ಕನ್ನಡ ಸುದ್ದಿ  /  ಜೀವನಶೈಲಿ  /  Masala Rice: ಪುಳಿಯೋಗರೆ, ಚಿತ್ರಾನ್ನ ತಿಂದು ಬೇಸರ ಆಗಿದ್ರೆ ನಾಲಿಗೆಗೆ ರುಚಿಸೋ ಮಸಾಲಾ ರೈಸ್‌ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Masala Rice: ಪುಳಿಯೋಗರೆ, ಚಿತ್ರಾನ್ನ ತಿಂದು ಬೇಸರ ಆಗಿದ್ರೆ ನಾಲಿಗೆಗೆ ರುಚಿಸೋ ಮಸಾಲಾ ರೈಸ್‌ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

ರೈಸ್‌ ಐಟಂ ಕೆಲವರಿಗೆ ಸಖತ್‌ ಇಷ್ಟ ಆದ್ರೆ, ಇನ್ನೂ ಕೆಲವರಿಗೆ ಹಿಡಿಸೋದಿಲ್ಲ. ಅದ್ರಲ್ಲೂ ಪುಳಿಯೋಗರೆ, ಚಿತ್ರಾನ್ನ ಅಂದ್ರೆ ಮೂತಿ ಸಿಂಡರಿಸುತ್ತಾರೆ. ಹಾಗಿದ್ದಾಗ ನೀವು ಒಮ್ಮೆ ಮಸಾಲಾ ರೈಸ್‌ ಟ್ರೈ ಮಾಡಿ ನೋಡಿ. ಡಿಫ್ರೆಂಡ್‌ ರುಚಿ ಇರುವ ಈ ಮಸಾಲಾ ರೈಸ್‌ ನಿಮ್ಮ ಮನೆಯವರಿಗೆಲ್ಲಾ ಇಷ್ಟ ಆಗೋದ್ರಲ್ಲಿ ಅನುಮಾನವಿಲ್ಲ.

ಮಸಾಲಾ ರೈಸ್‌
ಮಸಾಲಾ ರೈಸ್‌

ರೈಸ್‌ಬಾತ್‌ಗಳು ಮಾಡೋದು ತುಂಬಾ ಸುಲಭ, ಇದು ಹೊಟ್ಟೆ ತುಂಬುವಂತೆ ಮಾಡುತ್ತದೆ ಕೂಡ. ಹಾಗಂತ ಯಾವಾಗ್ಲೂ ಒಂದೇ ರೀತಿಯ ರೈಸ್‌ಬಾತ್‌ ಅಂದ್ರೆ ಯಾರಿಗೆ ಹಿಡಿಸುತ್ತೆ ಹೇಳಿ. ಅದಕ್ಕಾಗಿ ಭಿನ್ನ ರುಚಿಯನ್ನು ಟ್ರೈ ಮಾಡ್ಲೇಬೇಕು. ಪಲಾವ್‌, ಪುಳಿಯೋಗರೆ, ಚಿತ್ರಾನ್ನ, ವಾಂಗಿಬಾತ್‌ ಇದೆಲ್ಲಾ ಬಿಟ್ಟು ಇನ್ನೇನು ಮಾಡಬಹುದು ಎಂದು ನಿಮಗೂ ಅನ್ನಿಸಿರಬಹುದು.

ಟ್ರೆಂಡಿಂಗ್​ ಸುದ್ದಿ

ಹಲವು ಬಾರಿ ಮನೆಯಲ್ಲಿ ತರಕಾರಿ ಇರುವುದಿಲ್ಲ, ಇನ್ನೂ ಕೆಲವೊಮ್ಮೆ ಮಾಡಿದ ಅನ್ನ ಮಿಕ್ಕಿರುತ್ತದೆ. ಅದನ್ನು ಎಸೆಯಲು ಮನಸ್ಸು ಬರುವುದಿಲ್ಲ. ಇನ್ನೂ ಕೆಲವೊಮ್ಮೆ ವಿಶೇಷವಾಗಿ ಏನಾದ್ರೂ ಮಾಡಬೇಕು ಅನ್ನಿಸುತ್ತೆ, ಈ ಯಾವುದೇ ಸಂದರ್ಭಕ್ಕಾದ್ರೂ ಹೊಂದುವುದೇ ಮಸಾಲಾ ರೈಸ್‌. ಅನ್ನ ಬೇಯಿಸಿಟ್ಟುಕೊಂಡರೆ ಸಾಕು 5 ನಿಮಿಷಗಳಲ್ಲಿ ತಯಾರಾಗೋ ಈ ಮಸಾಲ ರೈಸ್‌ ಸಖತ್‌ ಟೇಸ್ಟಿ ಆಗಿರೋದು ಸುಳ್ಳಲ್ಲ.

