ಕನ್ನಡ ಸುದ್ದಿ  /  ಜೀವನಶೈಲಿ  /  Cancer Symptoms: ಉಗುರಿನಲ್ಲಾಗುವ ಈ ಸಣ್ಣ ಬದಲಾವಣೆಯೂ ಕ್ಯಾನ್ಸರ್‌ ಸೂಚನೆ ನೀಡಬಹುದು, ನಿರ್ಲಕ್ಷ್ಯ ಮಾಡದಿರಿ

Cancer Symptoms: ಉಗುರಿನಲ್ಲಾಗುವ ಈ ಸಣ್ಣ ಬದಲಾವಣೆಯೂ ಕ್ಯಾನ್ಸರ್‌ ಸೂಚನೆ ನೀಡಬಹುದು, ನಿರ್ಲಕ್ಷ್ಯ ಮಾಡದಿರಿ

ಉಗುರುಗಳು ದೇಹದ ಒಂದು ಸಾಮಾನ್ಯ ಅಂಗ ಎಂದು ನೀವು ಭಾವಿಸಿದ್ದರೆ ಈ ಯೋಚನೆಯನ್ನು ಇನ್ನು ಮುಂದೆ ಕೈ ಬಿಡಲೇಬೇಕು. ಏಕೆಂದರೆ ಇತ್ತೀಚಿಗೆ ನಡೆಸಲಾದ ಸಂಶೋಧನೆಯೊಂದರ ಪ್ರಕಾರ ಉಗುರುಗಳು ನಮ್ಮ ದೇಹದಲ್ಲಿ ಅಡಗಿ ಕುಳಿತಿರುವ ಕ್ಯಾನ್ಸರ್ ಕೋಶಗಳ ಉಪಸ್ಥಿತಿಯ ಬಗ್ಗೆ ಮಾಹಿತಿ ನೀಡುತ್ತವೆ ಎಂದು ತಿಳಿದು ಬಂದಿದೆ.

ಉಗುರುಗಳಲ್ಲಾಗುವ ಈ ಸಣ್ಣ ಬದಲಾವಣೆಯೂ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು, ನಿರ್ಲಕ್ಷ್ಯ ಮಾಡದಿರಿ
ಉಗುರುಗಳಲ್ಲಾಗುವ ಈ ಸಣ್ಣ ಬದಲಾವಣೆಯೂ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು, ನಿರ್ಲಕ್ಷ್ಯ ಮಾಡದಿರಿ

ಉಗುರುಗಳನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು ಎಂಬ ಮಾತನ್ನು ಬಾಲ್ಯದಿಂದಲೂ ಕೇಳುತ್ತಲೇ ಬಂದಿದ್ದೇವೆ. ಉಗುರುಗಳು ಹಳದಿ ಬಣ್ಣಕ್ಕೆ ತಿರುಗಿದರೆ ಅದು ಕಾಮಾಲೆಯ ಸಂಕೇತ ಎಂಬುದನ್ನೂ ನಾವು ಅರಿತಿದ್ದೇವೆ. ಆದರೆ ನಿಮ್ಮ ಉಗುರುಗಳಲ್ಲಿ ಆಗುವ ಕೆಲವು ಬದಲಾವಣೆಗಳು ನಿಮಗೆ ಮಾರಕ ಕಾಯಿಲೆ ಬಂದೆರಗಿದೆ ಎಂಬುದರ ಮುನ್ಸೂಚನೆ ನೀಡುತ್ತದೆ ಎಂಬ ವಿಚಾರ ನಿಮಗೆ ತಿಳಿದಿದೆಯೇ..? ಇತ್ತೀಚಿಗೆ ನಡೆಸಲಾದ ಸಂಶೋಧನೆಯೊಂದರ ಪ್ರಕಾರ, ನಿಮ್ಮ ಉಗುರಿನಲ್ಲಿ ಆಗುವ ಕೆಲವು ಬದಲಾವಣೆಗಳು ನಿಮಗೆ ಸಂಭಾವ್ಯ ಕ್ಯಾನ್ಸರ್ ಕಾಯಿಲೆ ಇರುವ ಬಗ್ಗೆ ಮಾಹಿತಿ ನೀಡುತ್ತವೆ ಎಂದು ತಿಳಿದುಬಂದಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಹೆಲ್ತ್‌ನ ವಿಜ್ಞಾನಿಗಳು ನಾವು ಕೆಲವು ಬಗೆಯ ಕ್ಯಾನ್ಸರ್‌ಗಳನ್ನು ಯಾವ ರೀತಿಯಲ್ಲಿ ಪತ್ತೆ ಮಾಡುತ್ತೇವೆ..? ಎಂಬುದರ ಬಗ್ಗೆ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸೊಸೈಟಿ ಫಾರ್ ಇನ್ವೆಸ್ಟಿಗೇಟಿವ್ ಡರ್ಮಟಾಲಜಿ 2024 ವಾರ್ಷಿಕ ಸಭೆಯಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದ ಪ್ರಕಾರ, ಒನಿಕೊಪಪಿಲೋಮಾ ಎಂದು ಕರೆಯಲ್ಪಡುವ ಹಾನಿಕರವಲ್ಲದ ಉಗುರಿನ ಸ್ಥಿತಿಯು BAP1 ಟ್ಯೂಮರ್ ಪ್ರಿಡಿಸ್ಪೊಸಿಷನ್ ಸಿಂಡ್ರೋಮ್‌ನ ರೋಗನಿರ್ಣಯಕ್ಕೆ ಕಾರಣವಾಗಬಹುದು ಹೇಳಿದೆ.

