ನಿಮ್ಮ ಪ್ರೀತಿ ಪಾತ್ರರಿಗೆ ಕ್ರಿಸ್ಮಸ್ ಉಡುಗೊರೆ ಏನು ಕೊಡಬಹುದು ಎಂದು ಯೋಚಿಸುತ್ತಿದ್ದೀರಾ: ಇಲ್ಲಿದೆ ಗಿಫ್ಟ್ ಐಡಿಯಾ
ಕನ್ನಡ ಸುದ್ದಿ  /  ಜೀವನಶೈಲಿ  /  ನಿಮ್ಮ ಪ್ರೀತಿ ಪಾತ್ರರಿಗೆ ಕ್ರಿಸ್ಮಸ್ ಉಡುಗೊರೆ ಏನು ಕೊಡಬಹುದು ಎಂದು ಯೋಚಿಸುತ್ತಿದ್ದೀರಾ: ಇಲ್ಲಿದೆ ಗಿಫ್ಟ್ ಐಡಿಯಾ

ನಿಮ್ಮ ಪ್ರೀತಿ ಪಾತ್ರರಿಗೆ ಕ್ರಿಸ್ಮಸ್ ಉಡುಗೊರೆ ಏನು ಕೊಡಬಹುದು ಎಂದು ಯೋಚಿಸುತ್ತಿದ್ದೀರಾ: ಇಲ್ಲಿದೆ ಗಿಫ್ಟ್ ಐಡಿಯಾ

ಕ್ರಿಸ್ಮಸ್ ಸಮೀಪಿಸುತ್ತಿದ್ದು, ನಿಮ್ಮ ಪ್ರೀತಿಪಾತ್ರರಿಗೆ ಏನಾದರೂ ಉಡುಗೊರೆ ನೀಡಲು ಯೋಚಿಸುತ್ತಿರಬಹುದು. ಪ್ರೀತಿಪಾತ್ರರಿಗೆ ಏನು ಉಡುಗೊರೆಯಾಗಿ ನೀಡುವುದು ಎಂದು ನೀವು ಸಹ ಯೋಚಿಸುತ್ತಿರಬಹುದು. ಯಾವೆಲ್ಲಾ ರೀತಿಯ ಉಡುಗೊರೆ ಕೊಡಬಹುದು ಎಂಬ ಕೆಲವು ಐಡಿಯಾಗಳನ್ನು ನಿಮಗಾಗಿ ಇಲ್ಲಿ ನೀಡಲಾಗಿದೆ.

ನಿಮ್ಮ ಪ್ರೀತಿ ಪಾತ್ರರಿಗೆ ಕ್ರಿಸ್ಮಸ್ ಉಡುಗೊರೆ ಏನು ಕೊಡಬಹುದು ಎಂದು ಯೋಚಿಸುತ್ತಿದ್ದೀರಾ: ಇಲ್ಲಿದೆ ಗಿಫ್ಟ್ ಐಡಿಯಾ
ನಿಮ್ಮ ಪ್ರೀತಿ ಪಾತ್ರರಿಗೆ ಕ್ರಿಸ್ಮಸ್ ಉಡುಗೊರೆ ಏನು ಕೊಡಬಹುದು ಎಂದು ಯೋಚಿಸುತ್ತಿದ್ದೀರಾ: ಇಲ್ಲಿದೆ ಗಿಫ್ಟ್ ಐಡಿಯಾ (Pexel)

