Fast Recover From C Section: ಸಿಜೇರಿಯನ್ ಹೆರಿಗೆ ನಂತರ ಯಾವ ರೀತಿ ಕಾಳಜಿ ವಹಿಸಬೇಕು...ಇಲ್ಲಿದೆ ಒಂದಷ್ಟು ಟಿಪ್ಸ್
ಮೊದಲ ಮೂರು ದಿನಗಳವರೆಗೆ ಆಸ್ಪತ್ರೆಯಲ್ಲಿ ಗಾಯದ ಹೊಲಿಗೆ ಬಗ್ಗೆ ಜಾಗ್ರತೆ ವಹಿಸುವಂತೆ ಸೂಚಿಸುತ್ತಾರೆ. ಅವರು ಹೇಳಿದಂತೆ ನೀವು ಎಚ್ಚರ ವಹಿಸಬೇಕು. ವೈದ್ಯರು ಹೇಳಿದ ಆಯಿಂಟ್‌ಮೆಂಟ್, ಗಾಯದ ಪೌಡರ್‌ಗಳಲ್ಲಿ ಮರೆಯದೆ ಬಳಸಿ, ಬೆಡ್‌ನಲ್ಲಿ ಮಲಗಿರುವಾಗ ಹೇಗೆ ಬೇಕೆಂದರೆ ಹಾಗೆ ಕದಲಬಾರದು.
ಇತ್ತೀಚಿನ ದಿನಗಳಲ್ಲಿ ಬಹುತೇಕ ಮಹಿಳೆಯರಿಗೆ ಸಿಜೇರಿಯನ್ ಮೂಲಕವೇ ಹೆರಿಗೆಯಾಗುತ್ತಿದೆ. ಕೆಲವರು ನಾರ್ಮಲ್ ಡೆಲಿವರಿಗೆ ಹೆಸರಿ ಸಿ ಸೆಕ್ಷನ್ ಮೊರೆ ಹೋದರೆ ಇನ್ನೂ ಕೆಲವರಿಗೆ ಸಾಮಾನ್ಯ ಹೆರಿಗೆ ಸಾಧ್ಯವಿಲ್ಲದ ಕಾರಣ ಸಿಜೇರಿಯನ್ ಮಾಡಲಾಗುತ್ತದೆ. ಈಗ ಅತ್ಯಂತ ಸುಧಾರಿತ ವಿಧಾನದಲ್ಲಿ ಸಿಸೇರಿಯನ್ ಮಾಡಲಾಗುತ್ತದೆ.
ಆದರೆ ನಾರ್ಮಲ್ ಡೆಲಿವರಿ ಆದವರಿಗಿಂತ ಸಿಜೇರಿಯನ್ ಆದವರು ಹೆಚ್ಚಿನ ಜಾಗ್ರತೆ ವಹಿಸಬೇಕು. ಆಸ್ಪತ್ರೆಯಲ್ಲಿದ್ದಾಗ ಹಾಗೂ ಮನೆಗೆ ಹೋದಾಗ ವೈದ್ಯರ ಸೂಚನೆಯಂತೆ ಇದ್ದರೆ ನೀವು ಕೂಡಾ ಬೇಗ ಚೇತರಿಸಿಕೊಳ್ಳುತ್ತೀರಿ. ಆಸ್ಪತ್ರೆಯಲ್ಲಿ ಡಾಕ್ಟರ್ ಸಲಹೆಯ ಮೇರೆಗೆ ಆಂಟಿಬಯೋಟಿಕ್ಸ್, ಪೇನ್ ಕಿಲ್ಲರ್, ಪೋಷಕಾಂಶಗಳುಳ್ಳ ಆಹಾರ ಸೇವಿಸಿದರೆ ಮನೆಯಲ್ಲಿ ಯಾವ ರೀತಿಯ ಮುಂಜಾಗ್ರತೆ ವಹಿಸಬೇಕೆಂದು ನೋಡೋಣ.