BAP1 ವಂಶವಾಹಿಯಲ್ಲಿನ ರೂಪಾಂತರಗಳಿಂದ ಉಗುರುಗಳಲ್ಲಿ ಉಂಟಾಗುವ ಈ ಸ್ಥಿತಿಯು ಚರ್ಮ, ಕಣ್ಣುಗಳು, ಮೂತ್ರಪಿಂಡಗಳು, ಎದೆ ಮತ್ತು ಹೊಟ್ಟೆಯನ್ನು ಒಳಗೊಂಡಿರುವ ಅಂಗಾಂಶ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಕ್ಯಾನ್ಸರ್ ಗೆಡ್ಡೆಗಳನ್ನು ಅಭಿವೃದ್ಧಿಪಡಿಸುವ ಅಪಾಯಕಾರಿ ಅಂಶವನ್ನು ಬಹಿರಂಗಪಡಿಸುತ್ತದೆ ಎಂದು ತಿಳಿದು ಬಂದಿದೆ.

JAMA ಡರ್ಮಟಾಲಜಿಯಲ್ಲಿ ಪ್ರಕಟವಾದ ಮತ್ತು ಸೊಸೈಟಿ ಫಾರ್ ಇನ್ವೆಸ್ಟಿಗೇಟಿವ್ ಡರ್ಮಟಾಲಜಿ ವಾರ್ಷಿಕ ಸಭೆಯಲ್ಲಿ ಮಂಡಿಸಲಾದ ಸಂಶೋಧನಾ ವರದಿಯು BAP1 ಟ್ಯೂಮರ್ ಪ್ರಿಡಿಸ್ಪೊಸಿಷನ್ ಸಿಂಡ್ರೋಮ್ ಹೊಂದಿರುವ 35 ಕುಟುಂಬಗಳ 47 ಮಂದಿಯ ಮೇಲೆ ನಡೆಸಿದ ಅಧ್ಯಯನವನ್ನು ಆಧರಿಸಿತ್ತು. ಈ ಸಂಶೋಧನೆಯಲ್ಲಿ ಭಾಗಿಯಾದವರು ಡರ್ಮಟಲಾಜಿಕಲ್ ಸ್ಕ್ರೀನಿಂಗ್‌ಗೆ ಒಳಗಾದರು. ಇವರಲ್ಲಿ ಅನೇಕರು ಒನಿಕೊಪಾಪಿಲೋಮಾ ಎಂಬ ನಿರ್ದಿಷ್ಟ ಉಗುರಿನ ಅಸಹಜತೆಯನ್ನು ಹೊಂದಿದ್ದರು.

ಏನಿದು ಒನಿಕೊಪಾಪಿಲೋಮಾ..?

