ಕನ್ನಡ ಸುದ್ದಿ  /  Lifestyle  /  Food Non Veg Recipe Orange Chicken Recipe Special Chicken Recipe How To Make Orange Chicken At Home Rst

ಒಂದೇ ರೀತಿ ಚಿಕನ್‌ ಖಾದ್ಯಗಳನ್ನ ತಿಂದು ಬೋರ್‌ ಆಗಿದ್ರೆ ಆರೆಂಜ್‌ ಚಿಕನ್‌ ಟ್ರೈ ಮಾಡಿ; ಇದರ ಹೆಸರಷ್ಟೇ ಅಲ್ಲ, ರುಚಿಯೂ ಡಿಫ್ರೆಂಟ್‌

Orange Chicken Recipe: ಚಿಕನ್‌ ಕಬಾಬ್‌, ಚಿಕನ್‌ 65, ಚಿಕನ್‌ ಲಾಲಿಪಾಪ್‌, ಚಿಕನ್‌ ಸಾರು ಇದೇ ಥರದ ಖಾದ್ಯಗಳನ್ನು ತಿಂದೂ ತಿಂದೂ ಬೇಸರ ಆಗಿದ್ಯಾ? ಹಾಗಿದ್ರೆ ಈ ಸ್ಪೆಷಲ್‌ ಆರೆಂಜ್‌ ಚಿಕನ್‌ ರೆಸಿಪಿ ಟ್ರೈ ಮಾಡಿ. ಇದರ ಹೆಸರಷ್ಟೇ ಅಲ್ಲ, ರುಚಿ ಕೂಡ ಡಿಫ್ರೆಂಟ್‌.

ಒಂದೇ ರೀತಿ ಚಿಕನ್‌ ಖಾದ್ಯಗಳನ್ನ ತಿಂದು ಬೋರ್‌ ಆಗಿದ್ರೆ ಆರೆಂಜ್‌ ಚಿಕನ್‌ ಟ್ರೈ ಮಾಡಿ; ಇದರ ಹೆಸರಷ್ಟೇ ಅಲ್ಲ, ರುಚಿಯೂ ಡಿಫ್ರೆಂಟ್‌
ಒಂದೇ ರೀತಿ ಚಿಕನ್‌ ಖಾದ್ಯಗಳನ್ನ ತಿಂದು ಬೋರ್‌ ಆಗಿದ್ರೆ ಆರೆಂಜ್‌ ಚಿಕನ್‌ ಟ್ರೈ ಮಾಡಿ; ಇದರ ಹೆಸರಷ್ಟೇ ಅಲ್ಲ, ರುಚಿಯೂ ಡಿಫ್ರೆಂಟ್‌

ಚಿಕನ್‌ ಎಂದಾಕ್ಷಣ ನಾನ್‌ವೆಜ್‌ ಪ್ರಿಯರ ಬಾಯಲ್ಲಿ ನೀರೂರುವುದು ಸಹಜ. ನಾನ್‌ವೆಜ್‌ ಪ್ರಿಯರಲ್ಲಿ ಶೇ 80ರಷ್ಟು ಚಿಕನ್‌ ಪ್ರೇಮಿಗಳಿರುತ್ತಾರೆ. ಚಿಕನ್‌ನಲ್ಲಿ ಸಾಕಷ್ಟು ವೆರೈಟಿ ಖಾದ್ಯಗಳನ್ನು ತಯಾರಿಸಬಹುದು. ಆದ್ರೆ ಸಾಮಾನ್ಯವಾಗಿ ಮನೆಗಳಲ್ಲಿ ಒಂದೇ ರೀತಿಯ ಚಿಕನ್‌ ಖಾದ್ಯಗಳನ್ನು ಮಾಡುತ್ತಾರೆ. ಇದೇ ರೀತಿ ಖಾದ್ಯಗಳನ್ನು ತಿಂದೂ ತಿಂದೂ ಬೇಸರ ಆಗಿರುವುದು ಮಾತ್ರವಲ್ಲ, ನಾಲಿಗೆಯೂ ಜಡ್ಡು ಕಟ್ಟಿರುತ್ತದೆ. ನೀವು ಚಿಕನ್‌ ಪ್ರಿಯರಾಗಿದ್ದು, ಸ್ಪೆಷಲ್‌ ಆಗಿ ಏನಾದ್ರೂ ತಿನ್‌ಬೇಕು ಅಂತ ಟ್ರೈ ಮಾಡ್ತಾ ಇದ್ರೆ ಆರೆಂಜ್‌ ಚಿಕನ್‌ ಮಾಡಬಹುದು. ಸಖತ್‌ ಟೇಸ್ಟಿ ಆಗಿರೋ ಈ ಖಾದ್ಯವನ್ನು ಮನೆಯಲ್ಲೂ ಸುಲಭವಾಗಿ ತಯಾರಿಸಬಹುದು.

