Cancer Symptoms: ಊಟ ಮಾಡುವಾಗ ಈ ಲಕ್ಷಣಗಳು ಕಾಣಿಸಿದರೆ ನಿರ್ಲಕ್ಷ್ಯ ಮಾಡ್ಬೇಡಿ, ಕ್ಯಾನ್ಸರ್ ಸೂಚನೆಯೂ ಆಗಿರಬಹುದು ಎಚ್ಚರ-health news cancer symptoms 5 red flag signs of cancer you might spot while eating dinner stomach cancer rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Cancer Symptoms: ಊಟ ಮಾಡುವಾಗ ಈ ಲಕ್ಷಣಗಳು ಕಾಣಿಸಿದರೆ ನಿರ್ಲಕ್ಷ್ಯ ಮಾಡ್ಬೇಡಿ, ಕ್ಯಾನ್ಸರ್ ಸೂಚನೆಯೂ ಆಗಿರಬಹುದು ಎಚ್ಚರ

Cancer Symptoms: ಊಟ ಮಾಡುವಾಗ ಈ ಲಕ್ಷಣಗಳು ಕಾಣಿಸಿದರೆ ನಿರ್ಲಕ್ಷ್ಯ ಮಾಡ್ಬೇಡಿ, ಕ್ಯಾನ್ಸರ್ ಸೂಚನೆಯೂ ಆಗಿರಬಹುದು ಎಚ್ಚರ

ಜಗತ್ತಿನ ಮಾರಕ ಕಾಯಿಲೆಗಳಲ್ಲಿ ಕ್ಯಾನ್ಸರ್‌ಗೆ ಅಗ್ರಸ್ಥಾನ. ಕೆಲವು ಕ್ಯಾನ್ಸರ್‌ನ ಲಕ್ಷಣಗಳು ನಮಗೆ ಮೊದಲೇ ಗೋಚರವಾಗುತ್ತವೆ, ಆದರೂ ನಾವು ಅದನ್ನು ನಿರ್ಲಕ್ಷ್ಯ ಮಾಡುತ್ತೇವೆ ಅಥವಾ ಅದು ಕ್ಯಾನ್ಸರ್ ಸೂಚಕ ಎಂಬುದು ನಮಗೆ ಅರಿವಿರುವುದಿಲ್ಲ. ರಾತ್ರಿ ಊಟ ಮಾಡುವಾಗ ಈ ಲಕ್ಷಣಗಳು ಕಾಣಿಸಿದರೆ ಕ್ಯಾನ್ಸರ್ ಇರಬಹುದು, ಈ ಸಂಕೇತಗಳು ಅನುಭವಕ್ಕೆ ಬಂದರೆ ನಿರ್ಲಕ್ಷ್ಯ ಮಾಡದಿರಿ.

ಊಟ ಮಾಡುವಾಗ ಕಾಣಿಸುವ ಕ್ಯಾನ್ಸರ್ ಲಕ್ಷಣಗಳು
ಊಟ ಮಾಡುವಾಗ ಕಾಣಿಸುವ ಕ್ಯಾನ್ಸರ್ ಲಕ್ಷಣಗಳು

ಭಾರತವು ಇತ್ತೀಚೆಗೆ ಕ್ಯಾನ್ಸರ್‌ನ ರಾಜಧಾನಿ ಎಂಬ ಕುಖ್ಯಾತಿಗೆ ಪಾತ್ರವಾಗುತ್ತಿದೆ. ಕ್ಯಾನ್ಸರ್ ಎಂಬ ಮಾರಕ ರೋಗವು ನಮಗೆ ಅರಿವಾಗದಂತೆ ನಮ್ಮ ದೇಹವನ್ನು ಆವರಿಸಿ ಸುಡುತ್ತಿದೆ. ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಅನ್ನು ಪತ್ತೆ ಹಚ್ಚುವುದು ಕಷ್ಟ ಎಂದಾದರೂ, ಕೆಲವು ಲಕ್ಷಣಗಳನ್ನು ಗಮನಿಸಿ ಸೂಕ್ತ ತಜ್ಞರ ಸಲಹೆ ಪಡೆದರೆ ಈ ಮಾರಕ ರೋಗದಿಂದ ಮುಕ್ತಿ ಪಡೆಯುಬಹುದು.

