How to Get Rid of Lizard Naturally: ಮನೆಯಲ್ಲಿ ವಿಪರೀತ ಹಲ್ಲಿ ಕಾಟವೇ? ಹೇಗೆ ಓಡಿಸುವುದೆಂಬ ಚಿಂತೆಯೇ ಇಲ್ಲಿವೆ ನೈಸರ್ಗಿಕ ವಿಧಾನಗಳ ವಿವರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  How To Get Rid Of Lizard Naturally: ಮನೆಯಲ್ಲಿ ವಿಪರೀತ ಹಲ್ಲಿ ಕಾಟವೇ? ಹೇಗೆ ಓಡಿಸುವುದೆಂಬ ಚಿಂತೆಯೇ ಇಲ್ಲಿವೆ ನೈಸರ್ಗಿಕ ವಿಧಾನಗಳ ವಿವರ

How to Get Rid of Lizard Naturally: ಮನೆಯಲ್ಲಿ ವಿಪರೀತ ಹಲ್ಲಿ ಕಾಟವೇ? ಹೇಗೆ ಓಡಿಸುವುದೆಂಬ ಚಿಂತೆಯೇ ಇಲ್ಲಿವೆ ನೈಸರ್ಗಿಕ ವಿಧಾನಗಳ ವಿವರ

  • How to Get Rid of Lizard Naturally: ಮನೆಯ ಗೋಡೆ ಮೇಲೆಲ್ಲ ಹಲ್ಲಿಗಳಿದ್ದರೆ ಕೊಳಕು ಕಾಣುವುದಲ್ಲವೆ? ಆದರೆ ಅವುಗಳ ಇರುವಿಕೆಯನ್ನು ತಪ್ಪಿಸಲು ಸಾಧ್ಯವೇ? ಏನು ಔಷಧ ಹೊಡೆಯುವುದು ಎಂದೆಲ್ಲ ಚಿಂತಿಸಬೇಡಿ. ನೈಸರ್ಗಿಕವಾಗಿಯೆ ಅವುಗಳನ್ನು ಹಿಮ್ಮೆಟ್ಟಿಸಲು ಸಾಧ್ಯ. ಏನು ಮಾಡಬೇಕು ಎಂಬುದಕ್ಕೆ ಇಲ್ಲಿದೆ ವಿವರ ಓದಿ.

ಮನೆಯಲ್ಲಿ ಹಲ್ಲಿಗಳ ಕಾಟ ಹೆಚ್ಚಾಗಿದ್ದು ಮೂಲೆ ಮೂಲೆಗಳಲ್ಲಿ ಮೊಟ್ಟೆ ಇಡುತ್ತವೆ. ನೋಡುವುದಕ್ಕೂ ಅಸಹ್ಯವಾಗಿದೆ. ಇವುಗಳಿಂದ ಮುಕ್ತಿ ಹೇಗಪ್ಪಾ? ಭಗವಂತಾ ಕಾಪಾಡು ಎಂದು ನಿತ್ಯವೂ ಗೊಣಗಾಡುತ್ತಿದ್ದೀರಾ? ಇಲ್ಲಿದೆ ಪರಿಹಾರ. ನೈಸರ್ಗಿಕವಾಗಿಯೇ ಅವುಗಳನ್ನು ಹಿಮ್ಮೆಟ್ಟಿಸಬಹುದು. ಈ ಮಾಹಿತಿ ಬಹಳ ಉಪಯುಕ್ತವಾದುದು.
icon

(1 / 7)

ಹಲ್ಲಿಗಳನ್ನು ಹಿಮ್ಮೆಟ್ಟಿಸಲು ಅನೇಕ ಜನರು ಮನೆಯ ಮೂಲೆಗಳಲ್ಲಿ ಮೊಟ್ಟೆಯ ಚಿಪ್ಪು ಅಥವಾ ನವಿಲು ಗರಿಗಳನ್ನು ಇಡುತ್ತಾರೆ. ಮೊಟ್ಟೆಯ ಚಿಪ್ಪು ಅವುಗಳಿಗೆ ತುಂಬಾ ಕೆಟ್ಟದಾಗಿ ಕಾಣುತ್ತದೆ. ಮತ್ತು ನವಿಲು ಗರಿಗಳ ವಾಸನೆ ಹಲ್ಲಿಗಳಿಗೆ ಆಗುವುದಿಲ್ಲ ಎಂಬ ನಂಬಿಕೆ ಇದು. ಆದರೆ  ನಿಜವಾಗಿಯೂ ಹಲ್ಲಿಗಳು ಅವುಗಳನ್ನು ಕಂಡು ಓಡಿಹೋಗುತ್ತವೆಯೇ ಎಂಬ ಅನುಮಾನವಿದೆ. ಆದರೆ ಇವುಗಳನ್ನು ಮಾಡದೆಯೇ ಹಲ್ಲಿಗಳನ್ನು ಹಿಮ್ಮೆಟ್ಟಿಸಲು ಸಾಧ್ಯವಿದೆ. ಇದಕ್ಕೆ ಯಾವುದೇ ರಾಸಾಯನಿಕ ಬೇಕಾಗಿಲ್ಲ ಮತ್ತೆ!
icon

