ಉಳಿದ ಬ್ರೆಡ್‌ ಎಸೆಯುವ ಬದಲಿಗೆ ಕ್ಯಾರಮಲ್‌ ಬ್ರೆಡ್‌ ಪುಡ್ಡಿಂಗ್‌ ತಯಾರಿಸಿ; ಓವನ್‌ ಬೇಕಿಲ್ಲ, ಹೆಚ್ಚು ಸಾಮಗ್ರಿಗಳ ಅವಶ್ಯಕತೆಯೂ ಇಲ್ಲ
ಕನ್ನಡ ಸುದ್ದಿ  /  ಜೀವನಶೈಲಿ  /  ಉಳಿದ ಬ್ರೆಡ್‌ ಎಸೆಯುವ ಬದಲಿಗೆ ಕ್ಯಾರಮಲ್‌ ಬ್ರೆಡ್‌ ಪುಡ್ಡಿಂಗ್‌ ತಯಾರಿಸಿ; ಓವನ್‌ ಬೇಕಿಲ್ಲ, ಹೆಚ್ಚು ಸಾಮಗ್ರಿಗಳ ಅವಶ್ಯಕತೆಯೂ ಇಲ್ಲ

ಉಳಿದ ಬ್ರೆಡ್‌ ಎಸೆಯುವ ಬದಲಿಗೆ ಕ್ಯಾರಮಲ್‌ ಬ್ರೆಡ್‌ ಪುಡ್ಡಿಂಗ್‌ ತಯಾರಿಸಿ; ಓವನ್‌ ಬೇಕಿಲ್ಲ, ಹೆಚ್ಚು ಸಾಮಗ್ರಿಗಳ ಅವಶ್ಯಕತೆಯೂ ಇಲ್ಲ

ಉಳಿದ ಬ್ರೆಡ್‌ನಿಂದ ವಿವಿಧ ರೀತಿಯ ಸ್ನಾಕ್ಸ್‌, ಡೆಸರ್ಟ್‌ ತಯಾರಿಸಬಹುದು. ನಿಮ್ಮ ಮನೆಯಲ್ಲೂ ಬ್ರೆಡ್‌ ಹೆಚ್ಚಾಗಿ ಉಳಿದಿದ್ದರೆ ಕ್ಯಾರಮಲ್‌ ಬ್ರೆಡ್‌ ಪುಡ್ಡಿಂಗ್‌ ತಯಾರಿಸಿ. ಇದಕ್ಕೆ ಓವನ್‌ ಅಗತ್ಯವಿಲ್ಲ . ಹೆಚ್ಚು ಸಾಮಗ್ರಿಗಳು ಕೂಡಾ ಬೇಕಿಲ್ಲ. ಹಾಲು , ಸಕ್ಕರೆ, ಮೊಟ್ಟೆ ಇದ್ದರೆ ರುಚಿಯಾದ ಬ್ರೆಡ್‌ ಪುಡ್ಡಿಂಗ್‌ ರೆಡಿ.

ಉಳಿದ ಬ್ರೆಡ್‌ ಎಸೆಯುವ ಬದಲಿಗೆ ಕ್ಯಾರಮಲ್‌ ಬ್ರೆಡ್‌ ಪುಡ್ಡಿಂಗ್‌ ತಯಾರಿಸಿ; ಓವನ್‌ ಬೇಕಿಲ್ಲ, ಹೆಚ್ಚು ಸಾಮಗ್ರಿಗಳ ಅವಶ್ಯಕತೆಯೂ ಇಲ್ಲ
ಉಳಿದ ಬ್ರೆಡ್‌ ಎಸೆಯುವ ಬದಲಿಗೆ ಕ್ಯಾರಮಲ್‌ ಬ್ರೆಡ್‌ ಪುಡ್ಡಿಂಗ್‌ ತಯಾರಿಸಿ; ಓವನ್‌ ಬೇಕಿಲ್ಲ, ಹೆಚ್ಚು ಸಾಮಗ್ರಿಗಳ ಅವಶ್ಯಕತೆಯೂ ಇಲ್ಲ (PC: Hands Touch, Geraldine B. Montarde)

