BA: ಕಲಾ ಪದವಿ ಒಂದೇ ಸಾಕೇ; ಬಿಎ ವಿದ್ಯಾರ್ಥಿಗಳಲ್ಲಿ ಈ ಕೌಶಲ್ಯಗಳಿದ್ದರೆ ಭವಿಷ್ಯದಲ್ಲಿ ಯಶಸ್ಸು ಖಚಿತ-education news skills bachelor of arts students should have for their career success ba scope jobs jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Ba: ಕಲಾ ಪದವಿ ಒಂದೇ ಸಾಕೇ; ಬಿಎ ವಿದ್ಯಾರ್ಥಿಗಳಲ್ಲಿ ಈ ಕೌಶಲ್ಯಗಳಿದ್ದರೆ ಭವಿಷ್ಯದಲ್ಲಿ ಯಶಸ್ಸು ಖಚಿತ

BA: ಕಲಾ ಪದವಿ ಒಂದೇ ಸಾಕೇ; ಬಿಎ ವಿದ್ಯಾರ್ಥಿಗಳಲ್ಲಿ ಈ ಕೌಶಲ್ಯಗಳಿದ್ದರೆ ಭವಿಷ್ಯದಲ್ಲಿ ಯಶಸ್ಸು ಖಚಿತ

Bachelor of Arts: ಸ್ಪರ್ಧಾತ್ಮಕ ಯುಗದಲ್ಲಿ ಕಲಿಕೆ ನಿರಂತರ. ಯಾವುದೋ ಒಂದು ಪದವಿ ಪಡೆದ ಮಾತ್ರಕ್ಕೆ ಉದ್ಯೋಗ ಪಡೆಯಲು ಸಾಧ್ಯವಿಲ್ಲ. ಒಂದಷ್ಟು ಕೌಶಲ್ಯ, ಸೃಜನಶೀಲ ಚಿಂತನೆ ಅಗತ್ಯ. ಹೆಚ್ಚಿನ ವಿದ್ಯಾರ್ಥಿಗಳ ಆಯ್ಕೆಯಾಗಿರುವ ಕಲಾ ವಿಭಾಗದಲ್ಲಿ ವಿದ್ಯಾರ್ಥಿಗಳು ಒಂದಷ್ಟು ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ತುಂಬಾ ಮುಖ್ಯ.

Bachelor of Arts: ಬಿಎ ವಿದ್ಯಾರ್ಥಿಗಳಲ್ಲಿ ಈ ಕೌಶಲ್ಯಗಳಿದ್ದರೆ ಭವಿಷ್ಯದಲ್ಲಿ ಯಶಸ್ಸು ಖಚಿತ
Bachelor of Arts: ಬಿಎ ವಿದ್ಯಾರ್ಥಿಗಳಲ್ಲಿ ಈ ಕೌಶಲ್ಯಗಳಿದ್ದರೆ ಭವಿಷ್ಯದಲ್ಲಿ ಯಶಸ್ಸು ಖಚಿತ (HT File)

ಬ್ಯಾಚುಲರ್ ಆಫ್ ಆರ್ಟ್ಸ್ (BA -Bachelor of Arts) ಅಥವಾ ಕಲಾ ವಿಭಾಗದಲ್ಲಿನ ಪದವಿಯು ಉತ್ತಮ ವ್ಯಾಪ್ತಿ ಹೊಂದಿರುವ ಕ್ಷೇತ್ರ. ಕಲೆ, ಸಾಹಿತ್ಯ, ಬರವಣಿಗೆ, ಮಾತಿನ ಚಾಕಚಕ್ಯತೆ, ವಿಶ್ಲೇಷಣಾ ಸಾಮರ್ಥ್ಯ, ನಿರ್ವಹಣೆ, ಟೀಚಿಂಗ್‌, ರಾಜಕೀಯ ಹೀಗೆ ಹಲವು ಕ್ಷೇತ್ರಗಳಲ್ಲಿ ಬೆಳೆಯಲು ಆಸಕ್ತಿ ಹೊಂದಿರುವವರು ಕಲಾ ವಿಭಾಗವನ್ನು ಆಯ್ಕೆ ಮಾಡುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಆಸಕ್ತಿ ಇರುವವರು, ಇತಿಹಾಸ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ ಅಧ್ಯಯನ ಆಸಕ್ತರು ಹಾಗೂ ವಿವಿಧ ಭಾಷೆಗಳ ಮೇಲೆ ಆಳವಾದ ಅಧ್ಯಯನ ಬಯಸುವವರು ಕೂಡಾ ಕಲಾ ಮಾಧ್ಯಮದಲ್ಲಿ ಪದವಿ ವ್ಯಾಸಂಗ ಮಾಡುತ್ತಾರೆ. ಸರ್ಕಾರಿ ಉದ್ಯೋಗ ಬಯಸುವವರ ಫೇವರೆಟ್‌ ಕೋರ್ಸ್‌ ಬಿಎ. ಇದರಲ್ಲಿ ವಿಷಯವಾರು ಅಧ್ಯಯನಕ್ಕೆ ಅವಕಾಶಗಳಿವೆ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಕೂಡಾ ಕಲಾ ವಿಭಾಗದಲ್ಲಿ ಡಿಗ್ರಿ ಮಾಡಬಹುದು.

