Parenting Tips; ಎಲ್ಲರೆದುರು ಮಕ್ಕಳನ್ನು ಬೈಯಬೇಡಿ, ಶಿಸ್ತು ಬೆಳೆಸಲು ಈ ಸೀಕ್ರೆಟ್ ತಂತ್ರಗಳನ್ನು ಅನುಸರಿಸಿ, ಉತ್ತಮ ಪಾಲಕರಾಗಿ
ಕನ್ನಡ ಸುದ್ದಿ  /  ಜೀವನಶೈಲಿ  /  Parenting Tips; ಎಲ್ಲರೆದುರು ಮಕ್ಕಳನ್ನು ಬೈಯಬೇಡಿ, ಶಿಸ್ತು ಬೆಳೆಸಲು ಈ ಸೀಕ್ರೆಟ್ ತಂತ್ರಗಳನ್ನು ಅನುಸರಿಸಿ, ಉತ್ತಮ ಪಾಲಕರಾಗಿ

Parenting Tips; ಎಲ್ಲರೆದುರು ಮಕ್ಕಳನ್ನು ಬೈಯಬೇಡಿ, ಶಿಸ್ತು ಬೆಳೆಸಲು ಈ ಸೀಕ್ರೆಟ್ ತಂತ್ರಗಳನ್ನು ಅನುಸರಿಸಿ, ಉತ್ತಮ ಪಾಲಕರಾಗಿ

Parenting Tips for Avoiding Public Scolding; ಮಕ್ಕಳಲ್ಲಿ ಶಿಸ್ತು ಮೂಡಿಸುವುದಕ್ಕಾಗಿ ಎಲ್ಲರೆದುರು ಮಕ್ಕಳನ್ನು ಬೈಯಬೇಡಿ. ಉತ್ತಮ ಪಾಲಕರಾಗಿ ಮಕ್ಕಳಲ್ಲಿ ಶಿಸ್ತು ಬೆಳೆಸಲು ಈ ಸೀಕ್ರೆಟ್ ತಂತ್ರಗಳನ್ನು ಅನುಸರಿಸಿ. ಇದಕ್ಕಾಗಿ ಇಲ್ಲಿರುವ ಎರಡು ಮುಖ್ಯ ವಿ‍ಷಯಗಳನ್ನು ಅರ್ಥಮಾಡಿಕೊಳ್ಳಿ-

ಎಲ್ಲರೆದುರು ಮಕ್ಕಳನ್ನು ಬೈಯಬೇಡಿ, ಶಿಸ್ತು ಬೆಳೆಸಲು ಈ ಸೀಕ್ರೆಟ್ ತಂತ್ರಗಳನ್ನು ಅನುಸರಿಸಿ, ಉತ್ತಮ ಪಾಲಕರಾಗಿ. (ಸಾಂಕೇತಿಕ ಚಿತ್ರ)
ಎಲ್ಲರೆದುರು ಮಕ್ಕಳನ್ನು ಬೈಯಬೇಡಿ, ಶಿಸ್ತು ಬೆಳೆಸಲು ಈ ಸೀಕ್ರೆಟ್ ತಂತ್ರಗಳನ್ನು ಅನುಸರಿಸಿ, ಉತ್ತಮ ಪಾಲಕರಾಗಿ. (ಸಾಂಕೇತಿಕ ಚಿತ್ರ) (Canva)

ಅನೇಕರು ಸಾರ್ವಜನಿಕವಾಗಿಯೇ, ಮಗ/ಮಗಳು ಹೇಳಿದ್ದೇ ಕೇಳಲ್ಲ ಅಂತ ಸಾರ್ವಜನಿಕವಾಗಿ ಬೈಯುವುದನ್ನು ಗಮನಿಸಿದ್ದೇವೆ. ಆದರೆ ಇದು ಉತ್ತಮ ಪಾಲನೆಯ ಕ್ರಮ ಅಥವಾ ಪೇರೆಂಟಿಂಗ್ ಅಲ್ಲ ಎಂಬುದನ್ನು ಅನೇಕ ಅಧ್ಯಯನ ವರದಿಗಳು ಹೇಳಿವೆ ಮತ್ತು ಹೇಳುತ್ತಲೇ ಇವೆ.

