ಪುಟ್ಟ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಟಿಪ್ಸ್ ಫಾಲೋ ಮಾಡಿ, ನಿಮ್ಮ ಮಕ್ಕಳ ಆರೋಗ್ಯ ಸುಧಾರಿಸಿ
ನಿಮ್ಮ ಮಕ್ಕಳ ಆರೋಗ್ಯ ನಿಮ್ಮ ಕೈಯ್ಯಲ್ಲೇ ಇದೆ. ಅವರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೀವು ಕಷ್ಟಪಡಬೇಕು ಎಂದೇನಿಲ್ಲ. ನಾವು ಇಲ್ಲಿ ನೀಡಿದ ಸಲಹೆಗಳನ್ನು ಪಾಲಿಸಿದರೂ ಸಾಕು. ನಿಮ್ಮ ಮಗುವಿನ ಆರೋಗ್ಯ ಸುಧಾರಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಮಕ್ಕಳ ಆರೋಗ್ಯದ ಬಗ್ಗೆ ತಂದೆ, ತಾಯಿ ತುಂಬಾ ಕಾಳಜಿ ವಹಿಸುತ್ತಾರೆ. ಅವರ ಕಾಳಜಿಯಿಂದಲೇ ಮಕ್ಕಳ ಆರೋಗ್ಯ ನಿರ್ಧರಿತವಾಗುತ್ತದೆ. ಇನ್ನು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಅವರನ್ನು ಇನ್ನಷ್ಟು ಸ್ಟ್ರಾಂಗ್ ಮಾಡುವ ಸಲುವಾಗಿ ಪಾಲಕರು ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ನಾವೂ ಸಹ ಇಲ್ಲಿ ಕೆಲವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಂಶಗಳನ್ನು ನೀಡಿದ್ದೇವೆ. ಮಕ್ಕಳಿಗೆ ರೋಗನಿರೋಧಕ ಶಕ್ತಿ ತುಂಬಾ ಮುಖ್ಯ ಯಾಕೆಂದರೆ ಅವರು ಬೆಳೆದು ದೊಡ್ಡವರಾಗಲು ಮತ್ತು ಆರೋಗ್ಯದಿಂದಿರಲು ಇದೇ ಕಾರಣವಾಗುತ್ತದೆ.
ಹಾಲುಣಿಸಿ: ತುಂಬಾ ಚಿಕ್ಕಮಕ್ಕಳಿಗೆ ತಮ್ಮನ್ನು ತಾವು ಹೇಗೆ ಆರೈಕೆ ಮಾಡಿಕೊಳ್ಳಬೇಕು ಎಂದು ತಿಳಿದಿರುವುದಿಲ್ಲ. ಚಿಕ್ಕ ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಲುಣಿಸಬೇಕು. ಮಗು ಹುಟ್ಟಿದ ಆರು ತಿಂಗಳವರೆಗೂ ನಿರಂತರವಾಗಿ ತಾಯಿ ಎದೆ ಹಾಲನ್ನು ಕೊಡಬೇಕು.
ಹಣ್ಣು ತರಕಾರಿ ನೀಡಿ: ಅಂದರೆ ಡ್ರೈಫ್ರೂಟ್ಸ್ ಮತ್ತು ತರಕಾರಿ, ಮಿಲ್ಲೆಟ್ ಇವುಗಳನ್ನ ಮಗುವಿಗೆ ಪ್ರತಿನಿತ್ಯ ಕೊಡಬೇಕು. ಅವರು ತಿನ್ನಬಹುದಾದ ಕೆಲವು ತರಕಾರಿಗಳು ಅಂದರೆ ಸವತೆ, ಬೇಯಿಸಿದ ಕ್ಯಾರೇಟ್, ಬೇಯಿಸಿದ ಬೀಟ್‌ರೂಟ್ ಇಂತಹ ತರಕಾರಿಗಳನ್ನು ಬೇಯಿಸಿ ಮೃದುವಾದ ತರಕಾರಿ ಸ್ಮ್ಯಾಷ್ ಮಾಡಿ ಕೊಡಬೇಕು. ಹೀಗೆ ಮಾಡಿಕೊಟ್ಟರೆ ಮಾತ್ರ ಅವರು ತಿನ್ನುತ್ತಾರೆ. ಇನ್ನೊಂದಷ್ಟು ವಿಷಯಗಳನ್ನು ಗಮನದಲ್ಲಿಡಿ. ಇವುಗಳು ಗಟ್ಟಿಯಾಗಿದ್ದಾಗ ಕೊಟ್ಟರೆ ಅಥವಾ ದೊಡ್ಡ ತುಂಡುಗಳನ್ನು ಕೊಟ್ಟರೆ ಗಂಟಲಿಗೆ ಸಿಗಬಹುದು ಜಾಗರೂಕರಾಗಿರಿ.
