ಕನ್ನಡ ಸುದ್ದಿ  /  ಜೀವನಶೈಲಿ  /  Aloo 65 Recipe: ಚಿಕನ್‌ 65 ಅಲ್ಲ ಇದು ಆಲೂ 65, ರುಚಿ ಒಮ್ಮೆ ನೋಡಿದ್ರೆ ಮಕ್ಕಳು ಕೂಡ ಮತ್ತೆ ಬೇಕು ಅಂತಾರೆ

Aloo 65 Recipe: ಚಿಕನ್‌ 65 ಅಲ್ಲ ಇದು ಆಲೂ 65, ರುಚಿ ಒಮ್ಮೆ ನೋಡಿದ್ರೆ ಮಕ್ಕಳು ಕೂಡ ಮತ್ತೆ ಬೇಕು ಅಂತಾರೆ

ಮಕ್ಕಳಿಗೆ ಶಾಲೆ ಶುರುವಾಗಿದೆ. ಶಾಲೆ ಮುಗಿಸಿ ಸಂಜೆ ಮನೆಗೆ ಬರುವ ಮಕ್ಕಳು ಸ್ನ್ಯಾಕ್ಸ್‌ಗಾಗಿ ಪೀಡಿಸುತ್ತಾರೆ. ಅದರಲ್ಲೂ ಈಗ ಮಳೆಗಾಲ ಬಿಸಿಬಿಸಿಯಾಗಿ, ಗರಿಗರಿಯಾದ ತಿಂಡಿ ತಿನ್ನಬೇಕು ಅನ್ನಿಸೋದು ಸಹಜ. ನೀವು ನಿಮ್ಮ ಮನೆಯಲ್ಲೇ ಸ್ಪೆಷಲ್‌ ಆಗಿ ಏನಾದ್ರೂ ತಿಂಡಿ ಮಾಡ್ಬೇಕು ಅಂತಿದ್ರೆ ಆಲೂ 65 ಮಾಡಿ. ಇದು ಮನೆಯವರಿಗೆಲ್ಲಾ ಇಷ್ಟ ಆಗೋದು ಪಕ್ಕಾ.

ಚಿಕನ್‌ 65 ಅಲ್ಲ ಇದು ಆಲೂ 65, ರುಚಿ ಒಮ್ಮೆ ನೋಡಿದ್ರೆ ಮಕ್ಕಳು ಕೂಡ ಮತ್ತೆ ಬೇಕು ಅಂತಾರೆ
ಚಿಕನ್‌ 65 ಅಲ್ಲ ಇದು ಆಲೂ 65, ರುಚಿ ಒಮ್ಮೆ ನೋಡಿದ್ರೆ ಮಕ್ಕಳು ಕೂಡ ಮತ್ತೆ ಬೇಕು ಅಂತಾರೆ

ಚಿಕನ್‌ 65, ಈ ಹೆಸರು ಕೇಳಿದ್ರೆ ನಾನ್ ವೆಜ್‌ ಪ್ರಿಯರ ಬಾಯಲ್ಲಿ ನೀರು ಬರೋದು ಖಂಡಿತ. ಭಿನ್ನ ರುಚಿಯ ಚಿಕನ್‌ 65 ಕೊಟ್ಟಷ್ಟು ತಿನ್ನಬೇಕು ಅನ್ನಿಸುತ್ತೆ, ಇದೇ ರುಚಿಯ ವೆಜ್‌ ಖಾದ್ಯ ಸವಿಬೇಕು ಅಂದ್ರೆ ನೀವು ಆಲೂ 65 ಮಾಡಬಹುದು. ಆಲೂಗೆಡ್ಡೆ ಸಖತ್‌ ಟೇಸ್ಟಿ, ಇದರಿಂದ ತಯಾರಿಸಿದ ಖಾದ್ಯಗಳು ರುಚಿಯಲ್ಲಿ ಕಡಿಮೆ ಏನಿಲ್ಲ. ಆಲೂಗೆಡ್ಡೆಯಿಂದ ಮಾಡಿದ ತಿಂಡಿಗಳು ಮಕ್ಕಳಿಗೆ ಹೆಚ್ಚು ಇಷ್ಟವಾಗುತ್ತದೆ. ಆಲೂಗೆಡ್ಡೆಯಿಂದ ತಯಾರಿಸಿದ ರೆಸಿಪಿಗಳು ಗರಿಗರಿಯಾಗಿ ಸಖತ್‌ ಟೇಸ್ಟಿ ಆಗಿರುತ್ತವೆ. ಇಲ್ಲಿ ನಾವು ಆಲೂ 65 ಮಾಡೋದು ಹೇಗೆ ಅಂತ ತೋರಿಸಿದ್ದೇವೆ. ಸುಲಭವಾಗಿ ಮಾಡಬಹುದಾದ ಈ ರೆಸಿಪಿ ಸಂಜೆಯ ಸ್ನ್ಯಾಕ್ಸ್‌ಗೆ ಹೇಳಿ ಮಾಡಿಸಿದ್ದು.

