ಕನ್ನಡ ಸುದ್ದಿ  /  ಜೀವನಶೈಲಿ  /  Curd Vs Buttermilk: ಮೊಸರು ಹಾಗೂ ಮಜ್ಜಿಗೆ ನಡುವಿನ ವ್ಯತ್ಯಾಸವೇನು, ಈ ಎರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ; ಇಲ್ಲಿದೆ ಉತ್ತರ

Curd vs Buttermilk: ಮೊಸರು ಹಾಗೂ ಮಜ್ಜಿಗೆ ನಡುವಿನ ವ್ಯತ್ಯಾಸವೇನು, ಈ ಎರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ; ಇಲ್ಲಿದೆ ಉತ್ತರ

ಬೇಸಿಗೆಯಲ್ಲಿ ದಾಹ ನೀಗಿಸುವ ಮೊಸರು ಹಾಗೂ ಮಜ್ಜಿಗೆ ಬಳಸುವುದು ಸಹಜ. ಆದರೆ ಈ ಎರಡಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ ಎಂಬ ಬಗ್ಗೆ ಹಲವರಲ್ಲಿ ಗೊಂದಲವಿದೆ. ಜೊತೆಗೆ ಈ ಎರಡೂ ಹೇಗೆ ತಯಾರಾಗುತ್ತದೆ ಎಂಬುದು ಕೆಲವರಿಗೆ ತಿಳಿದಿಲ್ಲ. ಈ ಎಲ್ಲಾ ವಿಚಾರಗಳನ್ನೂ ತಿಳಿಯಲು ಮುಂದೆ ಓದಿ.

ಮೊಸರು ಹಾಗೂ ಮಜ್ಜಿಗೆಯ ನಡುವಿನ ವ್ಯತ್ಯಾಸವೇನು
ಮೊಸರು ಹಾಗೂ ಮಜ್ಜಿಗೆಯ ನಡುವಿನ ವ್ಯತ್ಯಾಸವೇನು

ಬೇಸಿಗೆಯಲ್ಲಿ ಬಿಸಿಲಿನ ದಾಹ ನೀಗಿಸಿಕೊಳ್ಳಲು ಹಲವರು ಊಟದ ಜೊತೆ ಮಜ್ಜಿಗೆ ಸೇವನೆ ಮಾಡುತ್ತಾರೆ. ಅಲ್ಲದೆ ದಿನದ ಬಹುತೇಕ ಸಮಯ ಮಜ್ಜಿಗೆ ಸೇವನೆ ಮಾಡಲು ಇಷ್ಟಪಡುತ್ತಾರೆ. ಈ ಮೂಲಕ ತಮ್ಮ ದಾಹ ನೀಗಿಸಿಕೊಳ್ಳುತ್ತಾರೆ. ಇನ್ನು ಕೆಲವರು ಮೊಸರನ್ನು ಇಷ್ಟಪಡುತ್ತಾರೆ. ಮೊಸರನ್ನ ಅಥವಾ ಮೊಸರಿಗೆ ಸಕ್ಕರೆ ಹಾಕಿ ಸೇವಿಸುವ ಅಭ್ಯಾಸವೂ ಕೆಲವರಿಗಿರುತ್ತದೆ. ಇದರಿಂದ ದೇಹ ತಂಪಾದ ಅನುಭವ ಸಿಗುತ್ತದೆ. ಮಜ್ಜಿಗೆ ಮೊಸರು ಎರಡರಲ್ಲೂ ಪೌಷ್ಠಿಕಾಂಶಗಳಿವೆ. ಆದರೆ ಆರೋಗ್ಯಕ್ಕೆ ಉತ್ತಮ ಉತ್ತಮವೋ ಅಥವಾ ಮೊಸರು ಉತ್ತಮವೋ ಎಂಬ ಬಗ್ಗೆ ಹಲವರಲ್ಲಿ ಗೊಂದಲಗಳಿವೆ. ಹಾಗಿದ್ದಲ್ಲಿ ಮೊಸರು ಮತ್ತು ಮಜ್ಜಿಗೆ ನಡುವಿರುವ ವ್ಯತ್ಯಾಸವೇನು. ಎರಡಲ್ಲಿ ಯಾವುದು ಉತ್ತಮ ನೋಡಿ.

