ಕನ್ನಡ ಸುದ್ದಿ  /  ಜೀವನಶೈಲಿ  /  ಊಟದ ನಂತರ ಹತ್ತು ನಿಮಿಷ ವಾಕ್‌ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ; ಇದ್ರಿಂದ ದೇಹದಲ್ಲಾಗುವ ಬದಲಾವಣೆ ಕಂಡು ನೀವೇ ಅಚ್ಚರಿ ಪಡ್ತೀರಿ

ಊಟದ ನಂತರ ಹತ್ತು ನಿಮಿಷ ವಾಕ್‌ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ; ಇದ್ರಿಂದ ದೇಹದಲ್ಲಾಗುವ ಬದಲಾವಣೆ ಕಂಡು ನೀವೇ ಅಚ್ಚರಿ ಪಡ್ತೀರಿ

ಹಲವರು ರಾತ್ರಿ ಊಟ ಮಾಡಿದ ತಕ್ಷಣ ಮಲಗುತ್ತಾರೆ. ಕೆಲವರು ಊಟ ಮಾಡಿ ಟಿವಿ ಅಥವಾ ಮೊಬೈಲ್‌ ನೋಡಿ ನಂತರ ಮಲಗುತ್ತಾರೆ. ಇದೇ ಅಭ್ಯಾಸ ಆಗಿರುತ್ತದೆ. ಆದರೆ ಹೀಗೆ ಮಾಡುವುದು ಖಂಡಿತ ಒಳ್ಳೆಯದಲ್ಲ. ರಾತ್ರಿ ಊಟದ ನಂತರ ಹತ್ತೇ ಹತ್ತು ನಿಮಿಷ ವಾಕ್‌ ಮಾಡಬೇಕು. ಇದರಿಂದ ಆರೋಗ್ಯ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.

ಊಟದ ನಂತ್ರ ಹತ್ತೇ ಹತ್ತು ನಿಮಿಷ ವಾಕ್‌ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ; ಇದ್ರಿಂದ ದೇಹದಲ್ಲಾಗುವ ಬದಲಾವಣೆ ಕಂಡು ನೀವೇ ಅಚ್ಚರಿ ಪಡ್ತೀರಿ
ಊಟದ ನಂತ್ರ ಹತ್ತೇ ಹತ್ತು ನಿಮಿಷ ವಾಕ್‌ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ; ಇದ್ರಿಂದ ದೇಹದಲ್ಲಾಗುವ ಬದಲಾವಣೆ ಕಂಡು ನೀವೇ ಅಚ್ಚರಿ ಪಡ್ತೀರಿ

ಕಾಲ ಬದಲಾದಂತೆ ಮನುಷ್ಯನು ಬದಲಾಗುತ್ತಿದ್ದಂತೆ. ಆಧುನಿಕ ಸೌಕರ್ಯಗಳು ಮನುಷ್ಯನನ್ನು ಆಲಸಿ ಮಾಡಿವೆ. ಹಿಂದೆ ಕಾಲದಲ್ಲಿ ಕೂಡ ಕುಟುಂಬವಿತ್ತು. ಮನೆಯಲ್ಲಿ ಎಲ್ಲರೂ ಕೂತು ಊಟ ಮಾಡಿದ ಮೇಲೆ ಹೊರಗಡೆ ಕುಳಿತು ಪಟ್ಟಾಂಗ ಮಾಡುತ್ತಿದ್ದರು. ಮನೆಯ ಅಂಗಳದಲ್ಲಿ ನಡೆದಾಡುತ್ತಿದ್ದರು. ಹೆಂಗಸರು ಮನೆಯ ಒಳಗಿನ ಕೆಲಸ ಮಾಡುತ್ತಿದ್ದರು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಊಟವಾದ ತಕ್ಷಣ ಮಲಗುವವರೇ ಹೆಚ್ಚು. ಹೀಗೆ ತಿಂದ ತಕ್ಷಣ ಮಲಗುವ ಅಭ್ಯಾಸದಿಂದಲೇ ನಮಗೆ ಹಲವು ರೋಗಗಳು ಒಕ್ಕರಿಸುತ್ತಿವೆ. ಊಟದ ನಂತರ ಕೇವಲ ಹತ್ತೇ ಹತ್ತು ನಿಮಿಷ ವಾಕ್‌ ಮಾಡಬೇಕು. ಇದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ನಿಮಗೆ ನಡೆಯಲು ಸಾಧ್ಯವಾಗದಿದ್ದರೆ, ಕನಿಷ್ಠ ನೇರವಾಗಿ ಕುಳಿತುಕೊಳ್ಳಿ. ಹಾಗಾದರೆ ಊಟದ ನಂತರ 10 ನಿಮಿಷ ನಡೆದಾಡುವುದರಿಂದ ಏನು ಪ್ರಯೋಜನವಿದೆ ನೋಡಿ.

