ಅನ್ನದೊಂದಿಗೆ ಸೂಪರ್ ಕಾಂಬಿನೇಷನ್ ಟೊಮೆಟೊ-ಪುದೀನಾ ಚಟ್ನಿ: ದಿನಾ ಸಾಂಬಾರ್, ಪಲ್ಯ ತಿಂದು ಬೋರ್ ಆಗಿದ್ದರೆ ಈ ರೆಸಿಪಿ ಟ್ರೈ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಅನ್ನದೊಂದಿಗೆ ಸೂಪರ್ ಕಾಂಬಿನೇಷನ್ ಟೊಮೆಟೊ-ಪುದೀನಾ ಚಟ್ನಿ: ದಿನಾ ಸಾಂಬಾರ್, ಪಲ್ಯ ತಿಂದು ಬೋರ್ ಆಗಿದ್ದರೆ ಈ ರೆಸಿಪಿ ಟ್ರೈ ಮಾಡಿ

ಅನ್ನದೊಂದಿಗೆ ಸೂಪರ್ ಕಾಂಬಿನೇಷನ್ ಟೊಮೆಟೊ-ಪುದೀನಾ ಚಟ್ನಿ: ದಿನಾ ಸಾಂಬಾರ್, ಪಲ್ಯ ತಿಂದು ಬೋರ್ ಆಗಿದ್ದರೆ ಈ ರೆಸಿಪಿ ಟ್ರೈ ಮಾಡಿ

ದಿನಾ ತರಕಾರಿ ಸಾಂಬಾರ್, ಪಲ್ಯ ತಿಂದು ತಿಂದು ಬೋರ್ ಆಗಿದ್ದರೆ ಸಿಂಪಲ್ ಆದ ಟೊಮೆಟೊ-ಪುದೀನಾ ಚಟ್ನಿ ರೆಸಿಪಿ ಟ್ರೈ ಮಾಡಬಹುದು. ರೊಟ್ಟಿ, ಚಪಾತಿಯೊಂದಿಗೆ ಮಾತ್ರವಲ್ಲ ಅನ್ನದೊಂದಿಗೂ ಸವಿಯಲು ರುಚಿಕರವಾಗಿರುತ್ತದೆ. ಬಿಸಿ ಬಿಸಿ ಅನ್ನದೊಂದಿಗೆ ಈ ಟೊಮೆಟೊ-ಪುದೀನಾ ಚಟ್ನಿ ಸವಿದರೆ ಮತ್ತೆ ಮತ್ತೆ ತಿನ್ನಬೇಕು ಎನಿಸುತ್ತದೆ. ಇಲ್ಲಿದೆ ರೆಸಿಪಿ.

ಅನ್ನದೊಂದಿಗೆ ಸೂಪರ್ ಕಾಂಬಿನೇಷನ್ ಟೊಮೆಟೊ-ಪುದೀನಾ ಚಟ್ನಿ: ದಿನಾ ಸಾಂಬಾರ್, ಪಲ್ಯ ತಿಂದು ಬೋರ್ ಆಗಿದ್ದರೆ ಈ ರೆಸಿಪಿ ಟ್ರೈ ಮಾಡಿ
ಅನ್ನದೊಂದಿಗೆ ಸೂಪರ್ ಕಾಂಬಿನೇಷನ್ ಟೊಮೆಟೊ-ಪುದೀನಾ ಚಟ್ನಿ: ದಿನಾ ಸಾಂಬಾರ್, ಪಲ್ಯ ತಿಂದು ಬೋರ್ ಆಗಿದ್ದರೆ ಈ ರೆಸಿಪಿ ಟ್ರೈ ಮಾಡಿ

