ತಲೆಗೂದಲು ಉದುರುತ್ತಿದ್ದರೆ ಚಿಂತೆ ಬೇಡ: ಕೂದಲು ದಪ್ಪವಾಗಿ, ಉದ್ದವಾಗಿ ಬೆಳೆಯಲು ಜೀವನಶೈಲಿಯಲ್ಲಿ ಈ ಬದಲಾವಣೆ ತನ್ನಿ-hair care tips easy lifestyle changes to achieve hair growth how to get thicker hair prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ತಲೆಗೂದಲು ಉದುರುತ್ತಿದ್ದರೆ ಚಿಂತೆ ಬೇಡ: ಕೂದಲು ದಪ್ಪವಾಗಿ, ಉದ್ದವಾಗಿ ಬೆಳೆಯಲು ಜೀವನಶೈಲಿಯಲ್ಲಿ ಈ ಬದಲಾವಣೆ ತನ್ನಿ

ತಲೆಗೂದಲು ಉದುರುತ್ತಿದ್ದರೆ ಚಿಂತೆ ಬೇಡ: ಕೂದಲು ದಪ್ಪವಾಗಿ, ಉದ್ದವಾಗಿ ಬೆಳೆಯಲು ಜೀವನಶೈಲಿಯಲ್ಲಿ ಈ ಬದಲಾವಣೆ ತನ್ನಿ

ಇಂದಿನ ದಿನಗಳಲ್ಲಿ ತಲೆಗೂದಲಿನ ಚಿಂತೆ ಹಲವರದ್ದು, ತಲೆಗೂದಲು ಉದುರುವುದು, ಬೆಳವಣಿಗೆಯಾಗುವುದಿಲ್ಲ ಇತ್ಯಾದಿ ಸಮಸ್ಯೆಗಳಿಂದ ಹಲವರು ಚಿಂತೆಗೀಡಾಗಿದ್ದಾರೆ. ತಲೆಗೂದಲಿನ ಬೆಳವಣಿಗೆಗೆ ಚಿಕಿತ್ಸೆಗಳು ಅಥವಾ ದುಬಾರಿ ಉತ್ಪನ್ನಗಳ ಅಗತ್ಯವಿರುವುದಿಲ್ಲ. ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಅದು ಹೇಗೆ ಎಂಬ ಬಗ್ಗೆ ಇಲ್ಲಿ ಓದಿ..

ತಲೆಗೂದಲಿನ ಬೆಳವಣಿಗೆಗೆ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಅದು ಹೇಗೆ ಎಂಬ ಬಗ್ಗೆ ಇಲ್ಲಿ ಓದಿ..
ತಲೆಗೂದಲಿನ ಬೆಳವಣಿಗೆಗೆ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಅದು ಹೇಗೆ ಎಂಬ ಬಗ್ಗೆ ಇಲ್ಲಿ ಓದಿ..

ತಲೆಗೂದಲು ಆರೋಗ್ಯಕರವಾಗಿ, ಉದ್ದ ಮತ್ತು ದಪ್ಪ ಕೂದಲನ್ನು ಪಡೆಯುವುದು ಎಂದರೆ ಸವಾಲೇ ಸರಿ. ಬಹುತೇಕ ಮಂದಿ ತಲೆಗೂದಲ ಬೆಳವಣಿಗೆಗಾಗಿ ಏನಾದರೂ ಪ್ರಯತ್ನಿಸುತ್ತಲೇ ಇರುತ್ತಾರೆ. ಕೂದಲಿನ ಗುಣಲಕ್ಷಣಗಳಲ್ಲಿ ಜೆನೆಟಿಕ್ಸ್ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ದೈನಂದಿನ ದಿನಚರಿಯಲ್ಲಿ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಅಳವಡಿಸಿಕೊಳ್ಳುವುದು ಕೂಡ ಬಹಳ ಮುಖ್ಯ. ತಲೆಗೂದಲಿನ ಬೆಳವಣಿಗೆಯು ಆಹಾರ ಪದ್ಧತಿ, ಜೀವನಶೈಲಿ ಸೇರಿದಂತೆ ವಿವಿಧ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದರಿಂದ ತಲೆಗೂದಲ ಬೆಳವಣಿಗೆಯನ್ನು ಗಮನಾರ್ಹವಾಗಿ ಉತ್ತೇಜಿಸುತ್ತದೆ. ಒಟ್ಟಾರೆ ತಲೆಗೂದಲಿನ ಆರೋಗ್ಯವನ್ನು ಸುಧಾರಿಸಬಹುದು.

