ತಿಂದ ತಕ್ಷಣ ಬಾಯಲ್ಲಿ ಕರಗುವ ರುಚಿಕರವಾದ ಹೆಸರು ಬೇಳೆ ಹಲ್ವಾ: ನೀವೂ ಟ್ರೈ ಮಾಡಿ, ಮನೆಮಂದಿ ಇಷ್ಟಪಟ್ಟು ತಿನ್ನುವುದರಲ್ಲಿ ಡೌಟಿಲ್ಲ-food moong dal halwa recipe follow these tips to make delicious recipe prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ತಿಂದ ತಕ್ಷಣ ಬಾಯಲ್ಲಿ ಕರಗುವ ರುಚಿಕರವಾದ ಹೆಸರು ಬೇಳೆ ಹಲ್ವಾ: ನೀವೂ ಟ್ರೈ ಮಾಡಿ, ಮನೆಮಂದಿ ಇಷ್ಟಪಟ್ಟು ತಿನ್ನುವುದರಲ್ಲಿ ಡೌಟಿಲ್ಲ

ತಿಂದ ತಕ್ಷಣ ಬಾಯಲ್ಲಿ ಕರಗುವ ರುಚಿಕರವಾದ ಹೆಸರು ಬೇಳೆ ಹಲ್ವಾ: ನೀವೂ ಟ್ರೈ ಮಾಡಿ, ಮನೆಮಂದಿ ಇಷ್ಟಪಟ್ಟು ತಿನ್ನುವುದರಲ್ಲಿ ಡೌಟಿಲ್ಲ

ಹೆಸರು ಬೇಳೆಯು ಆರೋಗ್ಯಕರ ದ್ವಿದಳ ಧಾನ್ಯವಾಗಿದೆ. ಇದನ್ನು ಸೇವಿಸುವುದರಿಂದ ದೇಹಕ್ಕೆ ಅಗಾಧ ಪ್ರಯೋಜನವಿದೆ.ಸೂಪ್‌ಗಳು, ಸಲಾಡ್‌ಗಳಿಂದ ಸಿಹಿತಿಂಡಿಗಳವರೆಗೆ ವಿವಿಧ ಭಕ್ಷ್ಯಗಳಲ್ಲಿ ಇದನ್ನು ಬಳಸಲಾಗುತ್ತದೆ. ಹೆಸರು ಬೇಳೆ ಹಲ್ವಾ ಕೂಡ ತಿನ್ನಲು ಬಹಳ ರುಚಿಕರವಾಗಿರುತ್ತದೆ. ನೀವು ಟ್ರೈ ಮಾಡಿಲ್ಲವಾದರೆ, ಇಲ್ಲಿದೆ ರೆಸಿಪಿ ಮಾಡುವ ವಿಧಾನ.

ತಿಂದ ತಕ್ಷಣ ಬಾಯಲ್ಲಿ ಕರಗುವ ಈ ರುಚಿಕರವಾದ ಹೆಸರು ಬೇಳೆ ಹಲ್ವಾ ರೆಸಿಪಿ ಮಾಡುವ ವಿಧಾನ ಇಲ್ಲಿದೆ.
ತಿಂದ ತಕ್ಷಣ ಬಾಯಲ್ಲಿ ಕರಗುವ ಈ ರುಚಿಕರವಾದ ಹೆಸರು ಬೇಳೆ ಹಲ್ವಾ ರೆಸಿಪಿ ಮಾಡುವ ವಿಧಾನ ಇಲ್ಲಿದೆ.

