ಬಾಯಲ್ಲಿ ನೀರೂರಿಸುವ ಕ್ಯಾರೆಟ್ ರವೆ ಲಾಡು: ಒಮ್ಮೆ ತಿಂದರೆ ಮತ್ತೆ ಮತ್ತೆ ಬೇಕು ಎಂದೆನಿಸುವ ಈ ರೆಸಿಪಿ ಮಾಡುವುದು ತುಂಬಾನೇ ಸುಲಭ
ಕನ್ನಡ ಸುದ್ದಿ  /  ಜೀವನಶೈಲಿ  /  ಬಾಯಲ್ಲಿ ನೀರೂರಿಸುವ ಕ್ಯಾರೆಟ್ ರವೆ ಲಾಡು: ಒಮ್ಮೆ ತಿಂದರೆ ಮತ್ತೆ ಮತ್ತೆ ಬೇಕು ಎಂದೆನಿಸುವ ಈ ರೆಸಿಪಿ ಮಾಡುವುದು ತುಂಬಾನೇ ಸುಲಭ

ಬಾಯಲ್ಲಿ ನೀರೂರಿಸುವ ಕ್ಯಾರೆಟ್ ರವೆ ಲಾಡು: ಒಮ್ಮೆ ತಿಂದರೆ ಮತ್ತೆ ಮತ್ತೆ ಬೇಕು ಎಂದೆನಿಸುವ ಈ ರೆಸಿಪಿ ಮಾಡುವುದು ತುಂಬಾನೇ ಸುಲಭ

ಸಿಹಿ ತಿಂಡಿಯಲ್ಲಿ ರವೆ ಲಾಡು ಇಷ್ಟಪಡುವಿರಾ. ಜತೆಗೆ ಕ್ಯಾರೆಟ್ ಹಲ್ವಾ ಅಂದ್ರೂ ಇಷ್ಟನಾ?ಒಣಹಣ್ಣುಗಳನ್ನು ಸೇರಿಸಿ ತಯಾರಿಸಲಾಗುವ ಈ ಸಿಹಿತಿಂಡಿಯು ತಿನ್ನಲು ರುಚಿಕರವಾಗಿರುತ್ತದೆ.ಬಹಳ ಸರಳವಾಗಿ ತಯಾರಿಸಲಾಗುವ ಈ ಕ್ಯಾರೆಟ್ ರವೆ ಲಾಡು ತಯಾರಿಸುವ ವಿಧಾನ ಇಲ್ಲಿದೆ.

ಬಾಯಲ್ಲಿ ನೀರೂರಿಸುವ ಕ್ಯಾರೆಟ್ ರವೆ ಲಾಡೂ: ಒಮ್ಮೆ ತಿಂದರೆ ಮತ್ತೆ ಮತ್ತೆ ಬೇಕು ಎಂದೆನಿಸುವ ಈ ರೆಸಿಪಿ ಮಾಡುವುದು ತುಂಬಾನೇ ಸುಲಭ.
ಬಾಯಲ್ಲಿ ನೀರೂರಿಸುವ ಕ್ಯಾರೆಟ್ ರವೆ ಲಾಡೂ: ಒಮ್ಮೆ ತಿಂದರೆ ಮತ್ತೆ ಮತ್ತೆ ಬೇಕು ಎಂದೆನಿಸುವ ಈ ರೆಸಿಪಿ ಮಾಡುವುದು ತುಂಬಾನೇ ಸುಲಭ. (PC: Canva)

ನೀವು ರವೆ ಲಾಡು ಇಷ್ಟಪಡುವಿರಾ. ಜತೆಗೆ ಕ್ಯಾರೆಟ್ ಹಲ್ವಾ ಅಂದ್ರೂ ಇಷ್ಟನಾ? ಹಾಗಿದ್ದರೆ ಇವೆರಡನ್ನೂ ಸೇರಿಸಿ ಕ್ಯಾರೆಟ್ ರವಾ ಲಾಡು ತಯಾರಿಸಿದರೆ ಅದರ ರುಚಿಯೇ ಬೇರೆ. ಮನೆಗೆ ಯಾರಾದರೂ ಅತಿಥಿಗಳು ಬಂದರೆ ಏನಾದರೂ ಸಿಹಿ ತಿಂಡಿ ಮಾಡಿ ಬಡಿಸಬೇಕು ಎಂದಿದ್ದರೆ, ಈ ರೀತಿ ಡಿಫರೆಂಟ್ ಆಗಿ ಕ್ಯಾರೆಟ್ ರವೆ ಲಾಡು ತಯಾರಿಸಬಹುದು. ಒಣಹಣ್ಣುಗಳನ್ನು ಸೇರಿಸಿ ತಯಾರಿಸಲಾಗುವ ಈ ಸಿಹಿತಿಂಡಿಯು ತಿನ್ನಲು ರುಚಿಕರವಾಗಿರುತ್ತದೆ. ಇದನ್ನು ಸೇವಿಸುವುದರಿಂದ ದೇಹಕ್ಕೆ ಶಕ್ತಿಯೂ ಸಿಗುತ್ತದೆ. ಬಹಳ ಸರಳವಾಗಿ ತಯಾರಿಸಲಾಗುವ ಈ ಕ್ಯಾರೆಟ್ ರವೆ ಲಾಡು ತಯಾರಿಸುವುದು ಹೇಗೆ ಎಂಬುದು ಇಲ್ಲಿದೆ.

