Bread Pakoda: ಎಷ್ಟು ರೀತಿಯ ಪಕೋಡಾ ಮಾಡಿದ್ದೀರಾ, ತಿಂದಿದ್ದೀರಾ; ಇಲ್ಲಿವೆ ನೋಡಿ 5 ವಿವಿಧ ರೀತಿಯ ಬ್ರೆಡ್ ಪಕೋಡಾಗಳು
Bread Pakoda: ಪ್ರತಿ ದಿನ ಒಂದೇ ರುಚಿ ತಿನ್ನೋಕೆ ಯಾರಿಗೂ ಇಷ್ಟವಾಗುವುದಿಲ್ಲ. ಅದರ ಬದಲಿಗೆ ಹೆಚ್ಚು ಶ್ರಮ ಇಲ್ಲದೆ, ಹೆಚ್ಚು ಸಾಮಗ್ರಿಗಳು ಇಲ್ಲದೆ ಪ್ರತಿದಿನ ತಯಾರಿಸುವ ತಿಂಡಿ, ಊಟ ಅಥಾವಾ ಸ್ನಾಕ್ಸನ್ನು ವಿಭಿನ್ನವಾಗಿ ತಯಾರಿಸಿದರೆ ಖಂಡಿತ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ.
Bread Pakoda: ಮನೆಗೆ ಯಾರಾದರೂ ಗೆಸ್ಟ್ ಬಂದಾಗ ಪಕೋಡಾ ಮಾಡುತ್ತೇವೆ. ಇದು ಭಾರತದ ಫೇಮಸ್ ಸ್ನಾಕ್ಸ್‌ಗಳಲ್ಲಿ ಒಂದು. ಇದು ತಯಾರಿಸಲು ಸುಲಭ, ರುಚಿಯೂ ಹೆಚ್ಚು. ಸಾಮಾನ್ಯವಾಗಿ ನಾವೆಲ್ಲರೂ ಈರುಳ್ಳಿ ಪಕೋಡಾ ಮಾಡುವುದೇ ಹೆಚ್ಚು. ಆದರೆ ಒಮ್ಮೆ ಬ್ರೆಡ್ ಪಕೋಡಾ ಮಾಡಿ ನೋಡಿ. ನಿಮ್ಮ ಮನೆಗೆ ಬಂದ ಗೆಸ್ಟ್‌ಗಳು ಇಂಪ್ರೆಸ್ ಆಗ್ತಾರೆ. ಮಕ್ಕಳು ಕೂಡಾ ಇಷ್ಟಪಟ್ಟು ತಿಂತಾರೆ.
1. ಕ್ಲಾಸಿಕ್ ಬ್ರೆಡ್ ಪಕೋಡಾ
ಇದು ಸ್ನಾಕ್ಸ್‌ನ ಬೇಸಿಕ್ ವರ್ಷನ್ ಎನ್ನಬಹುದು. ಬ್ರೆಡ್ ಸ್ಲೈಸ್, ಆಲೂಗಡ್ಡೆ, ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು , ಕೆಲವೊಂದು ಗರಂ ಮಸಾಲೆಗಳು. ಎಲ್ಲಾ ಇಂಗ್ರೀಡಿಯಂಟ್ ಮಿಕ್ಸ್ ಮಾಡಿ ಸಣ್ಣ ಪಕೋಡಾಗಳನ್ನಾಗಿ ಶೇಪ್ ಮಾಡಿ ಎಣ್ಣೆಯಲ್ಲಿ ಕರಿಯಿರಿ. ಕೆಚಪ್ ಅಥವಾ ಚಟ್ನಿ ಜೊತೆ ಸರ್ವ್ ಮಾಡಿ.
