ಕೊಂಚವೂ ಕಹಿಯಿಲ್ಲ ಈ ಹಾಗಲಕಾಯಿ ಚಟ್ನಿಪುಡಿ; ದೋಸೆ-ಚಪಾತಿ ಜೊತೆ ತಿಂದ್ರೆ ಆಹಾ! ಮಸ್ತ್ ಅಂತೀರಾ!-how to make bitter gourd chutney powder for dosa and rice kannada recipe cooking tips smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕೊಂಚವೂ ಕಹಿಯಿಲ್ಲ ಈ ಹಾಗಲಕಾಯಿ ಚಟ್ನಿಪುಡಿ; ದೋಸೆ-ಚಪಾತಿ ಜೊತೆ ತಿಂದ್ರೆ ಆಹಾ! ಮಸ್ತ್ ಅಂತೀರಾ!

ಕೊಂಚವೂ ಕಹಿಯಿಲ್ಲ ಈ ಹಾಗಲಕಾಯಿ ಚಟ್ನಿಪುಡಿ; ದೋಸೆ-ಚಪಾತಿ ಜೊತೆ ತಿಂದ್ರೆ ಆಹಾ! ಮಸ್ತ್ ಅಂತೀರಾ!

Bitter Gourd Chutney Powder: ತಕ್ಷಣಕ್ಕೆ ದೋಸೆ ಜೊತೆ ತಿನ್ನಲು ಏನಾದರೂ ಬೇಕು ಎಂದು ನಿಮಗೆ ಅನಿಸಿ. ಪಲ್ಯ ಅಥವಾ ಚಟ್ನಿ ಮಾಡಲು ಸಮಯ ಇಲ್ಲದಿದ್ದರೆ ಹಾಗಲಹಾಕಿ ಚಟ್ನಿಪುಡಿ ಮಾಡಿಟ್ಟುಕೊಳ್ಳಿ. ನೀವು ಇದನ್ನು, ದೋಸೆ ಹಾಗೂ ಚಪಾತಿ ಜೊತೆ ತಿನ್ನಬಹುದು. ಅನ್ನ ಹಾಗೂ ತುಪ್ಪದ ಜೊತೆ ಸೇರಿಸಿ ಬೇಕಾದರೂ ತಿನ್ನಬಹುದು.

ಹಾಗಲಕಾಯಿ ಚಟ್ನಿಪುಡಿ
ಹಾಗಲಕಾಯಿ ಚಟ್ನಿಪುಡಿ

ಹಾಗಲಕಾಯಿ ಚಟ್ನಿ ಪುಡಿಯನ್ನು ನೀವು ಮನೆಯಲ್ಲಿ ತಯಾರಿಸಬಹುದು ಇದನ್ನು ಮಾಡುವಾಗ ಕೆಲವು ನಿಯಮಗಳನ್ನು ಪಾಲಿಸಿದರೆ ಇದರ ಕಹಿ ಒಂದು ಚೂರು ಇರುವುದಿಲ್ಲ. ಕಹಿ ಇಲ್ಲದ ಹಾಗಲಕಾಯಿ ಇದೆಯಾ? ಎಂದು ನೀವು ಪ್ರಶ್ನೆ ಮಾಡಬಹುದು. ಆದರೆ ಕಹಿ ಇರುವ ಹಾಗಲಕಾಯಿಯಲ್ಲಿ ಈ ರೀತಿ ರುಚಿಕರವಾದ ಚಟ್ನಿ ಪುಡಿ ಮಾಡಿ ತಿನ್ನಬಹುದು. ಇದನ್ನು ಮಾಡಲು ಏನೆಲ್ಲ ಸಾಮಾಗ್ರಿಗಳು ಬೇಕು? ಹಾಗು ಮಾಡುವ ವಿಧಾನ ಏನು? ಎನ್ನುವುದನ್ನು ನಾವು ನಿಮಗೆ ತಿಳಿಸಿ ಕೊಡುತ್ತಿದ್ದೇವೆ. ನೋಡಿ ಮೊದಲಿಗೆ ಮಾಡಲು ಬೇಕಾದ ಪದಾರ್ಥಗಳನ್ನ ಗಮನಿಸೋಣ.

ಹಾಗಲ ಕಾಯಿ ಚಟ್ನಿಪುಡಿ ಮಾಡಲು ಬೇಕಾಗುವ ಪದಾರ್ಥಗಳು:

