ಕನ್ನಡ ಸುದ್ದಿ  /  ಜೀವನಶೈಲಿ  /  ಮೂರೇ ವಾರದಲ್ಲಿ ತಲೆಹೊಟ್ಟು ಕಡಿಮೆಯಾಗಿ, ಕೂದಲು ಉದುರುವುದು ನಿಲ್ಲಬೇಕು ಅಂದ್ರೆ ಮನೆಯಲ್ಲೇ ಈ ಎಣ್ಣೆ ತಯಾರಿಸಿ, ಬಳಸಿ ನೋಡಿ

ಮೂರೇ ವಾರದಲ್ಲಿ ತಲೆಹೊಟ್ಟು ಕಡಿಮೆಯಾಗಿ, ಕೂದಲು ಉದುರುವುದು ನಿಲ್ಲಬೇಕು ಅಂದ್ರೆ ಮನೆಯಲ್ಲೇ ಈ ಎಣ್ಣೆ ತಯಾರಿಸಿ, ಬಳಸಿ ನೋಡಿ

ಮೆಂತ್ಯ ದೇಹದ ಆರೋಗ್ಯಕ್ಕೆ ಮಾತ್ರವಲ್ಲ, ಕೂದಲಿನ ಆರೋಗ್ಯಕ್ಕೂ ತುಂಬಾ ಉತ್ತಮ. ಮೆಂತ್ಯವನ್ನು ಪೇಸ್ಟ್‌ ಮಾಡಿ ಕೂದಲಿಗೆ ಬಳಸುವ ಕ್ರಮ ನಿಮಗೂ ತಿಳಿದಿರಬಹುದು. ಆದರೆ ಈ ರೀತಿ ಮನೆಯಲ್ಲೇ ಮೆಂತ್ಯೆ ಎಣ್ಣೆ ತಯಾರಿಸಿ, ಬಳಸಿ ನೋಡಿ. ಮೂರೇ ವಾರದಲ್ಲಿ ಕೂದಲು ಉದುರುವುದು ಸಂಪೂರ್ಣವಾಗಿ ನಿಲ್ಲುತ್ತದೆ.

ಮೂರೇ ವಾರದಲ್ಲಿ ತಲೆಹೊಟ್ಟು ಕಡಿಮೆಯಾಗಿ, ಕೂದಲು ಉದುರುವುದು ನಿಲ್ಲಬೇಕು ಅಂದ್ರೆ ಮನೆಯಲ್ಲೇ ಈ ಎಣ್ಣೆ ತಯಾರಿಸಿ, ಬಳಸಿ ನೋಡಿ
ಮೂರೇ ವಾರದಲ್ಲಿ ತಲೆಹೊಟ್ಟು ಕಡಿಮೆಯಾಗಿ, ಕೂದಲು ಉದುರುವುದು ನಿಲ್ಲಬೇಕು ಅಂದ್ರೆ ಮನೆಯಲ್ಲೇ ಈ ಎಣ್ಣೆ ತಯಾರಿಸಿ, ಬಳಸಿ ನೋಡಿ

ಮೆಂತ್ಯೆ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಹಲವು ರೋಗಗಳಿಗೆ ಮೆಂತ್ಯವೇ ಮದ್ದು. ಇದು ಸೌಂದರ್ಯವರ್ಧಕವೂ ಹೌದು. ಕೂದಲಿನ ಆರೋಗ್ಯಕ್ಕೆ ಮೆಂತ್ಯೆಗಿಂತ ಉತ್ತಮ ಔಷಧಿಯಿಲ್ಲ. ಕೂದಲು ಉದುರುವ ಸಮಸ್ಯೆ ನಿಮಗಿದ್ದರೆ ಮೆಂತ್ಯೆ ಎಣ್ಣೆಯನ್ನು ಬಳಸಬಹುದು. ಮೆಂತ್ಯೆ ಎಣ್ಣೆಯ ನಿರಂತರ ಬಳಕೆಯಿಂದ ಗಮನಾರ್ಹವಾದ ಬದಲಾವಣೆಗಳು ಕಂಡು ಬರುತ್ತವೆ. ಹಾಗಾದ್ರೆ ಮೆಂತೆ ಎಣ್ಣೆ ತಯಾರಿಸೋದು ಹೇಗೆ, ಇದರ ಪ್ರಯೋಜನಗಳೇನು ನೋಡೋಣ.

