Ragi Malt Drink: ರೆಸಿಪಿ ಒಂದು, ಪ್ರಯೋಜನಗಳು ಹಲವು; ರಾಗಿ ಮಾಲ್ಟ್ ಡ್ರಿಂಕ್ ತಯಾರಿಸುವ ವಿಧಾನ ಹೇಗೆ ನೋಡಿ
Ragi Malt Drink Recipe: ನಿಮ್ಮ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದ್ದಲ್ಲಿ ಉತ್ತಮ ಆಹಾರ ಸೇವಿಸುವುದು ಬಹಳ ಅಗತ್ಯ. ಬಡವರು ಶ್ರೀಮಂತರು ಎಲ್ಲರಿಗೂ ಸುಲಭವಾಗಿ ದೊರೆಯುವುದು ರಾಗಿ. ಇದ್ರಿಂದ ಎಷ್ಟೋ ವೆರೈಟಿ ಫುಡ್ ತಯಾರಿಸಬಹುದು. ಅದರಲ್ಲಿ ರಾಗಿ ಮಾಲ್ಟ್ ಡ್ರಿಂಕ್ ಕೂಡಾ ಒಂದು.
Ragi Malt Drink Recipe: ರಾಗಿ ಎಷ್ಟು ಆರೋಗ್ಯಕ ಆಹಾರ ಅನ್ನೋದನ್ನ ವಿವರಿಸಿ ಹೇಳಬೇಕಿಲ್ಲ. ದೇಹಕ್ಕೆ ಎಷ್ಟೋ ಅಗತ್ಯ ಪೋಷಕಾಂಶಗಳನ್ನು ನೀಡುವ ರಾಗಿಯಿಂದ ತೂಕ ಕೂಡಾ ಇಳಿಸಿಕೊಳ್ಳಬಹುದು. ಮಧುಮೇಹಿಗಳಿಗೆ ಕೂಡಾ ಇದು ಉತ್ತಮ ಆಹಾರ.
ರಾಗಿಮುದ್ದೆ, ರಾಗಿರೊಟ್ಟಿ ಹೀಗೆ ಪ್ರತಿದಿನ ನೀವು ರಾಗಿಯಿಂದ ತಯಾರಿಸಿದ ಆಹಾರ ಸೇವಿಸಿದರೆ ನಿಮ್ಮಷ್ಟು ಆರೊಗ್ಯವಂತರು ಮತ್ತಾರೂ ಇಲ್ಲ ಎನ್ನಬಹುದು. ಹಾಗೇ ನೀವು ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಕಾಫಿ ಟೀ ಕುಡಿಯುವ ಬದಲಿಗೆ ರಾಗಿ ಮಾಲ್ಡ್ ಡ್ರಿಂಕ್ ಸೇವಿಸಿದರೆ ಇನ್ನೂ ಒಳ್ಳೆಯದು. ರಾಗಿ ಮಾಲ್ಡ್ ಡ್ರಿಂಕ್ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೇಗೆ ನೋಡೋಣ ಬನ್ನಿ.
ರಾಗಿ ಮಾಲ್ಟ್ ಡ್ರಿಂಕ್‌ಗೆ ಬೇಕಾದ ಸಾಮಗ್ರಿಗಳು
- ರಾಗಿಹಿಟ್ಟು - 2 ಟೇಬಲ್ ಸ್ಪೂನ್
- ನೀರು - 1 1/2 ಕಪ್
- ಬೆಲ್ಲ - 1 ಟೇಬಲ್ ಸ್ಪೂನ್
- ಹಾಲು - 1/2 ಕಪ್
- ಏಲಕ್ಕಿ ಪುಡಿ - ಚಿಟಿಕೆ
- ಬಾದಾಮಿ - 4
ರಾಗಿ ಮಾಲ್ಟ್ ಡ್ರಿಂಕ್ ತಯಾರಿಸುವ ವಿಧಾನ
- ಒಂದು ಬೌಲ್‌ಗೆ ರಾಗಿಹಿಟ್ಟು ಹಾಗೂ ಅರ್ಧ ಕಪ್ ನೀರು ಸೇರಿಸಿ ಗಂಟುಗಳು ಇಲ್ಲದಂತೆ ಮಿಕ್ಸ್ ಮಾಡಿ.
