ಕನ್ನಡ ಸುದ್ದಿ  /  Lifestyle  /  Healthy Smoothie To Reduce Weight

Weight loss recipe: ತೂಕ ಇಳಿಸಲು ಬಹಳ ಸಹಾಯಕಾರಿ ಈ ಪವರ್​​ ಫುಲ್ ಸ್ಮೂಥಿ...ತಯಾರಿಸೋದು ಹೇಗೆ ನೋಡಿ

ನೀವೂ ಕೂಡಾ ಹಣ್ಣುಗಳನ್ನು ಹಾಗೇ ತಿನ್ನಲು ಇಷ್ಟಪಡದಿದ್ದರೆ ಬೆಳಗಿನ ಉಪಾಹಾರಕ್ಕೆ ಸೇಬು ಮತ್ತು ಫ್ಲಾಕ್ಸ್ ಸೀಡ್​​​​ಗಳಿಂದ ಮಾಡಿದ ಸ್ಮೂಥಿ ಸೇವಿಸಿ. ಇದರಿಂದ ನೀವು ಬಹಳ ಬೇಗ ತೂಕ ಇಳಿಸಬಹುದು.

ಬ್ರೇಕ್​ ಫಾಸ್ಟ್​ ಸ್ಮೂಥಿ
ಬ್ರೇಕ್​ ಫಾಸ್ಟ್​ ಸ್ಮೂಥಿ

ಸ್ಮೂಥಿಗಳಲ್ಲಿ ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿದೆ. ಪ್ರತಿದಿನ ಬೆಳಗ್ಗೆ ಬ್ರೇಕ್​​ ಫಾಸ್ಟ್​​​ಗೆ ನೀವು ರೈಸ್ ಐಟಮ್ಸ್ ಅಥವಾ ಬೇರೆ ಆಹಾರವನ್ನು ತಿನ್ನುವ ಬದಲಿಗೆ ಸ್ಮೂಥಿ ಸೇವಿಸಿದರೆ ಇಡೀ ದಿನ ನಿಮ್ಮನ್ನು ಫ್ರೆಷ್ ಆಗಿ ಇರಲು ಸಹಾಯ ಮಾಡುತ್ತದೆ. ಜೊತೆಗೆ ಸ್ಮೂಥಿ, ತೂಕ ಇಳಿಸಲು ಕೂಡಾ ಸಹಾಯ ಮಾಡುತ್ತವೆ. ಇದಲ್ಲದೆ, ತರಕಾರಿಗಳು ಮತ್ತು ಹಣ್ಣುಗಳನ್ನು ಹಾಗೇ ತಿನ್ನಲು ಇಷ್ಟಪಡದವರಿಗೆ ಈ ಸ್ಮೂಥಿ ಉತ್ತಮ ಆಯ್ಕೆಯಾಗಿದೆ.

ನೀವೂ ಕೂಡಾ ಹಣ್ಣುಗಳನ್ನು ಹಾಗೇ ತಿನ್ನಲು ಇಷ್ಟಪಡದಿದ್ದರೆ ಬೆಳಗಿನ ಉಪಾಹಾರಕ್ಕೆ ಸೇಬು ಮತ್ತು ಫ್ಲಾಕ್ಸ್ ಸೀಡ್​​​​ಗಳಿಂದ ಮಾಡಿದ ಸ್ಮೂಥಿ ಸೇವಿಸಿ. ಇದರಿಂದ ನೀವು ಬಹಳ ಬೇಗ ತೂಕ ಇಳಿಸಬಹುದು. ಈ ಆರೋಗ್ಯಕರ ಸ್ಮೂಥಿ ಮಾಡಲು ಬೇಕಾಗುವ ಪದಾರ್ಥಗಳು ಹಾಗೂ ತಯಾರಿಸುವ ವಿಧಾನ ಹೇಗೆ ನೋಡೋಣ.

ಬೇಕಾಗುವ ಸಾಮಗ್ರಿಗಳು

ಸೇಬು - 1

ಖರ್ಜೂರ - 3

ಆರೆಂಜ್ ಜ್ಯೂಸ್ - 1/2 ಕಪ್

ಚಿಯಾ ಸೀಡ್ಸ್ - 1 ಟೀ ಸ್ಪೂನ್

ಫ್ಲಾಕ್ಸ್ ಸೀಡ್ಸ್ - 1 ಟೀ ಸ್ಪೂನ್

ದಾಲ್ಚಿನ್ನಿ ಪುಡಿ - ಚಿಟಿಕೆ

ಅರಿಶಿನ - 1/4 ಚಮಚ

ತಯಾರಿಸುವ ವಿಧಾನ

ಸೇಬನ್ನು ತೊಳೆದು ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ

ಬೀಜ ತೆಗೆದ ಖರ್ಜೂರಗಳನ್ನು ಕೂಡಾ ಸಣ್ಣ ಚೂರುಗಳನ್ನಾಗಿ ಕತ್ತರಿಸಿಕೊಳ್ಳಿ

ಒಂದು ಜಾರ್​​​​​​ನಲ್ಲಿ ಸೇಬು, ಖರ್ಜೂರ, ಆರೆಂಜ್ ಜ್ಯೂಸ್ ಸೇರಿಸಿ

ನಂತರ ದಾಲ್ಚಿನಿ ಪುಡಿ, ಅರಿಶಿಣ, ಚಿಯಾ ಸೀಡ್ಸ್ ಸೇರಿಸಿ ಎಲ್ಲಾ ಪದಾರ್ಥಗಳು ನುಣ್ಣಗೆ ಆಗುವಂತೆ ಬ್ಲೆಂಡ್ ಮಾಡಿ

