ಕನ್ನಡ ಸುದ್ದಿ  /  ಜೀವನಶೈಲಿ  /  ಕಲ್ಲಂಗಡಿ ಹಣ್ಣಿಗೆ ಉಪ್ಪು ಸೇರಿಸಿ ತಿನ್ನೋದ್ರಿಂದ ರುಚಿ ದುಪ್ಪಟ್ಟಾಗೋದು ಮಾತ್ರವಲ್ಲ, ಆರೋಗ್ಯಕ್ಕೂ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಕಲ್ಲಂಗಡಿ ಹಣ್ಣಿಗೆ ಉಪ್ಪು ಸೇರಿಸಿ ತಿನ್ನೋದ್ರಿಂದ ರುಚಿ ದುಪ್ಪಟ್ಟಾಗೋದು ಮಾತ್ರವಲ್ಲ, ಆರೋಗ್ಯಕ್ಕೂ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ಇಷ್ಟವಾಗುವ ಹಣ್ಣು ಕಲ್ಲಂಗಡಿ. ಡಯೆಟ್‌ ಮಾಡುವವರ ಆಹಾರ ಕ್ರಮದಲ್ಲಂತೂ ಈ ಹಣ್ಣಿಗೆ ವಿಶೇಷ ಸ್ಥಾನ. ಕೆಂಪು ಬಣ್ಣದ, ಸಿಹಿಯಾದ ಮತ್ತು ನೀರಿನಾಂಶವೇ ಅಧಿಕವಾಗಿರುವ ಕಲ್ಲಂಗಡಿ ಹಣ್ಣನ್ನು ತಿನ್ನುವ ಮೊದಲು ಅದರ ಮೇಲೆ ಚಿಟಿಕೆ ಉಪ್ಪು ಹಾಕುವುದೇಕೆ? ಈ ಪ್ರಶ್ನೆ ನಿಮ್ಮಲ್ಲೂ ಇದ್ದರೆ ಈ ಬರಹ ಓದಿ.

ಕಲ್ಲಂಗಡಿಗೆ ಉಪ್ಪು ಸೇರಿಸಿ ತಿನ್ನೋದ್ರಿಂದ ರುಚಿ ದುಪ್ಪಟ್ಟಾಗೋದು ಮಾತ್ರವಲ್ಲ, ಆರೋಗ್ಯಕ್ಕೂ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ
ಕಲ್ಲಂಗಡಿಗೆ ಉಪ್ಪು ಸೇರಿಸಿ ತಿನ್ನೋದ್ರಿಂದ ರುಚಿ ದುಪ್ಪಟ್ಟಾಗೋದು ಮಾತ್ರವಲ್ಲ, ಆರೋಗ್ಯಕ್ಕೂ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ದಕ್ಷಿಣ ಭಾರತದಲ್ಲಿ ಬೇಸಿಗೆ ಕಳೆದು ಮಳೆಗಾಲ ಪ್ರಾರಂಭವಾಗಿರಬಹುದು. ಆದರೆ ಉತ್ತರ ಭಾರತದಲ್ಲಿ ಇನ್ನೂ ಬೇಸಿಗೆ ಮುಂದುವರೆದಿದೆ. ಬಿಸಿಲಿನ ತಾಪಕ್ಕೆ ಮನುಷ್ಯ ಬಸವಳಿದು ಹೋಗಿದ್ದಾನೆ. ಬಿಸಿಲಿನ ದಿನಗಳಲ್ಲಿ ನಮ್ಮನ್ನು ನಾವು ಹೈಡ್ರೇಟ್‌ ಆಗಿ ಇರಿಸಿಕೊಳ್ಳುವುದು ಅವಶ್ಯಕ. ಅದಕ್ಕೆಂದೇ ನೀರಿನಂಶ ಅಧಿಕವಾಗಿರುವ ತರಕಾರಿ, ಹಣ್ಣುಗಳನ್ನು ಸೇವಿಸುತ್ತೇವೆ. ಬೇಸಿಗೆಯ ಸೂಪರ್‌ ಫುಡ್‌ಗಳ ಸಾಲಿಗೆ ಕಲ್ಲಂಗಡಿ ಹಣ್ಣು ಸಹ ಸೇರುತ್ತದೆ. ಅದರಲ್ಲೂ ಹೊರಗಿನ ಬಿಸಿ ವಾತಾವರಣಕ್ಕೆ ತಣ್ಣಗಿನ ಕಲ್ಲಂಗಡಿ ಹಣ್ಣು ಸ್ವಲ್ಪ ಹೆಚ್ಚೇ ತಂಪೆರೆಯುತ್ತದೆ. ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಹಾಗೆ ತಿನ್ನುವವರಿದ್ದರೆ ಚಿಟಿಕೆ ಉಪ್ಪನ್ನು ಹಾಕಿ ಸವಿಯುವವರನ್ನೂ ಕಾಣಬಹುದು. ಆದರೆ ಮನೆಯ ಹಿರಿಯರು ಮಾತ್ರ ಸ್ವಲ್ಪ ಉಪ್ಪು ಸೇರಿಸಿಕೊಂಡು ತಿನ್ನಿ ಎಂದೇ ಹೇಳುತ್ತಾರೆ. ಕಲ್ಲಂಗಡಿ ಹಣ್ಣಿಗೆ ಉಪ್ಪು ಸೇರಿಸುವುದರಿಂದ ಏನೆಲ್ಲಾ ಪ್ರಯೋಜನಗಳು ಸಿಗುತ್ತವೆ? ಇಲ್ಲಿದೆ ಓದಿ.