ಕ್ರಿಸ್ಮಸ್ ಸಮೀಪಿಸುತ್ತಿದೆ. ನಿಮ್ಮ ನೆಚ್ಚಿನ ಉಡುಪುಗಳು ಮತ್ತು ಚಾಕೊಲೇಟ್‌ಗಳನ್ನು ಖರೀದಿಸಲು ನೀವು ಒಲವು ತೋರುತ್ತೀರಬಹುದು. ಕ್ರಿಸ್‌ಮಸ್‌ಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಕ್ರಿಸ್ಮಸ್ ಅಂದ್ರೆ ನೆನಪಾಗುವುದು ಕೇಕ್, ಪಾರ್ಟಿ ಅಷ್ಟೇ ಅಲ್ಲ, ಪ್ರೀತಿಪಾತ್ರರಿಗೆ ಉಡುಗೊರೆ ನೀಡುವುದು ಕೂಡ. ಹೀಗಾಗಿ ಪ್ರೀತಿಪಾತ್ರರಿಗೆ ಏನು ಉಡುಗೊರೆಯಾಗಿ ನೀಡುವುದು ಎಂದು ನೀವು ಸಹ ಯೋಚಿಸುತ್ತಿರಬಹುದು. ಯಾವೆಲ್ಲಾ ರೀತಿಯ ಉಡುಗೊರೆ ಕೊಡಬಹುದು ಎಂಬ ಕೆಲವು ಐಡಿಯಾಗಳನ್ನು ನಿಮಗಾಗಿ ಇಲ್ಲಿ ನೀಡಲಾಗಿದೆ.

ಪ್ರೀತಿಪಾತ್ರರಿಗೆ ನೀಡುವಂತಹ ಕ್ರಿಸ್ಮಸ್ ಉಡುಗೊರೆ ಐಡಿಯಾಗಳು

ಪುರುಷರಿಗೆ ಈ ಉಡುಗೊರೆಗಳನ್ನು ನೀಡಬಹುದು: ಪುರುಷರು ಟೆಕ್ ಗ್ಯಾಜೆಟ್‌ಗಳನ್ನು ಇಷ್ಟಪಡುತ್ತಾರೆ. ಸ್ಮಾರ್ಟ್ ವಾಚ್‌ಗಳು, ವೈರ್‌ಲೆಸ್ ಇಯರ್‌ಬಡ್‌ಗಳು, ಹೆಡ್‌ಸೆಟ್‌ಗಳು, ಸ್ಮಾರ್ಟ್ ಹೋಮ್ ಸಾಧನಗಳು ಸಹ ಉಪಯುಕ್ತವಾಗಿವೆ. ಹೆಲ್ಮೆಟ್‌, ಬ್ಯಾಕ್ ಪ್ಯಾಕ್‌, ಬೂಟು, ಸ್ವೆಟರ್ ಅಥವಾ ಜಾಕೆಟ್, ಪರ್ಸ್ ಇವುಗಳನ್ನು ಸಹ ಉಡುಗೊರೆಯಾಗಿ ನೀಡಬಹುದು. ಚಳಿಗಾಲವಾದ್ದರಿಂದ ಈ ಶೀತ ವಾತಾವರಣದಲ್ಲಿ ಉಡುವಂತಹ ಬಟ್ಟೆ, ಫ್ಯಾಷನ್ ಸ್ವೆಟರ್‌ಗಳು, ಮಫ್ಲರ್‌ಗಳು, ಗ್ಲೌಸ್, ಬ್ಲೇಜರ್‌ಗಳನ್ನು ಸಹ ಉಡುಗೊರೆಯಾಗಿ ನೀಡಬಹುದು. ಬ್ಯಾಗ್‌ಗಳು, ಬೆಲ್ಟ್‌ಗಳು, ಆಭರಣಗಳು ಮತ್ತು ಶೂಗಳನ್ನು ಸಹ ಉಡುಗೊರೆಯಾಗಿ ನೀಡಬಹುದು.