ಟ್ರೆಂಡಿಂಗ್​ ಸುದ್ದಿ

ಊಟದ ನಂತರ ವಾಕಿಂಗ್ ಮಾಡುವುದರ ಪ್ರಯೋಜನಗಳು

ರಾತ್ರಿ ಊಟವಾದ ತಕ್ಷಣ ಮಲಗುವುದು ಆಸಿಡ್ ರಿಫ್ಲೆಕ್ಸ್‌ನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಇದರಿಂದ ಹೊಟ್ಟೆಯುಬ್ಬರ, ಉರಿಯಂತಹ ಸಮಸ್ಯೆಗಳು ಎದುರಾಗಬಹುದು. ಹಾಗಾಗಿ ರಾತ್ರಿ ಊಟ ಮಾಡಿದ ನಂತರ ಸ್ವಲ್ಪ ಹೊತ್ತು ನೇರವಾಗಿ ಕುಳಿತುಕೊಳ್ಳಿ. ಅದರ ನಂತರ, ಕೇವಲ 10 ನಿಮಿಷಗಳ ಕಾಲ ಹಿಂದಕ್ಕೆ ಮತ್ತು ಮುಂದಕ್ಕೆ ನಡೆಯಿರಿ. ಹೀಗೆ ಮಾಡುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ತೂಕ ಕಡಿಮೆಯಾಗುತ್ತದೆ. ತಕ್ಷಣ ನಿದ್ದೆ ಮಾಡಿದರೆ ತೂಕ ಹೆಚ್ಚಾಗುವ ಸಾಧ್ಯತೆ ಇದೆ. ಊಟ ಮಾಡಿದ ನಂತರ ನಡೆಯುವವರಲ್ಲಿ ಜೀರ್ಣಕ್ರಿಯೆಯು ವೇಗವಾಗಿರುತ್ತದೆ. ಮಲಬದ್ಧತೆಯಂತಹ ಸಮಸ್ಯೆಗಳು ದೂರವಾಗುತ್ತವೆ. ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ಬರುವುದಿಲ್ಲ. ಜೀರ್ಣಕ್ರಿಯೆಯು ಸರಿಯಾಗಿ ನಡೆದಾಗ ದೇಹದಲ್ಲಿರುವ ತ್ಯಾಜ್ಯಗಳು ಮತ್ತು ವಿಷಾಂಶಗಳು ಹೊರಹೋಗುತ್ತವೆ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಮಧುಮೇಹಿಗಳಿಗೆ ಪ್ರಯೋಜನ 