ಮೆಂತ್ಯ ಎಣ್ಣೆಯ ತಯಾರಿಸುವ ವಿಧಾನ

ಮೊದಲು ಅರ್ಧ ಕಪ್ ಮೆಂತ್ಯಕಾಳುಗಳನ್ನು ಗಾಜಿನ ಬಾಟಲಿಗೆ ಹಾಕಿ. ಈ ಮೆಂತ್ಯ ಬೀಜಗಳಲ್ಲಿ ನಿಮ್ಮ ಆಯ್ಕೆಯ ಯಾವುದೇ ಎಣ್ಣೆಯನ್ನು ತುಂಬಿಸಿ. ಮೆಂತ್ಯೆ ಸಂಪೂರ್ಣ ಮುಳುಗುವವರೆಗೂ ಎಣ್ಣೆ ಹಾಕಬೇಕು. ಎಣ್ಣೆಯು ಮೆಂತೆಗಿಂತ ಇನ್ನೊಂದು ಇಂಚು ಅಥವಾ ಒಂದೂವರೆ ಇಂಚು ಹೆಚ್ಚಿರಬೇಕು. ನೀವು ಹೆಚ್ಚು ಸಾರೀಕೃತ ಎಣ್ಣೆಯನ್ನು ಮಾಡಲು ಬಯಸಿದರೆ, ಸ್ವಲ್ಪ ಸಬ್ಬಸಿಗೆ ಬೀಜಗಳನ್ನು ಪುಡಿ ಮಾಡಿ ಬಾಟಲಿಗೆ ಸುರಿಯಬೇಕು. ಆದರೆ ಈ ಬೀಜಗಳನ್ನು ಮಿಕ್ಸಿಯಲ್ಲಿ ಪುಡಿ ಮಾಡಬೇಡಿ. ಕುಟ್ಟಾಣಿಯಲ್ಲಿ ಕುಟ್ಟಿ ಪುಡಿ ಮಾಡಿ. ನಿಮ್ಮ ಆದ್ಯತೆ ಹಾಗೂ ಬಳಕೆಗೆ ಅನುಗುಣವಾಗಿ ಮೆಥಿ ಎಣ್ಣೆಯನ್ನು ತಯಾರಿಸಲು ತೆಂಗಿನೆಣ್ಣೆ, ಆಲಿವ್ ಎಣ್ಣೆ, ಬಾದಾಮಿ ಎಣ್ಣೆಯನ್ನು ಬಳಸಬಹುದು ಅಥವಾ ನಿಮ್ಮ ಕೂದಲಿಗೆ ಹೊಂದುವ ಯಾವುದೇ ಎಣ್ಣೆಯನ್ನೂ ಕೂಡ ಬಳಸಬಹದು. ಈಗ ಬಾಟಲಿ ಮುಚ್ಚಳವನ್ನು ಬಿಗಿಯಾಗಿ ಹಾಕಿ ಕನಿಷ್ಠ ನಾಲ್ಕರಿಂದ ಆರು ವಾರಗಳವರೆಗೆ ಇರಿಸಿ. ಎಣ್ಣೆಯನ್ನು ಬಿಸಿ ಮಾಡುವ ಅಗತ್ಯವಿಲ್ಲ. ಮೆಂತ್ಯ ಬೀಜಗಳಿಗೆ ತಣ್ಣನೆಯ ಎಣ್ಣೆಯನ್ನು ಮಾತ್ರ ಸುರಿಯಲು ಮರೆಯದಿರಿ. ಕೋಣೆಯ ಉಷ್ಣಾಂಶದಲ್ಲಿ ಎಣ್ಣೆಯ ಬಾಟಲಿಯನ್ನು ಬಿಡಿ. ಮೆಂತ್ಯ ಮತ್ತು ಎಣ್ಣೆಯನ್ನು ಮಿಶ್ರಣ ಮಾಡಲು ದಿನಕ್ಕೆ ಒಮ್ಮೆ ಬಾಟಲಿಯನ್ನು ಅಲುಗಾಡಿಸಿ.

ಟ್ರೆಂಡಿಂಗ್​ ಸುದ್ದಿ

ಆರು ವಾರಗಳ ನಂತರ ಮೆಂತ್ಯ ಸೇರಿದಂತೆ ಯಾವುದಾದರೂ ಹತ್ತಿ ಬಟ್ಟೆ ಅಥವಾ ಜಾಲಿಯಿಂದ ಎಣ್ಣೆಯನ್ನು ಸೋಸಿಕೊಳ್ಳಿ. ಎಣ್ಣೆಯ ಬಣ್ಣ ಸ್ವಲ್ಪ ಬದಲಾಗುತ್ತದೆ. ಹೆಚ್ಚು ದಿನ ಇಟ್ಟಷ್ಟೂ ಎಣ್ಣೆಯ ಬಣ್ಣ ಬದಲಾಗುತ್ತದೆ.

