Vangi Bath Power: ವಾಂಗಿಭಾತ್‌ಗೆ ಡಿಫ್ರೆಂಟ್ ರುಚಿ ಸಿಗಬೇಕಾ, ಹಾಗಿದ್ರೆ ಮನೆಯಲ್ಲೇ ತಯಾರಿಸಿ ವಾಂಗಿಭಾತ್ ಪೌಡರ್, ಇಲ್ಲಿದೆ ರೆಸಿಪಿ
ವಾಂಗಿಭಾತ್ ಮಾಡೋಕೆ ಹೊರಟಾಗ ವಾಂಗಿಭಾತ್ ಪುಡಿ ಇಲ್ಲ ಅಂತ ಗೊತ್ತಾಗಿ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವ ಸಂದರ್ಭ ನಿಮಗೂ ಎದುರಾಗಿದ್ಯಾ, ಹಾಗಿದ್ರೆ ಇನ್ನು ಮುಂದೆ ಆ ಚಿಂತೆ ಬೇಡ. ಮನೆಯಲ್ಲೇ ವಾಂಗಿಭಾತ್ ಪುಡಿ ತಯಾರಿಸಿ, ಸಂಗ್ರಹಿಸಿಟ್ಟುಕೊಳ್ಳಿ. ಇದು ನಿಮ್ಮ ರೈಸ್‌ಬಾತ್‌ಗೆ ಡಿಫ್ರೆಂಟ್ ರುಚಿ ನೀಡೋದ್ರಲ್ಲಿ ಅನುಮಾನವಿಲ್ಲ.
ಪ್ರತಿದಿನ ಮನೆಯಲ್ಲಿ ಏನ್ ತಿಂಡಿ ಮಾಡೋದು ಅಂತ ಹೆಣ್ಣುಮಕ್ಕಳಿಗೆ ಚಿಂತೆ ಕಾಡೋದು ಸಹಜ. ಕೆಲವೊಮ್ಮೆ ಏನಾದ್ರೂ ತಿಂಡಿ ಮಾಡಬೇಕು ಅಂದ್ಕೊಂಡ್ರೆ ಅದಕ್ಕೆ ಬೇಕಾದ ಸಾಮಗ್ರಿಗಳು ಮನೆಯಲ್ಲಿ ಇರುವುದಿಲ್ಲ. ಅದರಲ್ಲೂ ರೈಸ್ ಐಟಂ ಮಾಡೋದು ಸುಲಭ ಅಂದ್ಕೊಂಡು ಮಾಡಲು ಹೊರಟರೆ ಅದರ ಪುಡಿಗಳು ಮನೆಯಲ್ಲಿ ಇರುವುದಿಲ್ಲ, ತಕ್ಷಣಕ್ಕೆ ಅಂಗಡಿಗೆ ಹೋಗೋದು ಕಷ್ಟವಾಗುತ್ತೆ. ಅಂತಹ ಸಂದರ್ಭದಲ್ಲೇ ಮನೆಯಲ್ಲೇ ರುಚಿಯಾದ ಪುಡಿಗಳನ್ನು ಮಾಡಿಟ್ಟುಕೊಳ್ಳಬಹುದು. ಇದು ಆರೋಗ್ಯಕ್ಕೂ ಉತ್ತಮ ರುಚಿಯು ಚೆನ್ನಾಗಿರುತ್ತದೆ.
ನಿಮ್ಮ ಮನೆಯಲ್ಲಿ ವಾಂಗಿಭಾತ್ ಇಷ್ಟಪಟ್ರೆ ನೀವು ವಾಂಗಿಭಾತ್ ಪುಡಿಯನ್ನು ರೆಡಿ ಮಾಡಿ ಇಟ್ಟುಕೊಳ್ಳಿ. ಅಂಗಡಿಗೆ ಹೋಗಿ ವಾಂಗಿಭಾತ್ ಪುಡಿ ತರುವ ಬದಲು ಮನೆಯಲ್ಲೇ ಸಖತ್ ಟೇಸ್ಟಿ ಆಗಿರೋ ವಾಂಗಿಭಾತ್ ಮಾಡಿ. ಇದನ್ನು ತಯಾರಿಸಲು ಏನೆಲ್ಲಾ ಸಾಮಗ್ರಿ ಬೇಕು, ತಯಾರಿಸೋದು ಹೇಗೆ ಎಂಬಿತ್ಯಾದಿ ವಿವರ ಇಲ್ಲಿದೆ.