ಊಟವಾದ ತಕ್ಷಣ ಮಲಗುವುದು ಒಳ್ಳೆಯ ಅಭ್ಯಾಸವಲ್ಲ. ಮಧುಮೇಹಿಗಳು ಹತ್ತು ನಿಮಿಷಗಳ ಕಾಲ ನಡೆಯುವ ಮೂಲಕ ಅವರು ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗುವುದನ್ನು ತಪ್ಪಿಸಬಹುದು. ಹೀಗೆ ನಡೆಯುವವರಲ್ಲಿ ಒತ್ತಡ ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ. ಚೆನ್ನಾಗಿ ನಿದ್ದೆ ಬರುತ್ತದೆ. ಅನ್ನ ತಿಂದ ನಂತರ ವ್ಯಾಯಾಮ ಅಥವಾ ನಡಿಗೆ ಮಾಡುವುದರಿಂದ ದೇಹವು ರಕ್ತದಲ್ಲಿ ಸ್ವಲ್ಪ ಗ್ಲುಕೋಸ್ ಸವ್ರಿಸುತ್ತದೆ. ಇದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಒಮ್ಮೆಗೆ ಹೆಚ್ಚುವುದಿಲ್ಲ. ಹಾಗಾಗಿ ಮಧುಮೇಹ ಇರುವವರು ಅನ್ನ ತಿಂದ ನಂತರ ನಡೆಯುವುದನ್ನು ರೂಢಿಸಿಕೊಳ್ಳಬೇಕು.

ತೀವ್ರ ಕೆಮ್ಮು ಇರುವವರು ಅನ್ನ ತಿಂದ ತಕ್ಷಣ ಮಲಗುವುದರಿಂದ ಕೆಮ್ಮು ಹೆಚ್ಚಬಹುದು. ನೀವು ಈ ರೀತಿ ಮಲಗಿದಾಗ, ಆಹಾರದಲ್ಲಿನ ಜೀರ್ಣಕಾರಿ ರಸಗಳು ಆಮ್ಲ ಪ್ರತಿಫಲಿತಕ್ಕೆ ಒಳಗಾಗುತ್ತವೆ. ಆಗ ವಿಪರೀತ ಕೆಮ್ಮು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಊಟ ಮಾಡಿದ ತಕ್ಷಣ ಮಲಗಬೇಡಿ. ಸಾಧ್ಯವಾದಷ್ಟು ನೇರವಾಗಿ ಕುಳಿತುಕೊಳ್ಳಲು ಪ್ರಯತ್ನಿಸಿ. ಹಾಗೆಯೇ ನಡೆಯಲು ಪ್ರಯತ್ನಿಸಿ. ಅಂತಹ ಸಮಸ್ಯೆಗಳನ್ನು ತಪ್ಪಿಸಬಹುದು. ಹೀಗೆ ನಡೆಯುವುದರಿಂದ ದೇಹದ ಕೊಬ್ಬು ಸಂಗ್ರಹವಾಗುವುದಿಲ್ಲ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಮಾನಸಿಕ ಆರೋಗ್ಯಕ್ಕೂ ಉತ್ತಮ 

ನಡಿಗೆ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು. ಇದು ಖಿನ್ನತೆ-ಶಮನಕಾರಿಯಂತೆ ಕೆಲಸ ಮಾಡುತ್ತದೆ. ಖಿನ್ನತೆಯಿಂದ ಬಳಲುತ್ತಿರುವವರಿಗೆ ವಾಕಿಂಗ್ ಉತ್ತಮ ಔಷಧಿ ಎಂದು ಹೇಳಬಹುದು. ಪ್ರತಿದಿನ ನಡೆಯುವ ವ್ಯಕ್ತಿಯೂ ಉತ್ತಮ ಮನಸ್ಥಿತಿಯನ್ನು ಹೊಂದಿರುತ್ತಾನೆ. ಹೀಗೆ ಒಂದು ತಿಂಗಳ ಕಾಲ ಊಟದ ಬಳಿಕ 10 ನಿಮಿಷ ವಾಕ್‌ ಮಾಡಿ. ನಿಮ್ಮಲ್ಲಿ ಧನಾತ್ಮಕ ಬದಲಾವಣೆಗಳನ್ನು ನೀವು ಗಮನಿಸಬಹುದು.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)