ಭಾರತೀಯ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ವಿದೇಶವನ್ನೇ ಆಯ್ಕೆ ಮಾಡಿಕೊಳ್ಳುವುದೇಕೆ? ಇಲ್ಲಿವೆ ಟಾಪ್ 10 ಕಾರಣಗಳು
ಕನ್ನಡ ಸುದ್ದಿ  /  ಜೀವನಶೈಲಿ  /  ಭಾರತೀಯ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ವಿದೇಶವನ್ನೇ ಆಯ್ಕೆ ಮಾಡಿಕೊಳ್ಳುವುದೇಕೆ? ಇಲ್ಲಿವೆ ಟಾಪ್ 10 ಕಾರಣಗಳು

ಭಾರತೀಯ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ವಿದೇಶವನ್ನೇ ಆಯ್ಕೆ ಮಾಡಿಕೊಳ್ಳುವುದೇಕೆ? ಇಲ್ಲಿವೆ ಟಾಪ್ 10 ಕಾರಣಗಳು

Education news: ಭಾರತದಲ್ಲಿ ಉತ್ತಮ ಶಿಕ್ಷಣದ ಸಿಗುತ್ತಿದ್ದರೂ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ಹೋಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾದರೆ ಅದಕ್ಕೆ ನಿಖರವಾದ ಕಾರಣ ಏನಿರಬಹುದು? ಬಹುತೇಕ ಫಾರಿನ್ ಕಡೆಯೇ ಹೆಚ್ಚು ಒಲವು ತೋರುತ್ತಿರುವುದೇಕೆ? ಇಲ್ಲಿದೆ ವಿವರ.

ಭಾರತೀಯ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ವಿದೇಶವನ್ನೇ ಆಯ್ಕೆ ಮಾಡಿಕೊಳ್ಳುವುದೇಕೆ? ಇಲ್ಲಿವೆ ಟಾಪ್ 10 ಕಾರಣಗಳು
ಭಾರತೀಯ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ವಿದೇಶವನ್ನೇ ಆಯ್ಕೆ ಮಾಡಿಕೊಳ್ಳುವುದೇಕೆ? ಇಲ್ಲಿವೆ ಟಾಪ್ 10 ಕಾರಣಗಳು

Education: ವೇಗವಾಗಿ ಬೆಳೆಯುತ್ತಿರುವ ಪ್ರಪಂಚದ ದೇಶಗಳಲ್ಲಿ ಭಾರತವೂ ಒಂದು. ಜನಸಂಖ್ಯೆ, ಉದ್ಯೋಗ, ತಂತ್ರಜ್ಞಾನ, ವಿಜ್ಞಾನ, ಶಿಕ್ಷಣ, ಗ್ರಾಮೀಣ, ನಗರ.. ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನದೇ ಆದ ರೀತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಆದರೆ ಅನೇಕ ಭಾರತೀಯರು ಅವರ ಶಿಕ್ಷಣ ಮತ್ತು ಅರ್ಹತೆಗೆ ಅನುಗುಣವಾಗಿ ಉತ್ತಮ ವೇತನದ ಉದ್ಯೋಗ ಹುಡುಕುವುದು ಕಷ್ಟಕರವಾಗಿದೆ. ಆದರೆ ವಿದೇಶದಲ್ಲಿ ಅಧ್ಯಯನ ನಡೆಸಿದ ವಿದ್ಯಾರ್ಥಿಗಳಿಗೆ ನಿರೀಕ್ಷಿಸಿದ್ದಕ್ಕಿಂತ ಉತ್ತಮ ವೇತನ ಮತ್ತು ಕೆಲಸ ಸಿಗುತ್ತಿರುವುದು ಅಚ್ಚರಿ ಮೂಡಿಸಿದೆ.

