ಕೂದಲಿನ ಬೆಳವಣಿಗೆ ಹೆಚ್ಚಿಸಿ, ದಟ್ಟವಾಗಿ ಕಾಣುವಂತೆ ಮಾಡುವ ಮ್ಯಾಜಿಕ್ ಎಣ್ಣೆಯಿದು; ಇದನ್ನು ಪ್ರತಿದಿನ ಬಳಸಿದ್ರೆ ಫಲಿತಾಂಶ ಖಚಿತ
ಕೆಮಿಕಲ್ ಟ್ರೀಟ್‌ಮೆಂಟ್, ಕಲರಿಂಗ್ ಮಾಡಿಸಿ ಕೂದಲಿನ ಬೆಳವಣಿಗೆ ನಿಂತು ಹೋಗಿದ್ಯಾ, ಅಲ್ಲದೇ ಕೂದಲು ಕಾಂತಿ ರಹಿತವಾಗಿ ಕಾಣ್ತಾ ಇದ್ಯಾ, ನಿಮ್ಮ ಕೂದಲಿನ ಬೆಳವಣಿಗೆ ವೃದ್ಧಿಯಾಗಿ ಕಾಂತಿ ಹೆಚ್ಚಲು ಈ ಮಾಂತ್ರಿಕ ಎಣ್ಣೆ ಹಚ್ಚಲು ಆರಂಭಿಸಿ. ಕೆಲವೇ ದಿನಗಳಲ್ಲಿ ಅದ್ಭುತ ಫಲಿತಾಂಶ ಗೋಚರವಾಗುತ್ತೆ.
ಗಂಡು ಮಕ್ಕಳು ಹಾಗೂ ಹೆಣ್ಣುಮಕ್ಕಳು ಕೂದಲಿನ ಕಾಳಜಿಗೆ ಹೆಚ್ಚು ಗಮನ ಕೊಡುತ್ತಾರೆ. ದಟ್ಟ, ಕಪ್ಪು ಕೂದಲು ತಮ್ಮದಾಗಬೇಕು ಎಂದು ಎಲ್ಲರೂ ಬಯಸುವುದು ಸಹಜ. ಆದರೆ ರಾಸಾಯನಿಕಗಳ ಬಳಕೆಯಿಂದ ಕೂದಲು ಬೇಗ ಹಾಳಾಗುತ್ತದೆ. ಕೂದಲಿನ ಬಣ್ಣ ಮಾಯವಾಗುವುದಲ್ಲದೆ ಕೂದಲಿನ ಬೆಳವಣಿಗೆಯೂ ನಿಲ್ಲುತ್ತದೆ. ನಿಮ್ಮ ಕೂದಲು ದಟ್ಟವಾಗಿ, ಕಪ್ಪಾಗಿ ಹೊಳೆಯಬೇಕು ಎಂದರೆ ಪ್ರತಿನಿತ್ಯ ಈ ಎಣ್ಣೆಯನ್ನು ಹಚ್ಚಬೇಕು. ಇದು ಕೂದಲಿನ ಮೇಲೆ ಮಾಂತ್ರಿಕ ಪರಿಣಾಮ ಬೀರುತ್ತೆ ಈ ಎಣ್ಣೆ. ಇದನ್ನು ತಯಾರಿಸೋದು ಹೇಗೆ ನೋಡಿ.
ಕೂದಲಿಗೆ ಬಣ್ಣ ಹಚ್ಚುವುದು, ಸ್ಟ್ರೈಟನಿಂಗ್ ಮಾಡಿಸುವುದು, ವಿವಿಧ ರೀತಿಯ ಶ್ಯಾಂಪೂಗಳು ಹಾಗೂ ಸೀರಮ್‌ಗಳ ಬಳಕೆಯಿಂದ ಕೂದಲು ನೈಸರ್ಗಿಕ ತೇವಾಂಶ ಕಳೆದುಕೊಳ್ಳುತ್ತದೆ. ಇದರಿಂದ ಕೂದಲು ಅಂದಗೆಟ್ಟಂತೆ ಕಾಣಿಸುತ್ತದೆ. ಕೂದಲಿನ ಬೆಳವಣಿಗೆಯೂ ನಿಂತು ಕೂದಲು ತೆಳ್ಳಗಾಗುತ್ತದೆ. ಇದರಿಂದ ಕೂದಲಿನ ಅಂದ ಕೆಡುತ್ತದೆ. ಈ ಎಲ್ಲಾ ಸಮಸ್ಯೆಗಳಿಗೂ ಈ ಮಾಂತ್ರಿಕ ಎಣ್ಣೆ ಪರಿಹಾರ ನೀಡುತ್ತದೆ.