ನೈಸರ್ಗಿಕವಾಗಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಕೆಲವು ಪರಿಣಾಮಕಾರಿ ಸಲಹೆಗಳು ಇಲ್ಲಿವೆ.

ಪೋಷಕಾಂಶಭರಿತ ಆಹಾರ ಸೇವಿಸಿ

ಆರೋಗ್ಯಕರ ತಲೆಗೂದಲಿನ ಬೆಳವಣಿಗೆಗೆ ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವು ಬಹಳ ನಿರ್ಣಾಯಕ ಪಾತ್ರ ವಹಿಸುತ್ತದೆ. ತಲೆಗೂದಲಿಗೆ ಬಯೋಟಿನ್, ವಿಟಮಿನ್ ಡಿ, ಸತು ಮತ್ತು ಕಬ್ಬಿಣದಂತಹ ಅಗತ್ಯ ಪೋಷಕಾಂಶಗಳು ಬೇಕಾಗುತ್ತದೆ. ಹೀಗಾಗಿ ಈ ಕೆಳಗಿನ ಆಹಾರಗಳನ್ನು ಸೇವಿಸಬಹುದು:

ಪ್ರೊಟೀನ್-ಭರಿತ ಆಹಾರಗಳು: ತಲೆಗೂದಲಿನ ಆರೋಗ್ಯದಲ್ಲಿ ಪ್ರೊಟೀನ್ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಏಕೆಂದರೆ ಕೂದಲು ಪ್ರಾಥಮಿಕವಾಗಿ ಕೆರಾಟಿನ್ ಎಂಬ ಪ್ರೋಟೀನ್‌ನಿಂದ ಮಾಡಲ್ಪಟ್ಟಿದೆ. ಪ್ರೊಟೀನ್‍ಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ಕೂದಲಿನ ಬೆಳವಣಿಗೆ, ಶಕ್ತಿ ಮತ್ತು ಒಟ್ಟಾರೆ ಚೈತನ್ಯವನ್ನು ಬೆಂಬಲಿಸುತ್ತದೆ. ಮಾಂಸ, ಮೊಟ್ಟೆ, ಡೈರಿ ಉತ್ಪನ್ನಗಳು, ದ್ವಿದಳ ಧಾನ್ಯಗಳನ್ನು ಸೇವಿಸುವುದರಿಂದ ತಲೆಗೂದಲಿನ ಬೆಳವಣಿಗೆಗೆ ಉಪಯುಕ್ತವಾಗಿದೆ.

ಕಬ್ಬಿಣದ ಅಂಶವಿರುವ ಆಹಾರಗಳು: ದೇಹದಲ್ಲಿ ಕಬ್ಬಿಣದ ಕೊರತೆಯು ಕೂದಲು ತೆಳುವಾಗುವುದು ಮತ್ತು ಉದುರುವಿಕೆಗೆ ಕಾರಣವಾಗಬಹುದು. ಹೀಗಾಗಿ ಮಾಂಸ, ಪಾಲಕ್, ಚನ್ನಂಗಿ ಬೇಳೆ ಮತ್ತು ಧಾನ್ಯಗಳನ್ನು ಸೇವಿಸಿ. ಇವು ಕಬ್ಬಿಣದ ಅತ್ಯುತ್ತಮ ಮೂಲಗಳಾಗಿವೆ.