ಇದೇ ಕಾರಣಕ್ಕೆ ಭಾರತದ ಬಹುತೇಕ ವಿದ್ಯಾರ್ಥಿಗಳು ಅಧ್ಯಯನ ಮಾಡಲು ವಿದೇಶವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹಾಗಂತ ಭಾರತದಲ್ಲಿ ಉತ್ತಮ ಶಿಕ್ಷಣ ಸಿಗುತ್ತಿಲ್ಲ ಎಂದು ಹೇಳಲು ಸಾಧ್ಯ ಇಲ್ಲ. ಶಿಕ್ಷಣದ ಕೊರತೆ, ಸುರಕ್ಷತಾ ಕಾಳಜಿ, ಅಸಹಿಷ್ಣುತೆ ಮತ್ತು ತಾರತಮ್ಯದ ಇಲ್ಲಿ ಕಾಡುತ್ತಿರುವುದೂ ವಿದೇಶಿ ಶಿಕ್ಷಣದ ಆಯ್ಕೆಗೆ ಕಾರಣಗಳಲ್ಲಿ ಒಂದಾಗಿದೆ. ನಮ್ಮಲ್ಲಿ ಅತ್ಯುತ್ತಮ ಶಿಕ್ಷಣವೇ ದೊರೆಯುತ್ತಿದೆ. ಆದರೆ, ಶಿಕ್ಷಣ ಕಲಿಯಲು ಇದು ಅವರ ಆಯ್ಕೆಯೂ ಆಗಿರಬಹುದು. ಹಾಗಿದ್ದರೆ, ಭಾರತದಲ್ಲಿ ಉತ್ತಮ ಶಿಕ್ಷಣದ ಸಿಕ್ಕರೂ ವಿದೇಶಿ ಶಿಕ್ಷಣ ಪಡೆಯಲು ಪ್ರಯಾಣಿಸುತ್ತಿರುವುದೇಕೆ? ಇಲ್ಲಿದೆ ವಿವರ.

1. ಅಡ್ಮಿಷನ್ ಪ್ರಕ್ರಿಯೆ ಸುಲಭ

ವಿದೇಶದಲ್ಲಿ ಅಧ್ಯಯನಕ್ಕೆಂದು ಹೋಗುವ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯು ತುಂಬಾ ಸರಳವಾಗಿದೆ. ಯಾವುದೇ ಪ್ರವೇಶ ಪರೀಕ್ಷೆಗಳು ಅಥವಾ ಸಂದರ್ಶನ ಇರುವುದಿಲ್ಲ. ಆದರೆ ಅಗತ್ಯ ದಾಖಲೆ ಸಲ್ಲಿಕೆ ಅನಿವಾರ್ಯ. ಭಾರತದಲ್ಲೂ ಅಗತ್ಯ ದಾಖಲೆ ಸಲ್ಲಿಸಲೇಬೇಕು. ಇಲ್ಲಿ ಕಡಿಮೆ ಬೋಧನಾ ಶುಲ್ಕವೂ ಇರುತ್ತದೆ. ಇದೇ ಕಾರಣಕ್ಕೆ ಭಾರತದ ಬಹುತೇಕ ಮಂದಿ ಫಾರಿನ್ ಎಜುಕೇಷನ್​ಗೆ ಒತ್ತು ನೀಡುತ್ತಾರೆ.

2. ಹೆಚ್ಚಿನ ಸಂಶೋಧನೆಗೆ ಪರಿಗಣಿಸಲು ಬಹು ಆಯ್ಕೆಗಳು

ಅತ್ಯುತ್ತಮ ಸಂಶೋಧನಾ ಅವಕಾಶಗಳ ಲಾಭ ಪಡೆಯಲೆಂದೇ ವಿದೇಶದಲ್ಲಿ ಅಧ್ಯಯನ ಮಾಡಲು ಆಯ್ಕೆ ಮಾಡಿಕೊಳ್ಳುತ್ತಾರೆ. ಸಂಶೋಧನೆಗೆ ಅತ್ಯಾಧುನಿಕ ಉಪಕರಣಗಳ ಲಭ್ಯತೆಯೂ ಇದೆ. ಸಂಶೋಧನೆಗೆಂದೇ ವಿವಿಧ ಆಯ್ಕೆಗಳು ಲಭ್ಯವಿರುತ್ತದೆ. ಆದರೆ ಭಾರತದಲ್ಲಿ ಸೀಮಿತವಾಗಿವೆ. ಬೇರೆ ಬೇರೆ ದೇಶಗಳ ವಿದ್ಯಾರ್ಥಿಗಳ ಜೊತೆ ಬೆರೆತು ಅವರ ಕೌಶಲ್ಯ, ಜ್ಞಾನ, ದೃಷ್ಟಿಕೋನ ಕಲಿಯಬಹುದು.