ಹೆಸರು ಬೇಳೆಯು ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗಿ ಬಳಸಲಾಗುವ ದ್ವಿದಳ ಧಾನ್ಯವಾಗಿದೆ. ಇದು ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದ್ದು, ಜೀರ್ಣಕಾರಿ ಆರೋಗ್ಯವನ್ನು ಉತ್ತೇಜಿಸಲು ಸಹಕಾರಿಯಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಇದು ಸಹಕಾರಿ. ಜತೆಗೆ ಹೃದಯದ ಆರೋಗ್ಯವನ್ನು ಉತ್ತೇಜಿಸುವಲ್ಲಿ ಸಹಾಯ ಮಾಡುತ್ತದೆ. ಸೂಪ್‌ಗಳು, ಸಲಾಡ್‌ಗಳಿಂದ ಸಿಹಿತಿಂಡಿಗಳವರೆಗೆ ವಿವಿಧ ಭಕ್ಷ್ಯಗಳಲ್ಲಿ ಇದನ್ನು ಬಳಸಲಾಗುತ್ತದೆ. ನೀವು ಎಂದಾದರೂ ಹೆಸರು ಬೇಳೆ ಹಲ್ವಾವನ್ನು ಸೇವಿಸಿದ್ದೀರಾ? ಇಲ್ಲವಾದಲ್ಲಿ ಈ ರೆಸಿಪಿಯನ್ನು ಟ್ರೈ ಮಾಡಿ ನೋಡಬಹುದು. ಹೆಸರು ಬೇಳೆ ಹಲ್ವಾ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಹಾಗಿದ್ದರೆ ರುಚಿಕರವಾದ ಹಾಗೂ ಆರೋಗ್ಯಕರವಾದ ಹೆಸರು ಬೇಳೆ ಹಲ್ವಾ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ:

ಹೆಸರು ಬೇಳೆ ಹಲ್ವಾ ಪಾಕವಿಧಾನ ಮಾಡುವುದು ಹೀಗೆ

ಬೇಕಾಗುವ ಸಾಮಗ್ರಿಗಳು: ಹೆಸರು ಬೇಳೆ- 1 ಕಪ್, ನೀರು- 4 ಕಪ್, ಬೆಲ್ಲ- 1 ½ ಕಪ್, ಏಲಕ್ಕಿ- 5 ರಿಂದ 6, ತುಪ್ಪ- ಅರ್ಧ ಕಪ್, ಒಣ ಹಣ್ಣುಗಳು.

ಹೆಸರು ಬೇಳೆ ಹಲ್ವಾ ಮಾಡುವ ವಿಧಾನ: ಹೆಸರು ಬೇಳೆ ಹಲ್ವಾ ಮಾಡಲು, ಮೊದಲು ಬೇಳೆಯನ್ನು ತೊಳೆದು 4 ರಿಂದ 5 ಗಂಟೆಗಳ ಕಾಲ ನೆನೆಸಿಡಿ. ನಂತರ, ಹೆಸರು ಬೇಳೆಯನ್ನು ಮಿಕ್ಸರ್ ಜಾರ್ ಸಹಾಯದಿಂದ ಒರಟಾಗಿ ಪುಡಿಮಾಡಿಟ್ಟುಕೊಳ್ಳಿ.

ಸ್ಟೌವ್‍ನಲ್ಲಿ ಪ್ಯಾನ್ ಅನ್ನು ಇರಿಸಿ. ಅದಕ್ಕೆ ಸ್ವಲ್ಪ ತುಪ್ಪವನ್ನು ಸೇರಿಸಿ. ತುಪ್ಪ ಬಿಸಿಯಾದಾಗ, ಅದಕ್ಕೆ ರುಬ್ಬಿದ ಹೆಸರು ಬೇಳೆ ಮಿಶ್ರಣವನ್ನು ಸೇರಿಸಿ. ತಿಳಿ ಗೋಲ್ಡನ್ ಆಗುವವರೆಗೆ ನಿರಂತರವಾಗಿ ಬೆರೆಸಿ. ಹೆಸರು ಬೇಳೆಯು ಈ ಬಣ್ಣಕ್ಕೆ ತಿರುಗಲು 20 ರಿಂದ 25 ನಿಮಿಷಗಳನ್ನು ತೆಗೆದುಕೊಳ್ಳಬಹುದು. ಅಲ್ಲಿಯವರೆಗೆ ನಿರಂತರವಾಗಿ ಬೆರೆಸುತ್ತಿರಿ.