ಆಲೂ 65 ರೆಸಿಪಿಗೆ ಬೇಕಾಗುವ ಸಾಮಗ್ರಿಗಳು

ಆಲೂಗೆಡ್ಡೆ - ಅರ್ಧ ಕೆಜಿ, ಮೈದಾ - ಎರಡು ಚಮಚ, ಅಕ್ಕಿ ಹಿಟ್ಟು - ಎರಡು ಚಮಚ, ಜೋಳದ ಹಿಟ್ಟು - ಎರಡು ಚಮಚ, ಉಪ್ಪು - ರುಚಿಗೆ, ಕೊತ್ತಂಬರಿ ಪುಡಿ - ಒಂದು ಚಮಚ, ಅರಿಶಿನ - ಅರ್ಧ ಚಮಚ, ಜೀರಿಗೆ ಪುಡಿ - ಅರ್ಧ ಚಮಚ, ಎಣ್ಣೆ - ಸಾಕಷ್ಟು, ಬೆಳ್ಳುಳ್ಳಿ ಎಸಳು - ನಾಲ್ಕು, ಕಾಳುಮೆಣಸು - ಎರಡು, ಹಸಿಮೆಣಸು- ಮೂರು, ಕರಿಬೇವು - 2ಎಸಳು, ಮೊಸರು - ಅರ್ಧ ಕಪ್, ಕೊತ್ತಂಬರಿ ಪುಡಿ - ಎರಡು ಚಮಚ, ಕೆಂಪು ಫುಡ್‌ ಕಲರ್‌ - ಚಿಟಿಕೆ

ಟ್ರೆಂಡಿಂಗ್​ ಸುದ್ದಿ

ಆಲೂ 65 ತಯಾರಿಸುವ ವಿಧಾನ

ಆಲೂಗೆಡ್ಡೆಯನ್ನ ಚೆನ್ನಾಗಿ ತೊಳೆದು ಬೇಯಲು ಇಡಿ. ಬೇಯುವಾಗ ಚಿಟಿಕೆ ಉಪ್ಪು ಸೇರಿಸಿ. ಆದರೆ ಅದನ್ನು ಸಂಪೂರ್ಣವಾಗಿ ಬೇಯಿಸಲು ಬಿಡಬೇಡಿ ಮತ್ತು ಶೇ 70 ಬೆಂದಾಗ ಒಲೆ ಆಫ್ ಮಾಡಿ. ಆಲೂಗೆಡ್ಡೆ ತಣ್ಣಗಾದ ಮೇಲೆ ಸಿಪ್ಪೆ ತೆಗೆಯಿರಿ. ಅವುಗಳನ್ನು ಮಧ್ಯಮ ಗಾತ್ರದಲ್ಲಿ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ. ಒಂದು ಬೌಲ್‌ಗೆ ಆಲೂಗಡ್ಡೆ ತುಂಡುಗಳನ್ನು ಹಾಕಿ ಅದಕ್ಕೆ ಮೈದಾ, ಅಕ್ಕಿಹಿಟ್ಟು, ಕಾರ್ನ್ ಫ್ಲೋರ್ ಹಾಕಿ ಮಿಕ್ಸ್ ಮಾಡಿ. ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು, ಧನಿಯಾ ಪುಡಿ, ಜೀರಿಗೆ ಪುಡಿ ಮತ್ತು ಮೆಣಸಿನ ಪುಡಿ ಸೇರಿಸಿ ಮಿಶ್ರಣ ಮಾಡಿ. ಅರಿಶಿನವನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ ಪಕ್ಕಕ್ಕೆ ಇರಿಸಿ. ಈಗ ಡೀಪ್ ಫ್ರೈ ಮಾಡಲು ಬೇಕಾಗುವ ಪಾತ್ರೆಯನ್ನು ಒಲೆಯ ಮೇಲಿರಿಸಿ ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಮೇಲೆ ಬೇಯಿಸಿಟ್ಟುಕೊಂಡ ಆಲೂಗೆಡ್ಡೆಯನ್ನು ಹುರಿದಿಕೊಳ್ಳಿ. ಅವು ಹೊಂಬಣ್ಣಕ್ಕೆ ತಿರುಗಿದಾಗ ಅದನ್ನು ಎಣ್ಣೆಯಿಂದ ತೆಗೆಯಿರಿ. ಈಗ ಇನ್ನೊಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಒಂದು ಚಮಚ ಎಣ್ಣೆಯನ್ನು ಹಾಕಿ. ಜಜ್ಜಿಕೊಂಡ ಬೆಳ್ಳುಳ್ಳಿ ಎಸಳು, ಕರಿಮೆಣಸು, ಹಸಿರು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಮತ್ತು ಫ್ರೈ ಮಾಡಿ. ಇದಕ್ಕೆ ಮೊಸರು ಸೇರಿಸಿ ಮಿಶ್ರಣ ಮಾಡಿ. ಒಂದು ಚಿಟಿಕೆ ಉಪ್ಪು ಕೂಡ ಸೇರಿಸಬೇಕು. ಅದರಲ್ಲಿ ಒಂದು ಚಿಟಿಕೆ ರೆಡ್‌ ಫುಡ್‌ ಕಲರ್‌ ಹಾಕಿ. ಇದಕ್ಕೆ ಹುರಿದ ಆಲೂಗಡ್ಡೆಯನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಮೇಲಿಂದ ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಅಷ್ಟೇ ಈಗ ನಿಮ್ಮ ಮುಂದೆ ಟೇಸ್ಟಿ ಆಲೂ 65 ರೆಡಿಯಾಗಿದೆ. ಇದು ತುಂಬಾ ರುಚಿಕರವಾಗಿರುತ್ತದೆ. ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ. ಆಲೂಗೆಡ್ಡೆ ಗ್ಯಾಸ್ಟಿಕ್‌ ಎನ್ನುವವರು ಚಿಟಿಕೆ ಇಂಗು ಸೇರಿಸಿಕೊಳ್ಳಿ.