ಎಣ್ಣೆ ತಯಾರಿಸಲು ಬೇಕಾಗುವ ವಸ್ತುಗಳು: ಕಾಳು ಜೀರಿಗೆ – 2 ಚಮಚ, ಮೆಂತ್ಯೆ – 1ಚಮಚ, ಲವಂಗ – 8 ರಿಂದ 10, ತೆಂಗಿನೆಣ್ಣೆ
ಎಣ್ಣೆ ತಯಾರಿಸುವ ವಿಧಾನ: ಮೊದಲು ಮೆಂತ್ಯೆ, ಕಾಳು ಜೀರಿಗೆ, ಲವಂಗಯಲ್ಲಿ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಟ್ಟುಕೊಳ್ಳಿ. ಈ ಪುಡಿಯನ್ನು ಎಣ್ಣೆಗೆ ಸೇರಿಸಿ. ತೆಂಗಿನೆಣ್ಣೆ ಹಾಗೂ ಪುಡಿಯು 2:1 ಪ್ರಮಾಣದಲ್ಲಿ ಇರಬೇಕು. ಈ ಎಣ್ಣೆಯನ್ನು ಡಬ್ಬಿಯಲ್ಲಿ ತುಂಬಿಸಿಟ್ಟು ವಾರಕ್ಕೆ ಎರಡರಿಂದ ಮೂರು ಬಾರಿ ಕೂದಲಿಗೆ ಹಚ್ಚಿ. ಅರ್ಧ ಗಂಟೆ ಬಿಟ್ಟು ಶಾಂಪೂ ಬಳಸಿ ಸ್ಥಾನ ಮಾಡಿ. ಇದನ್ನು ನಿರಂತರವಾಗಿ ಬಳಸುವುದರಿಂದ ಕೆಲವು ದಿನಗಳಲ್ಲಿ ಕೂದಲಿನಲ್ಲಿ ವ್ಯತ್ಯಾಸ ಗೋಚರವಾಗಲು ಆರಂಭವಾಗುತ್ತದೆ. ಇದು ಕೂದಲು ದಪ್ಪವಾಗಲು ಸಹಕಾರಿ.
ಇತ್ತೀಚಿನ ದಿನಗಳಲ್ಲಿ ಹಲವರು ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರಾಸಾಯನಿಕ ಉತ್ಪನಗಳ ಅತಿಯಾದ ಬಳಕೆ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆಯು ಕೂದಲಿನ ಆರೋಗ್ಯ ಕೆಡಲು ಕಾರಣವಾಗಿದೆ. ಇದರಿಂದ ವಿಪರೀತ ಕೂದಲು ಉದುರುವುದು, ತಲೆಹೊಟ್ಟು, ಕೂದಲಿನ ಕಾಂತಿ ಕಡಿಮೆಯಾಗಲು ಕಾರಣವಾಗುತ್ತದೆ. ಅಂತಹ ಸಂದರ್ಭದಲ್ಲಿ ಈ ಎಣ್ಣೆಯನ್ನು ನಿರಂತರವಾಗಿ ಬಳಸುವುದರಿಂದ ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶ ಗೋಚರವಾಗುತ್ತದೆ.
ಇಂದು ವಿಚಾರ ನೆನಪಿಡಿ, ಯಾವುದೇ ಮನೆಮದ್ದೇ ಆಗಲಿ ಒಂದೆರಡು ದಿನ ಅಥವಾ ಒಂದು ವಾರ ಬಳಸಿದ್ರೆ ಇದರ ಫಲಿತಾಂಶ ಗೋಚರವಾಗುವುದಿಲ್ಲ. ಬದಲಿಗೆ ಕೆಲವು ತಿಂಗಳುಗಳ ಕಾಲ ಬಳಸಬೇಕು, ಆಗ ಮಾತ್ರ ಸೂಕ್ತ ಫಲಿತಾಂಶ ಗೋಚರವಾಗುತ್ತದೆ.
ವಿಭಾಗ