ಪ್ರತಿ ವಿದ್ಯಾರ್ಥಿಯು ವಿದ್ಯಾಭ್ಯಾಸ ಮುಗಿಸಿ, ಒಂದೊಳ್ಳೆ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂದು ಬಯಸುತ್ತಾರೆ. ಆದರೆ ಎಲ್ಲಾ ಸಮಯದಲ್ಲಿ ಎಲ್ಲರಿಗೂ ಉದ್ಯೋಗ ಸಿಗುವುದಿಲ್ಲ. ತನ್ನ ಪದವಿಯೊಂದಿಗೆ ಆಯಾ ಉದ್ಯೋಗಕ್ಕೆ ಬೇಕಾದ ಸೂಕ್ತ ಕೌಶಲ್ಯಗಳಿದ್ದರೆ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭ. ಹಾಗಿದ್ದರೆ ಕಲಾ ವಿಭಾಗದಲ್ಲಿ ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಯಾವೆಲ್ಲಾ ಕೌಶಲ್ಯಗಳು ಇದ್ದರೆ ಉತ್ತಮ ಎಂಬುದನ್ನು ನೋಡೋಣ.

ಬ್ಯಾಚುಲರ್ ಆಫ್ ಆರ್ಟ್ಸ್ (BA) ವಿದ್ಯಾರ್ಥಿಗಳು ವಿವಿಧ ‌ಕ್ಷೇತ್ರಗಳಲ್ಲಿ ಭವಿಷ್ಯದ ಯಶಸ್ಸಿಗೆ ಬಹುಮುಖ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಅಂಥಹ ಪ್ರಮುಖ ಕೌಶಲ್ಯಗಳು ಹೀಗಿವೆ.

ಸಾಮಾನ್ಯ ಕೌಶಲ್ಯಗಳು

ಈ ಮೂಲಭೂತ ಕೌಶಲ್ಯಗಳು ಕಲಾ ವಿದ್ಯಾರ್ಥಿಗಳಿಗೆ ಅಗತ್ಯ. ಉದ್ಯೋಗ ಗಿಟ್ಟಿಸುವ ಉದ್ದೇಶವಲ್ಲದಿದ್ದರೂ, ಕಲಾ ಪದವಿಗೆ ಅನುಗುಣವಾಗಿ ಈ ಜ್ಞಾನ ಹಾಗೂ ಕೌಶಲ್ಯಗಳು ವಿದ್ಯಾರ್ಥಿಗಳಲ್ಲಿ ಇರಬೇಕಾಗುತ್ತದೆ.

  • ಪರಿಣಾಮಕಾರಿ ಸಂವಹನ ಕಲೆ
  • ಉತ್ತಮ, ಆಕರ್ಷಕ ಬರವಣಿಗೆ
  • ವಿಮರ್ಶಾತ್ಮಕ ಚಿಂತನೆ ಮತ್ತು ವಿಶ್ಲೇಷಣೆ
  • ವಿಷಯಗಳ ಕುರಿತು ಮಾಹಿತಿ
  • ಸಮಸ್ಯೆ ಪರಿಹರಿಸುವುವ ಕಲೆ
  • ಸೃಜನಶೀಲತೆ ಅಥವಾ ನಾವೀನ್ಯತೆ
  • ಸಮಯ ನಿರ್ವಹಣೆ ಮತ್ತು ಸಂಘಟನೆ
  • ತಂಡವಾಗಿ ಕೆಲಸ ಮಾಡುವ ಕಲೆ ಮತ್ತು ನಾಯಕತ್ವ
  • ವಾತಾವರಣಕ್ಕೆ ಹೊಂದಿಕೊಳ್ಳುವಿಕೆ ಮತ್ತು ನಮ್ಯತೆ
  • ನಾಯಕತ್ವ

