೆ ಈ ರೀತಿ ಶುಭ ಕೋರಿ

Whats_app_banner