2. ಸ್ಟೌವ್ ಮೇಲೆ ಪಾತ್ರೆ ಇಟ್ಟು ಉಳಿದ 1 ಕಪ್ ನೀರು ಸೇರಿಸಿ
3. ಸ್ವಲ್ಪ ಬಿಸಿ ಆದ ನಂತರ ಮಿಕ್ಸ್ ಮಾಡಿಕೊಂಡ ರಾಗಿಹಿಟ್ಟನ್ನು ಸೇರಿಸಿ ಬಿಡದಂತೆ ತಿರುತ್ತಿರಿ.
4. ಮಿಶ್ರಣ ಗಟ್ಟಿಯಾದ ನಂತರ ಬೆಲ್ಲ ಸೇರಿಸಿ
5. ನಂತರ ಈ ಮಿಶ್ರಣಕ್ಕೆ ಹಾಲು ಸೇರಿಸಿ ಮತ್ತೆ ಮಿಕ್ಸ್ ಮಾಡಿ ಸ್ಟೌವ್ ಆಫ್ ಮಾಡಿ
6. ಕೊನೆಗೆ ಏಲಕ್ಕಿ ಸೇರಿಸಿ ರಾಗಿ ಮಾಲ್ಟನ್ನು ಸರ್ವಿಂಗ್ ಬೌಲ್‌ಗೆ ವರ್ಗಾಯಿಸಿ
7. ಕೊನೆಯಲ್ಲಿ ಸಣ್ಣಗೆ ಚೂರು ಚೂರ ಮಾಡಿದ ಬಾದಾಮಿ ಸೇರಿಸಿ ರಾಗಿ ಮಾಲ್ಟನ್ನು ಎಂಜಾಯ ಮಾಡಿ
8. ನೀವು ಸಿಹಿ ಇಷ್ಟಪಡದಿದ್ದರೆ ಬೆಲ್ಲದ ಬದಲಿಗೆ ಉಪ್ಪು ಸೇರಿಸಬಹುದು, ಹಾಗೇ ಬಾದಾಮಿ ಚೂರುಗಳ ಬದಲಿಗೆ ಸಣ್ಣಗೆ ಈರುಳ್ಳಿ ಸೇರಿಸಿ ರಾಗಿ ಮಾಲ್ಟ್ ಸೇವಿಸಬಹುದು.
ರಾಗಿಯ ಪ್ರಯೋಜನಗಳು
ಅಕ್ಕಿ ಹಾಗೂ ಇತರ ಧಾನ್ಯಗಳಿಗೆ ಹೋಲಿಸಿದರೆ ರಾಗಿಯಲ್ಲಿ ಫೈಬರ್ ಅಂಶ ಹೆಚ್ಚಾಗಿದ್ದು ಜೀರ್ಣಕ್ರಿಯೆ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಇದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕೂಡಾ ದೂರವಾಗುತ್ತದೆ. ರಾಗಿ ತಿಂದರೆ ಹೊಟ್ಟೆ ಹೆಚ್ಚು ಹೊತ್ತು ತುಂಬಿದಂತೆ ಇರುತ್ತದೆ. ಬೇಗ ಹಸಿವಾಗುವುದಿಲ್ಲ. ಈ ಕಾರಣದಿಂದ ನೀವು ಪದೇ ಪದೆ ತಿನ್ನುವುದನ್ನು ತಪ್ಪಿಸಬಹುದು. ಮಧುಮೇಹಿಗಳಿಗೆ ಕೂಡಾ ರಾಗಿ ಬಹಳ ಒಳ್ಳೆಯದು.