ನಮ್ಮ ದೇಹದಲ್ಲಿ ಗೋಚರವಾಗುವ ಕೆಲವು ಲಕ್ಷಣಗಳು ಕ್ಯಾನ್ಸರ್ ಸೂಚಕವಾಗಿರಬಹುದು. ಅದನ್ನು ನಾವು ಗುರುತಿಸಿ, ತಜ್ಞರಿಂದ ಸಲಹೆ ಪಡೆದರೆ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಗುಣಪಡಿಸಲು ಸಾಧ್ಯವಿದೆ. ಆದರೆ ಬಹುತೇಕ ಪ್ರಕರಣಗಳಲ್ಲಿ ಕ್ಯಾನ್ಸರ್ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುವುದರಿಂದ ಇದು ಮೂರು, ನಾಲ್ಕನೇ ಹಂತವನ್ನು ದಾಟಿ ಹೋಗಿ ಗಂಭೀರ ಸ್ಥಿತಿಗೆ ತಲುಪಿದಾಗ ವೈದ್ಯರ ಬಳಿಗೆ ಹೋಗುವ ಪರಿಸ್ಥಿತಿ ಎದುರಾಗುತ್ತಿದೆ.

ತಜ್ಞರ ಪ್ರಕಾರ ನೀವು ಊಟ ಮಾಡುವಾಗ ಕೆಲವು ರೋಗಲಕ್ಷಣಗಳು ಕಾಣಿಸಬಹುದು. ಆದರೆ ಕೆಲವರು ಈ ಲಕ್ಷಣಗಳನ್ನು ಎದೆಯುರಿ ಅಥವಾ ಆಸಿಡ್ ರಿಫ್ಲಕ್ಸ್ ಎಂದು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಈ ತಪ್ಪು ತಿಳುವಳಿಕೆಯು ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಈ ರೋಗಲಕ್ಷಣಗಳನ್ನು ನಿರ್ಲಕ್ಷ್ಯ ಮಾಡದಿರಿ.

ಊಟ ಸಮಯದಲ್ಲಿ ಗುರುತಿಸಬಹುದಾದ ಕ್ಯಾನ್ಸರ್ ಚಿಹ್ನೆಗಳು

ನುಂಗಲು ಸಾಧ್ಯವಾಗದೇ ಇರುವುದು

ಇದನ್ನು ಡಿಸ್ಫೇಜಿಯಾ ಎಂದೂ ಕರೆಯಲಾಗುತ್ತದೆ. ಈ ತಿನ್ನುವಾಗ ನುಂಗಲು ನೋವು ಅಥವಾ ಅಸ್ವಸ್ಥತೆ ಉಂಟಾಗುವುದು. ಆಹಾರವು ಗಂಟಲು ಅಥವಾ ಎದೆಯಲ್ಲಿ ಸಿಲುಕಿಕೊಂಡಂತೆ ಅನಿಸುವುದು ನೀವು ಗಮನಿಸಬೇಕಾದ ಒಂದು ಲಕ್ಷಣವಾಗಿದೆ. ಕೆಲವರಿಗೆ ಊಟ ತಿನ್ನುವಾಗ ಉಸಿರುಗಟ್ಟಿದ ಅನುಭವವೂ ಆಗಬಹುದು. ಈ ರೋಗಲಕ್ಷಣಗಳು ಕಾಲಾನಂತರದಲ್ಲಿ ಕ್ರಮೇಣ ಹದಗೆಡುತ್ತವೆ, ನುಂಗುವಾಗ ನೋವು ಹೆಚ್ಚಾಗುತ್ತದೆ, ನಿಮ್ಮ ಅನ್ನನಾಳವು ಬೆಳೆಯುತ್ತಿರುವ ಕ್ಯಾನ್ಸರ್‌ನಿಂದ ಕಿರಿದಾಗುತ್ತದೆ. ವೈದ್ಯರ ಪ್ರಕಾರ, ಇದು ನಿಮ್ಮ ತಲೆ, ಕುತ್ತಿಗೆ, ಬಾಯಿ ಮತ್ತು ದವಡೆಯ ಮೇಲೆ ಪರಿಣಾಮ ಬೀರುವ ಕ್ಯಾನ್ಸರ್‌ನ ಸಂಕೇತವಾಗಿರಬಹುದು. ಈ ಕ್ಯಾನ್ಸರ್‌ಗಳಲ್ಲಿನ ಗೆಡ್ಡೆಯ ಬೆಳವಣಿಗೆಯು ನಿಮ್ಮ ಬಾಯಿ ಅಥವಾ ಗಂಟಲಿನ ಸ್ನಾಯುಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಮೇಲೆ ಅಡಚಣೆಗಳು ಅಥವಾ ಬದಲಾವಣೆಗಳಿಗೆ ಕಾರಣವಾಗಬಹುದು.