ಹಾರ್ಡ್‌ ಸ್ಕಿಲ್ಸ್‌

  • ಬರವಣಿಗೆ ಮತ್ತು ಎಡಿಟಿಂಗ್‌
  • ಡೇಟಾ ವಿಶ್ಲೇಷಣೆ ಮತ್ತು ವ್ಯಾಖ್ಯಾನ
  • ಡಿಜಿಟಲ್ ಸಾಕ್ಷರತೆ. ಕಂಪ್ಯೂಟರ್‌, ಸಾಫ್ಟ್‌ವೇರ್, ಡಿಜಿಟಲ್‌ ಉಪಕರಣಗಳನ್ನು ಬಳಸುವ ಜ್ಞಾನ
  • ಅಗತ್ಯಕ್ಕೆ ತಕ್ಕಂತೆ ವಿವಿಧ ಭಾಷಾ ಪ್ರಾವೀಣ್ಯತೆ
  • ಇತಿಹಾಸ ಜ್ಞಾನ, ಸಾಂಸ್ಕೃತಿಕ ಸಾಮರ್ಥ್ಯ
  • ಮಾಧ್ಯಮ ಮತ್ತು ಡಿಜಿಟಲ್ ಮಾಧ್ಯಮ ಸಾಕ್ಷರತೆ
  • ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌

ಕೋರ್ಸ್‌ ಅಥವಾ ವೃತ್ತಿಆಧರಿತ ಕೌಶಲ್ಯಗಳು (ಮೇಜರ್‌ ವಿಷಯಕ್ಕೆ ಅವಲಂಬಿಸಿರುತ್ತದೆ)

  • ಭಾಷೆ ಮೇಜರ್‌: ಅನುವಾದ ಅಥವಾ ಭಾಷಾಂತರ, ವ್ಯಾಖ್ಯಾನಿಸುವ ಕಲೆ
  • ಇತಿಹಾಸ ಮೇಜರ್: ಆರ್ಕೈವಲ್ ಸಂಶೋಧನೆ, ಐತಿಹಾಸಿಕ ಸಂರಕ್ಷಣೆ
  • ಫಿಲಾಸಫಿ ಮೇಜರ್‌: ತಾರ್ಕಿಕ ಉತ್ತರ, ನೀತಿಶಾಸ್ತ್ರ
  • ಇಂಗ್ಲಿಷ್ ಮೇಜರ್‌: ಸೃಜನಶೀಲ ಬರವಣಿಗೆ, ಪಬ್ಲಿಶಿಂಗ್
  • ಸಂವಹನ ಮೇಜರ್‌: ಸಾರ್ವಜನಿಕ ಭಾಷಣ ಕಲೆ, ಬ್ರಾಡ್‌ಕಾಸ್ಟಿಂಗ್‌, ಬರವಣಿಗೆ

ಈ ಹೆಚ್ಚುವರಿ ಕೌಶಲ್ಯಗಳಿದ್ದರೆ ಉತ್ತಮ

  • ಗೂಗಲ್‌ ವರ್ಕ್‌ಸ್ಪೇಸ್‌ ಜ್ಞಾನ
  • ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್
  • ಡಿಜಿಟಲ್ ಮಾರ್ಕೆಟಿಂಗ್
  • ಗ್ರಾಫಿಕ್ ಡಿಸೈನಿಂಗ್‌ ಅಥವಾ ವಿನ್ಯಾಸ
  • ಡೇಟಾ ಸೈನ್ಸ್
  • ‌ವಾಣಿಜ್ಯೋದ್ಯಮ

ಉದ್ಯೋಗಕ್ಕೂ ಮುನ್ನ ಇವಿಷ್ಟು ಇದ್ದರೆ ಕೆಲಸ ಸಿಗುವುದು ಸುಲಭ

  • ಇಂಟರ್ನ್‌ಶಿಪ್‌ಗಳನ್ನು ಮಾಡಿರುವುದು
  • ಸ್ವಯಂಸೇವಕರಾಗಿ ಕೆಲಸ ಮಾಡುವುದು
  • ಸಂಶೋಧನೆ ವರದಿ ಸಿದ್ಧಪಡಿಸುವುದು
  • ವಿವಿಧ ಅಧ್ಯಯನ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು
  • ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯ ಭಾಗಿ

mysore-dasara_Entry_Point