ಅಂದ ಹೆಚ್ಚಿಸೋದಷ್ಟೇ ಅಲ್ಲ, ತಲೆಹೊಟ್ಟಿಗೂ ಪರಿಹಾರ ನೀಡುತ್ತೆ ಮುಲ್ತಾನಿ ಮಿಟ್ಟಿ; ಡ್ಯಾಂಡ್ರಫ್ ನಿವಾರಣೆಗೆ ಹೇಗೆ ಬಳಸಬೇಕು ನೋಡಿ
ಇತ್ತೀಚಿನ ದಿನಗಳಲ್ಲಿ ಕೂದಲಿನ ಸಮಸ್ಯೆಗಳು ಹೆಚ್ಚಾಗುತ್ತಿವೆ. ಕೂದಲು ಉದುರುವುದು ಮಾತ್ರವಲ್ಲ ತಲೆಹೊಟ್ಟಿನ ಸಮಸ್ಯೆಯೂ ಇನ್ನಿಲ್ಲದಂತೆ ಕಾಡುತ್ತಿದೆ. ಇದಕ್ಕಾಗಿ ರಾಸಾಯನಿಕ ಉತ್ಪನ್ನಗಳನ್ನ ಬಳಸುವ ಬದಲು ಮುಲ್ತಾನಿ ಮಿಟ್ಟಿ ಹೇರ್ ಪ್ಯಾಕ್ ಬಳಸಿ. ಇದು ಡ್ಯಾಂಡ್ರಫ್ ನಿವಾರಣೆಗೆ ಇದನ್ನ ಹೇಗೆಲ್ಲಾ ಬಳಸಬೇಕು ನೋಡಿ.
ಈಗೀಗ ಕೂದಲು ಉದುರುವುದು ಮಾತ್ರವಲ್ಲ ತಲೆಹೊಟ್ಟಿನ ಸಮಸ್ಯೆಯೂ ಹೆಚ್ಚುತ್ತಿದೆ. ಇದರ ನಿವಾರಣೆಗಳು ಸಾಕಷ್ಟು ಔಷಧಿಗಳು, ಶ್ಯಾಂಪೂಗಳನ್ನು ಬಳಕೆ ಮಾಡಿದ ಮೇಲೂ ಡ್ಯಾಂಡ್ರಫ್ ಕಡಿಮೆ ಆಗಿರುವುದಿಲ್ಲ. ಡ್ಯಾಂಡಫ್ರ್ ಕಾರಣದಿಂದ ಕೂದಲು ಉದುರುವುದು ಹೆಚ್ಚುತ್ತದೆ. ಇದಕ್ಕೆ ನೈಸರ್ಗಿಕ ಪರಿಹಾರ ಕಂಡುಕೊಳ್ಳಲು ಬಯಸಿದರೆ ನಿಮಗೆ ಮುಲ್ತಾನಿ ಮಿಟ್ಟಿಗಿಂತ ಉತ್ತಮ ಇನ್ನೊಂದಿಲ್ಲ.
ಇದೇನಪ್ಪಾ ತ್ವಚೆಯ ಕಾಂತಿ ಹೆಚ್ಚಿಸಿ, ಕಲೆಗಳೇ ಇಲ್ಲದಂತಹ ಸುಂದರ ತ್ವಚೆಗೆ ಮುಲ್ತಾನಿಮಿಟ್ಟಿ ಸಹಾಯ ಮಾಡುತ್ತದೆ, ಆದರೆ ಇದನ್ನ ಕೂದಲಿಗೆ ಹೇಗಪ್ಪಾ ಹಚ್ಚೋದು ಅಂತ ಚಿಂತೆ ಮಾಡ್ಬೇಡಿ. ಮುಲ್ತಾನಿ ಮಿಟ್ಟಿಯ ಹೇರ್‌ಪ್ಯಾಕ್ ತಲೆಹೊಟ್ಟು ಇನ್ನಿಲ್ಲದಂತೆ ಮಾಡುತ್ತದೆ. ಮುಲ್ತಾನಿ ಮಿಟ್ಟಿ ಡ್ಯಾಂಡ್ರಫ್‌ಗೆ ಸರಳವಾದ ನೈಸರ್ಗಿಕ ಪರಿಹಾರವಾಗಿದೆ. ನಿಯಮಿತ ಬಳಕೆಯು ಫ್ಲೇಕ್ಸ್‌ಗಳು ಹಾಗೂ ಕಿರಿಕಿರಿಯಿಂದ ಮುಕ್ತವಾಗಿಸಿ, ನೆತ್ತಿಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗಾದರೆ ಇದನ್ನ ಬಳಸೋದು ಹೇಗೆ, ಇದರಿಂದ ಕೂದಲಿಗೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ.
ತಲೆಹೊಟ್ಟಿನ ನಿವಾರಣೆಗೆ ಮುಲ್ತಾನಿಮಿಟ್ಟಿ ನಿಜಕ್ಕೂ ಸಹಾಯ ಮಾಡುತ್ತಾ?
