Onion Powder: ಮನೆಯಲ್ಲೇ ಈರುಳ್ಳಿ ಪುಡಿ ತಯಾರಿಸುವುದು ಹೇಗೆ, ಇಲ್ಲಿದೆ ಸುಲಭ ವಿಧಾನ
ಕನ್ನಡ ಸುದ್ದಿ  /  ಜೀವನಶೈಲಿ  /  Onion Powder: ಮನೆಯಲ್ಲೇ ಈರುಳ್ಳಿ ಪುಡಿ ತಯಾರಿಸುವುದು ಹೇಗೆ, ಇಲ್ಲಿದೆ ಸುಲಭ ವಿಧಾನ

Onion Powder: ಮನೆಯಲ್ಲೇ ಈರುಳ್ಳಿ ಪುಡಿ ತಯಾರಿಸುವುದು ಹೇಗೆ, ಇಲ್ಲಿದೆ ಸುಲಭ ವಿಧಾನ

Onion Powder: ಮಸಾಲೆ ಪದಾರ್ಥಗಳ ಮ್ಯಾರಿನೇಟ್‌ ಮಾಡುವುದು, ನಾನ್‌ ವೆಜ್‌ ಐಟಮ್‌ಗಳನ್ನು ತಯಾರಿಸುವಾಗ ಈರುಳ್ಳಿ ಪುಡಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅಂಗಡಿಯಿಂದ ತಂದ ಈರುಳ್ಳಿ ಪುಡಿ ಬೇಗ ಹಾಳಾಗುತ್ತದೆ. ಆದ್ದರಿಂದ ಮನೆಯಲ್ಲೇ ತಯಾರಿಸುವುದು ಉತ್ತಮ.

ಮನೆಯಲ್ಲೇ ಸುಲಭವಾಗಿ ಈರುಳ್ಳಿ ಪುಡಿ ಮಾಡುವ ವಿಧಾನ
ಮನೆಯಲ್ಲೇ ಸುಲಭವಾಗಿ ಈರುಳ್ಳಿ ಪುಡಿ ಮಾಡುವ ವಿಧಾನ (PC: Unsplash)

Onion Powder: ಪ್ರತಿದಿನ ಅಡುಗೆಯಲ್ಲಿ ಈರುಳ್ಳಿ ಬಳಸುತ್ತೇವೆ. ಆದರೆ ಕೆಲವೊಂದು ಖಾದ್ಯಗಳನ್ನು ತಯಾರಿಸುವಾಗ ಈರುಳ್ಳಿ ಬಳಸಲಾಗದಿದ್ದರೆ ಈರುಳ್ಳಿ ಪುಡಿಯನ್ನು ಬಳಸುತ್ತೇವೆ. ಆದರೆ ಅಂಗಡಿಯಿಂದ ತಂದ ಈರುಳ್ಳಿ ಪುಡಿಗೆ ಪ್ರಿಸರ್ವೇಟಿವ್‌ ಸೇರಿಸಿರುತ್ತಾರೆ. ಅದನ್ನು ನೀವು ಜಾಗ್ರತೆಯಿಂದ ಸ್ಟೋರ್‌ ಮಾಡದಿದ್ದಲ್ಲಿ ಕೆಡುವ ಸಾಧ್ಯತೆ ಹೆಚ್ಚು. ಆದ್ದರಿಂದ ನೀವು ಮನೆಯಲ್ಲೇ ಈರುಳ್ಳಿ ಪುಡಿಯನ್ನು ತಯಾರಿಸಬಹುದು.

ಈರುಳ್ಳಿ ಪುಡಿ ಮಾಡಲು ತಾಜಾ ಈರುಳ್ಳಿ ಆಯ್ಕೆ ಮಾಡಿ. ಪರಿಮಳ ಚೆನ್ನಾಗಿರಬೇಕೆಂದರೆ ತಾಜಾ ಈರುಳ್ಳಿಯನ್ನು ಆರಿಸಿ. ಕೆಂಪು ಈರುಳ್ಳಿಯನ್ನು ಸಾಮಾನ್ಯವಾಗಿ ಈರುಳ್ಳಿ ಪುಡಿ ಮಾಡಲು ಬಳಸಲಾಗುತ್ತದೆ.

