ಕೆಲವೇ ದಿನಗಳಲ್ಲಿ ಕೂದಲು ಉದ್ದವಾಗಿ, ದಟ್ಟವಾಗಿ ಬೆಳೆಯಬೇಕಾ, ಹಾಗಲಕಾಯಿ ರಸವನ್ನು ಹೀಗೆ ಬಳಸಿ, ಫಲಿತಾಂಶ ಕಂಡು ನೀವೂ ಖುಷಿ ಪಡ್ತೀರಿ
ಹಾಗಲಕಾಯಿ ಹೆಸರು ಕೇಳಿದ್ರೆ ಕೆಲವರು ಮುಖ ಸಿಂಡರಿಸುತ್ತಾರೆ. ಆದರೆ ಇದರಿಂದ ಆರೋಗ್ಯಕ್ಕೆ ನೂರಾರು ಪ್ರಯೋಜನಗಳಿವೆ. ಇದು ಆರೋಗ್ಯಕ್ಕೆ ಮಾತ್ರವಲ್ಲ, ಕೂದಲಿಗೂ ಉತ್ತಮ. ಹಾಗಲಕಾಯಿಯನ್ನು ಈ ರೀತಿ ಬಳಸಿದ್ರೆ ಕೂದಲು ಸೊಂಪಾಗಿ, ದಟ್ಟವಾಗಿ ಬೆಳೆಯೋದ್ರಲ್ಲಿ ಅನುಮಾನವಿಲ್ಲ.
ಹಾಗಲಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಾರದಲ್ಲಿ ಕನಿಷ್ಠ ಎರಡರಿಂದ ಮೂರು ಬಾರಿ ಹಾಗಲಕಾಯಿ ಖಾದ್ಯಗಳನ್ನು ತಿನ್ನಲು ಪೌಷ್ಟಿಕತಜ್ಞರು ಸಲಹೆ ನೀಡುತ್ತಾರೆ. ಆದರೆ ಹಲವರಿಗೆ ಇದರ ರುಚಿ ಇಷ್ಟವಾಗದ ಕಾರಣ ಅದನ್ನು ತಿನ್ನುವುದಿಲ್ಲ. ಯಾಕೆಂದರೆ ಇದು ಕಟು ವಾಸನೆ ಹಾಗೂ ಕಹಿ ರುಚಿಯನ್ನು ಹೊಂದಿರುತ್ತದೆ. ವಾಸ್ತವವಾಗಿ, ಹಾಗಲಕಾಯಿ ತಿನ್ನುವುದು ನಮ್ಮ ದೇಹದ ಎಲ್ಲಾ ಅಂಗಗಳಿಗೂ ಒಳ್ಳೆಯದು. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಕೂದಲನ್ನು ಉದ್ದ ಮತ್ತು ಹೊಳೆಯುವಂತೆ ಮಾಡುತ್ತದೆ.
ಹಾಗಲಕಾಯಿಯಲ್ಲಿರುವ ಜೀವಕೋಶಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತವೆ ಎಂದು 2016ರ ಅಧ್ಯಯನವು ಸಾಬೀತುಪಡಿಸಿದೆ. ಚರ್ಮರೋಗ ತಜ್ಞರು ಕೂಡ ಇದನ್ನು ದೃಢಪಡಿಸಿದ್ದಾರೆ. ಇದು ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ.
ಕೂದಲಿನ ಆರೋಗ್ಯಕ್ಕೆ ಹಾಗಲಕಾಯಿ
ಇದು ಆ್ಯಂಟಿಮೈಕ್ರೊಬಿಯಲ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳಿಂದ ಸಮೃದ್ಧವಾಗಿದೆ. ಇದು ನೆತ್ತಿಯ ಮೇಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಕೂದಲು ಉದುರುವುದನ್ನು ತಡೆಯುತ್ತದೆ. ನೆತ್ತಿಯ ಮೇಲಿನ ಕೂದಲನ್ನು ಹೈಡ್ರೇಟ್ ಆಗಿ ಇಡುತ್ತದೆ. ಇದರಲ್ಲಿರುವ ವಿಟಮಿನ್‌ಗಳು ಕೂದಲನ್ನು ಸುಂದರವಾಗಿ ಮತ್ತು ಉದ್ದವಾಗಿ ಬೆಳೆಯುವಂತೆ ಮಾಡುತ್ತದೆ. ಇದು ಕೂದಲಿಗೆ ನೈಸರ್ಗಿಕ ಕಂಡಿಷನರ್ ಆಗಿ ಕಾರ್ಯನಿರ್ವಹಿಸುತ್ತದೆ. ಕೂದಲು ಸೀಳುವುದನ್ನು ತಡೆಯುತ್ತದೆ.