ಹೈಡ್ರೇಟ್ ಆಗಿರುವಂತೆ ಮಾಡಿ: ಯಾವಾಗಲೂ ಅವರು ಹೈಡ್ರೇಟ್ ಆಗಿರುವಂತ ನೋಡಿಕೊಳ್ಳಬೇಕು. ಜ್ಯೂಸ್, ನೀರು ಅಥವಾ ಎಳನೀರು, ಹಾಲು ಹೀಗೆ ಏನಾದರೂ ಕುಡಿಯಲು ಕೊಡಬೇಕು. ತೆಳುವಾದ ಪದಾರ್ಥಗಳನ್ನು ಆಗಾಗ ನೀಡಿ ಅವರು ಸದಾ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳಿ.
ಯಾವಾಗಲೂ ವ್ಯಾಯಾಮ ಮಾಡಿಸಿ: ಯಾವಾಗಲೂ ಮಕ್ಕಳು ಚಟುವಟಿಕೆಯಲ್ಲಿರುವಂತೆ ನೋಡಿಕೊಳ್ಳಬೇಕು. ಅವರಿಗೆ ವ್ಯಾಯಾಮ ಮಾಡಿಸಬೇಕು ಸರಿಯಾಗಿ ವಿಶ್ರಾಂತಿಯನ್ನು ಸಹ ನೀಡಬೇಕು. ಮಗುವಿಗೆ ಎಂಟರಿಂದ ಹತ್ತು ತಾಸು ನಿದ್ದೆ ಅವಶ್ಯವಾಗಿರುತ್ತದೆ. ಹಾಗಾಗಿ ಆ ಸಂದರ್ಭದಲ್ಲಿ ನೀವು ಅವರಿಗೆ ಬೇರೆ ಯಾವುದೇ ಚಟುವಟಿಕೆಯನ್ನು ಮಾಡಿಸದೆ ಕಡ್ಡಾಯವಾಗಿ ಅವರು ಹಠ ಮಾಡಿದರು ನಿದ್ರೆ ಮಾಡಿಸಬೇಕು.
ಸ್ಟ್ರೆಸ್ ನೀಡಬೇಡಿ: ನಿಮ್ಮ ಮಕ್ಕಳಿಗೆ ನೀವು ಅತಿಯಾಗಿ ಬೈಯಬಾರದು. ಅವರ ಮೇಲೆ ಯಾವುದೇ ದೂರುಗಳನ್ನು ಹಾಕಬಾರದು. ಇದು ಅವರ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸಹ ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತದೆ.
ಹೆಚ್ಚಿಗೆ ಸಿಹಿ ಪದಾರ್ಥ ಕೊಡಬೇಡಿ: ಹೆಚ್ಚಿಗೆ ಸಿಹಿ ಪದಾರ್ಥಗಳನ್ನ ಕೊಡುವುದನ್ನು ನಿಲ್ಲಿಸಿ. ಹೆಚ್ಚು ಸಿಹಿ ತಿಂದರೆ ಮಕ್ಕಳಿಗೆ ತೊಂದರೆ ಆಗುತ್ತದೆ. ಲಿಮಿಟೆಡ್ ಶುಗರ್ ನಿಂದ ಅವರನ್ನು ಬೆಳೆಸಿ. ಹಾಗಂತ ಚಾಕಲೇಟ್ ಕೊಡದೆ ಇರಬೇಡಿ. ಅವರಿಗೆ ಆ ಅಂಶವೂ ಬೇಕು.
ಲಸಿಕೆ ಮಿಸ್ ಮಾಡಬೇಡಿ: ಯಾವ ಯಾವ ವಯಸ್ಸಿಗೆ ಯಾವ ಯಾವ ಲಸಿಕೆಗಳನ್ನು ಹಾಕಿಸಬೇಕು ಎಂದು ನೋಡಿ ಅದನ್ನು ತಪ್ಪಿಸಬೇಡಿ. ಯಾವಾಗಲೂ ಮನೆಯಲ್ಲಿ ಕುಳಿತು ಆಟವಾಡುವುದಕ್ಕಿಂತ ಮನೆಯ ಹೊರಗೆ ಆಡುವ ಆಟಗಳನ್ನು ಆಡಲು ಬಿಡಿ. ಅವರಿಗೂ ಚಟುವಟಿಕೆ ತುಂಬಾ ಮುಖ್ಯ.
ವಿಭಾಗ