ಸೋಸಿದ ಎಣ್ಣೆಯನ್ನು ಬಾಟಲಿಯಲ್ಲಿ ಶೇಖರಿಸಿಟ್ಟರೆ ಕನಿಷ್ಠ ಒಂದು ತಿಂಗಳ ಕಾಲ ಬಳಸಬಹುದು. ಉತ್ತಮ ಫಲಿತಾಂಶಕ್ಕಾಗಿ ಕನಿಷ್ಠ ಎರಡು ಮೂರು ವಾರಗಳವರೆಗೆ ಈ ಎಣ್ಣೆಯನ್ನು ನಿಯಮಿತವಾಗಿ ಹಚ್ಚಿ.

ಮೆಂತ್ಯ ಎಣ್ಣೆಯ ಪ್ರಯೋಜನಗಳು

ಆರೋಗ್ಯಕರ ಕೂದಲಿಗೆ ಸರಿಯಾದ ಪೋಷಣೆಯ ಅಗತ್ಯವಿರುತ್ತದೆ. ಮೆಂತ್ಯ ಎಣ್ಣೆಯು ಕೂದಲಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಇದು ಕೂದಲನ್ನು ಗಟ್ಟಿಯಾಗಿಸುವುದು ಮಾತ್ರವಲ್ಲದೆ ಹೊಸ ಕೂದಲು ಬೆಳೆಯುವಂತೆ ಮಾಡುತ್ತದೆ.

ಡ್ಯಾಂಡ್ರಫ್ ಅನೇಕ ಜನರನ್ನು ಕಾಡುವ ಮತ್ತೊಂದು ಸಮಸ್ಯೆಯಾಗಿದೆ. ಕನಿಷ್ಠ ನಾಲ್ಕು ವಾರಗಳ ಕಾಲ ಮೆಂತ್ಯ ಎಣ್ಣೆಯನ್ನು ಬಳಸುವುದರಿಂದ ತಲೆಹೊಟ್ಟು ಕಡಿಮೆಯಾಗುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ.

ಹೇರ್ ಸ್ಟೈಲಿಂಗ್‌ಗಾಗಿ ಕೂದಲನ್ನು ಬಿಸಿ ಮಾಡುವುದು, ವಿವಿಧ ರೀತಿಯ ಬಣ್ಣಗಳು ಮತ್ತು ರಾಸಾಯನಿಕಗಳನ್ನು ಹೊಂದಿರುವ ಉತ್ಪನ್ನಗಳನ್ನು ಬಳಸುವುದು ಕೂದಲು ಉದುರುವಿಕೆಯನ್ನು ಹೆಚ್ಚಿಸುತ್ತದೆ ಹಾಗೂ ಇದರಿಂದ ಕೂದಲು ದುರ್ಬಲವಾಗುತ್ತದೆ. ಹೀಗಿರುವಾಗ ಈ ಮೆಂತ್ಯ ಎಣ್ಣೆಯ ಬಳಕೆಯಿಂದ ಡ್ಯಾಮೇಜ್ ಆಗಿರುವ ಕೂದಲನ್ನು ಆರೋಗ್ಯಕರವಾಗಿ ಮಾಡಬಹುದು. ಈ ಎಣ್ಣೆ ಕೂದಲಿಗೆ ಹೊಸ ಹೊಳಪನ್ನು ನೀಡುತ್ತದೆ.

ಹೆರಿಗೆಯ ನಂತರ ಕೂದಲು ಉದುರುವ ಪ್ರಮಾಣ ಏರಿಕೆಯಾಗಬಹುದು. ಆ ಸಮಯದಲ್ಲಿಯೂ ಎಣ್ಣೆಯ ಬಳಕೆ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಈ ಎಣ್ಣೆಯನ್ನು ಬಳಸಲು ಶುರು ಮಾಡಿದಾಗ ನೀವು ಉಸಿರಾಟದ ತೊಂದರೆಗಳು, ಯಾವುದೇ ಊತ ಅಥವಾ ತುರಿಕೆ ಅನುಭವಿಸಿದರೆ ತೈಲವನ್ನು ಬಳಸುವುದನ್ನು ನಿಲ್ಲಿಸಿ.

ವಿಭಾಗ