ಇನ್ನೊಂದೆಡೆ ಪಾತ್ರೆಯಲ್ಲಿ ಬೆಲ್ಲ ತೆಗೆದುಕೊಂಡು 2 ಕಪ್ ನೀರು ಹಾಕಿ, ಬೆಲ್ಲವನ್ನು ಕರಗಿಸಿ, ಸೋಸಿಕೊಳ್ಳಿ. ಈ ಬೆಲ್ಲದ ನೀರನ್ನು ಹೆಸರುಬೇಳೆ ಪಾಕಕ್ಕೆ ಸೇರಿಸಿ. ಬೇಕಿದ್ದರೆ ಸ್ವಲ್ಪ ಹಾಲನ್ನು ಸಹ ಸೇರಿಸಬಹುದು. ಗಟ್ಟಿ ಆಗುವವರೆಗೆ ಚೆನ್ನಾಗಿ ಮಿಕ್ಸ್ ಮಾಡಬೇಕು. ಸ್ಟೌವ್ ಅನ್ನು ಚಿಕ್ಕ ಉರಿಯಲ್ಲಿಟ್ಟು ಬೇಯಿಸಬೇಕು. ನಂತರ ಮತ್ತೆ ತುಪ್ಪವನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಬೇಕು. ಇದಕ್ಕೆ ತುಪ್ಪದಲ್ಲಿ ಹುರಿದ ಒಣಹಣ್ಣುಗಳನ್ನು ಸೇರಿಸಿ ಮಿಶ್ರಣ ಮಾಡಿ. ನಂತರ ಬಾಣಲೆಗೆ ಮುಚ್ಚಿಟ್ಟು 2 ನಿಮಿಷ ಹಾಗೇ ಬಿಡಿ. 2 ನಿಮಿಷದ ಬಳಿಕ ಮುಚ್ಚಳವನ್ನು ತೆಗೆದರೆ ತುಪ್ಪ ಬೇರೆ-ಬೇರೆಯಾಗಿರುತ್ತದೆ. ಹೀಗಾದರೆ ಗ್ಯಾಸ್ ಆಫ್ ಮಾಡಿ, ಹೆಸರು ಬೇಳೆ ಹಲ್ವಾವನ್ನು ಸರ್ವಿಂಗ್ ಪ್ಲೇಟ್‍ಗೆ ವರ್ಗಾಯಿಸಿ. ರುಚಿಕರವಾದ ಹೆಸರು ಬೇಳೆ ಹಲ್ವಾ ಸವಿಯಲು ಸಿದ್ಧ.

ಹೆಸರು ಬೇಳೆ ಹಲ್ವಾದ ಆರೋಗ್ಯ ಪ್ರಯೋಜನಗಳು

ಪ್ರೋಟೀನ್‍ನಲ್ಲಿ ಸಮೃದ್ಧ: ಹೆಸರು ಬೇಳೆಯು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಹೆಸರು ಬೇಳೆ ಹಲ್ವಾವನ್ನು ಸೇವಿಸುವುದರಿಂದ ದೇಹಕ್ಕೆ ಅಗಾಧ ಪ್ರೋಟೀನ್ ದೊರಕುತ್ತದೆ.

ಪೋಷಕಾಂಶಗಳಲ್ಲಿ ಸಮೃದ್ಧ: ಫೋಲೇಟ್, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ವಿಟಮಿನ್‌ಗಳು ಮತ್ತು ಖನಿಜಗಳಿಂದ ತುಂಬಿದ ಹೆಸರು ಬೇಳೆ ಹಲ್ವಾ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.

ಜೀರ್ಣಕ್ರಿಯೆಗೆ ಸಹಕಾರಿ: ಹೆಸರು ಬೇಳೆಯಲ್ಲಿರುವ ಫೈಬರ್ ಅಂಶವು ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಯಲು ಸಹಕಾರಿಯಾಗಿದೆ.

ಹೃದಯದ ಆರೋಗ್ಯಕ್ಕೆ ಸಹಕಾರಿ: ಹೆಸರು ಬೇಳೆ ಸ್ಯಾಚುರೇಟೆಡ್ ಕೊಬ್ಬು ಮತ್ತು ಕಡಿಮೆ ಕೊಲೆಸ್ಟ್ರಾಲ್‍ ಅನ್ನು ಹೊಂದಿದೆ. ಮಿತವಾಗಿ ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ.

ತೂಕ ನಿರ್ವಹಣೆ: ಇದರಲ್ಲಿರುವ ಪ್ರೋಟೀನ್ ಮತ್ತು ಫೈಬರ್ ಅಂಶವು ಹೆಚ್ಚು ಸಮಯ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.

ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು: ಈ ಹಲ್ವಾದಲ್ಲಿರುವ ಪದಾರ್ಥಗಳು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಇದು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಎದುರಿಸಲು ಸಹಾಯ ಮಾಡುತ್ತದೆ.

mysore-dasara_Entry_Point