ಈಗಂತೂ ಆರೆಂಜ್‌ ಸೀಸನ್‌. ನೀವು ಈ ಭಾನುವಾರ ಮನೆಯಲ್ಲಿ ಚಿಕನ್‌ ಮಾಡ್ಬೇಕು ಅಂತಿದ್ರೆ ಆರೆಂಜ್‌ ತಂದು ಆರೆಂಜ್‌ ಚಿಕನ್‌ ರೆಸಿಪಿ ಮಾಡಿಬಿಡಿ, ರೆಸಿಪಿ ನಾವ್‌ ಹೇಳ್‌ಕೊಡ್ತೀವಿ. ಆರೆಂಜ್ ಚಿಕನ್ ಮೂಲತಃ ಚೈನೀಸ್-ಅಮೆರಿಕನ್ ಭಕ್ಷ್ಯ. ಇದರ ಹೆಸರಷ್ಟೇ ಅಲ್ಲ ಟೇಸ್ಟ್‌ ಕೂಡ ಸಖತ್‌ ಡಿಫ್ರೆಂಟ್‌, ಒಮ್ಮೆ ತಿಂದ್ರೆ ಮತ್ತೆ ಮತ್ತೆ ತಿನ್ನಬೇಕು ಅನ್ನಿಸೋದ್ರಲ್ಲಿ ಎರಡು ಮಾತಿಲ್ಲ. ಹಾಗಾದ್ರೆ ಆರೆಂಜ್‌ ಚಿಕನ್‌ ಮಾಡೋದು ಹೇಗೆ ನೋಡಿ.

ಆರೆಂಜ್ ಚಿಕನ್‌ಗೆ ಬೇಕಾಗುವ ಪದಾರ್ಥಗಳು

ಬೋನ್‌ಲೆಸ್ ಚಿಕನ್ - ಅರ್ಧ ಕೆಜಿ, ಕಾರ್ನ್ ಫ್ಲೋರ್ - 1 ಕಪ್‌, ಮೊಟ್ಟೆ - 1, ರುಚಿಗೆ ತಕ್ಕಷ್ಟು ಉಪ್ಪು, ಕಾಳುಮೆಣಸು, ಎಣ್ಣೆ, ಒಂದು ಕಪ್ ಕಿತ್ತಳೆ ರಸ, ಸ್ವಲ್ಪ ಸೋಯಾ ಸಾಸ್, ಕಾಲು ಚಮಚ ವಿನೆಗರ್, ಶುಂಠಿ - ಸಣ್ಣದಾಗಿ ಹೆಚ್ಚಿದ್ದು ಒಂದು ಚಮಚ, ಒಂದು ಬೆಳ್ಳುಳ್ಳಿ - 1 ಚಮಚ (ಚಿಕ್ಕದಾಗಿ ಹೆಚ್ಚಿದ್ದು), ಕಂದು ಸಕ್ಕರೆ - ಸ್ವಲ್ಪ, ಒಂದು ಚಮಚ ಕಾರ್ನ್ ಸ್ಟ್ರ್ಯಾಚ್‌, ಸ್ಪ್ರಿಂಗ್‌ ಆನಿಯನ್‌ - ಅಲಂಕರಿಸಲು