ಟ್ರೆಂಡಿಂಗ್​ ಸುದ್ದಿ

ಮೊಸರು ಎಂದರೇನು?

ಡೈರಿ ಉತ್ಪನ್ನವಾದ ಮೊಸರು, ಬಿಸಿ ಹಾಲನ್ನು ತಣ್ಣಗಾಗಿಸಿ ಅದಕ್ಕೆ ವಿನೆಗರ್ ಅಥವಾ ನಿಂಬೆರಸ ಸೇರಿಸುವ ಮೂಲಕ ತಯಾರಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ಹೆಪ್ಪು (ಮೊಸರಿನ ಹನಿ) ಹಾಕುವ ಮೂಲಕ ಮೊಸರು ತಯಾರಿಸುತ್ತಿದ್ದರು. ಬ್ಯಾಕ್ಟೀರಿಯಾವು ಹಾಲಿನಲ್ಲಿರುವ ನೈಸರ್ಗಿಕ ಸಕ್ಕರೆಯಾದ ಲ್ಯಾಕ್ಟೋಸ್ ಅನ್ನು ಲ್ಯಾಕ್ಟಿಕ್ ಆಮ್ಲವಾಗಿ ಪರಿವರ್ತಿಸುತ್ತದೆ. ಇದು ಹಾಲನ್ನು ದಪ್ಪವಾಗಿಸುತ್ತದೆ. ಹಾಲು ಮೊಸರಾಗಲು ಸುಮಾರು 8ರಿಂದ 10 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಹಾಲಿಗಿಂತ ಆರೋಗ್ಯಕ್ಕೆ ಮೊಸರು ಉತ್ತಮ. ಯಾಕೆಂದರೆ ಇದು ಸುಲಭವಾಗಿ ಜೀರ್ಣವಾಗುತ್ತದೆ.

ಮೊಸರು ಭಾರತೀಯ, ಮೆಡಿಟರೇನಿಯನ್ ಮತ್ತು ಪೂರ್ವ ಯುರೋಪಿಯನ್ ಸೇರಿದಂತೆ ಅನೇಕ ಸಂಸ್ಕೃತಿಗಳಲ್ಲಿ ಪ್ರಧಾನ ಆಹಾರದ ಭಾಗವಾಗಿದೆ. ಭಾರತದಲ್ಲಿ ಮೊಸರನ್ನು ಸೈಡ್ ಡಿಶ್ ಅಥವಾ ಇತರ ಊಟಗಳ ಜೊತೆಯಲ್ಲಿ ಬಳಸಲಾಗುತ್ತದೆ.

ಮಜ್ಜಿಗೆ ಎಂದರೇನು?

ಮಜ್ಜಿಗೆಯು ಹೆಚ್ಚಿನ ಪ್ರೊಟೀನ್ ಅಂಶವನ್ನು ಹೊಂದಿದ್ದು, ಇದರಲ್ಲಿ ಕೊಬ್ಬಿನಂಶ ಕಡಿಮೆಯಿದೆ. ಹಾಲನ್ನು ಹೆಪ್ಪುಗಟ್ಟಿಸಿದಾಗ ಮೊಸರಾಗುತ್ತದೆ. ಮೊಸರನ್ನು ಕಡೆದಾಗ ಬೆಣ್ಣೆ ಹೊರಬಂದು ಉಳಿದಿರುವ ದ್ರವ ಮಜ್ಜಿಗೆಯಾಗುತ್ತದೆ. ಹೀಗಾಗಿ ಮಜ್ಜಿಗೆಯಲ್ಲಿ ಫ್ಯಾಟ್ ಅಂಶ ಇರುವುದಿಲ್ಲವಾದರಿಂದ ಎಷ್ಟು ಬೇಕಿದ್ದರೂ ಕುಡಿಯಬಹುದು. ಡಯೆಟ್ ಮಾಡುವವರು ಮೊಸರಿನ ಬದಲಿಗೆ ಮಜ್ಜಿಗೆಯನ್ನು ಸೇವಿಸಿದರೆ ಉತ್ತಮ.