ಮಗುವಿನಲ್ಲಿ ಶಿಸ್ತು ಮೂಡಿಸಬೇಕು ನಿಜ. ಆದರೆ ಹೇಗೆ?, ಬಹಳ ಹಟ ಮಾಡುವ ಮಗುವಾಗಿದ್ದರೆ ಅಥವಾ ಒರಟು ಒರಟಾಗಿ ವರ್ತಿಸುತ್ತಿದ್ದರೆ ಅವರ ಬದುಕಿನಲ್ಲಿ ಶಿಸ್ತು ಮೂಡಿಸುವುದು ಹೇಗೆ ಎಂಬುದೇ ದೊಡ್ಡ ಸವಾಲು. ಇಂತಹ ಮಕ್ಕಳು, ಪಾಲಕರ ಚಿತ್ರಗಳು ನಮ್ಮ ಕಣ್ಣೆದುರೇ ಹಾದುಹೋಗಬಹುದು. ಹಾಗಾದರೆ ಇದಕ್ಕೆ ಪರಿಹಾರ ಇಲ್ಲವೇ, ಮಕ್ಕಳಲ್ಲಿ ಶಿಸ್ತು ಮೂಡಿಸುವುದು ಹೇಗೆ-

ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದರೆ ಕೆಲವು ಮುಖ್ಯ ಅಂಶಗಳನ್ನು ಗಮನಿಸಬೇಕು.

ಮೊದಲನೇಯದು - ಸಾರ್ವಜನಿಕವಾಗಿ ಮಗುವನ್ನು ಬೈಯುವುದರಿಂದ ಆಗುವ ಮತ್ತು ಆಗಬಹುದಾದ ಪರಿಣಾಮಗಳು.

ಎರಡನೇಯದು- ಮಕ್ಕಳಲ್ಲಿ ಶಿಸ್ತು ಮೂಡಿಸುವುದಕ್ಕೆ ಇರುವಂತಹ ಪರ್ಯಾಯ ಮಾರ್ಗಗಳು

ಸಾರ್ವಜನಿಕವಾಗಿ ಮಗುವನ್ನು ಬೈಯುವುದರಿಂದ ಆಗುವ ಮತ್ತು ಆಗಬಹುದಾದ ಪರಿಣಾಮಗಳು

1) ಮಗುವನ್ನು ಸಾರ್ವಜನಿಕವಾಗಿ ಬೈಯುವ ಮೂಲಕವೋ ಹೀಯಾಳಿಸುವ ಮೂಲಕವೋ ಆ ಮಗುವಿನ ಬದುಕಿನಲ್ಲಿ ವೈಯಕ್ತಿಕ ಮತ್ತು ಸಾಮಾಜಿಕ ಶಿಸ್ತು ತರುವುದು ಸಾಧ್ಯವಿಲ್ಲ.

2) ಅಂತಹ ಸನ್ನಿವೇಶಗಳು ಮಕ್ಕಳಿಗಷ್ಟೇ ಅಲ್ಲ ಅಪ್ಪ, ಅಮ್ಮಂದಿರಿಗೂ ಮುಜುಗರ ಉಂಟುಮಾಡುವಂಥವು.

3) ಅಂತಹ ಅನುಭವಗಳು ಮಗುವಿನ ಸ್ವಾಭಿಮಾನವನ್ನು ದುರ್ಬಲಗೊಳಿಸಬಹುದು. ಆ ಮಗುವಿನ ಮನಸ್ಸಿನಲ್ಲಿ ತನ್ನ ಬಗ್ಗೆಯೇ ಒಂದು ನಕಾರಾತ್ಮಕ ಭಾವನೆ ಬೆಳೆಯಬಹುದು ಎಂಬುದನ್ನು ಅಧ್ಯಯನ ವರದಿಗಳು ಉಲ್ಲೇಖಿಸಿವೆ.