ನಿರಂತರ ಅಜೀರ್ಣ

ಅಜೀರ್ಣವು ಸಾಮಾನ್ಯ ಜೀರ್ಣಕಾರಿ ಸಮಸ್ಯೆ ಎಂಬುದು ನಿಜ. ಎಲ್ಲಾ ಸಮಯದಲ್ಲೂ ಇದು ಕ್ಯಾನ್ಸರ್‌ನ ಲಕ್ಷಣವಾಗಿರಬೇಕು ಎಂದೇನಿಲ್ಲ. ಆದರೆ ಎದೆ ಅಥವಾ ಹೊಟ್ಟೆಯಲ್ಲಿ ಸುಡುವ ಸಂವೇದನೆ, ಹೊಟ್ಟೆಯುಬ್ಬರ, ಪದೇ ಪದೇ ಹೊಟ್ಟೆಯುಬ್ಬರ, ನೋವು ಕಾಣಿಸಿದರೆ ನೀವು ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ. ಇದು ಅನ್ನನಾಳದ ಕ್ಯಾನ್ಸರ್ ಆಗಿರಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಬೇಗನೆ ಹೊಟ್ಟೆ ತುಂಬಿದಂತಾಗುವುದು

ಕ್ಯಾನ್ಸರ್‌ನ ಇನ್ನೊಂದು ಚಿಹ್ನೆ ಎಂದರೆ ಸ್ವಲ್ಪ ಊಟ ಮಾಡಿದರೂ ಬೇಗನೆ ಹೊಟ್ಟೆ ತುಂಬಿದಂತಹ ಭಾವನೆ ಮೂಡುವುದು. ಈ ಸಂದರ್ಭದಲ್ಲಿ ಇದು ಹೆಚ್ಚಾಗಿ ಉರಿಯೂತದ ಕರುಳಿನ ಸಹಲಕ್ಷಣಗಳು, ಜಠರ ಹುಣ್ಣುಗಳು ಅಥವಾ ಕಳಪೆ ಹಸಿವು ಎಂದು ನಮಗೆ ಅನ್ನಿಸಬಹುದು. ಆದರೂ ಇದು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್ ಅಥವಾ ಹೊಟ್ಟೆಯ ಕ್ಯಾನ್ಸರ್‌ನ ಆರಂಭಿಕ ಲಕ್ಷಣವಾಗಿರಬಹುದು ಎಂದು ವೈದ್ಯರು ಹೇಳುತ್ತಾರೆ.

ವಾಕರಿಕೆ ಮತ್ತು ವಾಂತಿ

ಊಟ ತಿನ್ನುವ ಸಮಯದಲ್ಲಿ ನಿಮಗೆ ವಾಂತಿ ಅಥವಾ ವಾಕರಿಕೆಯಂತಹ ಅನುಭವಗಳಾದರೆ ಬಹುತೇಕರು ಇದನ್ನು ಫುಡ್ ಪಾಯಿಸನಿಂಗ್ ಎಂದುಕೊಳ್ಳುತ್ತಾರೆ. ಆದಾಗ್ಯೂ, ಇದು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್, ಹೊಟ್ಟೆಯ ಕ್ಯಾನ್ಸರ್ ಅಥವಾ ಮೆದುಳಿನ ಗೆಡ್ಡೆಗಳ ಆರಂಭಿಕ ಎಚ್ಚರಿಕೆಯ ಸಂಕೇತವನ್ನು ಸಹ ಸೂಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

ಮಲ ವಿಸರ್ಜನೆಯ ತೊಂದರೆಗಳು

ಆರೋಗ್ಯಕರ ಆಹಾರ ಸೇವನೆಯಿಂದ ಕುರುಳಿನ ತೊಂದರೆಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ. ಆದರೆ ತಿಂದ ಕೆಲ ಹೊತ್ತಿಗೆ ಮಲಬದ್ಧತೆ, ಅತಿಸಾರ, ಪದೇ ಪದೇ ಮಲ ವಿರ್ಸಜನೆಯಾಗುವುದು ಇಂತಹ ಲಕ್ಷಣಗಳು ಕಂಡು ಬಂದರೆ ಖಂಡಿತ ನಿರ್ಲಕ್ಷ್ಯ ಮಾಡಬೇಡಿ. ತಜ್ಞರ ಪ್ರಕಾರ, ಇದು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಅಥವಾ ಹೊಟ್ಟೆಯ ಕ್ಯಾನ್ಸರ್‌ನ ಆರಂಭಿಕ ಚಿಹ್ನೆಯಾಗಿರಬಹುದು.

ಊಟ ಸಮಯದಲ್ಲಿ ಈ ಸಮಸ್ಯೆಗಳು ಎದುರಾದರೆ ಖಂಡಿತ ನಿರ್ಲಕ್ಷ್ಯ ಮಾಡದಿರಿ. ಇವು ಕ್ಯಾನ್ಸರ್ ಲಕ್ಷಣವಾಗಿದ್ದರೂ ಕೆಲವೊಮ್ಮೆ ಸಾಮಾನ್ಯ ಆರೋಗ್ಯ ಸಮಸ್ಯೆಗಳ ಸೂಚಕವೂ ಆಗಿರಬಹುದು. ಹಾಗಾಗಿ ತಜ್ಞರ ಬಳಿ ಸಲಹೆ ಪಡೆಯುವುದು ಬಹಳ ಮುಖ್ಯ.

mysore-dasara_Entry_Point