ತಯಾರಿಸುವ ವಿಧಾನ: ಒಂದು ಬೌಲ್‌ನಲ್ಲಿ ಬೋನ್‌ಲೆಸ್‌ ಚಿಕನ್‌ ತುಂಡುಗಳನ್ನು ಹಾಕಿ, ಅದಕ್ಕೆ ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಸೇರಿಸಿ ಮಿಶ್ರಣ ಮಾಡಿ. ಬೌಲ್‌ವೊಂದರಲ್ಲಿ ಕಾರ್ನ್‌ಫ್ಲೋರ್‌, ಮೊಟ್ಟೆ ಹಾಗೂ ಸ್ವಲ್ಪ ನೀರು ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕಲೆಸಿಟ್ಟುಕೊಂಡ ಚಿಕನ್‌ಗೆ ಸೇರಿಸಿ. ಇದನ್ನು ಚೆನ್ನಾಗಿ ಕಲೆಸಿ ಮ್ಯಾರಿನೇಟ್‌ ಮಾಡಲು ಬಿಡಿ. ಈಗ ಪಾತ್ರೆಯೊಂದರಲ್ಲಿ ಎಣ್ಣೆ ಕಾಯಲು ಇಡಿ. ನಂತರ ಮ್ಯಾರಿನೇಟ್‌ ಮಾಡಿಟ್ಟುಕೊಂಡ ಚಿಕನ್‌ ತುಂಡುಗಳನ್ನು ಹಾಕಿ ಕಂದು ಬಣ್ಣ ಬರುವವರೆಗೂ ಬೇಯಿಸಿ. ಅದನ್ನು ಒಂದು ಪಾತ್ರೆಗೆ ಹಾಕಿ.

ಸಾಸ್ ತಯಾರಿಸಲು, ಪ್ಯಾನ್‌ ಒಂದನ್ನು ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ಕಿತ್ತಳೆ ರಸ, ಕಿತ್ತಳೆ ಸಿಪ್ಪೆ, ಸೋಯಾ ಸಾಸ್, ವಿನೆಗರ್, ಬ್ರೌನ್ ಶುಗರ್, ಶುಂಠಿ ಮತ್ತು ಬೆಳ್ಳುಳ್ಳಿ ಎಲ್ಲವನ್ನೂ ಸೇರಿಸಿ, ಚೆನ್ನಾಗಿ ಕಲೆಸಿ. ಇದು ಕುದಿಯುವಾಗ, ಕಾರ್ನ್‌ ಸ್ಟ್ರ್ಯಾಚ್‌ ಸೇರಿಸಿ. ಸಾಸ್ ದಪ್ಪಗಾದ ನಂತರ, ಕರಿದಿಟ್ಟುಕೊಂಡ ಚಿಕನ್ ತುಂಡುಗಳನ್ನು ಸೇರಿಸಿ, ಎಲ್ಲವನ್ನೂ ಮಿಶ್ರಣ ಮಾಡಿ. ನಂತರ ಇದನ್ನು ಪ್ಲೇಟ್‌ಗೆ ಹಾಕಿ ಅದರ ಮೇಲೆ ಸ್ಪ್ರಿಂಗ್‌ ಆನಿಯನ್‌ ಉದುರಿಸಿ. ಈ ನಿಮ್ಮ ಮುಂದೆ ರುಚಿಯಾದ ಆರೆಂಜ್‌ ಚಿಕನ್‌ ತಿನ್ನಲು ಸಿದ್ಧ.

(This copy first appeared in Hindustan Times Kannada website. To read more like this please logon to kannada.hindustantimes.com)