ಒಮೆಗಾ -3 ಕೊಬ್ಬಿನಾಮ್ಲಗಳು: ಈ ಆರೋಗ್ಯಕರ ಕೊಬ್ಬುಗಳು ನೆತ್ತಿಯನ್ನು ಪೋಷಿಸುತ್ತದೆ ಮತ್ತು ತಲೆಗೂದಲಿನ ಬೆಳವಣಿಗೆಯನ್ನು ಬೆಂಬಲಿಸುತ್ತದೆ. ಸಾಲ್ಮನ್ ಮೀನು, ಅಗಸೆಬೀಜಗಳು ಮತ್ತು ಅಕ್ರೋಡ (ವಾಲ್‌ನಟ್‌)ಗಳು ಒಮೆಗಾ-3 ಗಳ ಉತ್ತಮ ಮೂಲಗಳಾಗಿವೆ. ಹೀಗಾಗಿ ತಲೆಗೂದಲಿನ ಬೆಳವಣಿಗೆಗೆ ಇವುಗಳನ್ನು ಸೇವಿಸುವುದು ಉತ್ತಮ ಮಾರ್ಗ.

ಬಯೋಟಿನ್ ಭರಿತ ಆಹಾರಗಳು: ವಿಟಮಿನ್ B7 ಎಂದೂ ಕರೆಯಲ್ಪಡುವ ಬಯೋಟಿನ್, ಆರೋಗ್ಯಕರ ಕೂದಲಿನ ಬೆಳವಣಿಗೆ ಮತ್ತು ಶಕ್ತಿಯನ್ನು ಬೆಂಬಲಿಸುವ ಪ್ರಮುಖ ಪೋಷಕಾಂಶ. ಬಯೋಟಿನ್ ಭರಿತ ಆಹಾರಗಳನ್ನು ಸೇವಿಸುವುದರಿಂದ ತಲೆಗೂದಲಿನ ಬೆಳವಣಿಗೆಗೆ ಅತ್ಯುತ್ತಮವಾಗಿದೆ. ಬಯೋಟಿನ್ ಸಮೃದ್ಧವಾಗಿರುವ ಮೊಟ್ಟೆ, ಬಾದಾಮಿ, ಸಿಹಿ ಆಲೂಗಡ್ಡೆ ಮತ್ತು ಪಾಲಕ್ ಅನ್ನು ಸೇವಿಸಬೇಕು.

ವಿಟಮಿನ್ ಡಿ: ಈ ವಿಟಮಿನ್ ಕೂದಲಿನ ಕಿರುಚೀಲಗಳ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೊಬ್ಬಿನಾಂಶವಿರುವ ಮೀನು, ಅಣಬೆ, ಕಿತ್ತಳೆ ಮತ್ತು ಧಾನ್ಯಗಳಂತಹ ಬಲವರ್ಧಿತ ಆಹಾರಗಳಲ್ಲಿ ವಿಟಮಿನ್ ಡಿ ಅಂಶವಿರುವುದರಿಂದ ಆಹಾರದಲ್ಲಿ ಇದನ್ನು ಸೇವಿಸುವುದು ಉತ್ತಮ.

ಹೈಡ್ರೇಟೆಡ್ ಆಗಿರಿ: ದೇಹವು ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಇದು ಕೂಡ ತಲೆಗೂದಲಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತವೆ. ದಿನವಿಡೀ ಸಾಕಷ್ಟು ನೀರು ಕುಡಿಯುವುದರಿಂದ ತಲೆಗೂದಲು ಹೈಡ್ರೇಟೆಡ್ ಮತ್ತು ಆರೋಗ್ಯಕರವಾಗಿರುತ್ತದೆ. ಪ್ರತಿದಿನ ಕನಿಷ್ಠ ಎರಡು ಲೀಟರ್ ನೀರು ಸೇವಿಸಬೇಕು.