ಹೊಲಿಗೆ ಬಗ್ಗೆ ಹೆಚ್ಚಿನ ಜಾಗ್ರತೆ ಅಗತ್ಯ
ಮೊದಲ ಮೂರು ದಿನಗಳವರೆಗೆ ಆಸ್ಪತ್ರೆಯಲ್ಲಿ ಗಾಯದ ಹೊಲಿಗೆ ಬಗ್ಗೆ ಜಾಗ್ರತೆ ವಹಿಸುವಂತೆ ಸೂಚಿಸುತ್ತಾರೆ. ಅವರು ಹೇಳಿದಂತೆ ನೀವು ಎಚ್ಚರ ವಹಿಸಬೇಕು. ವೈದ್ಯರು ಹೇಳಿದ ಆಯಿಂಟ್‌ಮೆಂಟ್, ಗಾಯದ ಪೌಡರ್‌ಗಳಲ್ಲಿ ಮರೆಯದೆ ಬಳಸಿ, ಬೆಡ್‌ನಲ್ಲಿ ಮಲಗಿರುವಾಗ ಹೇಗೆ ಬೇಕೆಂದರೆ ಹಾಗೆ ಕದಲಬಾರದು. ಮಂಚದಿಂದ ಕೆಳಗೆ ಇಳಿಯುವಾಗ ದಿಢೀರ್ ಎಂದು ಇಳಿಯದೆ, ಹೊಲಿಗೆಗೆ ತೊಂದರೆಯಾಗದಂತೆ ನಿಧಾನವಾಗಿ ಇಳಿಯಬೇಕು. ಹೊಲಿಗೆಗೆ ಆಧಾರ ಬಹಳ ಮುಖ್ಯವಾಗಿದೆ. ಒಂದು ವೇಳೆ ನಿಮಗೆ ಕೆಮ್ಮು, ಸೀನು ಬಂದರೆ ಹೊಲಿಗೆ ಮೇಲೆ ದಿಂಬಿನ ಸಪೋರ್ಟ್ ಅಥವಾ ಕೈಯನ್ನು ನಿಧಾನವಾಗಿ ಒತ್ತಿದರೆ, ನೋವು ಹಾಗೂ ಹೊಲಿಗೆ ಬಿಚ್ಚಿಕೊಳ್ಳುವ ಅಪಾಯ ಇರುವುದಿಲ್ಲ.
ಭಾರ ಎತ್ತಬೇಡಿ
ಆಸ್ಪತ್ರೆಯಿಂದ ಮನೆಗೆ ಒಂದು ವಾರದ ನಂತರ ನಿಮ್ಮ ದೈನಂದಿನ ಚಟುವಟಿಕೆಗಳನ್ನು ಪುನಾರಂಭಿಸಬಹುದು. ಪ್ರತಿ ಕೆಲಸದ ನಡುವೆ ವಿಶ್ರಾಂತಿ ತೆಗೆದುಕೊಳ್ಳಬೇಕು. ಮಗುವನ್ನು ಎತ್ತಿಕೊಂಡು ಹೋಗಬಹುದು. ಆದರೆ ಭಾರ ಎತ್ತಬೇಡಿ. ಆರು ವಾರಗಳ ನಂತರ ಸಣ್ಣ ಪುಟ್ಟ ವಸ್ತುಗಳನ್ನು ಎತ್ತಬಹುದು. ಆದರೆ ನೀರು ತುಂಬಿದೆ ಬಿಂದಿಗೆ, ಧಾನ್ಯಗಳ ಚೀಲದಂತ ಭಾರವನ್ನು ಎತ್ತಬಾರದು. ಪೆಲ್ವಿಕ್ ಫ್ಲೋರ್ ವ್ಯಾಯಾಮ ಮಾಡಿ. ನೀವು ಕಾರು ಬಳಸುವರಾಗಿದ್ದು, ಆತ್ಮವಿಶ್ವಾಸ ಇದರೆ ಮತ್ತೆ ಕಾರನ್ನು ಓಡಿಸಲು ಪ್ರಾರಂಭಿಸಬಹುದು.