ಮೊಸರು, ಮಜ್ಜಿಗೆ ನಡುವಿನ ಪ್ರಮುಖ ವ್ಯತ್ಯಾಸಗಳೇನು, ಇದರ ತಯಾರಿ ಹೇಗೆ?

ಹಾಲಿಗೆ ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾ ಸೇರುವುದರಿಂದ ಇದು ಮೊಸರಾಗಿ ಬದಲಾಗುತ್ತದೆ. ಈ ಬ್ಯಾಕ್ಟೀರಿಯಾವು ಹಾಲಿನಲ್ಲಿರುವ ಕ್ಯಾಸೀನ್‌ನೊಂದಿಗೆ ಪ್ರತಿಕ್ರಿಯಿಸುತ್ತದೆ. ಇದು ಲ್ಯಾಕ್ಟಿಕ್ ಆಮ್ಲದ ಉತ್ಪಾದನೆಗೆ ಮತ್ತಷ್ಟು ಕಾರಣವಾಗುತ್ತದೆ. ಇದು ಹಾಲೊಡೆದು ಮೊಸರು ರಚನೆಗೆ ಕಾರಣವಾಗುತ್ತದೆ.

ಮಜ್ಜಿಗೆಯು ಮೊಸರು ಮಾಡುವ ಪ್ರಕ್ರಿಯೆಯ ಉಪಉತ್ಪನ್ನ. ಮೊದಲೇ ಹೇಳಿದಂತೆ ಇದು ಮೊಸರು ಕಡೆಯುವಾಗ ಬೆಣ್ಣೆಯನ್ನು ಹೊರಹಾಕಿದ ನಂತರ ಉಳಿಯುವ ದ್ರವ. ಮಜ್ಜಿಗೆಯು ಮೊಸರಿಗಿಂತ ತೆಳುವಾಗಿರುತ್ತದೆ. ಮಜ್ಜಿಗೆಯನ್ನು ಪ್ಯಾನ್‌ಕೇಕ್‌ಗಳು, ದೋಸೆಗಳು ಮತ್ತು ಬಿಸ್ಕತ್ತುಗಳಂತಹ ಅನೇಕ ಪಾಕವಿಧಾನಗಳಲ್ಲಿ ಬಳಸಲಾಗುತ್ತದೆ.

ಪೌಷ್ಟಿಕಾಂಶ

ಮೊಸರು ಮತ್ತು ಮಜ್ಜಿಗೆ ಎರಡೂ ದೇಹ ಮತ್ತು ಆರೋಗ್ಯಕ್ಕೆ ಒಳ್ಳೆಯದು. ಮೊಸರು ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಫಾಸ್ಫರಸ್, ವಿಟಮಿನ್ ಬಿ 12, ಬಿ 2 ಮತ್ತು ಬಿ 5 ಮತ್ತು ಪ್ರೊಟೀನ್‌ಗಳನ್ನು ಹೊಂದಿರುತ್ತದೆ. ಅಜೀರ್ಣ ಸಮಸ್ಯೆ ಇರುವವರು ಮೊಸರನ್ನು ಸೇವಿಸಬಹುದು.

ಇನ್ನು ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ 12 ಮತ್ತು ಬಿ 2, ಸತು ಮತ್ತು ಪ್ರೊಟೀನ್‌ಗಳಲ್ಲಿ ಸಮೃದ್ಧವಾಗಿದೆ. ಇದು ಮೂಳೆಯ ಆರೋಗ್ಯಕ್ಕೆ ಒಳ್ಳೆಯದು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ವಿಭಾಗ