4) ಅಷ್ಟೇ ಅಲ್ಲ, ಸಾರ್ವಜನಿಕವಾಗಿ ಬೈಯುವುದರಿಂದ ಅಪ್ಪ/ಅಮ್ಮ ಮತ್ತು ಮಗುವಿನ ಸಂಬಂಧ ಹದಗೆಡಬಹುದು. ಮಗುವಿಗೆ ಅಪ್ಪ/ ಅಮ್ಮನ ಮೇಲೆ ನಂಬಿಕೆ ಬಾರದಿರಬಹುದು.

5) ಎಲ್ಲರೆದುರು ಬೈದಾಗ ಮಗು ಸರಿ ಹೋದೀತು ಎಂದು ಅಪ್ಪ/ಅಮ್ಮ ಭಾವಿಸಿದರೆ, ಆ ಮಗು ಅದನ್ನು ಅದೇ ರೀತಿ ತೆಗೆದುಕೊಳ್ಳಬೇಕು ಎಂದಿಲ್ಲ. ಮಗು ಅದನ್ನು ಮುಜುಗರದ ಅಥವಾ ಕೆಟ್ಟ ಅನುಭವವಾಗಿ ಕಾಣಬಹುದು. ಇದರಿಂದಾಗಿ ಮೊಂಡುತನ ಹೆಚ್ಚಾಗಬಹುದು. ಭಾವನಾತ್ಮಕವಾಗಿಯೂ ಏರಿಳಿತಗಳು ಉಂಟಾಗಬಹುದು.

ಮಕ್ಕಳಲ್ಲಿ ಶಿಸ್ತು ಮೂಡಿಸುವುದಕ್ಕೆ ಇರುವಂತಹ ಪರಿಣಾಮಕಾರಿ ಪರ್ಯಾಯ ಮಾರ್ಗಗಳು

1) ಈ ಋಣಾತ್ಮಕ ಫಲಿತಾಂಶಗಳು ಅಥವಾ ಅನುಭವಗಳನ್ನು ತಪ್ಪಿಸಲು, ಮಗುವಿನ ಘನತೆಯನ್ನು ಕಾಪಾಡುವ ಪರ್ಯಾಯ ಶಿಸ್ತಿನ ವಿಧಾನಗಳ ಕಡೆಗೆ ಅಪ್ಪ/ಅಮ್ಮ ಗಮನಹರಿಸಬೇಕು. ಆದ ತಪ್ಪುಗಳನ್ನು ಸರಿಪಡಿಸುವುದಕ್ಕೆ ಇದು ಮುಖ್ಯವಾಗುತ್ತದೆ.

2) ಈ ಬಗ್ಗೆ ಪರಿಣತ ಸಮಾಲೋಚಕರ ಬಳಿ ಕೇಳಿದರೆ ಅವರು ಹೇಳುವುದು ಇಷ್ಟೆ- ಶಿಸ್ತಿನ ಸಮಸ್ಯೆಗಳನ್ನು ಖಾಸಗಿಯಾಗಿ ನಿರ್ವಹಿಸಬೇಕು. ಮಗುವಿನೊಂದಿಗೆ ಶಾಂತವಾಗಿ ಮಾತನಾಡಬೇಕು. ಸಾರ್ವಜನಿಕವಾಗಿ ಮಗುವನ್ನು ಬೈಯುವುದು, ಹೀಯಾಳಿಸುವುದು ಮಾಡಬಾರದು. ಸಂಭಾಷಣೆಗಳು ರಚನಾತ್ಮಕವಾಗಿರುವಂತೆ ನೋಡಿಕೊಳ್ಳಬೇಕು.

3) ಮಗುವಿನ ಜೊತೆಗೆ ಧನಾತ್ಮಕವಾಗಿ ವರ್ತಿಸುವುದು ಹೆಚ್ಚು ಪರಿಣಾಮಕಾರಿ ವಿಧಾನ. ಅಂದರೆ, ಉತ್ತಮ ನಡವಳಿಕೆಯನ್ನು ಹೊಗಳುವುದು ಮತ್ತು ಸಕಾರಾತ್ಮಕ ಕ್ರಿಯೆಗಳಿಗೆ ಪ್ರತಿಫಲ ನೀಡುವುದು. ಶಿಕ್ಷೆ ನೀಡದೇ ಇರುವುದು ಆ ಭಯವನ್ನು ದೂರ ಮಾಡುತ್ತದೆ.