  • ಈರುಳ್ಳಿ ಸಿಪ್ಪೆಯನ್ನು ಬಿಡಿಸಿ ಅದನ್ನು ತೆಳುವಾಗಿ ಕತ್ತರಿಸಿ.
  • ಈ ಈರುಳ್ಳಿಗಳನ್ನು ಡಿ ಹೈಡ್ರೇಟರ್‌ ಟ್ರೇನಲ್ಲಿ ಅರೇಂಜ್‌ ಮಾಡಿ. 135°F ಟೆಂಪ್ರೇಚರ್‌ನಲ್ಲಿ ಡಿ ಹೈಡ್ರೇಟ್‌ ಮಾಡಿ. ಈ ಎಲ್ಲಾ ಪ್ರಕ್ರಿಯೆಗೆ ಸುಮಾರು 8-10 ಗಂಟೆ ಸಮಯ ತೆಗೆದುಕೊಳ್ಳುತ್ತದೆ.
  • ಒಂದು ವೇಳೆ ನಿಮ್ಮ ಬಳಿ ಡಿ ಹೈಡ್ರೇಟರ್‌ ಇಲ್ಲದಿದ್ದಲ್ಲಿ ಓವನ್‌ನಲ್ಲಿ ಕೂಡಾ ಈರುಳ್ಳಿಯನ್ನು ಒಣಗಿಸಬಹುದು. ಕತ್ತರಿಸಿದ ಈರುಳ್ಳಿ ಚೂರುಗಳನ್ನು ಬೇಕಿಂಗ್ ಶೀಟ್‌ನಲ್ಲಿ ಜೋಡಿಸಿ ಮತ್ತು ಅವನ್ನು ಓವನ್‌ನಲ್ಲಿಟ್ಟು ಕಡಿಮೆ ಟೆಂಪ್ರೇಚರ್‌ನಲ್ಲಿ ಬೇಕ್‌ ಮಾಡಿ.
  • ಡ್ರೈ ಮಾಡಿದ ಈರುಳ್ಳಿ ಸ್ವಲ್ಪ ತಣ್ಣಗಾದ ನಂತರ ಮಿಕ್ಸಿ ಜಾರ್‌ಗೆ ಸೇರಿಸಿ ಪುಡಿ ಮಾಡಿ. ಈ ಪುಡಿಯನ್ನು ಕೈಯ್ಯಲ್ಲಿ ಮುಟ್ಟದೆ ಗಾಳಿ ಆಡದ ಡಬ್ಬದಲ್ಲಿ ಶೇಖರಿಸಿಡಿ.

ಈರುಳ್ಳಿ ಪುಡಿ ಮಾಡುವ ಮತ್ತೊಂದು ವಿಧಾನ

  • ಸ್ಟೌವ್‌ ಟಾಪ್‌ ಬಳಸಿ ಕೂಡಾ ನೀವು ಈರುಳ್ಳಿ ಪುಡಿ ಮಾಡಿಕೊಳ್ಳಬಹುದು.
  • ಸ್ಟ್ರಾಂಗ್‌ ಇರುವ ಈರುಳ್ಳಿಯನ್ನು ಆರಿಸಿಕೊಂದು ಸಿಪ್ಪೆ ತೆಗೆಯಿರಿ.
  • ಒಂದು ಪ್ಯಾನ್‌ ಬಿಸಿ ಮಾಡಿಕೊಂಡು ಕಡಿಮೆ ಉರಿಯಲ್ಲಿ ಈರುಳ್ಳಿ ಹುರಿಯಿರಿ, ಆದರೆ ಈರುಳ್ಳಿ ಸೀದುಹೋಗದಂತೆ ನೋಡಿಕೊಳ್ಳಿ.
  • ಹುರಿದ ಈರುಳ್ಳಿ ಸ್ಲೈಸ್‌ಗಳನ್ನು ಬೇಕಿಂಗ್‌ ಶೀಟ್‌ನಲ್ಲಿಟ್ಟು ಪ್ರೀ ಹೀಟ್‌ ಮಾಡಿದ ಓವನ್‌ನಲ್ಲಿ ಬೇಕ್‌ ಮಾಡಿ.
  • ಡ್ರೈ ಮಾಡಿದ ಈರುಳ್ಳಿ ಸ್ಲೈಸ್‌ಗಳನ್ನು ಬ್ಲೆಂಡರ್‌ನಲ್ಲಿ ಪುಡಿ ಮಾಡಿ, ಏರ್‌ ಟೈಟ್‌ ಕಂಟೇನರ್‌ನಲ್ಲಿ ಸ್ಟೋರ್‌ ಮಾಡಿ.

ಗಮನಿಸಿ: ಈರುಳ್ಳಿಯನ್ನು ನೀವು ಕಂಟೇನರ್‌ನಿಂದ ತೆಗೆಯುವಾಗ ಸ್ಪೂನ್‌ ಬಳಸಿ, ಒದ್ದೆ ಕೈ ಬಳಸಬೇಡಿ.

Whats_app_banner