ಒನಿಕೊಪಾಪಿಲೋಮಾ ಎಂಬುದು ಉಗುರಿನ ಉದ್ದಕ್ಕೂ ಕಾಣಿಸಿಕೊಳ್ಳುವ ಬಿಳಿ ಅಥವಾ ಕೆಂಪು ಬಣ್ಣದ ಬ್ಯಾಂಡ್ ಆಗಿದೆ. ಉಗುರು ದಪ್ಪಗಾಗುವುದರ ಜೊತೆಯಲ್ಲಿ ಅದರ ಕೆಳಭಾಗದಲ್ಲಿ ಹಾನಿಕಾರವಲ್ಲದ ಗಡ್ಡೆ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಇಂದು ಕೇವಲ 1 ಉಗುರಿನ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. BAP1 ಟ್ಯೂಮರ್ ಪ್ರಿಡಿಸ್ಪೊಸಿಷನ್ ಸಿಂಡ್ರೋಮ್‌ನೊಂದಿಗೆ 30 ವರ್ಷಕ್ಕಿಂತ ಮೇಲ್ಪಟ್ಟ ಅಧ್ಯಯನದಲ್ಲಿ ಭಾಗವಹಿಸುವವರಲ್ಲಿ, ಶೇ 88 ಜನರು ಅನೇಕ ಉಗುರುಗಳ ಮೇಲೆ ಒನಿಕೊಪಾಪಿಲೋಮಾವನ್ನು ಹೊಂದಿದ್ದರು. ಒಂದಕ್ಕಿಂತ ಹೆಚ್ಚು ಉಗುರುಗಳಲ್ಲಿ ಒನಿಕೊಪಾಪಿಲೋಮಾದ ಉಪಸ್ಥಿತಿಯು ವಿಶೇಷವಾಗಿ ಮೆಲನೋಮಾ ಅಥವಾ ಇತರೆ ಬಿಪಿಎ 1 ಸಂಬಂಧಿತ ಮಾರಣಾಂತಿಕ ಅಥವಾ ಕೌಟುಂಬಿಕ ಇತಿಹಾಸವನ್ನು ಹೊಂದಿದವರಲ್ಲಿ ಮಾತ್ರ ಕಂಡು ಬಂದಿತ್ತು.

ಈ ಲಕ್ಷಣವನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವುದು ಮುಖ್ಯ ಏಕೆ..?

ಆವಿಷ್ಕಾರವು BAP1 ಟ್ಯೂಮರ್ ಪ್ರಿಡಿಸ್ಪೊಸಿಷನ್ ಸಿಂಡ್ರೋಮ್‌ನ ಆರಂಭಿಕ ಪತ್ತೆಗೆ ಉಗುರುಗಳ ಸ್ಕ್ರೀನಿಂಗ್ ಮಾಡಬಹುದು. ಸೋಂಕಿಗೆ ಒಳಗಾದ ಉಗುರುಗಳು ಕ್ಯಾನ್ಸರ್‌ನ ಪೂರ್ವಭಾವಿ ಲಕ್ಷಣಗಳಾಗಿ ಸಹ ನೀವು ಪರಿಗಣಿಸಬಹುದಾಗಿದೆ. ಹೀಗಾಗಿ ಇದನ್ನು ಮೊದಲು ಪತ್ತೆ ಮಾಡಿದಲ್ಲಿ ಸೂಕ್ತ ಸಮಯಕ್ಕೆ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಸಾಧ್ಯವಿದೆ.

ಈ ಸಂಶೋಧನೆಯು ಭವಿಷ್ಯದ ಕ್ಯಾನ್ಸರ್ ಕುರಿತ ಅಧ್ಯಯನಕ್ಕೆ ಹೇಗೆ ಸಹಾಯ ಮಾಡುತ್ತದೆ?

ಉಗುರುಗಳಲ್ಲಿ ಕಾಣಿಸಿಕೊಳ್ಳುವ ಈ ಬದಲಾವಣೆಯು ಭವಿಷ್ಯದ ಕ್ಯಾನ್ಸರ್ ಅಪಾಯದ ಆರಂಭಿಕ ಸೂಚನೆಯನ್ನು ನೀಡುತ್ತದೆ. ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಕೋಶಗಳನ್ನು ಪತ್ತೆ ಮಾಡುವುದು ಕ್ಯಾನ್ಸರ್ ಕಾಯಿಲೆಯ ಬಗ್ಗೆ ಇನ್ನಷ್ಟು ಸಂಶೋಧನೆಗಳನ್ನು ನಡೆಸಿ ಅವುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲು ವೈದ್ಯರಿಗೆ ನೆರವಾಗುತ್ತದೆ.