4) ಶಿಸ್ತಿಗೆ ಸಂಬಂಧಿಸಿ ಸ್ಪಷ್ಟ ಮತ್ತು ಸ್ಥಿರವಾದ ಮಾರ್ಗದರ್ಶನ ನೀಡಿ ಅರ್ಥಮಾಡಿಸಬೇಕು. ಇದು ಮಕ್ಕಳಿಗೆ ಶಿಸ್ತಿಗೆ ಸಂಬಂಧಿಸಿದ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ.

5) ಶಿಸ್ತು ಅನುಸರಿಸುವುದಕ್ಕೆ ಹೇಳುವಾಗ ಅದರ ನಿಯಮ ಮತ್ತು ಪರಿಣಾಮಗಳು ಅನ್ವಯವಾಗುತ್ತದೆ. ಅದು ಮಗುವಿನಲ್ಲಿ ಭದ್ರತೆಯ ಭಾವ ಉಂಟಾಗಲು ಮತ್ತು ನ್ಯಾಯೋಚಿತವಾದ ಅರ್ಥಮಾಡಿಕೊಳ್ಳುವಿಕೆಗೆ ನೆರವಾಗುತ್ತದೆ.

ಕೊನೇ ಮಾತು: 'ದಿ ಜರ್ನಲ್ ಆಫ್ ಚೈಲ್ಡ್ ಡೆವಲಪ್‌ಮೆಂಟ್' ನಲ್ಲಿನ ವರದಿಯ ಪ್ರಕಾರ, ಕಿರುಚಾಟವು ಮಕ್ಕಳನ್ನು ಹೊಡೆಯುವಂತೆಯೇ ಪರಿಣಾಮ ಬೀರುತ್ತದೆ. ಆದರೆ ಮಕ್ಕಳನ್ನು ಇತರರ ಮುಂದೆ ಬೈಯುವುದರಿಂದ ಅವರಲ್ಲಿ ಒತ್ತಡ ಮತ್ತು ಖಿನ್ನತೆ ಉಂಟಾಗುತ್ತದೆ.

ಇನ್ನು, ಮನಶ್ಶಾಸ್ತ್ರಜ್ಞ ಬರ್ನಾರ್ಡ್ ಗೋಲ್ಡನ್ ಪ್ರಕಾರ ಮಗು ತನ್ನ ಸ್ನೇಹಿತರೊಂದಿಗೆ ಸರಿಯಾಗಿ ಸಂವಹನ ನಡೆಸುವುದಿಲ್ಲ, ಪೋಷಕರು ಮಗುವಿನ ಮೇಲೆ ಕೂಗಿದಾಗ ವ್ಯಕ್ತಿಯ ದೇಹದ ಎಚ್ಚರಿಕೆ ವ್ಯವಸ್ಥೆಯು ತಕ್ಷಣವೇ ಸಕ್ರಿಯಗೊಳ್ಳುತ್ತದೆ. ವ್ಯಕ್ತಿಯು ತಕ್ಷಣವೇ ಹೋರಾಟ ಅಥವಾ ಆಘಾತದ ಸ್ಥಿತಿಗೆ ಹೋಗುತ್ತಾನೆ. ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ ನಂತಹ ಒತ್ತಡದ ಹಾರ್ಮೋನುಗಳ ಉತ್ಪಾದನೆಯು ಮೆದುಳಿನ ಕೆಲವು ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಮನಸ್ಸಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುತ್ತದೆ ಎಂಬುದರ ಕಡೆಗೆ ಗಮನಸೆಳೆದಿದ್ದಾರೆ. ಹೀಗಾಗಿ ಉತ್ತಮ ಪಾಲನಾ ವಿಧಾನಗಳನ್ನು (ಪೇರೆಂಟಿಂಗ್‌) ಅನುಸರಿಸುವುದು ಒಳಿತು.

Whats_app_banner