ಅವಶ್ಯಕತೆ ಇದ್ದಲ್ಲಿ ನೀರು ಅಥವಾ ಕೆನೆ ತೆಗೆದ ಹಾಲು ಸೇರಿಸಿ

ಸೇಬು ಹಾಗೂ ಖರ್ಜೂರದಲ್ಲಿ ಸಿಹಿ ಅಂಶ ಇರುವುದರಿಂದ ಸಕ್ಕರೆ, ಬೆಲ್ಲ ಅಥವಾ ಜೇನುತುಪ್ಪ ಸೇರಿಸುವ ಅವಶ್ಯತೆ ಇರುವುದಿಲ್ಲ

ಫ್ರೆಷ್ ಸ್ಮೂಥಿಯನ್ನು ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ

ಕೆಲವೇ ದಿನಗಳಲ್ಲಿ ನಿಮಗೆ ಫಲಿತಾಂಶ ದೊರೆಯಲಿದೆ

ಉಪಯೋಗಗಳು

ಸೇಬು

An apple a day keeps the doctor away ಎಂದು ಇಂಗ್ಲೀಷ್​​​​ನಲ್ಲಿ ಒಂದು ಮಾತಿದೆ. ಸೇಬು ತಿನ್ನುವುದರಿಂದ ನಮಗೆ ನಾನಾ ಲಾಭಗಳಿವೆ. ಸೇಬು ತಿಂದರೆ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆದ್ದರಿಂದ ವೈದ್ಯರು ಜ್ವರ ಇರುವವರಿಗೆ ಸೇಬು ತಿನ್ನಲು ಸಲಹೆ ನೀಡುತ್ತಾರೆ. ಇದರಲ್ಲಿ ಅಧಿಕ ಪ್ರಮಾಣದ ಆಂಟಿ ಆಕ್ಸಿಡೆಂಟ್​​​​​​, ಫ್ಲೇವನಾಯ್ಡ್​​​​ ಹಾಗೂ ಪೋಷಕಾಂಶಗಳಿದ್ದು ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಮಧುಮೇಹ ಹಾಗೂ ಇನ್ನಿತರ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದರಿಂದ ನಿಮ್ಮ ಚರ್ಮದ ಹೊಳಪು ಕೂಡಾ ಹೆಚ್ಚುತ್ತದೆ.

ಖರ್ಜೂರ

ಖರ್ಜೂರಗಳು ಪೌಷ್ಟಿಕಾಂಶದಿಂದ ತುಂಬಿರುತ್ತವೆ, ವಿಶೇಷವಾಗಿ ಒಣ ಖರ್ಜೂರಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಒಣ ಖರ್ಜೂರದಲ್ಲಿ ಹೆಚ್ಚಿನ ಕ್ಯಾಲೋರಿಗಳು ವಿಶೇಷವಾಗಿ ಕಾರ್ಬೋಹೈಡ್ರೇಟ್‌ಗಳು ಇರುತ್ತದೆ. ಇದು ಫೈಬರ್​ ಹಾಗೂ ಹಲವಾರು ಅಗತ್ಯ ಜೀವಸತ್ವಗಳು ಮತ್ತು ಖನಿಜಗಳನ್ನು ಸಹ ಒಳಗೊಂಡಿದೆ. ಖರ್ಜೂರವು ಉತ್ಕರ್ಷಣ ನಿರೋಧಕಗಳ ಸಮೃದ್ಧ ಸಾಂದ್ರತೆಗೆ ಹೆಸರುವಾಸಿಯಾಗಿದೆ, ಇದು ನಿಮ್ಮ ಹೃದಯ ಮತ್ತು ಶ್ವಾಸಕೋಶದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ಫ್ಲಾಕ್ಸ್ ಸೀಡ್ಸ್

ಫ್ಲಾಕ್ಸ್ ಸೀಡ್ಸ್​​​​​​ ಫ್ಲಾಕ್ಸ್ ಸೀಡ್ಸನ್ನು ಕನ್ನಡದಲ್ಲಿ ಅಗಸೆ ಬೀಜ ಎಂದು ಕರೆಯಲಾಗುತ್ತದೆ. ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು, ಫೈಬರ್ ಮತ್ತು ಇತರ ಖನಿಜಗಳು ಅಧಿಕವಾಗಿವೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ನಿಮ್ಮ ಪ್ರತಿದಿನದ ಆಹಾರದಲ್ಲಿ1/4 ಟೀ ಸ್ಪೂನ್​​​​​ನಷ್ಟು ಅಗಸೆ ಬೀಜಗಳನ್ನು ಸೇರಿಸಬಹುದು ಅಥವಾ ಮಿಲ್ಕ್​ ಶೇಕ್ , ಸ್ಮೂಥಿ, ಸಲಾಡ್​​ ಜೊತೆ ಬಳಸಬಹುದು.