ಹಾಗಲಕಾಯಿ ರಸ ಕುಡಿಯಬಹುದು ಎಂದು ಭಾವಿಸುವವರು ಚಿಟಿಕೆ ಉಪ್ಪು ಸೇರಿಸಿ ಪ್ರತಿದಿನ ಕುಡಿಯಬೇಕು. ಪ್ರತಿದಿನ ಇದನ್ನು ಕುಡಿಯುವುದರಿಂದ ಕೆಲವೇ ದಿನಗಳಲ್ಲಿ ಫಲಿತಾಂಶ ಗೋಚರವಾಗುತ್ತದೆ. ಒಂದು ವಾರದಲ್ಲಿ ನಿಮ್ಮ ಕೂದಲು ಬೆಳೆಯಲು ಆರಂಭವಾಗುತ್ತದೆ.
ಹಾಗಲಕಾಯಿ ಹೇರ್ ಮಾಸ್ಕ್
ಹಾಗಲಕಾಯಿ ರಸದಿಂದ ಹೇರ್ ಮಾಸ್ಕ್ ಕೂಡ ತಯಾರಿಸಬಹುದು. ಇದನ್ನು ರುಬ್ಬಿ, ರಸ ತೆಗೆಯಿರಿ ಮತ್ತು ಅದನ್ನು ನೇರವಾಗಿ ನಿಮ್ಮ ಕೂದಲಿಗೆ ಹಚ್ಚಿ. ಅರ್ಧ ಗಂಟೆ ಬಿಡಿ ಮತ್ತು ಸಾಮಾನ್ಯ ಶಾಂಪೂ ಬಳಸಿ ತಲೆಸ್ನಾನ ಮಾಡಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ಕೂದಲಿನ ಬೆಳವಣಿಗೆ ಉತ್ತಮಗೊಳ್ಳುತ್ತದೆ. ಹಾಗಲಕಾಯಿ ತೆಗೆದುಕೊಂಡು ಕೂದಲಿಗೆ ಚೆನ್ನಾಗಿ ಮೂರು ನಿಮಿಷಗಳ ಕಾಲ ಉಜ್ಜಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಹಾಗಲಕಾಯಿ ರಸಕ್ಕೆ ಮೊಸರು ಅಥವಾ ತೆಂಗಿನ ಎಣ್ಣೆಯನ್ನು ಸೇರಿಸಿ ಮತ್ತು ಅದನ್ನು ಹೇರ್ ಮಾಸ್ಕ್ ಆಗಿ ಬಳಸಿ. ಇದನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆ ಬಿಡಿ. ನಂತರ ನೀರಿನಿಂದ ತೊಳೆಯಿರಿ.
ಹಾಗಲಕಾಯಿ ಎಣ್ಣೆ
ಹಾಗಲಕಾಯಿಯಿಂದ ಎಣ್ಣೆಯನ್ನು ತಯಾರಿಸಬಹುದು. ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆಯಲ್ಲಿ ಹಾಗಲಕಾಯಿ ತುಂಡುಗಳನ್ನು ಹಾಕಿ ಮತ್ತು ಕೆಲವು ದಿನಗಳವರೆಗೆ ಇರಿಸಿ, ನಂತರ ಆ ಎಣ್ಣೆಯನ್ನು ಕೂದಲಿಗೆ ಹಚ್ಚಿ. ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಎಲ್ಲಕ್ಕಿಂತ ಹೆಚ್ಚಾಗಿ ಹಾಗಲಕಾಯಿಯನ್ನು ನಿಮ್ಮ ಆಹಾರದ ಭಾಗವನ್ನಾಗಿ ಮಾಡಿಕೊಳ್ಳುವುದು ಉತ್ತಮ. ಪ್ರತಿದಿನ ಒಂದು ಲೋಟ ಹಾಗಲಕಾಯಿ ರಸವನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ.
ವಿಭಾಗ