ತೋರಿದ ಕೊಬ್ಬರಿ

ಹಾಗಲಕಾಯಿ

ಕಡಲೆ ಬೇಳೆ

ಉದ್ದಿನಬೇಳೆ

ಗುಂಟೂರು ಮೆಣಸಿನಕಾಯಿ ಅಥವಾ ಒಣ ಮೆಣಸು

ಸ್ವಲ್ಪ ಬೆಳ್ಳುಳ್ಳಿ ದಳಗಳು

ಕರಿಬೇವಿನ ಎಲೆಗಳು

ಉಪ್ಪು

ಸ್ವಲ್ಪ ಸಕ್ಕರೆ

ಅರಶಿನ ಪುಡಿ

ಹಾಗಲಕಾಯಿ ಚಟ್ನಿಪುಡಿ ಮಾಡುವ ವಿಧಾನ:
ಮೊದಲಿಗೆ ನೀವು ಕಡಲೆ ಬೇಳೆ ಹಾಗೂ ಉದ್ದಿನಬೇಳೆಯನ್ನು ಬಾಣಲೆಯಲ್ಲಿ ಹುರಿದುಕೊಳ್ಳಬೇಕು. ಹುರಿಯುವಾಗ ಯಾವುದೇ ರೀತಿಯ ಎಣ್ಣೆಯನ್ನು ಕೂಡ ಬಳಸಬಾರದು. ಹಾಗೆ ಅದರ ಬಣ್ಣ ಬದಲಾಗುವವರೆಗೆ ಹುರಿದುಕೊಳ್ಳಬೇಕು. ನಂತರ ಅದನ್ನು ಬದಿಗಿಡಿ. ಈಗ ಅದೇ ಬಾಣಲೆಗೆ ಸ್ವಲ್ಪವೇ ಸ್ವಲ್ಪ ಎಣ್ಣೆಯನ್ನು ಹಾಕಿ ಗುಂಟುರುಖಾರ ಅಥವಾ ಒಣ ಮೆಣಸನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಇದಕ್ಕೆ ಬೆಳ್ಳುಳ್ಳಿ ಹಾಗೂ ಕರಿಬೇವಿನ ಎಲೆಗಳನ್ನು ಸಹ ಸೇರಿಸಿ ಅವುಗಳನ್ನು ಚೆನ್ನಾಗಿ ಹುರಿದುಕೊಳ್ಳಿ.

ಹಾಗಲಕಾಯಿ ಬಳಸುವ ವಿಧಾನ

ನಂತರ ಅದಕ್ಕೆ ಕೊಬ್ಬರಿ ಸೇರಿಸಿ ಇವೆಲ್ಲವೂ ಬಿಸಿಯಾಗಿ ಪರಿಮಳ ಬರಲು ಆರಂಭಿಸಿದ ನಂತರ ಎಲ್ಲವನ್ನು ಒಂದು ಮಿಕ್ಸಿ ಜಾರ್‌ಗೆ ಟ್ರಾನ್ಸ್ಫರ್ ಮಾಡಿ. ಇದಕ್ಕೆ ಹಾಗಲಕಾಯಿ ಮಿಶ್ರಣವನ್ನು ಸೇರಿಸಿಕೊಳ್ಳಿ ಆದರೆ ಮೊದಲು ಈ ಅಂಶವನ್ನು ಗಮನಿಸಿಕೊಳ್ಳಿ ಹಾಗಲಕಾಯಿಯನ್ನು ತುರಿದುಕೊಳ್ಳಿ ಅಥವಾ ಚಿಕ್ಕದಾಗಿ ಹೆಚ್ಚಿಕೊಳ್ಳಿ. ನಂತರ ಆ ತುರಿದ ಅಥವಾ ಹೆಚ್ಚಿದ ಹಾಗಲಕಾಯಿಗೆ ಅರಿಶಿನ ಪುಡಿ ಹಾಗೂ ಉಪ್ಪನ್ನು ಹಾಕಿ ಚೆನ್ನಾಗಿ ಕಲಸಿ ಅದರ ನೀರು ಬಿಡುವಂತೆ ಮಾಡಿರಿ. ನಂತರ ಮಿಕ್ಸಿಗೆ ರುಬ್ಬಲು ಹಾಕುವಾಗ ಅದರಲ್ಲಿನ ಸಂಪೂರ್ಣ ನೀರನ್ನು ಹಿಂಡಿ ತೆಗೆಯಿರಿ. ಹೀಗೆ ಮಾಡಿದರೆ ಅದರಲ್ಲಿನ ಕಹಿ ಅಂಶಗಳು ಕಡಿಮೆಯಾಗುತ್ತವೆ. ಇದರಿಂದ ಬೇರೆ ರೀತಿ ರುಚಿ ನಿಮಗೆ ದೊರೆಯುತ್ತದೆ.

ನಂತರ ಎಲ್ಲವನ್ನು ಸರಿಯಾಗಿ ಮತ್ತು ತರಿತರಿಯಾಗಿ ರುಬ್ಬಿಕೊಳ್ಳಿ ಇಷ್ಟು ಮಾಡಿದರೆ ಸಾಕು ಆಗಲಕಾಯಿ ಚಟ್ನಿಪುಡಿ ರೆಡಿಯಾಗುತ್ತದೆ. ನೀವು ಇದನ್ನು, ದೋಸೆ ಹಾಗೂ ಚಪಾತಿ ಜೊತೆ ತಿನ್ನಬಹುದು. ಅನ್ನ ಹಾಗೂ ತುಪ್ಪದ ಜೊತೆ ಸೇರಿಸಿ ಬೇಕಾದರೂ ತಿನ್ನಬಹುದು.

mysore-dasara_Entry_Point