ವಾಂಗಿಭಾತ್ ಪೌಡರ್
ಬೇಕಾಗುವ ಸಾಮಗ್ರಿಗಳು: ಕಾಶ್ಮೀರಿ ಚಿಲ್ಲಿ - 3, ಉದ್ದಿನಬೇಳೆ - 1 ಚಮಚ, ಕಡಲೆಬೇಳೆ - 1 ಚಮಚ, ಮೆಂತ್ಯೆ - ಕಾಲು ಚಮಚ, ಎಣ್ಣೆ - 1 ಚಮಚ, ಕೊತ್ತಂಬರಿ ಕಾಳು - 1ಚಮಚ, ಗಸೆಗಸೆ - ಮುಕ್ಕಾಲು ಚಮಚ, ದಾಲ್ಚಿನ್ನಿ - 1 ಇಂಚು, ಏಲಕ್ಕಿ - 2, ಲವಂಗ - 2, ತೆಂಗಿನತುರಿ - 2 ಚಮಚ,
ತಯಾರಿಸುವ ವಿಧಾನ: ಒಂದು ಪ್ಯಾನ್‌ನಲ್ಲಿ ಒಂದು ಚಮಚ ಎಣ್ಣೆ ಹಾಕಿ, ಬಿಸಿಯಾದ ಮೇಲೆ ಮೆಣಸು ಹಾಕಿ ಹುರಿದು ಬದಿಗಿಟ್ಟುಕೊಳ್ಳಿ. ನಂತರ ಅದೇ ಪಾತ್ರೆಗೆ ಉದ್ದಿನಬೇಳೆ, ಕಡಲೆಬೇಳೆ, ಕೊತ್ತಂಬರಿ ಕಾಳು, ಮೆಂತ್ಯೆ, ಗಸೆಗಸೆ, ದಾಲ್ಚಿನ್ನಿ, ಏಲಕ್ಕಿ, ಲವಂಗ ಹಾಗೂ ತೆಂಗಿನತುರಿ ಸೇರಿಸಿ. ಇದನ್ನು ಮಧ್ಯಮ ಉರಿಯಲ್ಲಿ ಪರಿಮಳ ಬರುವವರೆಗೂ ಹುರಿದುಕೊಳ್ಳಿ. ಈ ಎಲ್ಲವೂ ತಣ್ಣದಾಗ ನಂತರ ನುಣ್ಣಗೆ ಪುಡಿ ಮಾಡಿಕೊಳ್ಳಿ. ಈ ನಿಮ್ಮ ಮುಂದೆ ಪರಿಮಳ ಭರಿತ ವಾಂಗಿಭಾತ್ ಪೌಡರ್ ರೆಡಿ. ಇದನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಟ್ಟುಕೊಳ್ಳಿ.
ವಾಂಗಿಭಾತ್ ಬದನೆಕಾಯಿ ಸೇರಿಸಿ ತಯಾರಿಸುವ ಖಾದ್ಯ. ಇದು ಬೆಳಗಿನ ತಿಂಡಿ, ಲಂಚ್, ಡಿನ್ನರ್‌ಗೆ ಹೇಳಿ ಮಾಡಿಸಿದ್ದು. ಸುಲಭವಾಗಿ ತಯಾರಿಸಬಹುದಾಗ ಈ ರೆಸಿಪಿ ಸಖತ್ ಟೇಸ್ಟಿ ಆಗಿರುತ್ತೆ. ಬದನೆಕಾಯಿ ಒಗ್ಗರಣೆ ಹಾಕಿ ಅದಕ್ಕೆ ಈ ಪುಡಿ ಮಿಶ್ರಣ ಮಾಡಿ, ಅದರೊಂದಿಗೆ ಅನ್ನ ಸೇರಿಸಿದರೆ ರುಚಿಯಾದ ವಾಂಗಿಭಾತ್ ಸವಿಯಲು ಸಿದ್ಧ. ಮನೆಯಲ್ಲೇ ವಾಂಗಿಭಾತ್ ಪುಡಿ ತಯಾರಿಸಿ ಮಾಡಿದ್ರೆ ಎಲ್ಲರೂ ಇಷ್ಟಪಟ್ಟು ತಿನ್ನೋದು ಖಂಡಿತ.
ವಿಭಾಗ