ಕ್ಯಾರೆಟ್ ರವೆ ಲಾಡು ತಯಾರಿಸುವ ವಿಧಾನ

ಕ್ಯಾರೆಟ್ ರವಾ ಲಾಡು ರೆಸಿಪಿಗೆ ಬೇಕಾಗುವ ಸಾಮಗ್ರಿಗಳು: ಗೋಡಂಬಿ- ಅರ್ಧ ಕಪ್, ಬಾದಾಮಿ- ಅರ್ಧ ಕಪ್, ತುಪ್ಪ- ಮೂರು ಚಮಚ, ರವೆ- ಒಂದು ಕಪ್, ಕ್ಯಾರೆಟ್ ತುರಿ- ಒಂದು ಕಪ್, ತೆಂಗಿನ ತುರಿ- ಅರ್ಧ ಕಪ್, ಸಕ್ಕರೆ - ಒಂದೂವರೆ ಕಪ್, ಏಲಕ್ಕಿ ಪುಡಿ- ಅರ್ಧ ಚಮಚ, ಹಾಲು- ಕಾಲು ಕಪ್.

ಕ್ಯಾರೆಟ್ ರವೆ ಲಾಡು ರೆಸಿಪಿ ತಯಾರಿಸುವ ವಿಧಾನ: ಒಲೆಯ ಮೇಲೆ ಪ್ಯಾನ್ ಇಟ್ಟು ತುಪ್ಪ ಹಾಕಿ. ತುಪ್ಪ ಬಿಸಿಯಾದಾಗ ಗೋಡಂಬಿ ಮತ್ತು ಬಾದಾಮಿ ಸೇರಿಸಿ ಫ್ರೈ ಮಾಡಿ ಪಕ್ಕಕ್ಕೆ ಇಡಿ. ಈಗ ರವೆಯನ್ನು ಅದೇ ತುಪ್ಪದಲ್ಲಿ ಹುರಿಯಿರಿ. ಸ್ವಲ್ಪ ಬಣ್ಣ ಬದಲಾದಾಗ ತುರಿದ ಕ್ಯಾರೆಟ್ ಹಾಕಿ ಫ್ರೈ ಮಾಡಿ. ಹಸಿ ವಾಸನೆ ಮಾಯವಾಗುವವರೆಗೆ ಈ ಮಿಶ್ರಣವನ್ನು ಮಿಶ್ರಣ ಮಾಡಿ.

ನಂತರ ತೆಂಗಿನ ತುರಿ, ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಹುರಿಯುವಾಗ ಕಡಿಮೆ ಉರಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಹೆಚ್ಚಿನ ಉರಿಯಲ್ಲಿಡಬೇಡಿ. ಹುರಿದ ಗೋಡಂಬಿ ಮತ್ತು ಬಾದಾಮಿಯನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿ. ಈ ಪುಡಿಯನ್ನು ಪ್ಯಾನ್‌ಗೆ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.

ಈ ಮಿಶ್ರಣಕ್ಕೆ ಬೇಯಿಸಿದ ತಣ್ಣಗಾದ ಹಾಲನ್ನು ಸೇರಿಸಿ, ನಿಧಾನವಾಗಿ ಮಿಶ್ರಣ ಮಾಡಿ. ಈ ಸಂಪೂರ್ಣ ಮಿಶ್ರಣವನ್ನು ಗಟ್ಟಿಯಾಗುವವರೆಗೆ ಮಿಶ್ರಣ ಮಾಡಿ. ಹೀಗೆ ಮಿಕ್ಸ್ ಮಾಡಿದ ನಂತರ ಸ್ಟೌವ್ ಆಫ್ ಮಾಡಬೇಕು. ಅದು ಸ್ವಲ್ಪ ತಣ್ಣಗಾಗುವವರೆಗೆ ಸ್ವಲ್ಪ ಹೊತ್ತು ಹಾಗೆಯೇ ಇರಿಸಿ. ನಂತರ ಲಾಡುವಿನ ಆಕಾರದಲ್ಲಿ ಉಂಡೆ ಕಟ್ಟಿಕೊಳ್ಳಿ. ಇಷ್ಟು ಮಾಡಿದರೆ ಕ್ಯಾರೆಟ್ ರವೆ ಲಾಡು ಸಿದ್ಧ.

ಬಾಯಲ್ಲಿ ನೀರೂರಿಸುವ ಈ ರೆಸಿಪಿಯನ್ನು ಒಮ್ಮೆ ಮಾಡಿ ನೋಡಿ. ಮನೆಯವರೆಲ್ಲರೂ ಖಂಡಿತಾ ಇಷ್ಟಪಟ್ಟು ತಿಂತಾರೆ. ಮೋತಿಚೂರ್ ಲಾಡುಗಳಂತೆ ಈ ಕ್ಯಾರೆಟ್ ರವೆ ಲಾಡು ಬಾಯಲ್ಲಿ ನೀರೂರಿಸುತ್ತದೆ. ಇದಕ್ಕೆ ಬಳಸಲಾಗುವ ಕ್ಯಾರೆಟ್, ಹಾಲು ಮತ್ತು ಒಣ ಹಣ್ಣುಗಳು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಹೀಗಾಗಿ ಈ ಸಿಹಿ ಭಕ್ಷ್ಯವನ್ನು ದಿನಕ್ಕೊಂದು ತಿನ್ನುವುದು ಒಳ್ಳೆಯದು. ಮಧುಮೇಹ ಇರುವವರು ಸೇವಿಸುವುದನ್ನು ಕಡಿಮೆ ಮಾಡುವುದು ಉತ್ತಮ. ಏಕೆಂದರೆ ಇದರಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ. ಹಾಗಾಗಿ ಈ ಸಿಹಿ ತಿನ್ನುವುದು ಒಳ್ಳೆಯದಲ್ಲ.

Whats_app_banner