ಒತ್ತಡವನ್ನು ಕಡಿಮೆ ಮಾಡಿ: ದೀರ್ಘಕಾಲದ ಒತ್ತಡವು ಕೂದಲಿನ ಬೆಳವಣಿಗೆಯ ಚಕ್ರವನ್ನು ಅಡ್ಡಿಪಡಿಸುವ ಮೂಲಕ ತಲೆಗೂದಲು ಉದುರುವಿಕೆಯನ್ನು ಪ್ರಚೋದಿಸುತ್ತದೆ. ಒತ್ತಡವನ್ನು ಕಡಿಮೆ ಮಾಡಲು ಧ್ಯಾನ, ಯೋಗ, ಆಳವಾದ ಉಸಿರಾಟದ ವ್ಯಾಯಾಮಗಳು ಮತ್ತು ನಿಯಮಿತ ದೈಹಿಕ ಚಟುವಟಿಕೆಯಂತಹ ಒತ್ತಡ ನಿರ್ವಹಣೆ ತಂತ್ರಗಳನ್ನು ಅಳವಡಿಸಿಕೊಳ್ಳಬಹುದು. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಅಲ್ಲದೆ, ದೇಹಕ್ಕೆ ಸಾಕಷ್ಟು ನಿದ್ದೆಯ ಅವಶ್ಯಕತೆಯೂ ಇದೆ. ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೂ ಕೂದಲಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ರಾಸಾಯನಿಕ ಚಿಕಿತ್ಸೆ, ಬಿಗಿಯಾದ ಕೇಶವಿನ್ಯಾಸದಿಂದ ದೂರವಿರಿ: ಆಗಾಗ್ಗೆ ತಲೆಗೂದಲನ್ನು ಸ್ಟ್ರೈಟ್ನಿಂಗ್ ಮಾಡುವುದರಿಂದ ಶಾಖ ತಾಗಿ, ತಲೆಗೂದಲಿನ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ. ಅಲ್ಲದೆ, ತಲೆಗೂದಲಿಗೆ ರಾಸಾಯನಿಕ ಚಿಕಿತ್ಸೆಗಳನ್ನು ಮಾಡುವುದು, ಬಿಗಿಯಾದ ಕೇಶವಿನ್ಯಾಸಗಳ ಅತಿಯಾದ ಬಳಕೆಯು ಕೂಡ ತಲೆಗೂದಲನ್ನು ಹಾನಿಗೊಳಿಸುತ್ತದೆ ಹಾಗೂ ಬೆಳವಣಿಗೆಯನ್ನು ತಡೆಯುತ್ತದೆ. ಹೀಗಾಗಿ ಹೇರ್ ಡ್ರೈಯರ್‌ಗಳು, ಸ್ಟ್ರೈಟ್‌ನರ್‌ಗಳು ಮತ್ತು ಕರ್ಲಿಂಗ್ ಐರನ್‌ಗಳ ಬಳಕೆಯನ್ನು ಆದಷ್ಟು ಮಿತಿಗೊಳಿಸಿ. ತಲೆಗೂದಲ ಹಾನಿಯನ್ನು ತಡೆಗಟ್ಟಲು ಶಾಖ ರಕ್ಷಕಗಳನ್ನು ಬಳಸಿ.

