ಮಕ್ಕಳ ಲಂಚ್ ಬಾಕ್ಸ್‌ಗೆ ಕ್ಯಾಪ್ಸಿಕಂ ರೈಸ್; ಇಷ್ಟಪಡದವರೂ ನಾಲಿಗೆ ಚಪ್ಪರಿಸಿಕೊಂಡು ತಿನ್ನೋದು ಗ್ಯಾರಂಟಿ
ಕ್ಯಾಪ್ಸಿಕಂ ರೈಸ್: ಕ್ಯಾಪ್ಸಿಕಂ ಇಷ್ಟಪಡದವರು ಒಮ್ಮೆ ಅದರಿಂದ ತಯಾರಿಸದ ಕ್ಯಾಪ್ಸಿಕಂ ರೈಸ್ ರುಚಿ ನೋಡಿ. ಖಂಡಿತ ಇದರ ರುಚಿ ನಿಮಗೆ ಬಹಳ ಇಷ್ಟವಾಗುತ್ತದೆ. ಲಂಚ್ ಬಾಕ್ಸ್‌ಗೆ ಇದನ್ನು ತಯಾರಿಸಿದರೆ ನೀವು ಇರುವ ಸ್ಥಳವೆಲ್ಲಾ ಸುವಾಸನೆಯಿಂದ ತುಂಬಿರುತ್ತದೆ. ಕ್ಯಾಪ್ಸಿಕಂ ದಮ್ ರೈಸ್ ತಯಾರಿಸುವುದು ಬಹಳ ಸುಲಭ.
ಕ್ಯಾಪ್ಸಿಕಂ ರೈಸ್: ಕ್ಯಾಪ್ಸಿಕಂ ಹೆಸರು ಕೇಳಿದರೆ ಹೆಚ್ಚಿನವರು ಮೂಗು ಮುರಿಯುತ್ತಾರೆ. ವಾಸ್ತವವಾಗಿ ಕ್ಯಾಪ್ಸಿಕಂ ಆರೋಗ್ಯಕ್ಕೆ ಬಹಳ ಒಳ್ಳೆಯ ಆಹಾರ ಪದಾರ್ಥವಾಗಿದೆ. ಆದರೆ ಕ್ಯಾಪ್ಸಿಕಂ ರೈಸ್ ಇದು ಬಹಳ ರುಚಿಯಾಗಿರುತ್ತದೆ. ಮಸಾಲೆಯನ್ನ ಹದವಾಗಿ ಹಾಕಿದರೆ ಮಕ್ಕಳು, ಹಿರಿಯರು ಕೂಡಾ ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಕ್ಯಾಪ್ಸಿಕಂನಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ಬಹಳ ಅವಶ್ಯಕವಾಗಿದೆ. ಕ್ಯಾಪ್ಸಿಕಂ ರೈಸ್ ತಯಾರಿಸುವುದು ಹೇಗೆ? ಅದನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳೇನು ನೋಡೋಣ.
ಕ್ಯಾಪ್ಸಿಕಂ ರೈಸ್ ರೆಸಿಪಿಗೆ ಬೇಕಾಗುವ ಪದಾರ್ಥಗಳು
- ಕ್ಯಾಪ್ಸಿಕಂ - 3
- ಅನ್ನ - ಎರಡು ಕಪ್
- ಕರಿಬೇವಿನ ಎಲೆ - 3 ಎಸಳು
- ಅರಿಶಿನ - 1/2 ಸ್ಪೂನ್
- ಜೀರಿಗೆ - 1 ಸ್ಪೂನ್
- ಒಣ ಮೆಣಸಿನಕಾಯಿ - 2
- ಧನಿಯಾ - 2 ಸ್ಪೂನ್
- ಕಡ್ಲೆಕಾಯಿ ಬೀಜ - 3 ಸ್ಪೂನ್
- ಕರಿ ಮೆಣಸಿನ ಪುಡಿ - ಚಿಟಿಕೆ
- ದಾಲ್ಚಿನ್ನಿ ಚೆಕ್ಕೆ - ಸಣ್ಣ ತುಂಡು
- ಲವಂಗ - 3
- ಈರುಳ್ಳಿ - 1
- ಬೆಳ್ಳುಳ್ಳಿ ಎಸಳು - 3
- ಎಣ್ಣೆ- ಸ್ವಲ್ಪ
- ಉಪ್ಪು - ರುಚಿಗೆ
ಇದನ್ನೂ ಓದಿ: ಉಳಿದಿರುವ ಇಡ್ಲಿಯಿಂದ ಮಾಡಿ ಚಾಟ್ ರೆಸಿಪಿ: ಮಕ್ಕಳು ಇಷ್ಟಪಟ್ಟು ತಿನ್ನುವುದರಲ್ಲಿ ಡೌಟಿಲ್ಲ
ಕ್ಯಾಪ್ಸಿಕಂ ರೈಸ್ ತಯಾರಿಸುವ ವಿಧಾನ
1. ಸ್ಟೌವ್ ಮೇಲೆ ಪ್ಯಾನ್ ಬಿಸಿ ಮಾಡಿ ಲವಂಗ, ದಾಲ್ಚಿನ್ನಿ ಮತ್ತು ಕಡಲೆಕಾಯಿಯನ್ನು ಡ್ರೈ ರೋಸ್ಟ್ ಮಾಡಿ.
2. ಜೊತೆಗೆ ಧನಿಯಾ, ಜೀರ್ಗೆ ಮತ್ತು ಕರಿ ಮೆಣಸು ಹಾಕಿ ಹುರಿದು ತಣ್ಣಗಾಗುವರೆಗೂ ಬಿಟ್ಟು ಪುಡಿ ಮಾಡಿಕೊಳ್ಳಿ
3. ಮತ್ತೊಂದು ಪಾತ್ರೆಗೆ ಸ್ವಲ್ಪ ಎಣ್ಣೆ ಸೇರಿಸಿ ಬಿಸಿ ಮಾಡಿ
4. ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಕಂದು ಬಣ್ಣ ಬರುವರೆಗೂ ಫ್ರೈ ಮಾಡಿ.
5. ನಂತರ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಎಸಳು ಮತ್ತು ಕ್ಯಾಪ್ಸಿಕಂ ಹಾಕಿ ಫ್ರೈ ಮಾಡಿ.
6. ಜೊತೆಗೆ ಅರಿಶಿನ, ಕರಿಬೇವು ಸೇರಿಸಿ ಹುರಿಯಿರಿ
7. ಸ್ವಲ್ಪ ಉಪ್ಪು ಸೇರಿಸಿ ಕ್ಯಾಪ್ಸಿಕಂನ್ನು ಮೆತ್ತಗಾಗುವರೆಗೂ ಬೇಯಿಸಿ
8. ಮೊದಲೇ ಪುಡಿ ಮಾಡಿಕೊಂಡ ಮಸಾಲೆಯನ್ನು ಚೆನ್ನಾಗಿ ಹೊಂದಿಕೊಳ್ಳುವಂತೆ ಮಿಕ್ಸ್ ಮಾಡಿ
ಟೇಸ್ಟಿ ಕ್ಯಾಪ್ಸಿಕಂ ರೈಸ್ ತಿನ್ನಲು ಸಿದ್ಧ
ಗಮನಿಸಿ: ಕ್ಯಾಪ್ಸಿಕಂ ರೈಸ್ ಮಾಡಲು ಅನ್ನ ಉದುರಾಗಿರಬೇಕು
ವಿಭಾಗ