ಕಲ್ಲಂಗಡಿಗೆ ಚಿಟಿಕೆ ಉಪ್ಪು ಸೇರಿಸುವುದರಿಂದ ಏನಾಗುತ್ತದೆ?

ಕಲ್ಲಂಗಡಿ ಹಣ್ಣು ಮೂಲತಃ 90 ಪ್ರತಿಶತದಷ್ಟು ನೀರಿನಾಂಶ ಹೊಂದಿರುವ ಸಿಹಿಯಾದ ಹಣ್ಣು. ಅಂಗಡಿಯಿಂದ ಕೊಂಡು ತರುವ ಹಣ್ಣು ಕೆಲವೊಮ್ಮೆ ಸಂಪೂರ್ಣವಾಗಿ ಹಣ್ಣಾಗಿರುವುದಿಲ್ಲ. ಆಗ ನಾಲಿಗೆಗೆ ಸಿಹಿಯ ಹಿಂದೆಯೇ ಕಹಿ ಅಥವಾ ಸಪ್ಪೆಯ ಅನುಭವವಾಗುತ್ತದೆ. ಅದಕ್ಕೆ ಚಿಟಿಕೆ ಉಪ್ಪು ಸೇರಿಸಿದಾಗ ಸಪ್ಪೆ ಅನಿಸುವುದಿಲ್ಲ. ಕಾರಣ ಉಪ್ಪು ಸ್ವಾಭಾವಿಕವಾಗಿಯೇ ರುಚಿಯನ್ನು ಹೆಚ್ಚಿಸುವ ಗುಣಧರ್ಮವನ್ನು ಹೊಂದಿದೆ. ಸಿಹಿ ಸ್ವಲ್ಪ ಕಡಿಮೆ ಇರುವ ಹಣ್ಣು ಸಹ ರುಚಿ ಎನಿಸಲು ಪ್ರಾರಂಭವಾಗುತ್ತದೆ.̇̇