ಮಧ್ಯಾಹ್ನ ಏನು ಅಡುಗೆ ಮಾಡುವುದು ಎಂದು ಹೆಂಗಳೆಯರು ಪ್ರತಿದಿನ ಚಿಂತಿಸುತ್ತಾರೆ. ಈಗಂತೂ ಕಾರ್ತಿಕ ಮಾಸ ಆಗಿರುವುದರಿಂದ ಬಹುತೇಕ ಮಂದಿ ಸಸ್ಯಾಹಾರ ಮಾತ್ರ ಸೇವಿಸುತ್ತಾರೆ. ಹೀಗಾಗಿ ಪ್ರತಿದಿನ ಯಾವ ತರಕಾರಿ ಖಾದ್ಯ ಮಾಡುವುದು ಎಂಬ ಚಿಂತೆ ನಿಮಗಿರಬಹುದು. ಅಲ್ಲದೆ, ದಿನಾ ತರಕಾರಿ ಸಾಂಬಾರ್, ಪಲ್ಯ ತಿಂದು ತಿಂದು ಬೋರ್ ಆಗಿದ್ದರೆ ಸಿಂಪಲ್ ಆದ ಟೊಮೆಟೊ-ಪುದೀನಾ ಚಟ್ನಿ ರೆಸಿಪಿ ಟ್ರೈ ಮಾಡಬಹುದು. ರೊಟ್ಟಿ, ಚಪಾತಿಯೊಂದಿಗೆ ಮಾತ್ರವಲ್ಲ ಅನ್ನದೊಂದಿಗೂ ಸವಿಯಲು ರುಚಿಕರವಾಗಿರುತ್ತದೆ. ಮಸಾಲೆ ಚಟ್ನಿಗೆ ಮೆಂತ್ಯ ಮತ್ತು ತೆಂಗಿನಕಾಯಿಯನ್ನೂ ಬೆರೆಸಿದರೆ ಅದರ ರುಚಿ ಇಮ್ಮಡಿಯಾಗುತ್ತದೆ.

ಇಲ್ಲಿ ಟೊಮೆಟೊ-ಪುದೀನಾ ಚಟ್ನಿ ಪಾಕವಿಧಾನವನ್ನು ನೀಡಲಾಗಿದೆ. ಇದನ್ನು ಇಡ್ಲಿ, ದೋಸೆ ಮಾತ್ರವಲ್ಲದೆ ಅನ್ನದೊಂದಿಗೆ ಬೆರೆಸಿ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಈ ಟೊಮೆಟೊ-ಪುದೀನಾ ಚಟ್ನಿ ಪಾಕವಿಧಾನವನ್ನು ಹೇಗೆ ಮಾಡಬೇಕೆಂದು ಇಲ್ಲಿ ತಿಳಿಯಿರಿ. ಒಮ್ಮೆ ತಯಾರಿಸಿದರೆ ಎರಡು ದಿನ ಕೆಡದಂತೆ ಇಟ್ಟುಕೊಳ್ಳಬಹುದು. ಇದನ್ನು ಬೆಳಗಿನ ಉಪಾಹಾರ ಹಾಗೂ ಮಧ್ಯಾಹ್ನದ ಊಟದ ಜೊತೆಗೆ ಸವಿಯಬಹುದು.

ಟೊಮೆಟೊ-ಪುದೀನಾ ಚಟ್ನಿ ರೆಸಿಪಿ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಕಡಲೆಕಾಯಿ- ಮೂರು ಚಮಚಗಳು, ಕರಿಮೆಣಸು- ಆರು, ತುರಿದ ತೆಂಗಿನಕಾಯಿ- ಮೂರು ಚಮಚ, ಈರುಳ್ಳಿ- ಎರಡು, ಮೆಣಸಿನಕಾಯಿ- ಎರಡು, ಬೆಳ್ಳುಳ್ಳಿ-ಲವಂಗ- ಎಂಟು, ಹುಣಸೆಹಣ್ಣು- ಚಿಕ್ಕ ನಿಂಬೆ ಗಾತ್ರದಷ್ಟು, ಟೊಮೆಟೊ- ಮೂರು, ಉಪ್ಪು- ರುಚಿಗೆ ತಕ್ಕಷ್ಟು, ಪುದೀನ ಎಲೆಗಳು- ಅರ್ಧ ಕಪ್, ನೀರು- ಬೇಕಾದಷ್ಟು, ಎಣ್ಣೆ- ಬೇಕಾದಷ್ಟು, ಸಾಸಿವೆ- ಅರ್ಧ ಟೀ ಚಮಚ, ಜೀರಿಗೆ- ಅರ್ಧ ಟೀ ಚಮಚ, ಕರಿಬೇವು- ಸ್ವಲ್ಪ, ಇಂಗು- ಒಂದು ಚಿಟಿಕೆ