3. ಉನ್ನತ ದರ್ಜೆಯ ಶಿಕ್ಷಣ ವ್ಯವಸ್ಥೆ

ಭಾರತದ ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯನ ಮಾಡಲು ಶಿಕ್ಷಣದ ಗುಣಮಟ್ಟ ಮತ್ತು ಕೆಲಸದ ಅವಕಾಶಗಳು ಒಂದು ಪ್ರಮುಖ ಅಂಶ. ಉನ್ನತ ದರ್ಜೆಯ ಶಿಕ್ಷಣ ವ್ಯವಸ್ಥೆ ಇರುವ ಕಾರಣ ಅವರು ಹೆಚ್ಚು ಪರಿಣಾಮಕಾರಿಯಾಗಿ ಕಲಿಯಬಹುದು. ಆಳವಾದ ತಿಳುವಳಿಕೆಗೆ ಅವಕಾಶ ಸಿಗುತ್ತದೆ. ಹೆಚ್ಚಿನ ಸಂಪನ್ಮೂಲ, ಸೌಲಭ್ಯಗಳು ಸಿಗುತ್ತವೆ. , ಇದು ಕಲಿಕೆಯಲ್ಲಿ ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ.

4. ಜಾಗತಿಕ ಮನಸ್ಥಿತಿಯ ಅಭಿವೃದ್ಧಿ

ವಿದೇಶದಲ್ಲಿ ಅಧ್ಯಯನ ಮಾಡುವವರ ಆರ್ಥಿಕತೆಯ ಜಾಗತೀಕರಣ ಮತ್ತು ಜಾಗತಿಕ ಮನಸ್ಥಿತಿ ಅಭಿವೃದ್ಧಿಯಾಗುತ್ತದೆ. ಭವಿಷ್ಯದ ವೃತ್ತಿ ಜೀವನದಲ್ಲಿ ಜಾಗತಿಕ ದೃಷ್ಟಿಕೋನವನ್ನು ಹೊಂದಲು ನೆರವಾಗುತ್ತದೆ. ವಿದೇಶಿಗರ ಹೊಸ ಸಂಸ್ಕೃತಿಯನ್ನು ಕಲಿಯುತ್ತಾರೆ. ಆರ್ಥಿಕ ಬೆಳವಣಿಗೆ, ದೇಶದ ಬೆಳವಣಗೆಯ ಕುರಿತು ಕೌಶಲಗಳನ್ನು ಅರಿಯುತ್ತಾರೆ. ವಿಶ್ವದ ನಾಗರಿಕನಾಗಿ ತಿಳುವಳಿಕೆ ಹೆಚ್ಚಾಗುತ್ತದೆ. ಇದು ವಿಶ್ವದ ಮಟ್ಟದ ಕೆಲಸಗಳನ್ನು ಪಡೆಯಲು ನೆರವಾಗುತ್ತದೆ.