ಮಸಾಲಾ ರೈಸ್

ಬೇಕಾಗುವ ಸಾಮಗ್ರಿಗಳು: ಎಣ್ಣೆ - ಎರಡು ಚಮಚ, ಅನ್ನ - ಎರಡು ಕಪ್‌ಗಳು, ಕೊತ್ತಂಬರಿ ಪುಡಿ - ಎರಡು ಚಮಚ, ಗೋಡಂಬಿ - 5 ರಿಂದ 6, ಖಾರದ ಪುಡಿ - ಒಂದು ಚಮಚ, ಕಾಳುಮೆಣಸು - ಎರಡು, ಈರುಳ್ಳಿ ಪೇಸ್ಟ್ - ಅರ್ಧ ಕಪ್, ಕರಿಬೇವು - 5 ರಿಂದ 6, ಜಾಯಿಕಾಯಿ - 1, ಶೇಂಗಾ - ಎರಡು ಚಮಚ, ಪುದಿನಾ - ಒಂದು ಚಮಚ, ಟೊಮೆಟೊ ಪೇಸ್ಟ್ - ಮೂರು ಚಮಚ, ಅರಿಶಿನ - ಕಾಲು ಚಮಚ, ಕೊತ್ತಂಬರಿ ಪುಡಿ - ಅರ್ಧ ಚಮಚ, ಗರಂ ಮಸಾಲಾ - ಅರ್ಧ ಚಮಚ,

ತಯಾರಿಸುವ ವಿಧಾನ: ಮೊದಲು ಅನ್ನ ಬೇಯಿಸಿಟ್ಟುಕೊಳ್ಳಿ. ಒಂದು ಕಡಾಯಿಯನ್ನು ಪಾತ್ರೆಯ ಮೇಲೆ ಇರಿಸಿ, ಬಿಸಿಯಾದ ಮೇಲೆ ಎಣ್ಣೆ ಹಾಕಿ. ನಂತರ ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕಡಲೆಬೇಳೆ ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ. ಶೇಂಗಾ ಮತ್ತು ಗೋಡಂಬಿ ಸೇರಿಸಿ ಅವುಗಳನ್ನು ಫ್ರೈ ಮಾಡಿಕೊಳ್ಳಿ. ನಂತರ ಹಸಿರು ಮೆಣಸಿನಕಾಯಿ, ಕಾಳುಮೆಣಸು ಸೇರಿಸಿ ಕೈಯಾಡಿಸಿ. ತೆಳುವಾಗಿ ಹೆಚ್ಚಿಕೊಂಡ ಈರುಳ್ಳಿ ಹಾಕಿ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ. ಇದಕ್ಕೆ ಪುದಿನಾ ಮತ್ತು ಟೊಮೆಟೊ ಪೇಸ್ಟ್ ಹಾಕಿ ಎಲ್ಲವನ್ನೂ ಚೆನ್ನಾಗಿ ಫ್ರೈ ಮಾಡಿ. ಕರಿಬೇವು, ಕೊತ್ತಂಬರಿ ಪುಡಿ, ಗರಂ ಮಸಾಲ, ಅರಿಶಿನ ಸೇರಿಸಿ ಮಿಶ್ರಣ ಮಾಡಿ, ಸ್ವಲ್ಪ ಉಪ್ಪು ಸೇರಿಸಿ. ಈ ನಿಮ್ಮ ಮುಂದೆ ಮಸಾಲೆ ರೆಡಿ. ಇದಕ್ಕೆ ಅನ್ನವನ್ನು ಸೇರಿಸಿ, ಪುಳಿಯೋಗರೆ ರೀತಿ ಚೆನ್ನಾಗಿ ಕಲೆಸಿ. ಮೇಲಿನಿಂದ ಕೊತ್ತಂಬರಿ ಸೊಪ್ಪು ಉದುರಿಸಿ.

ನಿಮ್ಮ ಮನೆಯಲ್ಲಿ ಅನ್ನ ಉಳಿದಿದ್ದರೆ ಪಟ್‌ ಅಂತ ಮಸಾಲೆ ರೈಸ್‌ ತಯಾರಿಸಬಹುದು. ಗೋಡಂಬಿ, ಶೇಂಗಾ ಮುಂತಾದುವನ್ನು ಹಾಕಿರುವ ಕಾರಣ ಇದು ಮಕ್ಕಳಿಗೆ ಸಖತ್‌ ಇಷ್ಟವಾಗುತ್ತದೆ. ವಿಶೇಷವಾಗಿ, ಇದು ಉತ್ತಮ ಲಂಚ್ ಬಾಕ್ಸ್ ರೆಸಿಪಿ. ರಾತ್ರಿಯ ಊಟದಲ್ಲಿ ತಿನ್ನಲು ಉತ್ತಮ ಆಯ್ಕೆ ಎಂದು ಹೇಳಬಹುದು. ಮನೆಯಲ್ಲಿ ತರಕಾರಿ ಇಲ್ಲದಿದ್ದಾಗ ಈ ಮಸಾಲಾ ರೈಸ್ ಬೆಸ್ಟ್‌ ಆಯ್ಕೆ. ಕೇವಲ ಒಂದು ಈರುಳ್ಳಿ ಮತ್ತು ಒಂದು ಟೊಮೆಟೊ ಇದ್ರೆ ಸೂಪರ್‌ ಟೇಸ್ಟಿ ಮಸಾಲಾ ರೈಸ್‌ ಮಾಡಬಹುದು. ಈ ಮಸಾಲಾ ರೈಸ್ ಒಮ್ಮೆ ಟ್ರೈ ಮಾಡಿ ನೋಡಿ ನಿಮಗೆ ಖಂಡಿತ ಇಷ್ಟ ಆಗುತ್ತೆ

ವಿಭಾಗ