2. ಚೀಸ್ ಬ್ರೆಡ್ ಪಕೋಡಾ
ಚೀಸ್ ಇಷ್ಟಪಡುವವರಿಗೆ ಇದು ಹೇಳಿಮಾಡಿಸಿದಂತ ತಿಂಡಿ. ಬ್ರೆಡ್ ಸ್ಲೈಸ್, ತುರಿದ ಚೀಸ್, ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಜೊತೆಗೆ ಗರಂ ಮಸಾಲೆಗಳು. ಎಲ್ಲಾ ಸಾಮಗ್ರಿಗಳನ್ನು ಒಟ್ಟಿಗೆ ಮಿಕ್ಸ್ ಮಾಡಿ. ಬ್ರೆಡ್ ಸ್ಲೈಸ್‌ಗಳನ್ನು ನೀರಿಗೆ ಅದ್ದಿ ಹೆಚ್ಚುವರಿ ನೀರನ್ನು ಹಿಂಡಿ. ಚೀಸ್ ಮಿಶ್ರಣವನ್ನು ಬ್ರೆಡ್‌ಗೆ ಫಿಲ್ ಮಾಡಿ ಎಣ್ಣೆಯಲ್ಲಿ ಕಂದು ಬಣ್ಣ ಬರುವರೆಗೂ ಫ್ರೈ ಮಾಡಿ.
3. ಪನೀರ್ ಬ್ರೆಡ್ ಪಕೋಡಾ
ತುರಿದ ಪನೀರ್, ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಗರಂ ಮಸಾಲೆ ಎಲ್ಲವನ್ನು ಮಿಕ್ಸ್ ಮಾಡಿ. ಇದನ್ನು ಬ್ರೆಡ್ ಒಳಗೆ ಫಿಲ್ ಮಾಡಿ ಬಿಸಿ ಎಣ್ಣೆಯಲ್ಲಿ ಕರಿಯಿರಿ. ಕೆಚಪ್ ಅಥವಾ ಚಟ್ನಿಯೊಂದಿಗೆ ಸರ್ವ್ ಮಾಡಿ.
4. ಮಿಕ್ಸ್ ವೆಜಿಟೆಬಲ್ ಪಕೋಡಾ
ತರಕಾರಿ ತಿನ್ನದ ಮಕ್ಕಳಿಗೆ ಇದು ಬೆಸ್ಟ್ ಸ್ನಾಕ್ಸ್. ವಿವಿಧ ತರಕಾರಿಗಳು, ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಗರಂ ಮಸಾಲೆಯನ್ನು ಒಟ್ಟಿಗೆ ಮಿಕ್ಸ್ ಮಾಡಿ. ಬ್ರೆಡ್ ತುಂಡುಗಳಿಗೆ ಇದನ್ನು ಫಿಲ್ ಮಾಡಿ ಬಿಸಿ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ. ಕೆಚಪ್ ಅಥವಾ ಚಟ್ನಿಯೊಂದಿಗೆ ಸರ್ವ್ ಮಾಡಿ.
5. ಆಲೂ ಬ್ರೆಡ್ ಪಕೋಡಾ
ಆಲೂಗಡ್ಡೆ, ಸ್ನಾಕ್ಸ್ ರುಚಿಯನ್ನು ಹೆಚ್ಚಿಸುತ್ತದೆ. ಬೇಯಿಸಿದ ಆಲೂಗಡ್ಡೆ, ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಗರಂ ಮಸಾಲೆಯನ್ನು ಮಿಕ್ಸ್ ಮಾಡಿ. ಇದನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಬ್ರೆಡ್‌ನೊಂದಿಗೆ ಫಿಲ್ ಮಾಡಿ ಬಿಸಿ ಎಣ್ಣೆಯಲ್ಲಿ ಕಂದು ಬಣ್ಣ ಬರುವರೆಗೂ ಡೀಪ್ ಫ್ರೈ ಮಾಡಿ. ನಿಮಗಿಷ್ಟವಾದ ಡಿಪ್ ಜೊತೆ ಸರ್ವ್ ಮಾಡಿ.
ಇದನ್ನೂ ಓದಿ: ಭಾರತೀಯರು ಇಷ್ಟಪಟ್ಟು ತಿನ್ನುವ 6 ಫೇಮಸ್ ಚಾಟ್ಗಳಿವು
ವಿಭಾಗ