ನೆತ್ತಿಯನ್ನು ಮಸಾಜ್ ಮಾಡಿ: ನಿಯಮಿತವಾಗಿ ನೆತ್ತಿಯ ಮಸಾಜ್ ಮಾಡುವುದರಿಂದ ತಲೆಗೂದಲಿನ ಕಿರುಚೀಲಗಳಿಗೆ ರಕ್ತ ಪರಿಚಲನೆ ಸುಧಾರಿಸುತ್ತದೆ. ಜೊತೆಗೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಪ್ರತಿದಿನ ಕೆಲವು ನಿಮಿಷಗಳ ಕಾಲ ನಿಮ್ಮ ನೆತ್ತಿಯನ್ನು ಮೃದುವಾಗಿ ಮಸಾಜ್ ಮಾಡಿ. ನೆತ್ತಿಗೆ ಮಸಾಜ್ ಮಾಡುವ ಸಾಧನವನ್ನು ಸಹ ಬಳಸಬಹುದು. ಮಸಾಜ್ ಮಾಡುವ ವೇಳೆ ತೆಂಗಿನ ಎಣ್ಣೆ ಅಥವಾ ಇನ್ನಿತರೆ ನೈಸರ್ಗಿಕ ತೈಲಗಳ ಬಳಕೆಗೆ ಆದ್ಯತೆ ನೀಡಿ. ಈ ತೈಲಗಳು ನೆತ್ತಿಯನ್ನು ತೇವಗೊಳಿಸಲು ಮತ್ತು ತಲೆಗೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಮಾಲಿನ್ಯದಿಂದ ತಲೆಗೂದಲನ್ನು ರಕ್ಷಿಸಿ: ಮಾಲಿನ್ಯ, ಯುವಿ ಕಿರಣಗಳು ಮತ್ತು ಇನ್ನಿತರೆ ಕಾರಣಗಳಿಂದಾಗಿ ತಲೆಗೂದಲು ದುರ್ಬಲಗೊಳ್ಳಬಹುದು. ಇದರಿಂದ ತಲೆಗೂದಲಿನ ಬೆಳವಣಿಗೆಯು ನಿಧಾನಗೊಳ್ಳಬಹುದು. ಹೀಗಾಗಿ ಸೂರ್ಯನ ಶಾಖ ಅಥವಾ ಅತಿ ಹೆಚ್ಚು ಗಾಳಿ ಇದ್ದರೆ ಈ ವೇಳೆ ತಲೆಗ ಟೋಪಿ ಅಥವಾ ಸ್ಕಾರ್ಫ್ ಧರಿಸಿ.

ಬಯೋಟಿನ್, ವಿಟಮಿನ್ ಡಿ ಸೇವಿಸಿ: ಪೋಷಕಾಂಶಗಳನ್ನು ಆಹಾರದಿಂದ ಪಡೆಯುವುದು ಕಷ್ಟಕರವಾಗಿದ್ದರೆ ನೇರವಾಗಿ ಬಯೋಟಿನ್, ವಿಟಮಿನ್ ಡಿ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳನ್ನು ತೆಗೆದುಕೊಳ್ಳಬಹುದು. ಆದರೆ, ಇದನ್ನು ತೆಗೆದುಕೊಳ್ಳುವ ಮುನ್ನ ತಜ್ಞರೊಂದಿಗೆ ಸಮಾಲೋಚನೆ ನಡೆಸುವುದು ಬಹಳ ಮುಖ್ಯ. ಏಕೆಂದರೆ ಕೆಲವು ಪೋಷಕಾಂಶಗಳ ಅತಿಯಾದ ಸೇವನೆಯು ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು.

ಆರೋಗ್ಯಕರ ನೆತ್ತಿಯನ್ನು ಕಾಪಾಡಿಕೊಳ್ಳಿ: ಆರೋಗ್ಯಕರ ನೆತ್ತಿಯು ಕೂದಲಿನ ಬೆಳವಣಿಗೆಗೆ ಅಡಿಪಾಯವಾಗಿದೆ. ತಲೆಗೂದಲನ್ನು ನಿಯಮಿತವಾಗಿ ತೊಳೆಯುವ ಮೂಲಕ ನೆತ್ತಿಯನ್ನು ಸ್ವಚ್ಛವಾಗಿರಿಸಿಕೊಳ್ಳಿ. ಆರೋಗ್ಯಕರ ನೆತ್ತಿಯು ಕೂದಲಿನ ಬೆಳವಣಿಗೆಯನ್ನು ಬೆಂಬಲಿಸುತ್ತದೆ. ತಲೆಹೊಟ್ಟು, ಶುಷ್ಕತೆ ಮತ್ತು ಕಿರಿಕಿರಿಯಂತಹ ಸಾಮಾನ್ಯ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಹೀಗಾಗಿ ಉತ್ತಮ ನೈರ್ಮಲ್ಯ ಅಭ್ಯಾಸಗಳು, ಸಮತೋಲಿತ ಪೋಷಣೆ ಮಾಡುವುದು ತಲೆಗೂದಲಿನ ಆರೈಕೆಗೆ ಬಹಳ ಮುಖ್ಯ.