ರೆಸಿಪಿ ಮಾಡುವ ವಿಧಾನ: ಮೊದಲಿಗೆ ಟೊಮೆಟೊ ಮತ್ತು ಪುದೀನಾವನ್ನು ತೊಳೆದು ಪಕ್ಕಕ್ಕೆ ಇರಿಸಿ. ಈಗ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಎಣ್ಣೆ ಹಾಕಿ ಬೇಳೆಯನ್ನು ಹುರಿಯಿರಿ. ತೆಂಗಿನ ತುರಿ ಹಾಕಿ ಕಡಲೆಬೇಳೆಯನ್ನು ಹುರಿಯಿರಿ. ಜತೆಗೆ ನಾಲ್ಕು ಒಣ ಮೆಣಸಿನಕಾಯಿಯನ್ನು ಹಾಕಿ ಹುರಿಯಿರಿ. ಅವುಗಳನ್ನು ಹೊರತೆಗೆದು ಪಕ್ಕಕ್ಕೆ ಇರಿಸಿ. ಈಗ ಈರುಳ್ಳಿ, ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ, ಟೊಮೆಟೊ ಮತ್ತು ಪುದೀನ ಎಲೆಗಳನ್ನು ಹಾಕಿ, ಅದೇ ಬಾಣಲೆಯಲ್ಲಿ ಫ್ರೈ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.

ಈಗ ಹುರಿದ ಎಲ್ಲ ಸಾಮಗ್ರಿಗಳನ್ನು ಮಿಕ್ಸಿಯಲ್ಲಿ ಹಾಕಿ ಹುಣಸೆಹಣ್ಣನ್ನು ಸಾಕಷ್ಟು ನೀರು ಹಾಕಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಹಾಕಿ. ಒಲೆಯ ಮೇಲೆ ಸಣ್ಣ ಬಾಣಲೆಯಲ್ಲಿ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಸಾಸಿವೆ, ಜೀರಿಗೆ, ಎರಡು ಕರಿಮೆಣಸು, ಇಂಗು ಮತ್ತು ಕರಿಬೇವಿನ ಸೊಪ್ಪು ಹಾಕಿ ಹುರಿಯಿರಿ. ಈ ಒಗ್ಗರಣೆಯನ್ನು ಮಸಾಲೆಯುಕ್ತ ಟೊಮೆಟೊ ಪುದೀನಾ ಚಟ್ನಿಗೆ ಹಾಕಿದರೆ ರುಚಿಕರವಾದ ರೆಸಿಪಿ ಸವಿಯಲು ಸಿದ್ಧ.

ಈ ಟೊಮೆಟೊ-ಪುದೀನಾ ಚಟ್ನಿ ಸವಿಯಲು ತುಂಬಾ ರುಚಿಕರವಾಗಿರುತ್ತದೆ. ನೀವು ಒಮ್ಮೆ ಪ್ರಯತ್ನಿಸಿ, ಖಂಡಿತ ನಿಮಗೆ ಇಷ್ಟವಾಗುವುದರಲ್ಲಿ ಸಂಶಯವಿಲ್ಲ. ಈ ಚಟ್ನಿಯಲ್ಲಿ ಆರೋಗ್ಯಕ್ಕೆ ಉತ್ತಮವಾದ ಬಹಳಷ್ಟು ಪದಾರ್ಥಗಳನ್ನು ಬಳಸಲಾಗುತ್ತದೆ. ಟೊಮೆಟೊ, ಮೆಂತ್ಯ, ತೆಂಗಿನ ತುರಿ, ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಇವೆಲ್ಲವೂ ನಮ್ಮ ದೇಹಕ್ಕೆ ಒಳ್ಳೆಯದು. ಇಡ್ಲಿ, ದೋಸೆ ಜತೆ ಈ ಚಟ್ನಿ ಸವಿಯಲು ತುಂಬಾ ಚೆನ್ನಾಗಿರುತ್ತದೆ. ಅನ್ನದ ಜತೆಯೂ ಸವಿಯಲು ತುಂಬಾ ರುಚಿಕರವಾಗಿರುತ್ತದೆ. ಅನ್ನದ ಜತೆ ಸವಿಯಲು ಬೇಕಿದ್ದರೆ ಚಟ್ನಿಯನ್ನು ಸ್ವಲ್ಪ ಖಾರ ಮಾಡಬಹುದು. ಬಿಸಿ ಬಿಸಿ ಅನ್ನದೊಂದಿಗೆ ಈ ಟೊಮೆಟೊ-ಪುದೀನಾ ಚಟ್ನಿ ಸವಿದರೆ ಆಹಾಹಾ.. ಖಂಡಿತಾ ಕಳೆದುಹೋಗುವಿರಿ.

Whats_app_banner