ವಾಕಿಂಗ್ ಮಾಡಬಹುದು
ಹೆರಿಗೆ ಆದ ನಂತರ ಹದಿನೈದರಿಂದ ಒಂದು ತಿಂಗಳವರೆಗೂ ರಕ್ತಸ್ರಾವ ಮುಂದುವರಿಯುತ್ತದೆ. ಹೆರಿಗೆಯ ನಂತರ ಮೊದಲ ಆರು ವಾರಗಳವರೆಗೆ ಉತ್ತಮ ಪೋಷಣೆಯನ್ನು ತೆಗೆದುಕೊಳ್ಳಬೇಕು. ದಿನಕ್ಕೆ ಎರಡರಿಂದ ಮೂರು ಲೀಟರ್ ನೀರು ಕುಡಿಯಿರಿ. 20 ನಿಮಿಷಗಳ ಕಾಲ ನಡೆಯಬಹುದು. ಈಜು ಮುಂತಾದವುಗಳನ್ನು ಆರು ವಾರಗಳ ನಂತರ ಮಾಡಬೇಕು. ಕುಳಿತುಕೊಳ್ಳುವಾಗ ಸೊಂಟದ ಹಿಂಭಾಗಕ್ಕೆ ಸಪೋರ್ಟ್ ನೀಡಿ ಕುಳಿತುಕೊಳ್ಳಿ. ಹೊಲಿಗೆಗಳು ವಾಸಿಯಾದ ಎರಡು ವಾರಗಳ ನಂತರ ಸೊಂಟದ ಬೆಲ್ಟ್ ಅನ್ನು ಧರಿಸಬೇಕು.
ವೈದ್ಯರನ್ನು ಭೇಟಿಯಾಗಿ
ಹೆರಿಗೆಯಾದ ಆರು ಅಥವಾ ಎಂಟು ವಾರಗಳ ನಂತರವೂ ಹೊಟ್ಟೆಯಲ್ಲಿ ನೋವು, ಜ್ವರ, ಹೊಲಿಗೆಯ ಬಳಿ ನೋವು ಅಥವಾ ಕೀವು ಕಾಣಿಸಿಕೊಂಡರೆ ಅಥವಾ ತೀವ್ರವಾದ ಬೆನ್ನುನೋವು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಪೋಸ್ಟ್ ಡೆಲಿವರಿ ವ್ಯಾಯಾಮಗಳನ್ನು ಈಗ ಆನ್‌ಲೈನ್‌ನಲ್ಲಿ ಕಲಿಸಲಾಗುತ್ತಿದೆ. ನಿಮ್ಮ ವೈದ್ಯರು ಸೂಚಿಸಿದ ವ್ಯಾಯಾಮಗಳನ್ನು ನೀವು ಆನ್‌ಲೈನ್‌ನಲ್ಲಿ ಕೂಡಾ ಕಲಿಯಬಹುದು.
ಬಿಸಿ ನೀರನ್ನು ಕುಡಿಯಿರಿ
ಹೆರಿಗೆ ನಂತರ ದೇಹ ಶೀತದಿಂದ ಕೂಡಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ದೇಹಕ್ಕೆ ಶೀತವುಂಟು ಮಾಡುವ ಆಹಾರಗಳನ್ನು ಸೇವಿಸಬೇಡಿ. ಸುಮಾರು 3 ತಿಂಗಳವರೆಗೇ ನೀವು ಬಿಸಿ ನೀರು ಹಾಗೂ ಬಿಸಿ ಆಹಾರ ಸೇವಿಸುವುದು ಉತ್ತಮ.
ವಿಭಾಗ