ಹೆಂಗಳೆಯರಿಗೆ: ಹೆಣ್ಣುಮಕ್ಕಳಿಗೆ ಆಭರಣಗಳೆಂದರೆ ಪಂಚಪ್ರಾಣ. ಹೀಗಾಗಿ ನೆಕ್ಲೇಸ್, ವಜ್ರದ ಕಿವಿಯೋಲೆ ಅಥವಾ ಮೂಗುಬೊಟ್ಟು, ಬಳೆ, ಚಿನ್ನದ ಕಿವಿಯೋಲೆ, ಉಂಗುರ ಇಂತಹವುಗಳನ್ನು ಕೊಡಬಹುದು. ಕಡಿಮೆ ಬಜೆಟ್ ಎಂದಾದರೆ ಸೀರೆ ಅಥವಾ ಚೂಡಿದಾರ್, ಪರ್ಸ್, ಬ್ಯಾಗ್, ಚಪ್ಪಲಿ, ಕನ್ನಡಕ, ಮೇಕಪ್ ಕಿಟ್ ಅನ್ನು ಕೂಡ ಉಡುಗೊರೆಯಾಗಿ ನೀಡಬಹುದು. ಅಲ್ಲದೆ ಚಳಿಗಾಲದಲ್ಲಿ ಹಾಕುವಂತಹ ಉಡುಪು, ಶೂಗಳನ್ನು ಉಡುಗೊರೆಯಾಗಿ ನೀಡಬಹುದು.

ಮಕ್ಕಳಿಗಾಗಿ ಉಡುಗೊರೆಗಳು: ಮಕ್ಕಳಿಗೆ ಶೈಕ್ಷಣಿಕ ಆಟಿಕೆಗಳು, ರಿಮೋಟ್ ಕಂಟ್ರೋಲ್ ಕಾರುಗಳು, ಗೊಂಬೆ, ಬೈಕ್‌ ಜೀಪ್, ಕೇಕ್, ಚಾಕೋಲೆಟ್ ಇವೆಲ್ಲಾ ಮಕ್ಕಳಿಗೆ ಇಷ್ಟವಾಗುತ್ತದೆ. ಹೀಗಾಗಿ ಇಂತಹವುಗಳನ್ನು ಉಡುಗೊರೆಯಾಗಿ ಕೊಡಬಹುದು.

ಡಿಜಿಟಲ್ ಕ್ಯಾಮೆರಾ: ಡಿಜಿಟಲ್ ಕ್ಯಾಮೆರಾಗಳನ್ನು ಉಡುಗೊರೆಯಾಗಿ ನೀಡಬಹುದು. ಇದು ನಿಮ್ಮ ಉಡುಗೊರೆದಾರರ ಮೆಚ್ಚಿನ ನೆನಪುಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ.

ಸಸ್ಯಗಳು: ಸಹೋದ್ಯೋಗಿಗಳಿಗೆ ಕ್ರಿಸ್ಮಸ್ ಉಡುಗೊರೆಯಾಗಿ ಸಸ್ಯಗಳನ್ನು ಉಡುಗೊರೆಯಾಗಿ ನೀಡಬಹುದು. ಸಸ್ಯಗಳನ್ನು ಮನೆಯಲ್ಲಿಡುವುದರಿಂದ ಪರಿಸರದ ಕಾಳಜಿಗೂ ಕಾರಣವಾಗುತ್ತದೆ.

ಪವರ್ ಬ್ಯಾಂಕ್‌ಗಳು: ಈಗ ಫೋನ್ ಅನಿವಾರ್ಯವಾಗಿಬಿಟ್ಟಿದೆ. ಆದರೆ, ಬಹುತೇಕರು ಪವರ್ ಬ್ಯಾಂಕ್‍ಗಳನ್ನು ಹೊಂದಿರುವುದಿಲ್ಲ. ಹೀಗಾಗಿ ಪವರ್ ಬ್ಯಾಂಕ್‌ಗಳನ್ನು ಉಡುಗೊರೆಯಾಗಿಯೂ ನೀಡಬಹುದು. ಪ್ರಯಾಣದ ಸಮಯದಲ್ಲಿ ಇವುಗಳ ಅವಶ್ಯಕತೆ ಹೆಚ್ಚಿರುತ್ತದೆ.

Whats_app_banner