ಅಡುಗೆ ಅನ್ನೋದು ಕಲೆ, ಎಲ್ಲರೂ ಅಡುಗೆ ಮಾಡುತ್ತಾರೆ, ಆ ಅಡುಗೆಗೆ ನಿರ್ದಿಷ್ಟ ಸಾಮಗ್ರಿಗಳನ್ನು, ಇಂತಿಷ್ಟು ಬಳಸಿದರೂ ಒಬ್ಬೊಬ್ಬರ ಕೈ ರುಚಿ ಒಂದೊಂದು ರೀತಿ ಇರುತ್ತದೆ. ಸಾಮಾನ್ಯವಾಗಿ ಅಂಗಡಿಯಿಂದ ತಂದ, ಮನೆಯಲ್ಲೇ ತಯಾರಿಸಿದ ಆಹಾರ ಸಾಮಗ್ರಿಗಳು ಉಳಿದರೆ ಅದನ್ನು ಎಸೆದುಬಿಡುತ್ತೇವೆ. ಆದರೆ ಹಾಗೆ ಉಳಿದ ಸಾಮಗ್ರಿಗಳಿಂದಲೇ ಹೊಸ ರುಚಿ ತಯಾರಿಸಬಹುದು, ಅದಕ್ಕೆ ಅಡುಗೆ ಒಂದು ಕಲೆ ಅಂತ ಹೇಳೋದು.

ಆರೋಗ್ಯ ಸರಿ ಇಲ್ಲವೆಂದೋ, ಮಕ್ಕಳಿಗೆ ಸ್ಯಾಂಡ್‌ವಿಚ್‌ ಮಾಡಲೆಂದೋ ಬ್ರೆಡ್‌ ತರುತ್ತೇವೆ. ಒಂದೇ ರೀತಿಯ ತಿಂಡಿ ತಿಂದು ಬೇಸರ ಎನಿಸಿ ಮತ್ತೆ ಅದರ ಗೋಜಿಗೇ ಹೋಗುವುದಿಲ್ಲ. ಇದೇ ರೀತಿ ನಿಮ್ಮ ಮನೆಯಲ್ಲೂ ಹೆಚ್ಚು ಬ್ರೆಡ್‌ ಉಳಿದಿದ್ದರೆ, ಅದರಿಂದ ಕ್ಯಾರಮಲ್‌ ಬ್ರೆಡ್‌ ಪುಡ್ಡಿಂಗ್‌ ತಯಾರಿಸಬಹುದು. ಮನೆಯಲ್ಲಿ ಯಾವುದಾದರೂ ಪಾರ್ಟಿ ಇದ್ದಲ್ಲಿ, ಯಾರಾದರೂ ಅತಿಥಿಗಳು ಬಂದಲ್ಲಿ ಈ ಡಿಲೀಶಿಯಸ್‌ ಡೆಸರ್ಟ್‌ ತಯಾರಿಸಿ ಅವರನ್ನು ಇಂಪ್ರೆಸ್‌ ಮಾಡಿ. ಬ್ರೆಡ್‌ ಪುಡ್ಡಿಂಗ್‌ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೀಗಿದೆ ನೋಡಿ.

ಕ್ಯಾರಮಲ್‌ ಬ್ರೆಡ್‌ ಪುಡ್ಡಿಂಗ್‌ ತಯಾರಿಸಲು ಬೇಕಾಗುವ ಸಾಮಗ್ರಿಗಳು

  • ಬ್ರೆಡ್‌ ಸ್ಪೈಸ್‌ - 6
  • ಸಕ್ಕರೆ - 100 ಗ್ರಾಂ
  • ಹಾಲು - 2 ಕಪ್
  • ಮೊಟ್ಟೆ 2
  • ವೆನಿಲಾ ಎಸೆನ್ಸ್‌ - 1 ಟೀ ಸ್ಪೂನ್‌
  • ಉಪ್ಪು - ರುಚಿಗೆ ತಕ್ಕಷ್ಟು