5. ಉತ್ತಮ ಜೀವನ ಅನುಭವ

ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯನದ ಆಯ್ಕೆಗೆ ಪ್ರಮುಖ ಕಾರಣ ಉತ್ತಮ ಜೀವನ ಅನುಭವ ಪಡೆಯಲು. ಹೊಸ ಆಲೋಚನೆಗಳಿಗೆ ದಾರಿ ಮಾಡಿಕೊಡುತ್ತದೆ. ವಿಶ್ವ ದೃಷ್ಟಿಕೋನಕ್ಕೆ ಕಾರಣವಾಗಬಹುದು. ಪ್ರತಿ ವಿದ್ಯಾರ್ಥಿಯೂ ಅನನ್ಯ ಅವಕಾಶಗಳ ಲಾಭ ಪಡೆಯಲು ಕೆಲವು ವಿದ್ಯಾರ್ಥಿಗಳು ವಿದೇಶವನ್ನು ಆಯ್ಕೆ ಮಾಡುತ್ತಾರೆ. ಭಾರತ ಮತ್ತು ವಿದೇಶಿ ಜೀವನ ಹೇಗೆ ಎಂಬುದನ್ನು ಇದು ಕಲಿಸುತ್ತದೆ.

6. ವಿವಿಧ ದೇಶಗಳ ಜನರ ಭೇಟಿ

ವಿವಿಧ ದೇಶಗಳ ಜನರನ್ನು ಭೇಟಿ ಮಾಡುವ ಅವಕಾಶವು ಅತ್ಯಂತ ಜನಪ್ರಿಯ ಕಾರಣಗಳಲ್ಲಿ ಒಂದು ಎಂದರೆ ತಪ್ಪಾಗಲ್ಲ. ಹೊಸ ಸ್ನೇಹಿತರ ಮೂಲಕ ಆಯಾ ದೇಶದ ಬಗ್ಗೆ ತಿಳಿಯಬಹುದು. ಆ ದೇಶದ ಜನರ ಪರಿಚಯವಾಗುತ್ತದೆ. ಹೊಸ ಹೊಸ ವಿಷಯಗಳನ್ನು ಕಲಿಯಲು ಇದು ನೆರವಾಗುತ್ತದೆ. ವಿಭಿನ್ನ ಸಂಸ್ಕೃತಿ ಕಲಿಯಲು ಇದೊಳ್ಳೆ ಮಾರ್ಗ. ವಿದೇಶಿ ಅಧ್ಯಯನದಿಂದ ಸಾಕಷ್ಟು ಅನುಭವ ಪಡೆಯಬಹುದು.

7. ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆ

ವಿದೇಶದಲ್ಲಿ ಅಧ್ಯಯನ ಮಾಡಿದರೆ ವಿಫುಲ ಅವಕಾಶಗಳು ನಮ್ಮ ಮುಂದೆ ಬರಲಿವೆ. ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಬೆಳವಣಿಗೆ ಕಾಣುತ್ತಾರೆ. ದೊಡ್ಡ ದೊಡ್ಡ ಕೆಲಸಗಳು ನಮಗೆ ಸಿಗಲಿವೆ. ಅತ್ಯುತ್ತಮ ವೇತನದೊಂದಿಗೆ ದೊಡ್ಡ ದೊಡ್ಡ ಕಂಪನಿಗಳು ಉದ್ಯೋಗದ ಆಫರ್​ ನೀಡಲಿವೆ. ಅತ್ಯುತ್ತಮ ಕೌಶಲಗಳನ್ನು ಪ್ರದರ್ಶಿಸಿದರೆ ದೇಶ-ವಿದೇಶಗಳ ಕಂಪನಿಗಳು ಕೇಳಿದಷ್ಟು ಹಣ ಕೊಡಲು ಮುಂದೆ ಬರುತ್ತವೆ.