ಟ್ರೆಂಡಿಂಗ್​ ಸುದ್ದಿ

ಕಲ್ಲಂಗಡಿ ಹಣ್ಣಿಗೆ ಉಪ್ಪು ಸೇರಿಸಿದಾಗ ಬಾಯಲ್ಲಿ ನೀರೂರುವಷ್ಟು ಕೆಂಪಾಗಿ ಕಾಣಿಸುತ್ತದೆ. ಕಾರಣವೇನೆಂದರೆ, ತರಕಾರಿ, ಹಣ್ಣುಗಳಿಗೆ ಉಪ್ಪನ್ನು ಸೇರಿಸಿದಾಗ ಅದರಲ್ಲಿರುವ ನೀರಿನಾಂಶ ಹೊರಬರುತ್ತದೆ. ಏಕೆಂದರೆ ನೀರು ಹೆಚ್ಚಿನ ಸಾಂದ್ರತೆಯಿಂದ ಕಡಿಮೆ ಸಾಂದ್ರತೆಗೆ ಚಲಿಸುತ್ತದೆ. ಈ ಕ್ರಿಯೆಯಿಂದ ಉಪ್ಪುನ್ನು ಸೇರಿಸಿದಾಗ ಕಲ್ಲಂಗಡಿ ಹಣ್ಣಿನಲ್ಲಿ ಅಡಕವಾಗಿರುವ ನೀರಿನಾಂಶವು ಅದರ ಹೊರಪದರದ ಮೇಲೆ ಬರುತ್ತದೆ. ಆಗ ಅದು ರಸಭರಿತ, ಸಿಹಿಯಾದ ಹಣ್ಣಾಗುತ್ತದೆ. ಇಷ್ಟೇ ಅಲ್ಲದೇ ಉಪ್ಪಿನಿಂದ ಅನೇಕ ಆರೋಗ್ಯ ಪ್ರಯೋಜನಗಳೂ ಇವೆ. ಸೋಡಿಯಂ ಎಂದು ಕರೆಯಲ್ಪಡುವ ಉಪ್ಪು ನೈಸರ್ಗಿಕವಾಗಿಯೇ ಎಲೆಕ್ಟ್ರೋಲೈಟ್‌ ಆಗಿದೆ. ಇದು ನಮ್ಮ ದೇಹವನ್ನು ಹೈಡ್ರೀಕರಿಸುತ್ತದೆ ಮತ್ತು ದೇಹದ ನೀರಿನಾಂಶದ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕಲ್ಲಂಗಡಿ ಹಣ್ಣಿಗೆ ಉಪ್ಪು ಸೇರಿಸುವುದರಿಂದ ಹಣ್ಣಿನಲ್ಲಿರುವ ತೇವಾಂಶದ ಗುಣವನ್ನು ಹೆಚ್ಚಿಸುತ್ತದೆ. ಹಾಗಾಗಿ ಬೇಸಿಗೆಯ ತಾಪಕ್ಕೆ ದೇಹವನ್ನು ಕಾಪಾಡಿಕೊಳ್ಳಲು ಇದು ಉಪಯುಕ್ತವಾಗಿದೆ. ಕಲ್ಲಂಗಡಿ ಹಣ್ಣಿಗೆ ಉಪ್ಪು ಸೇರಿಸಿ ತಿನ್ನುವುದು ಒಂದು ಬಗೆಯಾದರೆ, ಅದರಿಂದ ಜ್ಯೂಸ್‌ ಕೂಡಾ ತಯಾರಿಸಬಹುದು. ಕಲ್ಲಂಗಡಿ ಹಣ್ಣಿನ ಹೋಳುಗಳನ್ನು ಜ್ಯೂಸರ್ ಜಾರ್‌ಗೆ ಹಾಕಿ ಜ್ಯೂಸ್‌ ತಯಾರಿಸಿ ಅದಕ್ಕೆ ಚಿಟಿಕೆ ಉಪ್ಪು ಮತ್ತು ಸ್ವಲ್ಪ ಕಾಳುಮೆಣಸಿನ ಪುಡಿ ಸೇರಿಸಿ. ಫ್ರಿಜ್‌ನಲ್ಲಿಟ್ಟು ತಂಪಾದ ಬಳಿಕ ಕುಡಿಯಬಹುದು. ಇಲ್ಲವೇ ಅದಕ್ಕೆ ಒಂದೆರಡು ಐಸ್‌ ಪೀಸ್‌ ಸೇರಿಸಿಯೂ ಸವಿಯಬಹುದು.

ವಿಭಾಗ