ಮುಲ್ತಾನಿಮಿಟ್ಟಿ ಮೆಗ್ನಿಶಿಯಂ, ಕ್ಯಾಲ್ಸಿಯಂ, ಸಿಲಕಾದಂತಹ ಖನಿಜಾಂಶಗಳಿಂದ ಸಮೃದ್ಧವಾಗಿದೆ. ಇದು ನೆತ್ತಿಯನ್ನು ಸ್ವಚ್ಛ ಮಾಡಲು ಹಾಗೂ ಎಕ್ಸ್‌ಫೋಲಿಯೇಟ್ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿನ ಹೀರಿಕೊಳ್ಳುವ ಅಂಶವು ಹೆಚ್ಚುವರಿ ಎಣ್ಣೆ, ಕೊಳಕು ಮತ್ತು ಕಲ್ಮಶಗಳನ್ನು ತೆಗೆದುಹಾಕುತ್ತದೆ. ಈ ಅಂಶಗಳು ಕೂದಲಿನ ಕಿರುಚೀಲಗಳ ಬುಡವನ್ನು ಮುಚ್ಚಿ ತಲೆಹೊಟ್ಟಾಗಲು ಕಾರಣವಾಗುತ್ತದೆ. ಇದಲ್ಲದೆ, ಮುಲ್ತಾನಿಮಿಟ್ಟಿಯ ತಂಪಾದ ಗುಣವು ನೆತ್ತಿಯ ಮೇಲೆ ಯಾವುದೇ ಉರಿಯೂತ ಅಥವಾ ಕಿರಿಕಿರಿಯನ್ನು ಸಹ ನಿಭಾಯಿಸುತ್ತದೆ, ತುರಿಕೆಯಿಂದ ಪರಿಹಾರವನ್ನು ನೀಡುತ್ತದೆ.
ಡ್ಯಾಂಡ್ರಫ್ ನಿವಾರಣೆಗೆ ಮುಲ್ತಾನಿ ಮಿಟ್ಟಿ ಬಳಸುವುದು ಹೇಗೆ?
ಮುಲ್ತಾನಿಮಿಟ್ಟಿ ನಿಂಬೆರಸದ ಪ್ಯಾಕ್: ಮುಲ್ತಾನಿ ಮಿಟ್ಟಿ 2 ಚಮಚ, ಅರ್ಧ ಚಮಚ ನಿಂಬೆ ಹಾಗೂ ನೀರು ಇವಿಷ್ಟು ಈ ಹೇರ್‌ಮಾಸ್ಕ್ ತಯಾರಿಸಲು ಬೇಕು. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ. ಇದನ್ನು ಕೂದಲಿಗೆ ಬುಡದಿಂದಲೇ ಹಚ್ಚಿ, 20 ನಿಮಿಷಗಳ ಕಾಲ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಮುಲ್ತಾನಿಮಿಟ್ಟಿ ಮೊಸರಿನ ಹೇರ್‌ಮಾಸ್ಕ್: ಮುಲ್ತಾನಿಮಿಟ್ಟಿ ಹಾಗೂ ಮೊಸರನ್ನು 2 ಚಮಚ ಹಾಕಿ ಪೇಸ್ಟ್ ತಯಾರಿಸಿ. ಇದರಿಂದ ದಪ್ಪ ಪೇಸ್ಟ್ ತಯಾರಿಸಿ, ಈ ಪೇಸ್ಟ್ ಅನ್ನು ಕೂದಲ ಬುಡಕ್ಕೆ ಹಚ್ಚಿ. 30 ನಿಮಿಷಗಳ ತಲೆಸ್ನಾನ ಮಾಡಿ.
ಮುಲ್ತಾನಿಮಿಟ್ಟಿ ಆಲೊವೆರಾ ಹೃರ್‌ಮಾಸ್ಕ್: 2 ಚಮಚ ಮುಲ್ತಾನಿ ಹಾಗೂ 2 ಚಮಚ ಆಲೊವೆರಾ ಜೆಲ್ ಸೇರಿಸಿ ಈ ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಕೂದಲಿನ ಬುಡಕ್ಕೆ ಹಚ್ಚಿ. 20 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ತಲೆಸ್ನಾನ ಮಾಡಿ. ಈ ಹೇರ್‌ಮಾಸ್ಕ್‌ಗಳನ್ನ ವಾರದಲ್ಲಿ ಎರಡು ಬಾರಿ ಬಳಸುವುದರಿಂದ ನಿಮ್ಮ ತಲೆಹೊಟ್ಟಿನ ಸಮಸ್ಯೆಗೆ ಶೀಘದ್ರಲ್ಲೇ ಪರಿಹಾರ ದೊರೆಯುತ್ತದೆ. ಇದು ಕೂದಲಿನ ಬುಡವನ್ನು ಸದೃಢಗೊಳಿಸುತ್ತದೆ. ಆದರೆ ನೆತ್ತಿಯ ಭಾಗದಲ್ಲಿ ಯಾವುದೇ ಪ್ಯಾಚ್ ಇದ್ದರೆ ಈ ಹೇರ್‌ಮಾಸ್ಕ್ ಬಳಸುವ ಮುನ್ನ ಗಮನಿಸಿ.
ವಿಭಾಗ