(2 / 7)

ನ್ಯಾಫ್ತಲೀನ್: ಬಟ್ಟೆಗಳನ್ನು ಕಚ್ಚುವ ಕೀಟಗಳನ್ನು ತಡೆಗಟ್ಟಲು ಅನೇಕರು ತಮ್ಮ ವಾರ್ಡ್‌ರೋಬ್‌ಗಳಲ್ಲಿ ನಾಫ್ತಲೀನ್ ಅನ್ನು ಬಳಸುತ್ತಾರೆ. ಆದರೆ ಇದರ ಹೊರತಾಗಿ, ಇದು ಹಲ್ಲಿಗಳನ್ನು ಹಿಮ್ಮೆಟ್ಟಿಸುವಲ್ಲಿ ಸಹ ಮಾಸ್ಟರ್ ಆಗಿದೆ. ಆದ್ದರಿಂದ ಈ ವಸ್ತುವನ್ನು ಕೋಣೆಯ ಮೂಲೆಯಲ್ಲಿ ಇರಿಸಿ. ಹಲ್ಲಿ ಮತ್ತೆ ಆ ಕಡೆ ಹೋಗುವುದಿಲ್ಲ.
icon

(3 / 7)

ಬೆಳ್ಳುಳ್ಳಿ: ಈರುಳ್ಳಿ ಮತ್ತು ಬೆಳ್ಳುಳ್ಳಿಯ ವಾಸನೆಯನ್ನು ಹಲ್ಲಿಗಳು ಸಹಿಸುವುದಿಲ್ಲ. ವಿಶೇಷವಾಗಿ ಬೆಳ್ಳುಳ್ಳಿಯ ವಾಸನೆ. ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ನುಜ್ಜುಗುಜ್ಜು ಮಾಡಿ ಮತ್ತು ಅದನ್ನು ನೀರಿನೊಂದಿಗೆ ಮಿಶ್ರಣ ಮಾಡಿ. ಅದರ ನಂತರ, ಹಲ್ಲಿಗಳು ಸಂಚರಿಸುವ ಸ್ಥಳಗಳಲ್ಲಿ ನೀರನ್ನು ಸಿಂಪಡಿಸಿ. ಅದು ಹಲ್ಲಿಯನ್ನು ಓಡಿಸುವುದಕ್ಕೆ ಮೂಲ ಔಷಧ.
icon

(4 / 7)

ಕರ್ಪೂರ: ಹಲ್ಲಿಗಳು ಈ ವಸ್ತುವಿನ ವಾಸನೆಯನ್ನು ಸಹಿಸುವುದಿಲ್ಲ. ಆದ್ದರಿಂದ ನೀವು ಕೋಣೆಯ ಮೂಲೆಯಲ್ಲಿ ಸ್ವಲ್ಪ ಕರ್ಪೂರವನ್ನು ಇಡಬಹುದು. ಕರ್ಪೂರದ ಪರಿಮಳ ಸುತ್ತಮುತ್ತ ಹರಡಿ, ಹಲ್ಲಿಗಳು ಅಲ್ಲಿಂದ ದೂರ ಹೋಗುತ್ತವೆ.
icon

(5 / 7)

ಕಾಳುಮೆಣಸು: ಇದರ ವಾಸನೆಯು ಹಲ್ಲಿಗಳಿಗೆ ಸಂಪೂರ್ಣ ಅಸಹನೀಯ. ಕಾಳುಮೆಣಸಿನ ಪುಡಿಯನ್ನು ನೀರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ಅದರ ನಂತರ, ಮನೆಯಲ್ಲಿ ಹಲ್ಲಿಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಸ್ಥಳಗಳನ್ನು ಸಿಂಪಡಿಸಿ. ಹಲ್ಲಿ ಓಡಿಹೋಗುತ್ತದೆ.
icon

(6 / 7)

ಸೀಮೆಎಣ್ಣೆ: ಮಹಡಿಗಳು ಅಥವಾ ಬಾಲ್ಕನಿಗಳಂತಹ ಪ್ರದೇಶಗಳನ್ನು ಸೀಮೆಎಣ್ಣೆಯಿಂದ ಸ್ವಚ್ಛಗೊಳಿಸಿ. ಹಲ್ಲಿಗಳು ಅದರ ವಾಸನೆಯನ್ನು ಸಹಿಸುವುದಿಲ್ಲ. ಪರಿಣಾಮ ಅಲ್ಲಿಂದ ಅವು ದೂರಾಗುತ್ತವೆ.
icon

(7 / 7)

ಇತರ ಗ್ಯಾಲರಿಗಳು