8. ಉದ್ಯೋಗದ ನಿರೀಕ್ಷೆ ಹೆಚ್ಚಿಸಿಕೊಳ್ಳಿ

ಜಗತ್ತು ಹೆಚ್ಚು ಜಾಗತೀಕರಣಗೊಳ್ಳುತ್ತಿದ್ದಂತೆ, ಉದ್ಯೋಗದಾತರು ಅಂತಾರಾಷ್ಟ್ರೀಯ ಅನುಭವ ಹೊಂದಿರುವ ಉದ್ಯೋಗಿಗಳ ಆಯ್ಕೆಗೆ ಹೆಚ್ಚಿನ ಹುಡುಕಾಟ ನಡೆಸುತ್ತಿದ್ದಾರೆ. ವಿದೇಶದಲ್ಲಿ ಅಧ್ಯಯನ ಮಾಡುವ ಮೂಲಕ, ಕ್ಯಾಂಪಸ್ ಮೂಲಕವೇ ನೇರವಾಗಿ ಉದ್ಯೋಗ ಪಡೆಯಲಿದ್ದೀರಿ. ಇದರೊಂದಿಗೆ ಉದ್ಯೋಗದ ನಿರೀಕ್ಷೆಯನ್ನು ಹೆಚ್ಚಳ ಮಾಡಿಕೊಳ್ಳಲಿದ್ದಾರೆ. ಪ್ರಬುದ್ದತೆಯನ್ನೂ ಹೆಚ್ಚಿಸುತ್ತದೆ.

9. ಭಾಷಾ ಕೌಶಲ್ಯ ಹೆಚ್ಚಳ

ವಿದೇಶದಲ್ಲಿ ಅಧ್ಯಯನ ಮಾಡುವ ದೊಡ್ಡ ಪ್ರಯೋಜನವೆಂದರೆ ನಿಮ್ಮ ಭಾಷಾ ಕೌಶಲ್ಯಗಳನ್ನು ಕಲಿಯಲು ಅಥವಾ ಸುಧಾರಿಸಲು ಅವಕಾಶ. ಇಂಗ್ಲಿಷ್ ಮಾತನಾಡುವ ದೇಶದಲ್ಲಿ ಶಾಲೆಗೆ ಹಾಜರಾಗಲು ಯೋಜಿಸುತ್ತಿದ್ದರೆ, ಭಾಷೆಯಲ್ಲಿ ನಿಮ್ಮ ಪ್ರಾವೀಣ್ಯತೆ ಸುಧಾರಿಸಲು ಇದು ಉತ್ತಮ ಮಾರ್ಗವಾಗಿದೆ. ಅಲ್ಲದೆ, ಬೇರೆ ಬೇರೆ ದೇಶದ ವಿದ್ಯಾರ್ಥಿಗಳ ಭಾಷೆಯನ್ನೂ ಕಲಿಯಲು ನೆರವಾಗುತ್ತದೆ.

10. ತಮ್ಮದೇ ಆದ ನಿಯಮಗಳ ಮೇಲೆ ಜೀವನ ನಡೆಸುವುದು

ಹೌದು, ಎಷ್ಟೇ ವಿದ್ಯಾಭ್ಯಾಸ, ವೇತನ ಪಡೆದರೂ ಅದನ್ನು ನಿಭಾಯಿಸುವ ಶಕ್ತಿ ನಮ್ಮ ಕೈಯಲ್ಲೇ ಇರುತ್ತದೆ. ನಮ್ಮ ಜೀವನದ ಚೌಕಟ್ಟನ್ನು ಅತ್ಯುತ್ತಮವಾಗಿ ರೂಪಿಸಲು ಇದು ನೆರವಾಗುತ್ತದೆ. ವಿದೇಶಿ ವಿದ್ಯಾಭ್ಯಾಸ ನಡೆಸಿದ ಬಹುತೇಕ ಮಂದಿ ತಮ್ಮದೇ ಆದ ನಿಯಮಗಳ ಮೇಲೆ ಜೀವನ ನಡೆಸುತ್ತಾರೆ. ಇದು ನಿಜವಾಗಲೂ ಅದ್ಭುತವಾಗಿರುತ್ತದೆ. ಕುಟುಂಬ, ಸ್ನೇಹಿತರು ಸೇರಿದಂತೆ ಯಾರ ನಿರ್ಧಾರಕ್ಕೂ ಮಣೆ ಹಾಕದೆ ತಮ್ಮ ಸ್ವಂತ ನಿಯಮಗಳ ಮೇಲೆ ಬದುಕುತ್ತಾರೆ.

Whats_app_banner