ಕ್ಯಾರಮಲ್‌ ಬ್ರೆಡ್‌ ಪುಡ್ಡಿಂಗ್‌ ತಯಾರಿಸುವ ವಿಧಾನ

  1. ಬ್ರೆಡ್‌ ಅಂಚನ್ನು ಕತ್ತರಿಸಿ ತೆಗೆಯಿರಿ, ಬ್ರೆಡನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ
  2. ಒಂದು ಪಾತ್ರೆಗೆ ಹಾಲು ಸೇರಿಸಿ ಕಾಯಿಸಿ, ಪುಡ್ಡಿಂಗ್‌ ಇನ್ನಷ್ಟು ರುಚಿಯಿರಬೇಕೆಂದರೆ ಹಾಲು ಅರ್ಧ ಆಗುವರೆಗೂ ಕುಕ್‌ ಮಾಡಿ
  3. ಬ್ರೆಡ್‌ ತುಂಡುಗಳೊಂದಿಗೆ ಹಾಲನ್ನು ಸೇರಿಸಿ ತಣ್ಣಗಾಗುವರೆಗೂ ಬಿಡಿ
  4. ದಪ್ಪ ತಳದ ಪಾತ್ರೆಗೆ ಸಕ್ಕರೆ ಹಾಕಿ ಅದಕ್ಕೆ 2 ಸ್ಪೂನ್‌ ಸಕ್ಕರೆ ಸೇರಿಸಿ ಮಧ್ಯಮ ಉರಿಯಲ್ಲಿ ಬಿಡಿ ಮಾಡಿ
  5. ಸಕ್ಕರೆ ಕರಗಿ ಮಿಶ್ರಣ ಕಂದು ಬಣ್ಣಕ್ಕೆ ತಿರುಗಿ ಗಟ್ಟಿಯಾದ ನಂತರ ಮತ್ತೊಂದು ಪಾತ್ರೆ ವರ್ಗಾಯಿಸಿ ಪಕ್ಕಕ್ಕೆ ಇಡಿ
  6. ಮೊಟ್ಟೆಯನ್ನು ಒಡೆದು ಅದರೊಂದಿಗೆ ಚಿಟಿಕೆ ಉಪ್ಪು, ವೆನಿಲಾ ಎಸೆನ್ಸ್‌ ಸೇರಿಸಿ ಬೀಟ್‌ ಮಾಡಿ
  7. ಹಾಲು-ಬ್ರೆಡ್‌ ಮಿಶ್ರಣವನ್ನು ಒಂದು ಮಿಕ್ಸಿಗೆ ಹಾಕಿ ಗ್ರೈಂಡ್‌ ಮಾಡಿಕೊಂಡು, ಮೊಟ್ಟೆಯೊಂದಿಗೆ ಸೇರಿಸಿ ತಿರುವಿ
  8. ಇದನ್ನು ಸಕ್ಕರೆ ಕ್ಯಾರಮಲ್‌ ಇರುವ ಪಾತ್ರೆಗೆ ವರ್ಗಾಯಿಸಿ, ಫಾಯಿಲ್‌ ಶೀಟ್‌ನಿಂದ ಕವರ್‌ ಮಾಡಿ 30 ನಿಮಿಷ ಹಬೆಯಲ್ಲಿ ಬೇಯಿಸಿ
  9. ಪಾತ್ರೆ ತಣ್ಣಗಾದ ನಂತರ ರೆಫ್ರಿಜಿರೇಟರ್‌ನಲ್ಲಿಟ್ಟು ಸುಮಾರು 2 ಗಂಟೆಗಳ ನಂತರ ತೆಗೆಯಿರಿ
  10. ನಿಧಾನವಾಗಿ ಪಾತ್ರೆಯನ್ನು ಉಲ್ಟಾ ಮಾಡಿ ಪುಡ್ಡಿಂಗನ್ನು ಪ್ಲೇಟ್‌ಗೆ ವರ್ಗಾಯಿಸಿ
  11. ನಿಮಗಿಷ್ಟವಾದ ಆಕಾರಕ್ಕೆ ಕತ್ತರಿಸಿ ಕ್ಯಾರಮಲ್‌ ಬ್ರೆಡ್‌ ಪುಡ್ಡಿಂಗನ್ನು ಸರ್ವ್‌ ಮಾಡಿ

ಗಮನಿಸಿ: ಮೊಟ್ಟೆ ತಿನ್ನದವರು ಅದನ್ನು ಸ್ಕಿಪ್‌ ಮಾಡಬಹುದು

ಸಕ್ಕರೆ ಬದಲಿಗೆ ಬೆಲ್ಲವನ್ನು ಕೂಡಾ ಬಳಸಬಹುದು

Whats_app_banner